Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 7:7 - ಕನ್ನಡ ಸತ್ಯವೇದವು C.L. Bible (BSI)

7 ಆಶೀರ್ವದಿಸುವವನು, ಆಶೀರ್ವಾದ ಪಡೆದವನಿಗಿಂತ ದೊಡ್ಡವನು ಎನ್ನುವುದು ನಿರ್ವಿವಾದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆಶೀರ್ವಾದ ಹೊಂದುವವನಿಗಿಂತ ಆಶೀರ್ವದಿಸುವವನೇ ಹೆಚ್ಚಿನವನು ಎಂಬುದನ್ನು ನಿರಾಕರಿಸುವಂತಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆಶೀರ್ವಾದ ಹೊಂದುವವನಿಗಿಂತ ಆಶೀರ್ವದಿಸುವವನು ದೊಡ್ಡವನು ಎಂಬದು ವಿವಾದವಿಲ್ಲದ ಮಾತಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಮುಖ್ಯನಾದ ವ್ಯಕ್ತಿಯು ಅಲ್ಪನಾದವನಿಗೆ ಆಶೀರ್ವಾದ ಮಾಡುತ್ತಾನೆಂಬುದು ಜನರೆಲ್ಲರಿಗೂ ತಿಳಿದಿರುವ ವಿಷಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಆಶೀರ್ವಾದ ಹೊಂದುವವನಿಗಿಂತ ಆಶೀರ್ವದಿಸುವವನೇ ದೊಡ್ಡವನು ಎಂಬುದರಲ್ಲಿ ವಿವಾದವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

7 ಪ್ರಮುಖ್ ಮಾನುಸ್ ಕಮ್ಮಿ ಹೊತ್ತ್ಯಾ ಮಾನ್ಸಾಕ್ ಆಶಿರ್ವಾದ್ ಕರ್‍ತಾ ಮನ್ತಲ್ಯಾತ್ ಕಾಯ್ಬಿ ಸಂಶೆವ್ ನಾ .

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 7:7
16 ತಿಳಿವುಗಳ ಹೋಲಿಕೆ  

ಯಾಜಕರು ಆಗಿದ್ದ ಲೇವಿಯರು ಆಮೇಲೆ ಎದ್ದು ನಿಂತು ಜನರನ್ನು ಆಶೀರ್ವದಿಸಿದರು. ಅವರ ಸ್ವರ ದೇವರಿಗೆ ಕೇಳಿಸಿತು; ಅವರ ಪ್ರಾರ್ಥನೆ ಪರಲೋಕದಲ್ಲಿರುವ ಆ ದೇವರ ಪರಿಶುದ್ಧ ನಿವಾಸಕ್ಕೆ ಮುಟ್ಟಿತು.


ನಿಜವಾಗಿಯೂ ನಮ್ಮ ಧರ್ಮದ ನಿಗೂಢಾರ್ಥ ಶ್ರೇಷ್ಠವಾದದ್ದು ಎಂಬುದು ನಿಸ್ಸಂದೇಹವಾದ ವಿಷಯ. “ನರಮಾನವ ರೂಪದಲಿ ಪ್ರತ್ಯಕ್ಷನಾಗಿ ದೇವರಿಗೆ ಪ್ರಿಯನೆಂದು ಪವಿತ್ರಾತ್ಮನಿಂದ ಪ್ರಕಟಿತನಾಗಿ ದೇವದೂತರಿಗೆ ಪ್ರದರ್ಶಿತವಾಗಿ ಅನ್ಯಜನರಿಗೆ ಪ್ರಬೋಧಿತನಾಗಿ ಜಗದಲ್ಲೆಲ್ಲೂ ವಿಶ್ವಾಸಪಡೆದವನಾಗಿ ಸ್ವರ್ಗಕ್ಕೇರಿದಾತ ಮಹಿಮಾನ್ವಿತ ಯೇಸುಕ್ರಿಸ್ತ.


ಇಸ್ರಯೇಲ್ ಸರ್ವಸಮಾಜದವರನ್ನು ಆಶೀರ್ವದಿಸುತ್ತಾ ಗಟ್ಟಿಯಾಗಿ ಹೀಗೆಂದನು:


ಅನಂತರ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವುದಕ್ಕೆ ಹೋದಾಗ ಸೌಲನ ಮಗಳಾದ ಮೀಕಲಳು ಅವನೆದುರಿಗೆ ಬಂದಳು. “ಈ ದಿನ ಇಸ್ರಯೇಲರ ಅರಸರು ಎಂಥ ಅಗೌರವದಿಂದ ನಡೆದುಕೊಂಡರು! ಹುಚ್ಚರಲ್ಲಿ ಒಬ್ಬರಂತೆ ತಮ್ಮ ಜನಸಾಮಾನ್ಯರಾದ ದಾಸಿಯರ ಮುಂದೆ ಬೆತ್ತಲೆಯಾಗಿದ್ದರಲ್ಲಾ!” ಎಂದಳು.


ಆಕಾಶಮಂಡಲವೇ, ಕೇಳು ನಾ ಹೇಳುವುದನು ಭೂಮಂಡಲವೇ, ಆಲಿಸು ನನ್ನ ಮಾತುಗಳನು.


ಇವೇ ಇಸ್ರಯೇಲಿನ ಹನ್ನೆರಡು ಕುಲಗೋತ್ರಗಳು; ಇದೇ ಅವರ ತಂದೆ ಕೊಟ್ಟ ಆಶೀರ್ವಾದ: ಒಂದೊಂದು ಕುಲಕ್ಕೆ ಅವನು ನುಡಿದ ಒಂದೊಂದು ಆಶೀರ್ವಚನ.


ಆದರೆ ಲೇವಿಯ ಕುಲದವನಲ್ಲದ ಮೆಲ್ಕಿಸದೇಕನು ಅಬ್ರಹಾಮನಿಂದಲೇ ದಶಮಾಂಶವನ್ನು ಪಡೆದನು; ಮಾತ್ರವಲ್ಲದೆ, ದೇವರ ವಾಗ್ದಾನವನ್ನು ಪಡೆದ ಅಬ್ರಹಾಮನನ್ನೇ ಆಶೀರ್ವದಿಸಿದನು.


ಇದಲ್ಲದೆ, ದಶಮಾಂಶವನ್ನು ಪಡೆಯುತ್ತಿರುವ ಲೇವಿಯರು ಕೇವಲ ಮರ್ತ್ಯ ಮಾನವರು; ಅದನ್ನು ಪಡೆದ ಮೆಲ್ಕಿಸದೇಕನು ತಾನು ಅಮರ್ತ್ಯ ಯಾಜಕನೆಂದು ಸಾಕ್ಷ್ಯಾಧಾರ ಪಡೆದವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು