ಎಫೆಸದವರಿಗೆ 4:8 - ಕನ್ನಡ ಸತ್ಯವೇದವು C.L. Bible (BSI)8 ಎಂತಲೇ ಪವಿತ್ರಗ್ರಂಥದಲ್ಲಿ ಹೀಗಿದೆ: “ಆತನು ಉನ್ನತಿಗೇರಿದನು ಶತ್ರುಗಳನು ಸೆರೆಯಾಳಾಗಿ ಕೊಂಡೊಯ್ದನು ನರಮಾನವರಿಗಿತ್ತನು ವರದಾನಗಳನು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಆದ್ದರಿಂದ ದೇವರವಾಕ್ಯದಲ್ಲಿ ಹೀಗೆ ಹೇಳಿದೆ, “ಆತನು ಉನ್ನತ ಸ್ಥಾನಕ್ಕೆ ಏರಿಹೋದಾಗ ತಾನು ಸೆರೆಯಾಳುಗಳನ್ನು ಸೆರೆಹಿಡಿದುಕೊಂಡು ಹೋಗಿ ಮನುಷ್ಯರಿಗೆ ವರಗಳನ್ನು ಕೊಟ್ಟನು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಆದದರಿಂದ - ಆತನು ಉನ್ನತಸ್ಥಾನಕ್ಕೆ ಏರಿದಾಗ ತಾನು ಜಯಿಸಿದ್ದ ಬಹುಜನರನ್ನು ಸೆರೆಹಿಡುಕೊಂಡು ಹೋಗಿ ಮನುಷ್ಯರಿಗೆ ದಾನಗಳನ್ನು ಮಾಡಿದನು ಎಂಬದಾಗಿ ಪ್ರವಾದಿಯು ಹೇಳುತ್ತಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಆದಕಾರಣವೇ ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆದಿದೆ: “ಆತನು ಆಕಾಶದ ಉನ್ನತಸ್ಥಾನಕ್ಕೆ ಏರಿಹೋದಾಗ, ಶತ್ರುಗಳನ್ನು ಸೆರೆಯಾಳುಗಳಾಗಿ ಕೊಂಡೊಯ್ದು ಜನರಿಗೆ ದಾನಗಳನ್ನು ಮಾಡಿದನು.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಆದ್ದರಿಂದ ಪವಿತ್ರ ವೇದದಲ್ಲಿ ಹೀಗೆ ಹೇಳಲಾಗಿದೆ: “ಅವರು ಉನ್ನತಸ್ಥಾನಕ್ಕೆ ಏರಿಹೋದಾಗ, ಸೆರೆಯಾಳಾಗಿದ್ದ ಅನೇಕರನ್ನು ಕೊಂಡೊಯ್ದು ತಮ್ಮ ಜನರಿಗೆ ವರದಾನಗಳನ್ನು ಕೊಟ್ಟರು!” ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್8 ತೆಚ್ಯಾ ಸಾಟ್ನಿ ಪವಿತ್ರ್ ಪುಸ್ತಕ್ ಮನ್ತಾ, “ತೊ ವೈಲ್ಯಾ ಜಾಗ್ಯಾರ್ ಗೆಲ್ಲ್ಯಾ, ತನ್ನಾ ಅಪ್ನಾಚ್ಯಾ ವಾಂಗ್ಡಾ ಲೈ ಲೊಕಾಕ್ನಿ ಧರುನ್ ಬಂಧಿಕರುನ್ ಹಾನ್ಲ್ಯಾನ್, ಅನಿ ತೆನಿ ಲೊಕಾಕ್ನಿ ದೆನೆ ದಿಲ್ಯಾನ್.” ಅಧ್ಯಾಯವನ್ನು ನೋಡಿ |