Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 3:12 - ಕನ್ನಡ ಸತ್ಯವೇದವು C.L. Bible (BSI)

12 ಸಹೋದರರೇ, ಜೀವಸ್ವರೂಪರಾದ ದೇವರನ್ನು ಬಿಟ್ಟಗಲುವ ಕೆಟ್ಟಬುದ್ಧಿಯೂ ಅವಿಶ್ವಾಸವೂ ನಿಮ್ಮಲ್ಲಿ ಯಾರಿಗೂ ಇರದಂತೆ ಎಚ್ಚರಿಕೆಯಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಸಹೋದರರೇ, ಜೀವಸ್ವರೂಪನಾದ ದೇವರನ್ನು ತ್ಯಜಿಸಿ ಬಿಡುವ ಅಪನಂಬಿಕೆಯುಳ್ಳ ದುಷ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರದಂತೆ ಜಾಗರೂಕರಾಗಿ ನೋಡಿಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಸಹೋದರರೇ, ನೋಡಿಕೊಳ್ಳಿರಿ, ಜೀವಸ್ವರೂಪನಾದ ದೇವರನ್ನು ಬಿಟ್ಟುಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆದ್ದರಿಂದ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಯಾರೂ ಕೆಟ್ಟಬುದ್ಧಿಯುಳ್ಳವರಾಗದಂತೆ, ನಂಬದವರಾಗದಂತೆ, ಜೀವಸ್ವರೂಪನಾದ ದೇವರನ್ನು ತೊರೆಯದಂತೆ ಎಚ್ಚರಿಕೆಯಿಂದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಪ್ರಿಯರೇ, ದೇವರನ್ನು ಬಿಟ್ಟುಹೋಗುವ ಅವಿಶ್ವಾಸಯುಳ್ಳ ದುಷ್ಟ ಹೃದಯವು ನಿಮ್ಮಲ್ಲಿ ಯಾರಿಗೂ ಇರದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

12 ತಸೆ ಮನುನ್ ಮಾಜ್ಯಾ ಭಾವಾನು ಅನಿ ಭೆನಿಯಾನು ಹುರ್ಶಾಕಿತ್ ರ್‍ಹಾವಾ, ಝಿತ್ತ್ಯಾ ದೆವಾಕ್ನಾ ಧುರ್ ನ್ಹೆತಲೊ ಖೊಟೊ ಅನಿ ವಿಶ್ವಾಸಾನ್ ನಸಲ್ಲೊ ಮನ್ ತುಮ್ಚ್ಯಾ ಕೊನಾಚ್ಯಾ ಭುತ್ತುರ್ ರಾತಲೊ ನಕ್ಕೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 3:12
37 ತಿಳಿವುಗಳ ಹೋಲಿಕೆ  

ಇವು ಸರ್ವೇಶ್ವರನ ಮಾತುಗಳು : “ಮಾನವ ಮಾತ್ರದವರಲ್ಲಿ ಭರವಸೆಯಿಟ್ಟು ನರಜನ್ಮದವರನ್ನೇ ತನ್ನ ಭುಜಬಲವೆಂದುಕೊಂಡು ಸರ್ವೇಶ್ವರನನ್ನೇ ತೊರೆಯುವಂಥ ಹೃದಯವುಳ್ಳವನು ಶಾಪಗ್ರಸ್ತನು !


ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ಅನುಸರಿಸಿದರು. ತಮ್ಮ ದುಷ್ಟಹೃದಯದ ನಿಮಿತ್ತ ಹಟಮಾರಿಗಳಂತೆ ನಡೆದುಕೊಂಡರು. ಮುಂದೆ ಸಾಗದೆ ಹಿಂದಿರುಗಿಯೇ ಹೋದರು.


ಮಾನವ ಹೃದಯ ಎಲ್ಲಕ್ಕಿಂತ ವಂಚಕ ಅದಕ್ಕೆ ಅಂಟಿದೆ ಗುಣವಾಗದ ರೋಗ ಅದರ ಗುಟ್ಟನ್ನು ಅರಿತುಕೊಳ್ಳಬಲ್ಲವರೂ ಇಲ್ಲ.


“ಆದರೆ ಅವರು, ‘ಇದೆಲ್ಲ ಹೇಳಿ ಏನು ಪ್ರಯೋಜನವಿಲ್ಲ; ನಾವು ನಮ್ಮ ಆಲೋಚನೆ ಪ್ರಕಾರ ನಡೆಯುತ್ತೇವೆ. ನಮ್ಮಲ್ಲಿ ಪ್ರತಿಯೊಬ್ಬರು ನಮ್ಮ ನಮ್ಮ ಹೃದಯದ ಚಟದಂತೆಯೇ ನಡೆಯುತ್ತೇವೆ’ ಎಂದು ಹೇಳುವರು.”


ಆದ್ದರಿಂದ ನಿಮ್ಮೊಡನೆ ಮಾತಾಡುವ ದೇವರ ಧ್ವನಿಯನ್ನು ಕಡೆಗಣಿಸಬೇಡಿ. ಭೂಮಿಯ ಮೇಲೆ ತಮಗೆ ಬುದ್ಧಿವಾದ ಹೇಳಿದವರನ್ನು ಕಡೆಗಣಿಸಿದವರು ದಂಡನೆಯಿಂದ ತಪ್ಪಿಸಿಕೊಳ್ಳಲಿಲ್ಲ. ಹೀಗಿರುವಲ್ಲಿ, ನಮಗೆ ಸ್ವರ್ಗಲೋಕದಿಂದ ಬುದ್ಧಿವಾದ ಹೇಳಿದಾತನನ್ನು ಕಡೆಗಣಿಸಿದರೆ ಹೇಗೆತಾನೆ ದಂಡನೆಯಿಂದ ತಪ್ಪಿಸಿಕೊಂಡೇವು?


ಆದಕಾರಣ ಸ್ಥಿರವಾಗಿ ನಿಂತಿರುವೆನೆಂದು ಕೊಚ್ಚಿಕೊಳ್ಳುವವನೇ, ಕುಸಿದುಬೀಳದಂತೆ ಎಚ್ಚರಿಕೆಯಿಂದಿರು.


ಸಜ್ಜನರಾದ ನನ್ನ ಭಕ್ತರು ವಿಶ್ವಾಸದಿಂದಲೇ ಬಾಳುವರು ಅವರು ಹಿಂಜರಿದರಾದರೆ ಮೆಚ್ಚೆನು ನಾನವರನು,” ಎನ್ನುತ್ತದೆ ಪವಿತ್ರಗ್ರಂಥ.


ಅವರಾದರೋ ಕೇಳಲಿಲ್ಲ, ಕಿವಿಗೊಡಲಿಲ್ಲ, ಪ್ರತಿಯೊಬ್ಬನು ತನ್ನ ದುಷ್ಟ ಹೃದಯದ ನಿಮಿತ್ತ ಹಟಮಾರಿಯಂತೆ ನಡೆದುಕೊಂಡನು. ಆದಕಾರಣ, ಕೈಗೊಳ್ಳಬೇಕೆಂದು ನಾನು ಆಜ್ಞಾಪಿಸಿದ್ದರೂ ಅವರು ಕೈಗೊಳ್ಳದೆಹೋದ ಆ ಒಡಂಬಡಿಕೆಯಲ್ಲೆ ಸೂಚಿಸಲಾಗಿರುವ ಶಾಪಗಳನ್ನೆಲ್ಲ ಅವರ ಮೇಲೆ ಬರಮಾಡಿದೆ.”


ನಿಮ್ಮಲ್ಲಿ ಯಾರೂ ದೇವರ ಅನುಗ್ರಹವನ್ನು ಕಳೆದುಕೊಳ್ಳದಂತೆ ಎಚ್ಚರಿಕೆಯಾಗಿರಿ. ಯಾವ ವಿಷದ ಬೇರೂ ನಿಮ್ಮಲ್ಲಿ ತಲೆದೋರಿ, ಅಸಮಾಧಾನವನ್ನು ಹುಟ್ಟಿಸಿ, ಸಭೆಯನ್ನು ಕೆಡಿಸದಂತೆ ನೋಡಿಕೊಳ್ಳಿ.


ನೀವಾದರೊ ನಿಮ್ಮ ಪೂರ್ವಜರಿಗಿಂತ ಹೆಚ್ಚು ಕೇಡನ್ನು ಮಾಡಿದ್ದೀರಿ. ನೀವೆಲ್ಲರು ನನ್ನ ಮಾತನ್ನು ಕೇಳದೆ ದುಷ್ಟ ಹೃದಯವುಳ್ಳ ಹಟಮಾರಿಗಳಂತೆ ನಡೆಯುತ್ತಾ ಬಂದಿದ್ದೀರಿ.


ಎಂತಲೇ ಆ ಜನರ ವಿರುದ್ಧ ಕೆರಳಿ ಇಂತೆಂದನು: ಹಾದಿ ತಪ್ಪಿದ ಹೃದಯಿಗಳು ಇವರೆಂದಿಗೂ, ಗ್ರಹಿಸಿಕೊಳ್ಳರಿವರು ಎನ್ನ ಮಾರ್ಗವನು


ಆ ಕಾಲ ಯಾವಾಗ ಬರುವುದು ಎಂದು ನಿಮಗೆ ತಿಳಿಯದ್ದರಿಂದ ಎಚ್ಚರಿಕೆಯಿಂದಿರಿ, ಜಾಗರೂಕರಾಗಿರಿ.


ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಜಾಗರೂಕರಾಗಿರಿ.


ಆ ಕಾಲ ಬಂದಾಗ ಜೆರುಸಲೇಮನ್ನೇ ‘ಸರ್ವೇಶ್ವರನ ಸಿಂಹಾಸನ’ ಎಂದು ಕರೆಯುವರು. ನನ್ನ ನಾಮಮಹತ್ವದ ಸ್ಥಾನವಾದ ಜೆರುಸಲೇಮಿಗೆ ಸಕಲ ರಾಷ್ಟ್ರಗಳವರು ನೆರೆದುಬರುವರು. ಆಮೇಲೆ ತಮ್ಮ ದುಷ್ಟಹೃದಯದ ನಿಮಿತ್ತ ಹಟಮಾರಿಗಳಂತೆ ನಡೆಯಲಾರರು.


“ನನ್ನ ಜನರು ಇಬ್ಬಗೆಯ ಅಪರಾಧಗಳನ್ನು ಎಸಗಿದ್ದಾರೆ; ಜೀವಜಲದ ಬುಗ್ಗೆಯಾದ ನನ್ನನ್ನೇ ತೊರೆದುಬಿಟ್ಟಿದ್ದಾರೆ! ತೊಟ್ಟಿಗಳನ್ನು, ನೀರುನಿಲ್ಲದ ಬಿರುಕು ತೊಟ್ಟಿಗಳನ್ನು ತಮಗಾಗಿ ಕೊರೆದುಕೊಂಡಿದ್ದಾರೆ!”


ಮೂಢರು ತಮ್ಮ ಉದಾಸೀನತೆಯಿಂದಲೆ ಹತರಾಗುವರು. ಜ್ಞಾನಹೀನರು ತಮ್ಮ ನಿಶ್ಚಿಂತೆಯಿಂದಲೆ ನಾಶವಾಗುವರು.


“ನಿಮ್ಮ ವಿಷಯದಲ್ಲೂ ಎಚ್ಚರಿಕೆಯಿಂದಿರಿ. ನಿಮ್ಮನ್ನು ನ್ಯಾಯಸ್ಥಾನಗಳಿಗೆ ಎಳೆಯುವರು; ಪ್ರಾರ್ಥನಾಮಂದಿರಗಳಲ್ಲಿ ಹೊಡೆಯುವರು. ನನ್ನ ನಿಮಿತ್ತ ನೀವು ಅಧಿಕಾರಿಗಳ ಮತ್ತು ಅರಸರ ಮುಂದೆ ನಿಲ್ಲಬೇಕಾಗುವುದು. ಅವರ ಮುಂದೆ ನೀವು ನನಗೆ ಸಾಕ್ಷಿಗಳಾಗುವಿರಿ.


ಸರ್ವೇಶ್ವರಸ್ವಾಮಿ ಪ್ರಥಮವಾಗಿ ಹೊಶೇಯನ ಸಂಗಡ ಮಾತನಾಡುತ್ತಾ ಆತನಿಗೆ ಹೇಳಿದ್ದೇನೆಂದರೆ: “ನೀನು ಹೋಗಿ ವ್ಯಭಿಚಾರಿಣಿಯೊಬ್ಬಳನ್ನು ಮದುವೆ ಮಾಡಿಕೊ. ಆಕೆಗೆ ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೊ. ಏಕೆಂದರೆ, ನನ್ನ ಪ್ರಜೆ ನನ್ನನ್ನು ತೊರೆದುಬಿಟ್ಟು ವ್ಯಭಿಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಇದು ನಿದರ್ಶನವಾಗಿರಲಿ.”


ನಾವು ನಿಮ್ಮಲ್ಲಿಗೆ ಬಂದಾಗ, ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ವಿಗ್ರಹಗಳನ್ನು ತೊರೆದು, ಸತ್ಯ ಹಾಗೂ ಜೀವಸ್ವರೂಪರಾದ ದೇವರ ಕಡೆಗೆ ಹೇಗೆ ಅಭಿಮುಖರಾದಿರಿ;


ದೇವರನು ತೊರೆದು ದುರುಳನಾಗದೆ I ನಾನನುಸರಿಸಿದೆ ಪ್ರಭುವಿನ ಮಾರ್ಗವನೆ II


ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದ್ದರೂ ಅವರು ಆತನಿಗೆ, ‘ತೊಲಗಿಹೋಗು ನಮ್ಮಿಂದ’ ಎಂದರು.


ದೇವರು ಹುಟ್ಟುರೆಂಬೆಗಳನ್ನೇ ಉಳಿಸಲಿಲ್ಲ ಎಂದಮೇಲೆ ನಿನ್ನನ್ನು ಉಳಿಸುವರೆಂದು ತಿಳಿಯುವೆಯಾ?


ಅದಕ್ಕೆ ಯೇಸುಸ್ವಾಮಿ, “ನೀವು ಮೋಸಹೋಗದಂತೆ ಜಾಗರೂಕರಾಗಿರಿ. ‘ಅನೇಕರು ನಾನೇ ಆತ, ನಾನೇ ಆತ,’ ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು, ‘ಕಾಲವು ಸಮೀಪಿಸಿಬಿಟ್ಟಿತು,’ ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ.


ನೀವು ಆದರೋ ಜಾಗರೂಕರಾಗಿರಿ. ನಾನು ನಿಮಗೆ ಎಲ್ಲವನ್ನೂ ಮುಂಚಿತವಾಗಿ ತಿಳಿಸಿದ್ದೇನೆ.


ಅದಕ್ಕೆ ಪೇತ್ರನು, “ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ,” ಎಂದನು.


ಆದರೆ ಈ ದುರುಳರೇ, ದೇವರಿಗೆ, ‘ನಮ್ಮನ್ನು ಬಿಟ್ಟು ತೊಲಗು, ನಮಗೆ ಬೇಡವಾಗಿದೆ ನಿನ್ನ ಮಾರ್ಗದ ಅರಿವು’.


ಗಮಗಮಿಸುವ ಅದರ ಸುಗಂಧವು ಸ್ವಾಮಿಯನ್ನು ಮುಟ್ಟಿತು. ಅವರು ಮನದಲ್ಲೆ ಹೀಗೆಂದುಕೊಂಡರು: “ಇನ್ನು ಮೇಲೆ ನಾನು ಮನುಷ್ಯರ ನಿಮಿತ್ತ ಭೂಮಿಯನ್ನು ಶಪಿಸುವುದಿಲ್ಲ. ಮನುಷ್ಯರ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದು. ಈಗ ಮಾಡಿದಂತೆ ಇನ್ನು ಮೇಲೆ ಎಲ್ಲ ಜೀವಿಗಳನ್ನು ನಾನು ಸಂಹರಿಸುವುದಿಲ್ಲ.


ಹೌದು, ನಿಮಗೆ ತಪ್ಪುಮಾಡಿ ನಿಮ್ಮನ್ನು ಅಲ್ಲಗಳೆದಿದ್ದೇವೆ. ನಮ್ಮ ದೇವರಾದ ನಿಮ್ಮನ್ನು ಹಿಂಬಾಲಿಸದೆ ಹಿಂದಿರುಗಿದ್ದೇವೆ; ಹಿಂಸಾಚಾರವನ್ನೂ ದಂಗೆ ಏಳುವುದನ್ನೂ ಪ್ರಚೋದಿಸಿದ್ದೇವೆ. ನಮ್ಮ ಅಂತರಾಲೋಚನೆಗಳು ಹುಸಿ; ನಮ್ಮ ಬಾಯಿಮಾತು ಸುಳ್ಳು.


ಪ್ರಪಂಚದ ಪ್ರಬಲ ಶಕ್ತಿಗಳಿಂದಲೂ ಮಾನವ ವಿವೇಚನೆಯ ಶುಷ್ಕತರ್ಕ ಸಿದ್ಧಾಂತಗಳಿಂದಲೂ ಯಾರೂ ನಿಮ್ಮನ್ನು ಮೋಸಗೊಳಿಸಿ ವಶಪಡಿಸಿಕೊಳ್ಳದಂತೆ ಎಚ್ಚರಿಕೆಯಿಂದಿರಿ. ಇವುಗಳು ಪ್ರಾಪಂಚಿಕ ಪಾರಂಪರ್ಯಕ್ಕೆ ಮತ್ತು ವಿಶ್ವದ ಮೂಲಭೂತ ಶಕ್ತಿಗಳಿಗೆ ಸಂಬಂಧಿಸಿದವುಗಳೇ ಹೊರತು ಯೇಸುಕ್ರಿಸ್ತರಿಗಲ್ಲ.


ಹೀಗಿರುವಲ್ಲಿ ದೇವಜನರಾದ ಸಹೋದರರೇ, ಸ್ವರ್ಗಸೌಭಾಗ್ಯದಲ್ಲಿ ಸಹಭಾಗಿಗಳಾಗಲು ಕರೆ ಹೊಂದಿದವರೇ, ದೇವರು ಕಳುಹಿಸಿದಂಥವರು ಹಾಗೂ ನಾವು ವಿಶ್ವಾಸಿಸುವ ಧರ್ಮದ ಪ್ರಧಾನಯಾಜಕರು ಆದ ಯೇಸುವನ್ನು ಭಕ್ತಿಯಿಂದ ಧ್ಯಾನಿಸಿರಿ.


ಆ ವಿಶ್ರಾಂತಿಯ ನೆಲೆಯನ್ನು ಅವರು ಸೇರದೆಹೋದದ್ದು ತಮ್ಮ ಅವಿಶ್ವಾಸದಿಂದಲೇ ಎಂಬುದು ನಮಗೆ ಸ್ಪಷ್ಟವಾಗುತ್ತದೆ.


ಯೇಸುವಿನ ರಕ್ತವು ಮತ್ತಷ್ಟು ಹೆಚ್ಚಾಗಿ ನಮ್ಮನ್ನು ಪರಿಶುದ್ಧಗೊಳಿಸುತ್ತದಲ್ಲವೇ? ನಿತ್ಯಾತ್ಮದ ಮೂಲಕ ಅವರು ತಮ್ಮನ್ನೇ ನಿಷ್ಕಳಂಕಬಲಿಯಾಗಿ ದೇವರಿಗೆ ಸಮರ್ಪಿಸಿದ್ದಾರೆ; ನಾವು ಜೀವಸ್ವರೂಪರಾದ ದೇವರನ್ನು ಆರಾಧಿಸುವಂತೆ, ಜಡಕರ್ಮಗಳಿಂದ ನಮ್ಮನ್ನು ಬಿಡುಗಡೆಮಾಡಿ ನಮ್ಮ ಅಂತರಂಗವನ್ನು ಪರಿಶುದ್ಧಗೊಳಿಸುತ್ತಾರೆ.


ಜೀವಸ್ವರೂಪರಾದ ದೇವರ ಕೈಯಲ್ಲಿ ಸಿಕ್ಕಿಬೀಳುವುದು ಅದೆಷ್ಟು ಭಯಂಕರ!


ಆದರೆ ನೀವು ಬಂದಿರುವುದು ಸಿಯೋನ್ ಬೆಟ್ಟಕ್ಕೆ, ಜೀವಂತ ದೇವರ ನಗರಕ್ಕೆ; ಸ್ವರ್ಗೀಯ ಜೆರುಸಲೇಮಿಗೆ, ಅಸಂಖ್ಯ ದೇವದೂತರು ಕೂಡಿರುವ ಉತ್ಸವ ಕೂಟಕ್ಕೆ;


ಇಸ್ರಯೇಲ್ ವಂಶದವರೆಲ್ಲರೂ ತಮ್ಮ ವಿಗ್ರಹಗಳ ನಿಮಿತ್ತ ನನ್ನನ್ನು ತೊರೆದುದ್ದರಿಂದ ನಾನು ಅವರನ್ನೆಲ್ಲಾ ಅವರ ಆಶಾಪಾಶದಲ್ಲೇ ಸಿಕ್ಕಿಸಿ ಹಿಡಿಯುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು