Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 8:22 - ಕನ್ನಡ ಸತ್ಯವೇದವು C.L. Bible (BSI)

22 ನಮ್ಮ ದೇವರ ಕೃಪಾಹಸ್ತ ಅವರ ಎಲ್ಲ ಶರಣಾರ್ಥಿಗಳ ಮೇಲಿತ್ತು. ನಮ್ಮ ದೇವರನ್ನು ತೊರೆದುಬಿಟ್ಟವರೆಲ್ಲರು ಅವರ ಪ್ರಬಲವಾದ ರೌದ್ರಕ್ಕೆ ಗುರಿಯಾಗುವರು ಎಂದು ನಾವು ಅರಸನ ಮುಂದೆ ಹೇಳಿದ್ದೆವು. ಆದುದರಿಂದ ದಾರಿಯಲ್ಲಿ ನಮ್ಮನ್ನು ಶತ್ರುಗಳಿಂದ ರಕ್ಷಿಸುವುದಕ್ಕಾಗಿ ಸೈನ್ಯವನ್ನಾಗಲಿ, ಅಶ್ವಬಲವನ್ನಾಗಲಿ ಕೇಳಿಕೊಳ್ಳುವುದಕ್ಕೆ ನಾನು ನಾಚಿಕೊಂಡಿದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ನಮ್ಮ ದೇವರ ಹಸ್ತವು ಆತನ ಎಲ್ಲಾ ಶರಣಾರ್ಥಿಗಳನ್ನೂ ಪಾಲಿಸುವುದು; ಆತನನ್ನು ತೊರೆದುಬಿಟ್ಟವರೆಲ್ಲರೂ ಆತನ ಉಗ್ರವಾದ ಕೋಪಕ್ಕೆ ಗುರಿಯಾಗುವರು. ದಾರಿಯಲ್ಲಿ ನಮ್ಮನ್ನು ಶತ್ರುಗಳಿಂದ ರಕ್ಷಿಸುವುದಕ್ಕೋಸ್ಕರ ಸೈನ್ಯವನ್ನೂ, ಅಶ್ವಬಲವನ್ನೂ ಕೊಡಲು ಅರಸನಿಂದ ಸಹಾಯ ಕೇಳಲು ನಾಚಿಕೊಂಡಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ನಮ್ಮ ದೇವರ ಹಸ್ತವು ಆತನ ಎಲ್ಲಾ ಶರಣಾರ್ಥಿಗಳನ್ನೂ ಪಾಲಿಸುವದು; ಆತನ ಬಲವಾದ ರೌದ್ರಕ್ಕೆ ಆತನನ್ನು ತೊರೆದುಬಿಟ್ಟವರೆಲ್ಲರೂ ಗುರಿಯಾಗುವರು ಎಂದು ನಾವು ಅರಸನ ಮುಂದೆ ಹೇಳಿದ್ದರಿಂದ ದಾರಿಯಲ್ಲಿ ನಮ್ಮನ್ನು ಶತ್ರುಗಳಿಂದ ರಕ್ಷಿಸುವದಕ್ಕೋಸ್ಕರ ಸೈನ್ಯವನ್ನೂ ಅಶ್ವಬಲವನ್ನೂ ಕೇಳಿಕೊಳ್ಳುವದಕ್ಕೆ ನಾಚಿಕೊಂಡಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ನಾವು ಪ್ರಯಾಣ ಮಾಡುವಾಗ ದಾರಿಯಲ್ಲಿ ಶತ್ರುಗಳಿದ್ದುದರಿಂದ ನಮ್ಮ ಸಂರಕ್ಷಣೆಗಾಗಿ ಸಿಪಾಯಿಗಳನ್ನು ಮತ್ತು ರಾಹುತರನ್ನು ಅರಸನಿಂದ ಕೇಳಲು ನನಗೆ ಸಂಕೋಚವಾಯಿತು. ಯಾಕೆಂದರೆ, “ನಮ್ಮ ದೇವರು ತನ್ನನ್ನು ನಂಬಿದವರೊಂದಿಗಿದ್ದಾನೆ; ಆತನಿಂದ ದೂರಹೋಗುವವರ ಮೇಲೆ ಆತನು ಕೋಪವುಳ್ಳವನಾಗಿದ್ದಾನೆ” ಎಂದು ರಾಜನಾದ ಅರ್ತಷಸ್ತನಿಗೆ ನಾವು ಹೇಳಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 “ನಮ್ಮ ದೇವರ ಕೃಪಾಹಸ್ತವು ಅವರನ್ನು ಹುಡುಕುವವರೆಲ್ಲರ ಮೇಲೆಯೂ ಇದೆ, ಆದರೆ ಅವರ ಕೋಪವು ಅವರನ್ನು ತ್ಯಜಿಸುವ ಎಲ್ಲರ ವಿರುದ್ಧವಾಗಿರುತ್ತದೆ,” ಎಂದು ನಾವು ಅರಸನಿಗೆ ಹೇಳಿದ್ದರಿಂದ, ಮಾರ್ಗದಲ್ಲಿ ಶತ್ರುವಿಗೆ ವಿರೋಧವಾಗಿ ನಮಗೆ ಸಹಾಯ ಕೊಡಲು ಸೈನ್ಯವನ್ನೂ ಅಶ್ವಬಲವನ್ನೂ ಅರಸನಿಂದ ಕೇಳಲು ನಾಚಿಕೆಪಟ್ಟೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 8:22
24 ತಿಳಿವುಗಳ ಹೋಲಿಕೆ  

ನೀತಿವಂತರನು ಕಾಯುವನು ಸರ್ವೇಶ್ವರನು ಅವರ ವಿಜ್ಞಾಪನೆಗೆ ಕಿವಿಗೊಡುವನು. ಕೆಡುಕರಿಗಾದರೋ ಆತನು ವಿಮುಖನು,” ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ.


ಸರ್ವೇಶ್ವರ ಭೂಲೋಕದ ಎಲ್ಲಾ ಕಡೆ ದೃಷ್ಟಿಹರಿಸುತ್ತಾ ತಮ್ಮ ಕಡೆಗೆ ಯಥಾರ್ಥ ಮನಸ್ಸುಳ್ಳವರ ರಕ್ಷಣೆಗಾಗಿ ತಮ್ಮ ಪ್ರತಾಪವನ್ನು ತೋರ್ಪಡಿಸುತ್ತಾರೆ. ನೀವು ಈ ಕಾರ್ಯದಲ್ಲಿ ಬುದ್ಧಿಹೀನರಾಗಿ ನಡೆದುಕೊಂಡಿದ್ದೀರಿ; ಇಂದಿನಿಂದ ನಿಮಗೆ ಯುದ್ಧಗಳು ಇದ್ದೇ ಇರುತ್ತವೆ,” ಎಂದು ಹೇಳಿದನು.


ಸರ್ವೇಶ್ವರ ಒಳ್ಳೆಯವನು ಆತನನ್ನು ನಿರೀಕ್ಷಿಸುವವರಿಗೆ ಆತನನ್ನು ಹರಸಿ ಹಂಬಲಿಸುವ ಜನರಿಗೆ.


ಅವನು ಆಸನನ್ನು ಭೇಟಿಯಾಗಲು ಬಂದು, ಅವನಿಗೆ, “ಆಸ ರಾಜನೇ, ಎಲ್ಲಾ ಯೆಹೂದ ಹಾಗೂ ಬೆನ್ಯಾಮೀನ್ ಕುಲಗಳವರೇ, ಕಿವಿಗೊಡಿ; ನೀವು ಸರ್ವೇಶ್ವರನನ್ನು ಹೊಂದಿಕೊಂಡಿರುವ ತನಕ ಅವರೂ ನಿಮ್ಮೊಂದಿಗಿರುವರು; ನೀವು ಅವರನ್ನು ಅರಸಿದರೆ ನಿಮಗೆ ಸಿಕ್ಕುವರು. ಅವರನ್ನು ಬಿಟ್ಟರೆ ಅವರೂ ನಿಮ್ಮನ್ನು ಬಿಟ್ಟುಬಿಡುವರು.


ತನ್ನ ದಾಸರನು ಉದ್ಧಾರಮಾಡದಿರನು ಪ್ರಭು I ತನ್ನ ಶರಣರೊಳೊಬ್ಬರನು ದಂಡಿಸನಾ ವಿಭು II


ದೇವರನ್ನು ಪ್ರೀತಿಸುವವರಿಗೂ ದೇವರ ಸಂಕಲ್ಪದ ಮೇರೆಗೆ ಕರೆಹೊಂದಿದವರಿಗೂ ಸಕಲವೂ ಹಿತಕರವಾಗಿ ಪರಿಣಮಿಸುವುದು.ಇದನ್ನು ನಾವು ಚೆನ್ನಾಗಿ ಅರಿತಿದ್ದೇವೆ.


“ನನ್ನ ಮಗ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಪೂರ್ಣಹೃದಯದಿಂದ ಹಾಗೂ ಮನಸ್ಸಂತೋಷದಿಂದ ಅವರೊಬ್ಬರಿಗೇ ಸೇವೆ ಸಲ್ಲಿಸು. ಸರ್ವೇಶ್ವರನು ಎಲ್ಲಾ ಹೃದಯಗಳನ್ನು ಶೋಧಿಸುವವರೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವರೂ ಆಗಿದ್ದಾರೆ. ನೀನು ಅವರನ್ನು ಆರಿಸಿದರೆ ಅವರು ನಿನಗೆ ಸಿಗುವರು; ಅವರನ್ನು ಬಿಟ್ಟರೆ ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವರು.


ಸಜ್ಜನರಾದ ನನ್ನ ಭಕ್ತರು ವಿಶ್ವಾಸದಿಂದಲೇ ಬಾಳುವರು ಅವರು ಹಿಂಜರಿದರಾದರೆ ಮೆಚ್ಚೆನು ನಾನವರನು,” ಎನ್ನುತ್ತದೆ ಪವಿತ್ರಗ್ರಂಥ.


ಎಜ್ರನು, ಇಸ್ರಯೇಲ್ ದೇವರಾದ ಸರ್ವೇಶ್ವರನಿಂದ ದೊರಕಿದ ಮೋಶೆಯ ಧರ್ಮೋಪದೇಶದಲ್ಲಿ ಪಾಂಡಿತ್ಯ ಪಡೆದ ಒಬ್ಬ ಧರ್ಮಶಾಸ್ತ್ರಿ ಆಗಿದ್ದನು. ಅವನ ದೇವರಾದ ಸರ್ವೇಶ್ವರನ ಕೃಪಾಹಸ್ತ ಅವನ ಮೇಲಿತ್ತು. ಆದುದರಿಂದ ಅರಸನು ಅವನಿಗೆ ಇಷ್ಟವಾದುದನ್ನೆಲ್ಲ ಅನುಗ್ರಹಿಸಿದನು.


ಅರಸನ, ಅವನ ಮಂತ್ರಿಗಳ ಮತ್ತು ಅವನ ಎಲ್ಲ ವಿಶಿಷ್ಟ ಪದಾಧಿಕಾರಿಗಳ ಮುಂದೆ ನನಗೆ ದೇವರು ದಯೆತೋರಿಸಿದ್ದಾರೆ. ನನ್ನ ದೇವರಾದ ಸರ್ವೇಶ್ವರನ ಕೃಪಾಹಸ್ತ ನನ್ನ ಮೇಲಿದ್ದುದರಿಂದಲೇ ನಾನು ಧೈರ್ಯ ತಂದುಕೊಂಡು, ನನ್ನೊಂದಿಗೆ ಪ್ರಯಾಣ ಮಾಡುವುದಕ್ಕೆ ಕೆಲವುಮಂದಿ ಇಸ್ರಯೇಲ್ ಮುಖಂಡರನ್ನು ಒಂದುಗೂಡಿಸಿಕೊಂಡೆ.”


ದೇವರಾದ ಸರ್ವೇಶ್ವರನ ನಿಬಂಧನೆಯನ್ನು ನೀವು ಮೀರಿ ಅನ್ಯದೇವತೆಗಳಿಗೆ ಸೇವೆಸಲ್ಲಿಸಿ, ಅಡ್ಡಬಿದ್ದರೆ, ಸರ್ವೇಶ್ವರನ ಕೋಪಾಗ್ನಿ ನಿಮ್ಮ ಮೇಲೆ ಎರಗುವುದು; ಅವರು ನಿಮಗೆ ಕೊಟ್ಟ ಈ ಒಳ್ಳೆಯ ನಾಡಿನಿಂದ ಹೊರದೂಡಲ್ಪಟ್ಟು ಬೇಗನೆ ನಾಶವಾಗುವಿರಿ,” ಎಂದನು.


ಅವನು ಬಾಬಿಲೋನಿನಿಂದ ಹೊರಟದ್ದು ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ. ತನ್ನ ದೇವರ ಕೃಪಾಹಸ್ತ ಪಾಲನೆಯಿಂದ ಐದನೆಯ ತಿಂಗಳಿನ ಮೊದಲನೆಯ ದಿನ ಜೆರುಸಲೇಮಿಗೆ ಬಂದು ಸೇರಿದನು.


