Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 8:1 - ಕನ್ನಡ ಸತ್ಯವೇದವು C.L. Bible (BSI)

1 ಅರ್ತಷಸ್ತನ ಆಳ್ವಿಕೆಯಲ್ಲಿ ನನ್ನೊಂದಿಗೆ ಬಾಬಿಲೋನಿನಿಂದ ಹೊರಟ ಗೋತ್ರಪ್ರಧಾನರ ಮತ್ತು ಅವರ ಸಂತಾನದವರ ವಿವರ ಹೀಗಿದೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅರ್ತಷಸ್ತ ರಾಜನ ಆಳ್ವಿಕೆಯಲ್ಲಿ ನನ್ನೊಂದಿಗೆ ಬಾಬಿಲೋನಿನಿಂದ ಹೊರಟ ಗೋತ್ರಪ್ರಧಾನರ ಮತ್ತು ಅವರ ಸಂತಾನದವರ ವಿವರಣೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಅರ್ತಷಸ್ತನ ಆಳಿಕೆಯಲ್ಲಿ ನನ್ನೊಂದಿಗೆ ಬಾಬೆಲಿನಿಂದ ಹೊರಟ ಗೋತ್ರಪ್ರಧಾನರ ಮತ್ತು ಅವರ ಸಂತಾನದವರ ವಿವರಣೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಬಾಬಿಲೋನಿನಿಂದ ಜೆರುಸಲೇಮಿಗೆ ನನ್ನೊಂದಿಗೆ (ಎಜ್ರ) ಹೊರಟ ಇಸ್ರೇಲರ ಕುಲಪ್ರಧಾನರ ಮತ್ತು ಇತರ ಜನರ ವಿವರಗಳು ಹೀಗಿದೆ. ಅರಸನಾದ ಅರ್ತಷಸ್ತನ ಆಳ್ವಿಕೆಯ ಕಾಲದಲ್ಲಿ ನಾವು ಜೆರುಸಲೇಮಿಗೆ ಬಂದು ಸೇರಿದೆವು. ಬಂದವರ ಹೆಸರುಗಳು ಹೀಗಿವೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಅರಸನಾದ ಅರ್ತಷಸ್ತನ ಆಳಿಕೆಯಲ್ಲಿ ಬಾಬಿಲೋನಿನಿಂದ ನನ್ನ ಸಂಗಡ ಹೊರಟು ಬಂದವರ ಕುಟುಂಬಗಳಲ್ಲಿ ಮುಖ್ಯಸ್ಥರು ಯಾರೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 8:1
16 ತಿಳಿವುಗಳ ಹೋಲಿಕೆ  

ಅವನೊಡನೆ ಕೆಲವು ಮಂದಿ ಇಸ್ರಯೇಲರು, ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು ಹಾಗು ದೇವಸ್ಥಾನದ ಪರಿಚಾರಕರು ಅರ್ತಷಸ್ತನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಜೆರುಸಲೇಮಿಗೆ ಬಂದರು.


ನನ್ನ ರಾಜ್ಯದಲ್ಲಿರುವ ಇಸ್ರಯೇಲರಲ್ಲಿ, ಯಾಜಕರಲ್ಲಿ ಹಾಗು ಲೇವಿಯರಲ್ಲಿ ಯಾರು ಯಾರಿಗೆ ಜೆರುಸಲೇಮಿಗೆ ಹೋಗುವುದಕ್ಕೆ ಮನಸ್ಸಿದೆಯೋ ಅವರೆಲ್ಲರು ನಿನ್ನೊಂದಿಗೆ ಹೋಗಬಹುದೆಂದು ಅಪ್ಪಣೆ ಮಾಡುತ್ತೇನೆ.


ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕರ ವೃತ್ತಿಯಿಂದ ನಿರಾಕೃತರಾದರು.


ಈ ಪ್ರಕಟನೆಯನ್ನು ಕೇಳಿ, ಯೆಹೂದ ಮತ್ತು ಬೆನ್ಯಾಮೀನ್ ಗೋತ್ರಕ್ಕೆ ಸೇರಿದ ಮುಖ್ಯಸ್ಥರು, ಯಾಜಕರು, ಲೇವಿಯರು ಹಾಗು ದೈವಪ್ರೇರಿತರಾದ ಎಲ್ಲರು ಜೆರುಸಲೇಮಿನಲ್ಲಿ ಸರ್ವೇಶ್ವರನಿಗೆ ಪುನಃ ಆಲಯಕಟ್ಟುವುದಕ್ಕಾಗಿ ಹೊರಟರು.


ರಣವೀರರು ಆಗಿದ್ದ ಎಲ್ಲ ಗೋತ್ರಪ್ರಧಾನರ ಸಂಖ್ಯೆ ಎರಡು ಸಾವಿರದ ಆರುನೂರು.


ಶ್ರೀಮಂತರೂ ಕುಟುಂಬಪ್ರಧಾನರೂ ಆದ ಅವನ ಗೋತ್ರಬಂಧುಗಳು ಎರಡು ಸಾವಿರದ ಏಳುನೂರು ಮಂದಿ ಇದ್ದರು. ಅರಸ ದಾವೀದನು ರೂಬೇನ್, ಗಾದ್, ಅರ್ಧಮನಸ್ಸೆ ಕುಲಗಳವರ ಮೇಲೆ ಇವರನ್ನೇ ದೈವಿಕ ಕಾರ್ಯಗಳಲ್ಲೂ ರಾಜಕೀಯ ಕಾರ್ಯಗಳಲ್ಲೂ ಅಧಿಕಾರಿಗಳನ್ನಾಗಿ ನೇಮಿಸಿದನು.


ಇವರೆಲ್ಲಾ ಲೇವಿ ಸಂತಾನದವರು. ಇವರ ಕುಟುಂಬಗಳಲ್ಲಿ ಎಲ್ಲಾ ಹಿರಿಯರೂ ಕಿರಿಯರೂ, ತಮ್ಮ ಕುಲಬಂಧುಗಳಾದ ಆರೋನ್ಯರಂತೆ, ಅರಸನಾದ ದಾವೀದ್, ಚಾದೋಕ್, ಅಹೀಮೆಲೆಕ್ ಇವರ ಮುಂದೆ ಹಾಗೂ ಯಾಜಕರ ಮತ್ತು ಲೇವಿಯರ ಕುಟುಂಬ ಮುಖ್ಯಸ್ಥರ ಮುಂದೆ, ಚೀಟಿನಿಂದ ತಮ್ಮಲ್ಲಿ ಸರದಿಗಳನ್ನು ನೇಮಿಸಿಕೊಂಡರು.


ಇವರೆಲ್ಲರೂ ತಮ್ಮ ಪೂರ್ವಜರ ಸಾಲಿಗೆ ಸೇರಿದಂತೆ ಲೇವಿ ಗೋತ್ರಗಳ ಮುಖ್ಯಸ್ಥರಾಗಿದ್ದು ಜೆರುಸಲೇಮಿನಲ್ಲೇ ನೆಲೆಸಿದ್ದರು.


ಇಸ್ರಯೇಲಿನ ಎಲ್ಲಾ ಜನರನ್ನು ಅವರ ಕುಟುಂಬಗಳಿಗೆ ಅನುಗುಣವಾಗಿ ಪಟ್ಟಿಮಾಡಲಾಗಿದೆ. ಈ ಮಾಹಿತಿ ‘ಇಸ್ರಯೇಲಿನ ಅರಸರ ಪುಸ್ತಕ’ದಲ್ಲಿ ದಾಖಲಾಗಿದೆ. ಯೆಹೂದ್ಯರು ತಮ್ಮ ಪಾಪಕ್ಕೆ ಶಿಕ್ಷೆಯಾಗಿ ಬಾಬಿಲೋನಿಗೆ ಸೆರೆಯಾಳುಗಳಾಗಿ ಹೋಗಬೇಕಾಯಿತು.


ಅವುಗಳ ಸುತ್ತಲಿನ ಗ್ರಾಮಗಳಲ್ಲಿ ಬಾಲ್ ಪಟ್ಟಣದವರೆಗೆ ವಾಸಿಸಿದರು. ಇವು, ಅವರು ತಮ್ಮ ಕುಟುಂಬಗಳ ಮತ್ತು ತಾವು ವಾಸಿಸಿದ ಸ್ಥಳಗಳ ಬಗ್ಗೆ ಇಟ್ಟ ದಾಖಲೆಗಳಾಗಿವೆ.


ಅರಸನ, ಅವನ ಮಂತ್ರಿಗಳ ಮತ್ತು ಅವನ ಎಲ್ಲ ವಿಶಿಷ್ಟ ಪದಾಧಿಕಾರಿಗಳ ಮುಂದೆ ನನಗೆ ದೇವರು ದಯೆತೋರಿಸಿದ್ದಾರೆ. ನನ್ನ ದೇವರಾದ ಸರ್ವೇಶ್ವರನ ಕೃಪಾಹಸ್ತ ನನ್ನ ಮೇಲಿದ್ದುದರಿಂದಲೇ ನಾನು ಧೈರ್ಯ ತಂದುಕೊಂಡು, ನನ್ನೊಂದಿಗೆ ಪ್ರಯಾಣ ಮಾಡುವುದಕ್ಕೆ ಕೆಲವುಮಂದಿ ಇಸ್ರಯೇಲ್ ಮುಖಂಡರನ್ನು ಒಂದುಗೂಡಿಸಿಕೊಂಡೆ.”


ಫೀನೆಹಾಸನ ಸಂತಾನದವರಲ್ಲಿ ಗೇರ್ಷೋಮ್; ಈತಾಮಾರನ ಸಂತಾನದವರಲ್ಲಿ ದಾನಿಯೇಲ್;


ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್, ಬಾಣ ಎಂಬ ನಾಯಕರು.


ಇವರ ಮುಂದಾಳತ್ವದಲ್ಲಿ ಈ ಕೆಳಕಂಡವರು ಹಿಂದಿರುಗಿ ಬಂದು ಜೆರುಸಲೇಮಿನಲ್ಲೂ ಜುದೇಯ ನಾಡಿನ ತಮ್ಮ ಸ್ವಂತ ಪಟ್ಟಣಗಳಲ್ಲೂ ನೆಲಸಿದರು: ಪರೋಷಿನವರು 2172 ಶೆಫಟ್ಯನವರು 372 ಅರಹನವರು 775 ಪಹತ್‍ಮೋವಾಬಿನವರಾದ ಯೋಷೂವ ಮತ್ತು ಯೋವಾಬ್‍ ಸಂತಾನದವರು 2812 ಎಲಾಮಿನವರು 1254 ಜತ್ತೂವಿನವರು 945 ಜಕ್ಕೈಯವರು 750 ಬಾನೀಯವರು 642 ಬೇಬೈಯವರು 632 ಅಜ್ಗಾದಿನವರು 1222 ಅದೋನೀಕಾಮಿನವರು 666 ಬಿಗ್ವೈಯವರು 2056 ಆದೀನನವರು 454 ಅಟೇರಿನವರಾದ ಹಿಜ್ಕೀಯನ ಸಂತಾನದವರು 98 ಬೇಚೈಯವರು 323 ಯೋರನವರು 112 ಹಾಷುಮಿನವರು 223 ಗಿಬ್ಬಾರಿನವರು 95 ಬೇತ್ಲೆಹೇಮಿನವರು 123 ನೆಟೋಫ ಊರಿನವರು 50 ಅನಾತೋತ್ ಊರಿನವರು 128 ಅಜ್ಮಾವತಿನವರು 42 ಕಿರ್ಯತ್ಯಾರೀಮ್ ಕೆಫೀರ ಬೇರೋತ್ ಊರುಗಳವರು 743 ರಾಮಾ, ಗೆಬ ಊರುಗಳವರು 621 ಮಿಕ್ಮಾಸಿನವರು 122 ಬೇತೇಲ್ ಅಯಿ ಎಂಬ ಊರುಗಳವರು 223 ನೆಬೋವಿನವರು 52 ಮಗ್ಬೀಷಿನವರು 156 ಬೇರೆ ಏಲಾಮಿನವರು 1254 ಹಾರಿಮನವರು 120 ಲೋದ್, ಹಾದೀದ್, ಓನೋ ಎಂಬ ಊರುಗಳವರು 725 ಜೆರಿಕೋವಿನವರು 345 ಸೆನಾಹನವರು 3630 ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು 973 ಇಮ್ಮೇರವರು 1052 ಪಷ್ಹೂರನವರು 1247 ಹಾರಿಮನವರು 1017 ಲೇವಿಯರಲ್ಲಿ - ಹೋದ್ಯನವರಾದ ಯೇಷೂವ, ಕದ್ಮೀಯೇಲ್ ಇವನ ಸಂತಾನದವರು 74 ಗಾಯಕರಲ್ಲಿ - ಆಸಾಫ್ಯರು 128 ದ್ವಾರಪಾಲಕರಲ್ಲಿ - ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ, ಇವರ ಸಂತಾನದವರು ಒಟ್ಟು. 139


ಎಜ್ರನು, ಇಸ್ರಯೇಲ್ ದೇವರಾದ ಸರ್ವೇಶ್ವರನಿಂದ ದೊರಕಿದ ಮೋಶೆಯ ಧರ್ಮೋಪದೇಶದಲ್ಲಿ ಪಾಂಡಿತ್ಯ ಪಡೆದ ಒಬ್ಬ ಧರ್ಮಶಾಸ್ತ್ರಿ ಆಗಿದ್ದನು. ಅವನ ದೇವರಾದ ಸರ್ವೇಶ್ವರನ ಕೃಪಾಹಸ್ತ ಅವನ ಮೇಲಿತ್ತು. ಆದುದರಿಂದ ಅರಸನು ಅವನಿಗೆ ಇಷ್ಟವಾದುದನ್ನೆಲ್ಲ ಅನುಗ್ರಹಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು