ಎಜ್ರ 5:11 - ಕನ್ನಡ ಸತ್ಯವೇದವು C.L. Bible (BSI)11 ಅವರು ನಮಗೆ, ನಾವು ಪರಲೋಕ ಭೂಲೋಕಗಳ ದೇವರ ದಾಸರು. ಅನೇಕಾನೇಕ ವರ್ಷಗಳ ಹಿಂದೆ ಕಟ್ಟಿದ್ದ ಆಲಯವನ್ನು ತಿರುಗಿ ಕಟ್ಟುತ್ತಿದ್ದೇವೆ. ಇಸ್ರಯೇಲರ ಒಬ್ಬ ಮಹಾರಾಜನು ಇದನ್ನು ಕಟ್ಟಿಮುಗಿಸಿದ್ದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಅವರು ನಮಗೆ, ‘ನಾವು ಪರಲೋಕ ಮತ್ತು ಭೂಲೋಕಗಳ ದೇವರ ಸೇವಕರು. ಅನೇಕಾನೇಕ ವರ್ಷಗಳ ಹಿಂದೆ ಕಟ್ಟಿದ್ದ ಆಲಯವನ್ನು ಪುನಃ ಕಟ್ಟುತ್ತಿದ್ದೇವೆ. ಇಸ್ರಾಯೇಲರ ಒಬ್ಬ ಮಹಾರಾಜನು ಅದನ್ನು ಕಟ್ಟಿಸಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಅವರು ನಮಗೆ - ನಾವು ಪರಲೋಕ ಭೂಲೋಕಗಳ ದೇವರ ಸೇವಕರು. ಅನೇಕಾನೇಕ ವರುಷಗಳ ಹಿಂದೆ ಕಟ್ಟಿದ್ದ ಆಲಯವನ್ನು ತಿರಿಗಿ ಕಟ್ಟುತ್ತಿರುತ್ತೇವೆ. ಇಸ್ರಾಯೇಲ್ಯರ ಒಬ್ಬ ಮಹಾರಾಜನು ಅದನ್ನು ಕಟ್ಟಿಸಿ ತೀರಿಸಿದ್ದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಅದಕ್ಕೆ ಅವರು ಈ ರೀತಿಯಾಗಿ ಉತ್ತರಕೊಟ್ಟರು: “ಭೂಪರಲೋಕಗಳ ದೇವರ ಸೇವಕರಾದ ನಾವು ಬಹಳ ವರ್ಷಗಳ ಹಿಂದೆ ಇಸ್ರೇಲರ ರಾಜನು ಕಟ್ಟಿಸಿ ಮುಗಿಸಿದ ದೇವಾಲಯವನ್ನು ಮತ್ತೆ ಕಟ್ಟುತ್ತಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಅವರು ನಮಗೆ ಕೊಟ್ಟ ಉತ್ತರವೇನೆಂದರೆ: “ನಾವು ಪರಲೋಕ ಮತ್ತು ಭೂಲೋಕಗಳ ದೇವರ ಸೇವಕರಾಗಿದ್ದೇವೆ. ಅನೇಕ ವರ್ಷಗಳ ಹಿಂದೆ ಇಸ್ರಾಯೇಲಿನಲ್ಲಿದ್ದ ಒಬ್ಬ ಮಹಾ ಅರಸನು ಕಟ್ಟಿದ್ದ ಆಲಯವನ್ನು ನಾವು ಪುನಃ ಕಟ್ಟುತ್ತಿದ್ದೇವೆ. ಅಧ್ಯಾಯವನ್ನು ನೋಡಿ |