ತೀತನ ಮುಂದೆ ನಾನು ನಿಮ್ಮನ್ನು ಹೊಗಳಿದ್ದು ನಿಜ; ಹಾಗೆ ಹೊಗಳಿದ್ದಕ್ಕಾಗಿ ನಾನು ನಾಚಿಕೆಪಡಬೇಕಾಗಿಲ್ಲ. ನಾವು ನಿಮಗೆ ಹೇಳಿದ್ದೆಲ್ಲವೂ ಹೇಗೆ ಸತ್ಯವಾಗಿತ್ತೋ, ಹಾಗೆಯೇ ತೀತನ ಮುಂದೆ ನಾವು ಆಡಿದ ಹೊಗಳಿಕೆಯ ಮಾತುಗಳೆಲ್ಲವೂ ಸತ್ಯವಾಗಿವೆ.


ನಾನಂತೂ ಈ ಹಕ್ಕುಗಳಲ್ಲಿ ಒಂದನ್ನೂ ಚಲಾಯಿಸಲಿಲ್ಲ. ಚಲಾಯಿಸಬೇಕೆಂಬ ಉದ್ದೇಶದಿಂದಲೂ ಇದನ್ನು ಬರೆಯುತ್ತಿಲ್ಲ. ಅದಕ್ಕಿಂತಲೂ ಸಾಯುವುದೇ ಲೇಸು. ಈ ನನ್ನ ಹೆಮ್ಮೆಯನ್ನು ಯಾರೂ ಅಪಹರಿಸಲಾರರು.


ನಿನ್ನ ಕೋಪದಾ ಪ್ರತಾಪವನು ಬಲ್ಲವನಾರು? I ಭಯಂಕರ ರೌದ್ರವನು ಅನುಭವಿಸುವವರಾರು? II


“ಸರ್ವೇಶ್ವರನ ಸರ್ವಸಭೆ ಹೇಳುವ ಮಾತಿದು: ನೀವು ಇಸ್ರಯೇಲ್ ದೇವರಿಗೆ ವಿರುದ್ಧ ಇಂಥ ದ್ರೋಹ ಮಾಡಿದ್ದೇಕೆ? ನೀವು ನಿಮಗಾಗಿಯೇ ಒಂದು ಬಲಿಪೀಠವನ್ನು ಕಟ್ಟಿಕೊಂಡಿದ್ದೀರಿ. ಇದರಿಂದ ನೀವು ಸರ್ವೇಶ್ವರನಿಗೆ ವಿಮುಖವಾದಂತಾಯಿತು; ನೀವು ಇಂದು ಸರ್ವೇಶ್ವರನಿಗೆ ವಿರುದ್ಧ ತಿರುಗಿಬಿದ್ದಂತಾಯಿತು.


ನಾವು ಮೊದಲನೆಯ ತಿಂಗಳಿನ ಹನ್ನೆರಡನೆಯ ದಿನದಲ್ಲಿ ಅಹವಾ ನದಿಯನ್ನು ಬಿಟ್ಟು ಜೆರುಸಲೇಮಿಗೆ ಹೊರಟೆವು. ನಮ್ಮ ದೇವರ ಕೃಪಾಹಸ್ತ ನಮ್ಮನ್ನು ಪಾಲಿಸುತ್ತಾ ಇತ್ತು. ಶತ್ರುಗಳ ಹಾಗು ದಾರಿಯಲ್ಲಿ ಹೊಂಚುಹಾಕುವವರ ಕೈಗೆ ಸಿಕ್ಕದಂತೆ ಅವರು ನಮ್ಮನ್ನು ಪಾರುಮಾಡಿದರು.


ಅದೂ ಅಲ್ಲದೆ ನನ್ನನ್ನು ಸಾಗಕಳುಹಿಸುವುದಕ್ಕೆ ಸೇನಾಧಿಪತಿಗಳನ್ನೂ ರಾಹುತರನ್ನೂ ಕಳುಹಿಸಿದನು. ಹೀಗೆ ನಾನು ನದಿಯಾಚೆಯ ದೇಶಾಧಿಪತಿಗಳ ಬಳಿಗೆ ಬಂದು ರಾಜನ ಪತ್ರಗಳನ್ನು ಅವರಿಗೆ ತೋರಿಸಿದೆ.


ಕೆಳಗಿಳಿವರವರು, ಕುಸಿದು ಬೀಳುವರವರು I ಏಳುವೆವು, ಸ್ಥಿರನಿಲ್ಲುವೆವು ನಾವೆಲ್ಲರು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು