Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 12:7 - ಕನ್ನಡ ಸತ್ಯವೇದವು C.L. Bible (BSI)

7 ಶಿಸ್ತಿಗಾಗಿ ಶಿಕ್ಷೆಯನ್ನು ಸಹಿಸಿಕೊಳ್ಳಬೇಕು. ದೇವರು ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ತಂದೆಯಿಂದ ಶಿಕ್ಷೆಯನ್ನು ಪಡೆಯದ ಮಗನಿದ್ದಾನೆಯೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನಿಮ್ಮ ಶಿಸ್ತಿಗಾಗಿಯೇ, ನಿಮಗೆ ಶಿಕ್ಷೆಯಾಗುತ್ತದೆಂದು ಅದನ್ನು ಸಹಿಸಿಕೊಳ್ಳಿರಿ. ದೇವರು ನಿಮ್ಮನ್ನು ಮಕ್ಕಳೆಂದು ನಡೆಸುತ್ತಾನೆ. ಯಾಕೆಂದರೆ ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿದ್ದಾನೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ನೀವು ಶಿಕ್ಷಿತರಾಗುವದಕ್ಕಾಗಿಯೇ ನಿಮಗೆ ಶಿಕ್ಷೆಯಾಗುತ್ತದೆಂದು ತಿಳಿದು ಅದನ್ನು ಸಹಿಸಿಕೊಳ್ಳಿರಿ; ದೇವರು ನಿಮ್ಮನ್ನು ಮಕ್ಕಳೆಂದು ನಡಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆದ್ದರಿಂದ ತಂದೆಯು ನೀಡುವ ದಂಡನೆ ಎಂಬುದಾಗಿ ಅವುಗಳನ್ನು ಸಹಿಸಿಕೊಳ್ಳಿ. ತಂದೆಯು ತನ್ನ ಮಕ್ಕಳನ್ನು ದಂಡಿಸುವಂತೆ ದೇವರು ನಿಮ್ಮನ್ನು ಈ ರೀತಿ ಶಿಕ್ಷಿಸುತ್ತಾನೆ. ಎಲ್ಲಾ ಮಕ್ಕಳು ತಮ್ಮ ತಂದೆಗಳಿಂದ ಶಿಕ್ಷಿಸಲ್ಪಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಶಿಸ್ತಿಗಾಗಿ ಕಷ್ಟವನ್ನು ನೀವು ಸಹಿಸಿಕೊಳ್ಳಬೇಕು. ದೇವರು ನಿಮ್ಮನ್ನು ಮಕ್ಕಳೆಂದು ನಡೆಸಿಕೊಳ್ಳುತ್ತಾರೆ. ಏಕೆಂದರೆ ತಂದೆಯಿಂದ ಶಿಸ್ತುಹೊಂದದ ಮಕ್ಕಳೆಲ್ಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

7 ತನ್ನಾ ತುಮಿ ಘೆತಲಿ ತರಾಸಾ ಸಗ್ಳಿ ಬಾಬಾನ್ ದಿಲ್ಲೆ ಮನುನ್ ಸೊಸುನ್ ಘೆವಾ, ಬಾಬಾನ್ ಪೊರಾಕ್ನಿ ಶಿಕ್ಷಾ ದಿಲ್ಲ್ಯಾ ಸಾರ್ಕೆ ದೆವ್ ತುಮ್ಕಾ ತ್ಯಾಚ್ ಥರಾನ್ ಶಿಕ್ಷಾ ದಿತಾ. ಬಾಬಾಕ್ನಾ ಶಿಕ್ಷಾ ಘೆಯ್ನಸಲ್ಲಿ ಪೊರಾ ಖೈಯ್ ಹಾತ್?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 12:7
16 ತಿಳಿವುಗಳ ಹೋಲಿಕೆ  

ತಿದ್ದಿಕೊಳ್ಳುವನೆಂಬ ನಂಬಿಕೆಯಿರುವಾಗಲೆ ಮಗನನ್ನು ಶಿಕ್ಷಿಸು; ಇಲ್ಲವಾದರೆ ಅವನ ಅಳಿವಿಗೆ ನೀನೇ ಕಾರಣವಾಗುವೆ.


ಒಬ್ಬ ತಂದೆ ತನ್ನ ಮಗನನ್ನು ಹೇಗೊ ಹಾಗೆಯೇ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಶಿಕ್ಷಿಸುತ್ತಾ ಬಂದರೆಂಬುದನ್ನು ನೀವು ಆಲೋಚಿಸಿ ನೋಡಬೇಕು.


ಬೆತ್ತ ಬೆದರಿಕೆಗಳು ಜ್ಞಾನ ತರುತ್ತವೆ; ಶಿಕ್ಷಿಸದೆ ಬಿಟ್ಟ ಮಗನು ತಾಯಿಗೆ ತರುತ್ತಾನೆ ಅಪಕೀರ್ತಿ.


ಬೆತ್ತಹಿಡಿಯದ ತಂದೆ ಮಗನಿಗೆ ಶತ್ರು; ಎಚ್ಚರಿಕೆಯಿಂದ ಶಿಕ್ಷಿಸುವ ತಂದೆ ಮಗನಿಗೆ ಮಿತ್ರನು.


ನಿನ್ನ ಮಗನನ್ನು ದಂಡಿಸಿ ಸರಿಪಡಿಸು; ಅವನು ನಿನ್ನನ್ನು ಸಂತೋಷಪಡಿಸುವನು, ಮನೋಲ್ಲಾಸಗೊಳಿಸುವನು.


ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು.


ಮಂಕುತನ ಮಕ್ಕಳ ಮನಸ್ಸಿಗೆ ಸಹಜ; ಬೆತ್ತದ ಬಿಸಿಯಿಂದ ಅದನ್ನು ತೊಲಗಿಸಲು ಸಾಧ್ಯ.


ತನ್ನ ಮಕ್ಕಳು ದೇವದೂಷಕರು ಎಂದು ಅವನಿಗೆ ತಿಳಿದುಬಂದರೂ ಅವನು ಅವರನ್ನು ತಿದ್ದಲಿಲ್ಲ. ಈ ಪಾಪದ ನಿಮಿತ್ತ ಅವನ ಕುಟುಂಬವನ್ನು ನಿತ್ಯದಂಡನೆಗೆ ಗುರಿಮಾಡಿದ್ದೇನೆಂದು ಅವನಿಗೆ ಮೊದಲೇ ತಿಳಿಸಿದೆನು.


ಇದೆಲ್ಲಾ ನೆರವೇರುವುದು ಎಂಬುದಕ್ಕೆ ಗುರುತಾಗಿ ನಿನ್ನ ಮಕ್ಕಳಾದ ಹೊಫ್ನಿ ಹಾಗು ಫೀನೆಹಾಸ್ ಒಂದೇ ದಿನದಲ್ಲಿ ಸಾಯುವರು.


ಆದರೆ ನನ್ನ ಪ್ರಜೆ ಇಸ್ರಯೇಲರು ನನ್ನ ಆಜ್ಞಾನುಸಾರ ನನ್ನ ಮಂದಿರಕ್ಕೆ ತರುವ ಬಲಿದಾನಗಳ ಹಾಗು ನೈವೇದ್ಯಗಳ ಘನತೆಯನ್ನು ನೀವು ಭಂಗಪಡಿಸಿದ್ದೀರಿ. ಅವುಗಳ ಶ್ರೇಷ್ಠಭಾಗಗಳಿಂದ ನಿಮ್ಮನ್ನೇ ಕೊಬ್ಬಿಸಿಕೊಳ್ಳುತ್ತಿದ್ದೀರಿ; ಏಕೆ? ನೀನು ನನ್ನನ್ನು ಗೌರವಿಸುವುದಕ್ಕಿಂತ ಹೆಚ್ಚಾಗಿ ನಿನ್ನ ಮಕ್ಕಳನ್ನೇ ಗೌರವಿಸುವುದು ಸರಿಯೇ?


ಅಲ್ಲಿ ಭಕ್ತಾದಿಗಳನ್ನು ದೃಢಪಡಿಸಿ ವಿಶ್ವಾಸದಲ್ಲಿ ನಿಷ್ಠರಾಗಿರುವಂತೆ ಪ್ರೋತ್ಸಾಹಿಸಿದರು. ‘ಕಷ್ಟಸಂಕಟಗಳ ಮೂಲಕ ನಾವು ದೇವರ ಸಾಮ್ರಾಜ್ಯವನ್ನು ಪ್ರವೇಶಿಸಬೇಕಾಗಿದೆ’ ಎಂದು ಬೋಧಿಸಿದರು.


ಹಾಗೇನಾದರೂ ಪ್ರಭುವಿನ ವಿಚಾರಣೆಗೆ ನಾವು ಒಳಪಟ್ಟರೆ ಅವರು ನಮ್ಮನ್ನು ದಂಡಿಸಿ ತಿದ್ದುತ್ತಾರೆ. ಪ್ರಪಂಚದೊಂದಿಗೆ ನಾವು ತಪ್ಪಿತಸ್ಥರಾಗದಂತೆ ಮಾಡುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು