Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 6:16 - ಕನ್ನಡ ಸತ್ಯವೇದವು C.L. Bible (BSI)

16 ಯಾಜಕರು, ಲೇವಿಯರು ಹಾಗು ಸೆರೆಯಿಂದ ಹಿಂದಿರುಗಿ ಬಂದ ಬೇರೆ ಇಸ್ರಯೇಲರು ಸಂತೋಷದಿಂದ ಆ ದೇವಾಲಯದ ಪ್ರತಿಷ್ಠೆಯನ್ನು ಆಚರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಯಾಜಕರೂ, ಲೇವಿಯರೂ ಮತ್ತು ಸೆರೆಯಿಂದ ಹಿಂತಿರುಗಿ ಬಂದ ಬೇರೆ ಇಸ್ರಾಯೇಲರೂ ಸಂತೋಷದಿಂದ ಆ ದೇವಾಲಯದ ಪ್ರತಿಷ್ಠೆಯನ್ನು ಆಚರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಯಾಜಕರೂ ಲೇವಿಯರೂ ಸೆರೆಯಿಂದ ತಿರಿಗಿ ಬಂದ ಬೇರೆ ಇಸ್ರಾಯೇಲ್ಯರೂ ಸಂತೋಷದಿಂದ ಆ ದೇವಾಲಯದ ಪ್ರತಿಷ್ಠೆಯನ್ನು ಆಚರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಅನಂತರ ಇಸ್ರೇಲರೆಲ್ಲರೂ ಸೇರಿ ದೇವಾಲಯವನ್ನು ಅತ್ಯಂತ ಹರ್ಷದಿಂದ ಪ್ರತಿಷ್ಠೆ ಮಾಡಿದರು. ಸೆರೆವಾಸದಿಂದ ಹಿಂತಿರುಗಿ ಬಂದಿದ್ದ ಯಾಜಕರು, ಲೇವಿಯರು ಮತ್ತು ಎಲ್ಲಾ ಜನರು ಈ ಆಚರಣೆಯಲ್ಲಿ ಭಾಗವಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಆಗ ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ಸೆರೆಯಿಂದ ಬಂದ ಮಿಕ್ಕಾದವರೂ ದೇವರ ಆಲಯವನ್ನು ಸಂತೋಷದಿಂದ ಪ್ರತಿಷ್ಠಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 6:16
21 ತಿಳಿವುಗಳ ಹೋಲಿಕೆ  

ಅರಸ ಸೊಲೊಮೋನನು ಬಲಿಯಾಗಿ ವಧಿಸಿದ ಹೋರಿಗಳು ಇಪ್ಪತ್ತೆರಡು ಸಾವಿರ, ಕುರಿಗಳು ಲಕ್ಷದ ಇಪ್ಪತ್ತು ಸಾವಿರ. ಈ ಪ್ರಕಾರ ಅರಸನೂ ಇಸ್ರಯೇಲರೆಲ್ಲರೂ ದೇವಾಲಯವನ್ನು ಪ್ರತಿಷ್ಠಿಸಿದರು.


ಸೊಲೊಮೋನನು ಸರ್ವೇಶ್ವರನಿಗೆ ಅರ್ಪಿಸಿದ ಶಾಂತಿಸಮಾಧಾನ ಬಲಿಗಾಗಿ ವಧಿಸಿದ ಹೋರಿಗಳು ಇಪ್ಪತ್ತೆರಡು ಸಾವಿರ; ಕುರಿಗಳು ಒಂದು ಲಕ್ಷದ ಇಪ್ಪತ್ತುಸಾವಿರ; ಈ ಪ್ರಕಾರ ಅರಸನೂ ಇಸ್ರಯೇಲರೆಲ್ಲರೂ ಸರ್ವೇಶ್ವರನ ಆಲಯವನ್ನು ಪ್ರತಿಷ್ಠಿಸಿದರು.


ಪ್ರಭುವಿನಲ್ಲಿ ನೀವು ಸತತವೂ ಆನಂದಿಸಿರಿ. ಆನಂದಿಸಬೇಕೆಂದು ಮತ್ತೆ ಒತ್ತಿ ಹೇಳುತ್ತೇನೆ.


ಅದು ಚಳಿಗಾಲವಾಗಿತ್ತು. ಜೆರುಸಲೇಮಿನಲ್ಲಿ ಮಹಾದೇವಾಲಯದ ಪ್ರತಿಷ್ಠಾಪನೆಯ ಹಬ್ಬಾಚರಣೆ ನಡೆಯುತ್ತಿತ್ತು.


ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ I ಆಯಿತೆನಗೆ ಆನಂದ, ಜನರೆನ್ನ ಕರೆದಾಗ II


ಇದಲ್ಲದೆ, ಆಡಂಬರದಿಂದ ಏಳು ದಿವಸಗಳವರೆಗೂ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಿದರು. ಏಕೆಂದರೆ, ಇಸ್ರಯೇಲ್ ದೇವರ ಆಲಯವನ್ನು ಕಟ್ಟುವುದರಲ್ಲಿ ಅಸ್ಸೀರಿಯದ ಅರಸ, ತಮಗೆ ಸಹಾಯಮಾಡುವಂತೆ ಸರ್ವೇಶ್ವರ ಅವನ ಮನಪರಿವರ್ತಿಸಿ, ಅವರಿಗೆ ಸಂತೋಷವನ್ನು ಉಂಟುಮಾಡಿದ್ದರು.


ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಜನಸಾಮಾನ್ಯರು, ದೇವಸ್ಥಾನದ ಪರಿಚಾರಕರು ಅಂತೂ ಇಸ್ರಯೇಲರೆಲ್ಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.


ಸೆರೆಯಿಂದ ಮರಳಿ ಬಂದವರು ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ ಮಂದಿರವನ್ನು ಕಟ್ಟುತ್ತಿದ್ದಾರೆಂಬ ಸಮಾಚಾರ ಯೆಹೂದ್ಯರ ಮತ್ತು ಬೆನ್ಯಾಮೀನ್ಯರ ವಿರೋಧಿಗಳಿಗೆ ಮುಟ್ಟಿತು.


ದಾವೀದನ ಮಗನೂ ಇಸ್ರಯೇಲರ ಅರಸನೂ ಆದ ಸೊಲೊಮೋನನ ಕಾಲದಿಂದ ಜೆರುಸಲೇಮಿನಲ್ಲಿ ಅಂಥ ಉತ್ಸವ ನಡೆದಿರಲಿಲ್ಲ. ಆದುದರಿಂದ ಜೆರುಸಲೇಮಿನಲ್ಲಿ ಹೇಳತೀರದ ಆನಂದವಿತ್ತು.


ಜುದೇಯದ ಅರಸ ಹಿಜ್ಕೀಯನು ಸಾವಿರ ಹೋರಿಗಳನ್ನು, ಏಳು ಸಾವಿರ ಕುರಿಗಳನ್ನು, ಪದಾಧಿಕಾರಿಗಳು ಸಾವಿರ ಹೋರಿಗಳನ್ನು ಹಾಗು ಹತ್ತು ಸಾವಿರ ಕುರಿಗಳನ್ನು ಜನರಿಗೆ ದಾನಮಾಡಿದರು; ಯಾಜಕರಲ್ಲಿ ಬಹುಮಂದಿ ತಮ್ಮನ್ನು ಶುದ್ಧಪಡಿಸಿಕೊಂಡರು.


ಹೀಗೆ ಎಲ್ಲಾ ಇಸ್ರಯೇಲರು ಜೆರುಸಲೇಮಿನವರೆಗೆ ಆನಂದಘೋಷಣೆಗಳಿಂದಲೂ ತುತೂರಿ, ಕೊಂಬು, ತಾಳ, ತಂತಿ, ವಾದ್ಯಗಳ ಸಂಗೀತದಿಂದಲೂ ಸರ್ವೇಶ್ವರನ ನಿಬಂಧನಾ ಮಂಜೂಷವನ್ನು ಹೊತ್ತುತಂದರು.


ಪಟ್ಟಣಗಳಲ್ಲಿದ್ದ ತಮ್ಮ ಸೊತ್ತುಗಳಿಗೆ ಹಿಂದಿರುಗಿ ಬಂದವರಲ್ಲಿ ಇಸ್ರಯೇಲಿನ ಜನಸಾಮಾನ್ಯರೂ ಯಾಜಕರೂ ಲೇವಿಯರೂ ದೇವಾಲಯದ ಕೆಲಸದವರೂ ಸೇರಿದ್ದರು.


ಅಲ್ಲಿಯೇ ಅವರ ಸನ್ನಿಧಿಯಲ್ಲಿ ಊಟಮಾಡಿ, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಪ್ರಯತ್ನಗಳನ್ನು ಕೈಗೂಡುವಂತೆ ಮಾಡಿದ್ದಕ್ಕಾಗಿ ನೀವೂ ನಿಮ್ಮ ಮನೆಗಳವರೂ ಸಂತೋಷದಿಂದಿರಬೇಕು.


ದೇವರು ತಮಗೆ ವಿಶೇಷಾನಂದವನ್ನುಂಟು ಮಾಡಿದ್ದರಿಂದ ಜನರು ಆ ದಿನ ಅನೇಕ ಬಲಿದಾನಗಳನ್ನು ಸಮರ್ಪಿಸಿ ತಮ್ಮ ಮಡದಿಮಕ್ಕಳೊಡನೆ ಮಹೋತ್ಸವ ಮಾಡಿದರು. ಜೆರುಸಲೇಮಿನ ಉತ್ಸವದ ಹರ್ಷಧ್ವನಿ ಬಹುದೂರದವರೆಗೂ ಕೇಳಿಸಿತು.


ಇದಲ್ಲದೆ, ಎಜ್ರನು ಅವರಿಗೆ, “ಹೋಗಿ ಮೃಷ್ಟಾನ್ನವನ್ನೂ ಮಧುರಪಾನವನ್ನೂ ತೆಗೆದುಕೊಳ್ಳಿ; ತಮಗಾಗಿ ಏನೂ ಸಿದ್ಧಮಾಡದವರಿಗೆ ಒಂದು ಪಾಲನ್ನು ಕಳುಹಿಸಿರಿ. ಈ ದಿನ ನಮ್ಮ ಸರ್ವೇಶ್ವರನಿಗೆ ಪ್ರತಿಷ್ಠಿತ ದಿನ! ವ್ಯಸನಪಡಬೇಡಿ; ಸರ್ವೇಶ್ವರನ ಆನಂದವೇ ನಿಮ್ಮ ಆಶ್ರಯವಾಗಿದೆ,” ಎಂದನು.


ಅರಸನು ಮತ್ತು ಇಸ್ರಯೇಲರೆಲ್ಲರು ಸರ್ವೇಶ್ವರನ ಸನ್ನಿಧಿಯಲ್ಲಿ ಬಲಿದಾನ ಮಾಡಿದರು.


ಅಂತೆಯೇ, ದಾನಿಯೇಲನನ್ನು ರಾಜ ಸನ್ನಿಧಿಗೆ ಬರಮಾಡಲಾಯಿತು. ರಾಜನು ಅವನಿಗೆ: “ರಾಜನಾದ ನನ್ನ ತಂದೆ ಜುದೇಯದಿಂದ ಖೈದಿಯಾಗಿ ತಂದು ಸೆರೆಮಾಡಿದ ಯೆಹೂದ್ಯರಲ್ಲಿ ದಾನಿಯೇಲ್ ಎಂಬುವನು ನೀನೋ?


ಅರಸ ಹಿಜ್ಕೀಯನೂ ಪದಾಧಿಕಾರಿಗಳೂ ದಾವೀದನ ಮತ್ತು ದರ್ಶಿಯಾದ ಆಸಾಫನ ಕೀರ್ತನೆಗಳಿಂದ ಸರ್ವೇಶ್ವರನನ್ನು ಸ್ತುತಿಸಬೇಕೆಂದು ಲೇವಿಯರಿಗೆ ಆಜ್ಞಾಪಿಸಿದರು. ಅವರು ಉತ್ಸಾಹದಿಂದ ಸ್ತುತಿಸುತ್ತಾ ತಲೆಬಾಗಿ ನಮಸ್ಕರಿಸಿದರು.


ಜೆರುಸಲೇಮಿನ ಗೋಡೆಯನ್ನು ಪ್ರತಿಷ್ಠಿಸುವ ಸಮಯ ಬಂದಾಗ, ಆಯಾ ಸ್ಥಳಗಳಲ್ಲಿದ್ದ ಲೇವಿಯರನ್ನು ಕೀರ್ತನಗಾಯನಗಳಿಂದಲೂ ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದಲೂ ಪ್ರತಿಷ್ಠೆಯ ಉತ್ಸವವನ್ನು ಆಚರಿಸುವುದಕ್ಕಾಗಿ ಜೆರುಸಲೇಮಿಗೆ ಕರೆಯಿಸಲಾಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು