Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 4:19 - ಕನ್ನಡ ಸತ್ಯವೇದವು C.L. Bible (BSI)

19 ಲಜ್ಜೆಗೆಟ್ಟವರಾಗಿ ದುರಿಚ್ಛೆಗಳಿಗೆ ಮಾರುಹೋಗಿದ್ದಾರೆ; ಅಶುದ್ಧ ಕಾರ್ಯಗಳಲ್ಲೇ ನಿರತರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅವರು ಲಜ್ಜೆಗೆಟ್ಟವರಾಗಿ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಅವರು ತಮ್ಮ ದುಃಸ್ಥಿತಿಗಾಗಿ ಸ್ವಲ್ಪವೂ ಚಿಂತಿಸದೆ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಅವರಿಗೆ ನಾಚಿಕೆಯೇ ಇಲ್ಲ. ಅವರು ತಮ್ಮ ಜೀವಿತಗಳನ್ನು ದುಷ್ಕೃತ್ಯಗಳಿಗೆ ಉಪಯೋಗಿಸುತ್ತಾರೆ; ಎಲ್ಲಾ ಬಗೆಯ ಕೆಟ್ಟಕಾರ್ಯಗಳನ್ನು ಇನ್ನೂ ಹೆಚ್ಚೆಚ್ಚಾಗಿ ಮಾಡಲು ತವಕಪಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಅವರು ಸರ್ವ ಸೂಕ್ಷ್ಮತೆಯನ್ನು ಕಳೆದುಕೊಂಡು, ತಮ್ಮನ್ನು ಕಾಮುಕತನಕ್ಕೆ ಒಪ್ಪಿಸಿಕೊಟ್ಟು, ಎಲ್ಲಾ ಅಶುದ್ಧತ್ವವನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

19 ತೆಂಕಾ ಲಜ್ಜಾ ಮನ್ತಲಿ ಕರಿನಾ, ತೆನಿ ಅಪ್ನಾಕುಚ್ ಸಗ್ಳ್ಯಾ ರಿತಿಚ್ಯಾ ಬುರ್ಶ್ಯಾ ಕಾಮಾತ್ನಿ ಅನಿ ಬುರ್ಶ್ಯಾ ಪಾನಾತ್ನಿ ಅನಿ ಪೈಸ್ಯಾಂಚ್ಯಾ ಆಶ್ಯಾಕ್ ಒಪ್ಸುನ್ ದಿಲ್ಯಾನಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 4:19
13 ತಿಳಿವುಗಳ ಹೋಲಿಕೆ  

ಕಪಟಿಗಳು ದುರ್ಬೋಧನೆಗಳನ್ನು ಪ್ರಸರಿಸುತ್ತಾರೆ. ಬರೆಹಾಕಿದ ಚರ್ಮದಂತೆ ಅವರ ಮನಸ್ಸಾಕ್ಷಿಯು ಸುಟ್ಟುಹೋಗಿದೆ.


ನಿಮ್ಮಲ್ಲಿರುವ ಪ್ರಾಪಂಚಿಕ ಆಶೆ ಆಕಾಂಕ್ಷೆಗಳನ್ನು ತ್ಯಜಿಸಿರಿ. ಹಾದರ, ಅನೈತಿಕತೆ, ಕಾಮಾಭಿಲಾಷೆ, ದುರಾಲೋಚನೆ, ವಿಗ್ರಹಾರಾಧನೆಗೆ ಸಮವಾಗಿರುವ ಲೋಭ - ಇವುಗಳನ್ನು ದಮನಮಾಡಿರಿ.


ಇವರ ದುರ್ಗತಿ ಭಯಂಕರವಾದುದು! ಇವರು ಕಾಯಿನನ ಮಾರ್ಗವನ್ನು ಹಿಡಿದಿದ್ದಾರೆ; ಲಾಭಕೋರರಾಗಿ ಬಿಳಾಮನ ಭ್ರಾಂತಿಯಲ್ಲಿ ಬೀಳಹೋಗುತ್ತಾರೆ; ಕೋರಹನಂತೆ ದಂಗೆ ಎದ್ದು ವಿನಾಶವಾಗುತ್ತಿದ್ದಾರೆ.


ಕುಡಿಸಿದಳು ನಾಡುನಾಡುಗಳಿಗೆ ತನ್ನ ಹಾದರವೆಂಬ ಮದ್ಯವನು. ವ್ಯಭಿಚಾರಗೈದರು ಅವಳೊಡನೆ ಭೂರಾಜರು ಅವಳ ಭೋಗವಿಲಾಸದಿಂದ ಧನಿಕರಾದರು ಇಳೆಯ ವರ್ತಕರು.”


“ನಾಯಿ ತಾನು ಕಕ್ಕಿದ್ದನ್ನೇ ನೆಕ್ಕಲು ಹೋಯಿತು,” ಮತ್ತು “ಮೈ ತೊಳೆದ ಹಂದಿ ಕೊಳಚೆಯಲ್ಲಿ ಹೊರಳಲು ಹೋಯಿತು,” ಎಂಬ ಈ ಗಾದೆಗಳು ಇವರಿಗೆ ಸರಿಯಾಗಿ ಅನ್ವಯಿಸುತ್ತವೆ.


ಕ್ರೈಸ್ತರಲ್ಲದವರು ಮಾಡಲು ಇಚ್ಛಿಸುವುದನ್ನೆಲ್ಲಾ ನೀವು ಗತಕಾಲದಲ್ಲಿ ಮಾಡಿದ್ದು ಸಾಕು. ಆಗ ನೀವು ಅಶ್ಲೀಲತೆ, ಕಾಮ, ಕುಡುಕುತನ, ಅಮಲೇರುವಿಕೆ, ದುಂದೌತಣ ಮತ್ತು ಯೋಗ್ಯವಲ್ಲದ ವಿಗ್ರಹಾರಾಧನೆ - ಈ ಮುಂತಾದವುಗಳಿಗೆ ಒಳಗಾಗಿದ್ದಿರಿ.


ಪ್ರಭುವಿನ ಹೆಸರಿನಲ್ಲಿ ನಾನು ನಿಮಗೆ ಒತ್ತಿ ಹೇಳುತ್ತೇನೆ: ಇನ್ನು ಮುಂದೆ ನೀವು ಅನ್ಯಜನರಂತೆ ಜೀವಿಸುವುದನ್ನು ತ್ಯಜಿಸಿರಿ. ಅವರ ಆಲೋಚನೆಗಳು ಹುರುಳಿಲ್ಲದವು.


ಹೊಟ್ಟೆಬಾಕ ಕುನ್ನಿಗಳು; ಎಂದಿಗೂ ತೃಪ್ತಿ ಪಡೆಯದ ಶುನಕಗಳು. ಇಂಥವರು ಕುರಿಗಳನ್ನು ಕಾಯಲು ಯೋಗ್ಯರೋ? ಇವರು ಬುದ್ಧಿಹೀನರು. ಇವರಲ್ಲಿ ಪ್ರತಿಯೊಬ್ಬನು ಕೊಳ್ಳೆಹೊಡೆಯಬೇಕೆಂದು ತನ್ನದೇ ಆದ ಮಾರ್ಗವನ್ನು ಹಿಡಿದಿದ್ದಾನೆ.


ಇಂತಿರಲು, ಮತ್ತಷ್ಟೂ ಮಲಿನನಲ್ಲವೆ ನರಮಾನವನು? ಅಸಹ್ಯನು, ಅಕ್ರಮಿಯು, ಕೇಡನ್ನು ನೀರಿನಂತೆ ಕುಡಿಯುವವನು?


ಕೆಡುಕುತನ, ಮೋಸ, ಭಂಡತನ, ಅಸೂಯೆ, ಅಪದೂರು, ಅಹಂಕಾರ, ಮೂರ್ಖತನ ಮೊದಲಾದವು ಹೊರಬರುತ್ತವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು