Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಸ್ತೇರಳು 2:2 - ಕನ್ನಡ ಸತ್ಯವೇದವು C.L. Bible (BSI)

2 ಅವನ ಸೇವೆಮಾಡುತ್ತಿದ್ದ ರಾಜಪರಿವಾರದವರು ಅವನಿಗೆ, “ಅರಸರಿಗೋಸ್ಕರ ಸುಂದರ ಕನ್ಯೆಯರನ್ನು ಹುಡುಕುವುದಕ್ಕೆ ಅಪ್ಪಣೆ ಆಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆಗ ಅವನ ಸೇವೆಮಾಡುತ್ತಿದ್ದ ರಾಜಪರಿವಾರದವರು ಅರಸನಿಗೆ, “ಅರಸನಿಗೋಸ್ಕರ ಸುಂದರಿಯರಾದ ಕನ್ಯೆಯರನ್ನು ಹುಡುಕುವುದಕ್ಕೆ ಅಪ್ಪಣೆಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅವನ ಸೇವೆಮಾಡುತ್ತಿರುವ ರಾಜಪರಿವಾರದವರು ಅವನಿಗೆ ಅರಸನಿಗೋಸ್ಕರ ಸುಂದರಿಯರಾದ ಕನ್ಯೆಯರನ್ನು ಹುಡುಕುವದಕ್ಕೆ ಅಪ್ಪಣೆಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಆಗ ರಾಜನ ಸನ್ನಿಧಿಸೇವಕರು ಈ ಸಲಹೆಕೊಟ್ಟರು: “ರಾಜನಿಗೋಸ್ಕರ ರೂಪವತಿಯರಾದ ಕನ್ಯೆಯರನ್ನು ಹುಡುಕಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಆಗ ಅರಸನ ಸೇವೆ ಮಾಡುವ ದಾಸರು ಅವನಿಗೆ, “ಅರಸನಿಗೋಸ್ಕರ ರೂಪವತಿಯಾದ ಕನ್ಯೆಯರನ್ನು ಹುಡುಕಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಸ್ತೇರಳು 2:2
6 ತಿಳಿವುಗಳ ಹೋಲಿಕೆ  

ಆದುದರಿಂದ ಅವನ ಸೇವಕರು, “ಒಡೆಯರೇ, ಅರಸರೇ, ತಮ್ಮ ಸನ್ನಿಧಿಯಲ್ಲಿದ್ದುಕೊಂಡು ತಮಗೆ ಶುಶ್ರೂಷೆಮಾಡಲು ಒಬ್ಬ ಕನ್ನಿಕೆಯನ್ನು ಹುಡುಕಬೇಕಾಗಿದೆ. ಆಕೆ ನಮ್ಮ ಒಡೆಯರೂ ಅರಸರೂ ಆದ ತಮ್ಮ ಮಗ್ಗುಲಲ್ಲೇ ಮಲಗಿ ತಮ್ಮನ್ನು ಬೆಚ್ಚಗಿರಿಸುವಳು,” ಎಂದು ಹೇಳಿದರು.


ಅವರು ಇನ್ನೂ ಮಾತಾಡುತ್ತಿರುವಾಗಲೇ ರಾಜಕಂಚುಕಿಗಳು ಬಂದು, ಎಸ್ತೇರಳು ಏರ್ಪಡಿಸಿರುವ ಔತಣಕ್ಕೆ ಬೇಗನೆ ಹೊರಟುಬರಬೇಕೆಂದು ಹಾಮಾನನನ್ನು ಕರೆದರು.


ಅರಸ ಅಹಷ್ವೇರೋಷನ ಆಸ್ಥಾನದಲ್ಲಿ ರಾಜಸಾನ್ನಿಧ್ಯ ಸೇವಕರೂ ಪದಾಧಿಕಾರಿಗಳೂ ಆಗಿದ್ದ ಕರ್ಷೆನಾ, ಶೇತಾರ್, ಅದ್ಮಾತಾ, ತರ್ಷೀಷ್, ಮೆರೆಸ್, ಮರ್ಸೆನಾ, ಮೆಮೂಕಾನ್ ಎಂಬ ಏಳು ಮಂದಿ ಪರ್ಷಿಯ ಮತ್ತು ಮೇದ್ಯ ದೇಶಗಳ ರಾಜಪ್ರಮುಖರು ಇದ್ದರು. ಸಮಯೋಚಿತ ವ್ಯವಹಾರ ಜ್ಞಾನಹೊಂದಿದವರಾದ ಇವರನ್ನು ಅರಸನು, ಈ ವಿಷಯವಾಗಿ ವಿಚಾರಿಸಿದನು.


ಏಳನೆಯ ದಿನ ಅರಸ ಅಹಷ್ವೇರೋಷನು ಮಧುಪಾನ ಮಾಡಿ ಆನಂದ ಲಹರಿಯಲ್ಲಿದ್ದಾಗ ಬಹುಸುಂದರಿಯಾದ ತನ್ನ


ಅಬ್ರಾಮನು ಈಜಿಪ್ಟಿಗೆ ಬಂದಾಗ ಈಜಿಪ್ಟಿನವರು ಅವನ ಸಂಗಡ ಇದ್ದ ಹೆಣ್ಣು ಬಹಳ ಚೆಲುವೆಯೆಂದುಕೊಂಡರು


ಇದಕ್ಕಾಗಿ ರಾಜ್ಯದ ಎಲ್ಲಾ ಸಂಸ್ಥಾನಗಳಿಗೂ ಅಧಿಕಾರಿಗಳನ್ನೂ ಕಳುಹಿಸಬೇಕು. ಇವರು ಸುರಸುಂದರಿಯರಾದ ಕನ್ಯೆಯರನ್ನೆಲ್ಲಾ ಶೂಷನ್ ನಗರಕ್ಕೆ ಕರೆತಂದು ಅಂತಃಪುರದ ಪಾಲಕನೂ ರಾಜಕಂಚುಕಿಯೂ ಆದ ಹೇಗೈಯ ವಶಕ್ಕೆ ಒಪ್ಪಿಸಬೇಕು. ಇವನು ಅವರಿಗೆ ಸೌಂದರ್ಯವರ್ಧಕ ಸಾಧನಗಳನ್ನು, ಲೇಪನದ್ರವ್ಯಗಳನ್ನು ಕೊಡುವಂತೆ ವ್ಯವಸ್ಥೆ ಮಾಡಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು