Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಜ್ರ 6:15 - ಕನ್ನಡ ಸತ್ಯವೇದವು C.L. Bible (BSI)

15 ಅರಸ ದಾರ್ಯಾವೆಷನ ಆಳ್ವಿಕೆಯ ಆರನೆಯ ವರ್ಷದ ಫಾಲ್ಗುಣ ಮಾಸದ ಮೂರನೆಯ ದಿನದಲ್ಲಿ ಆಲಯವನ್ನು ಪೂರೈಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅರಸನಾದ ದಾರ್ಯಾವೆಷನ ಆಳ್ವಿಕೆಯ ಆರನೆಯ ವರ್ಷದ ಫಾಲ್ಗುಣ ಮಾಸದ ಮೂರನೆಯ ದಿನದಲ್ಲಿ ಆಲಯವನ್ನು ಕಟ್ಟಿ ಪೂರೈಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅರಸನಾದ ದಾರ್ಯಾವೆಷನ ಆಳಿಕೆಯ ಆರನೆಯ ವರುಷದ ಫಾಲ್ಗುಣ ಮಾಸದ ಮೂರನೆಯ ದಿನದಲ್ಲಿ ಆಲಯವನ್ನು ಪೂರೈಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಆದಾರ್ ತಿಂಗಳಿನ ಮೂರನೆಯ ದಿನದಲ್ಲಿ ಅಂದರೆ ರಾಜ ದಾರ್ಯಾವೆಷನ ಆಳ್ವಿಕೆಯ ಆರನೆಯ ವರ್ಷದಲ್ಲಿ ದೇವಾಲಯವು ಸಂಪೂರ್ಣವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಅರಸನಾದ ದಾರ್ಯಾವೆಷನ ಆಳಿಕೆಯ ಆರನೆಯ ವರ್ಷದ ಆಡಾರ್ ತಿಂಗಳ, ಮೂರನೆಯ ದಿವಸದಲ್ಲಿ ಈ ಆಲಯವನ್ನು ಕಟ್ಟಿ ಮುಗಿಸಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಜ್ರ 6:15
15 ತಿಳಿವುಗಳ ಹೋಲಿಕೆ  

ಅರಸ ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆಯ ವರ್ಷದ ಮೊದಲನೆಯ ತಿಂಗಳು ಆದ ಚೈತ್ರಮಾಸದಲ್ಲಿ ಹಾಮಾನನ ಮುಂದೆ ಶುಭಮಾಸವೂ ಶುಭದಿನವೂ ಯಾವುದು ಎಂದು ತಿಳಿದುಕೊಳ್ಳಲು ‘ಪೂರ’ನ್ನು ಅಂದರೆ ಚೀಟನ್ನು ಹಾಕಲು ಚೀಟು ಹನ್ನೆರಡನೆ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನಕ್ಕೆ ಬಿತ್ತು.


‘ಪ್ರತಿವರ್ಷವೂ ಫಾಲ್ಗುಣಮಾಸದ ಹದಿನಾಲ್ಕನೆ ಮತ್ತು ಹದಿನೈದನೆಯ ದಿನಗಳನ್ನು ಹಬ್ಬದ ದಿನಗಳಾಗಿ ಆಚರಿಸುವುದು ಶಾಶ್ವತ ನಿಯಮ ಎಂದು ಭಾವಿಸಬೇಕು.


ಈ ಕಾರಣದಿಂದಾಗಿ ಬಯಲುಪ್ರದೇಶದ ಗ್ರಾಮನಿವಾಸಿ ಯೆಹೂದ್ಯರು ಹದಿನಾಲ್ಕನೇ ದಿನವನ್ನು ಶುಭದಿನವೆಂತಲೂ ನಗರವಾಸಿ ಯೆಹೂದ್ಯರು ಹದಿನೈದನೆಯ ದಿನವನ್ನು ಶುಭದಿನವೆಂತಲೂ ಆಚರಿಸಿ, ಉತ್ಸವ ಭೋಜನಮಾಡಿ, ಒಬ್ಬರಿಗೊಬ್ಬರು ತಿಂಡಿತೀರ್ಥಗಳನ್ನು ವಿನಿಮಯಿಸಿಕೊಳ್ಳುತ್ತಾರೆ.


ಇದು ನಡೆದದ್ದು ಫಾಲ್ಗುಣಮಾಸದ ಹದಿಮೂರನೆಯ ದಿನದಲ್ಲಿ. ಅವರು ಹದಿನಾಲ್ಕನೆಯ ದಿನದಂದು ವಿಶ್ರಮಿಸಿದರು. ಅಂದು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು.


ಶೂಷನಿನ ಯೆಹೂದ್ಯರು ಫಾಲ್ಗುಣಮಾಸದ ಹದಿನಾಲ್ಕನೆಯ ದಿನದಂದೂ ಒಟ್ಟಾಗಿ ಸೇರಿ ಮುನ್ನೂರು ಮಂದಿಯನ್ನು ಕೊಂದುಹಾಕಿದರು. ಆದರೆ ಸುಲಿಗೆಗೆ ಕೈಹಾಕಲಿಲ್ಲ.


ಅರಸನ ಆಜ್ಞೆಯನ್ನು, ನಿರ್ಣಯವನ್ನು ನೆರವೇರಿಸತಕ್ಕ ದಿನವು ಅಂದರೆ, ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನವು ಬಂದಿತು. ಆ ದಿನದಲ್ಲಿ ಯೆಹೂದ್ಯರನ್ನು ತಾವೇ ಸ್ವಾಧೀನಪಡಿಸಿಕೊಳ್ಳಬಹುದೆಂದು ಅವರ ವೈರಿಗಳು ನಿರೀಕ್ಷಿಸಿದ್ದರು. ಆದರೆ ಅದಕ್ಕೆ ಬದಲಾಗಿ ಯೆಹೂದ್ಯರೇ ತಮ್ಮ ವೈರಿಗಳನ್ನು ಸ್ವಾಧೀನಮಾಡಿಕೊಂಡರು.


ಅಂದರೆ, ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನದಲ್ಲಿ ಒಟ್ಟಾಗಿ ಸೇರಿ, ತಮ್ಮ ಪ್ರಾಣರಕ್ಷಣೆಗಾಗಿ ದಂಗೆಯೆದ್ದು, ತಮಗೆ ವಿರೋಧವಾಗಿ ಆಯುಧಗಳೊಡನೆ ನೆರೆದುಬರುವ ಎಲ್ಲಾ ಜನಾಂಗಗಳವರನ್ನೂ ಸಂಸ್ಥಾನಗಳವರನ್ನೂ ಮಕ್ಕಳು ಮಹಿಳೆಯರೆನ್ನದೆ ಎಲ್ಲರನ್ನೂ, ಕೊಂದು ಸಂಹರಿಸಿ,


ಪತ್ರಗಳನ್ನು ಅಂಚೆಯವರ ಮುಖಾಂತರ ಎಲ್ಲಾ ರಾಜಸಂಸ್ಥಾನಗಳಿಗೆ ಕಳಿಸಲಾಯಿತು. ಅವುಗಳಲ್ಲಿ ಈ ರೀತಿ ಬರೆದಿತ್ತು: “ಒಂದೇ ದಿನದಲ್ಲಿ, ಅಂದರೆ, ಹನ್ನೆರಡನೆ ತಿಂಗಳಾದ ಫಾಲ್ಗುಣ ಮಾಸದ ಹದಿಮೂರನೆಯ ದಿನದಲ್ಲಿ ಹಿರಿಯರು, ಕಿರಿಯರು, ಮಕ್ಕಳು, ಮಹಿಳೆಯರೆನ್ನದೆ ನಿಮ್ಮ ಮಧ್ಯೆ ವಾಸಿಸುವ ಎಲ್ಲಾ ಯೆಹೂದ್ಯರನ್ನು ಕೊಂದುಹಾಕಿ, ನಿರ್ಮೂಲಮಾಡಿ, ನಿರ್ನಾಮಗೊಳಿಸಿ.


ಸೊಲೊಮೋನನು ಸರ್ವೇಶ್ವರನಿಗೆ ಅರ್ಪಿಸಿದ ಶಾಂತಿಸಮಾಧಾನ ಬಲಿಗಾಗಿ ವಧಿಸಿದ ಹೋರಿಗಳು ಇಪ್ಪತ್ತೆರಡು ಸಾವಿರ; ಕುರಿಗಳು ಒಂದು ಲಕ್ಷದ ಇಪ್ಪತ್ತುಸಾವಿರ; ಈ ಪ್ರಕಾರ ಅರಸನೂ ಇಸ್ರಯೇಲರೆಲ್ಲರೂ ಸರ್ವೇಶ್ವರನ ಆಲಯವನ್ನು ಪ್ರತಿಷ್ಠಿಸಿದರು.


ಆಗ ಆ ಶೆಷ್ಬಚ್ಚರನು ಬಂದು ಜೆರುಸಲೇಮಿನ ದೇವಾಲಯದ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನವರೆಗೂ ಕಟ್ಟುವ ಕೆಲಸ ನಡೆಯುತ್ತಾ ಇದೆ. ಇನ್ನೂ ಮುಗಿಯಲಿಲ್ಲ.


ಡೇರಿಯಸನ ಆಳ್ವಿಕೆಯ ಎರಡನೆಯ ವರ್ಷದ ಎಂಟನೆಯ ತಿಂಗಳಲ್ಲಿ ಸರ್ವೇಶ್ವರನಿಂದ ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಕೇಳಿಬಂದ ದೈವವಾಣಿಯಿದು:


ಆದುದರಿಂದ ನಾನು ಕರುಣಾಮಯನಾಗಿ ಜೆರುಸಲೇಮಿಗೆ ಹಿಂದಿರುಗಿ ಬಂದಿದ್ದೇನೆ. ಅಲ್ಲಿ ನನ್ನ ಆಲಯವನ್ನು ಮರಳಿ ಕಟ್ಟಲಾಗುವುದು. ಜೆರುಸಲೇಮ್ ನಗರವನ್ನು ವಾಸ್ತುಶಿಲ್ಪಕ್ಕೆ ತಕ್ಕಂತೆ ನಿರ್ಮಿಸಲಾಗುವುದು. ಇದು ಸೇನಾಧೀಶ್ವರ ಸರ್ವೇಶ್ವರನ ನುಡಿ.”


ಪ್ರಾರಂಭದಲ್ಲಿ ಚಿಕ್ಕಕಾರ್ಯಗಳನ್ನು ನೋಡಿ ಪರಿಹಾಸ್ಯಮಾಡಿದವರು ಆಗ ಜೆರುಬ್ಬಾಬೆಲನ ಕೈಯಲ್ಲಿ ಅಳತೆನೂಲಿನ ಗುಂಡನ್ನು ಕಂಡು ಸಂತೋಷಪಡುವರು.”


ಅಂದಿನಿಂದ ಪರ್ಷಿಯರಾಜ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದವರೆಗೂ ಜೆರುಸಲೇಮಿನ ದೇವಾಲಯವನ್ನು ಕಟ್ಟುವ ಕೆಲಸ ನಿಂತುಹೋಯಿತು.


ನಾವು ಗುಲಾಮರಾದರೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮನ್ನು ಕೈಬಿಡಲಿಲ್ಲ; ಹಾಳುಬಿದ್ದ ನಮ್ಮ ದೇವಾಲಯವನ್ನು ಪುನಃ ಕಟ್ಟಿ ಭದ್ರಪಡಿಸುವುದಕ್ಕಾಗಿ, ನಮಗೆ ನವಜೀವನ ಪ್ರಾಪ್ತವಾಗುವಂತೆ ಹಾಗು ಜುದೇಯದಲ್ಲೂ ಜೆರುಸಲೇಮಿನಲ್ಲೂ ನಮಗೆ ಅಭಯಾಶ್ರಯ ಸಿಕ್ಕುವಂತೆ, ಪರ್ಷಿಯ ರಾಜರ ಮುಂದೆ ನಮಗೆ ಕೃಪೆಯನ್ನು ಅನುಗ್ರಹಿಸಿದ್ದೀರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು