Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 6:18 - ಕನ್ನಡ ಸತ್ಯವೇದವು C.L. Bible (BSI)

18 ಆಮೇಲೆ ಯಾಜಕರ ಮತ್ತು ಲೇವಿಯರ ಆಯಾ ವರ್ಗಗಳನ್ನು ಮೋಶೆಯ ಧರ್ಮಶಾಸ್ತ್ರನಿಯಮದ ಪ್ರಕಾರ, ಜೆರುಸಲೇಮಿನ ದೇವರ ಸೇವೆಗೆ ನೇಮಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆ ಮೇಲೆ ಯಾಜಕರ ಮತ್ತು ಲೇವಿಯರ ಆಯಾ ಮಾರ್ಗಗಳನ್ನು ಮೋಶೆಯ ಧರ್ಮಶಾಸ್ತ್ರ ನಿಯಮದ ಪ್ರಕಾರ ಯೆರೂಸಲೇಮಿನ ದೇವರ ಸೇವೆಗೆ ನೇಮಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಆಮೇಲೆ ಯಾಜಕರ ಮತ್ತು ಲೇವಿಯರ ಆಯಾ ವರ್ಗಗಳನ್ನು ಮೋಶೆಯ ಧರ್ಮಶಾಸ್ತ್ರನಿಯಮದ ಪ್ರಕಾರ ಯೆರೂಸಲೇವಿುನ ದೇವರ ಸೇವೆಗೆ ನೇವಿುಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಅನಂತರ ಯಾಜಕರನ್ನು ಮತ್ತು ಲೇವಿಯರನ್ನು ಅವರವರ ವರ್ಗಗಳಿಗನುಸಾರವಾಗಿ, ಮೋಶೆಯ ವಿಧಿಯಂತೆ ದೇವಾಲಯದಲ್ಲಿ ಸೇವೆಮಾಡುವುದಕ್ಕಾಗಿ ಆರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಮೋಶೆಯ ಗ್ರಂಥದಲ್ಲಿ ಬರೆದ ಹಾಗೆ ಯೆರೂಸಲೇಮಿನಲ್ಲಿ ವಾಸವಾಗಿರುವ ದೇವರ ಆರಾಧನೆಗೋಸ್ಕರ ಯಾಜಕರನ್ನು ಮತ್ತು ಲೇವಿಯರನ್ನು ಅವರ ಸರತಿಯ ಪ್ರಕಾರವೂ ನೇಮಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 6:18
10 ತಿಳಿವುಗಳ ಹೋಲಿಕೆ  

“ನೀನು ಲೇವಿಕುಲದವರನ್ನು ಕರೆದುತಂದು ಅವರು ದೇವತಾ ಕಾರ್ಯಗಳಲ್ಲಿ ಯಾಜಕ ಆರೋನನಿಗೆ ಸಹಾಯಕರಾಗಿರುವಂತೆ ನಿಯುಕ್ತಗೊಳಿಸು.


ಆರೋನನ ಸಂತಾನದವರನ್ನು ವರ್ಗಗಳಾಗಿ ವಿಂಗಡಿಸಲಾಗಿತ್ತು. ಆರೋನನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬ ನಾಲ್ವರು ಮಕ್ಕಳಿದ್ದರು.


ನೀನು ಲೇವಿಯರನ್ನು ಆರೋನನಿಗೂ ಅವನ ಮಕ್ಕಳಿಗೂ ಒಪ್ಪಿಸು. ಇಸ್ರಯೇಲರಲ್ಲಿ ಆರೋನನಿಗೆ ಸಂಪೂರ್ಣ ಶರಣರು ಇವರೇ.


ಉಜ್ಜಿಯೇಲನ ಮಗ ಮೀಕನ ಸಂತಾನದವರಲ್ಲಿ ಶಾಮೀರನು


ದಾವೀದನು ಹಾಗೂ ಆರಾಧಕ ಮಂಡಲಿಯ ಮುಖ್ಯಸ್ಥರು ಕಿನ್ನರಿ, ಸ್ವರಮಂಡಲ, ತಾಳ ಇವುಗಳನ್ನು ಬಾರಿಸುತ್ತಾ, ಪರವಶರಾಗಿ ಗಾಯನ ಸೇವೆ ಮಾಡುವುದಕ್ಕಾಗಿ ಆಸಾಫ್ಯರನ್ನೂ ಹೇಮಾನ್ಯರನ್ನೂ ಯೆದುತೂನ್ಯರನ್ನೂ ಆರಿಸಿದರು. ಈ ಸೇವೆಯನ್ನು ಮಾಡಬೇಕಾಗಿದ್ದ ಪುರುಷರ ಪಟ್ಟಿ:


ಯಾಜಕರೂ ಲೇವಿಯರೂ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತರು. ದಾವೀದನು ಸರ್ವೇಶ್ವರನ ಗಾಯನಸೇವೆಗಾಗಿ ಮಾಡಿಸಿದ ವಾದ್ಯಗಳು ಈ ಲೇವಿಯರ ಕೈಯಲ್ಲಿ ಇದ್ದವು. ಇವರು ರಾಜಸೇವೆಯಲ್ಲಿದ್ದುಕೊಂಡು ದೇವಾರಾಧನೆ ನಡೆಸುತ್ತಾ, “ಸರ್ವೇಶ್ವರನಿಗೆ ಕೃತಜ್ಞತಾ ಸ್ತುತಿಯನ್ನು ಸಮರ್ಪಿಸಿರಿ; ಅವರ ಅಚಲಪ್ರೀತಿ ಶಾಶ್ವತ” ಎಂಬುದಾಗಿ ಆ ವಾದ್ಯಗಳೊಡನೆ ಭಜಿಸುತ್ತಿದ್ದರು. ಯಾಜಕರು ಇವರ ಎದುರಾಗಿ ನಿಂತು ತುತೂರಿಯೂದುತ್ತಿದ್ದರು. ಇಸ್ರಯೇಲರೆಲ್ಲರೂ ನಿಂತಿದ್ದರು.


ಸೇವೆಯ ಸಂಬಂಧವಾದುದ್ದೆಲ್ಲವನ್ನೂ ಏರ್ಪಡಿಸಿದನಂತರ ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿಯೂ ಲೇವಿಯರು ಅರಸನ ಅಪ್ಪಣೆಯಂತೆ ವರ್ಗವರ್ಗಗಳಾಗಿಯೂ ನಿಂತರು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು