Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 10:30 - ಕನ್ನಡ ಸತ್ಯವೇದವು C.L. Bible (BSI)

30 “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ; ನಾನೇ ಪ್ರತೀಕಾರವನ್ನು ಸಲ್ಲಿಸುವೆನು,” ಎಂದು ಹೇಳಿದವರು ಯಾರೆಂದು ಬಲ್ಲೆವು. ಅಲ್ಲದೆ, “ಸರ್ವೇಶ್ವರ ತಮ್ಮ ಪ್ರಜೆಗಳಿಗೆ ನ್ಯಾಯತೀರ್ಪನ್ನು ನೀಡುವರು,” ಎಂದೂ ಹೇಳಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನೆಂದು” ಹೇಳಿದಾತನನ್ನು ಬಲ್ಲೆವು. ಇದಲ್ಲದೆ “ಕರ್ತನು ತನ್ನ ಜನರಿಗೆ ನ್ಯಾಯ ತೀರಿಸುವನು” ಎಂದು ಹೇಳಿಯದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನೆಂದು ಹೇಳಿದಾತನನ್ನು ಬಲ್ಲೆವು; ಇದಲ್ಲದೆ ಕರ್ತನು ತನ್ನ ಜನರ ನ್ಯಾಯವನ್ನು ವಿಚಾರಿಸುವನೆಂತಲೂ ಹೇಳಿಯದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 “ಜನರು ಮಾಡುವ ತಪ್ಪು ಕಾರ್ಯಗಳಿಗಾಗಿ ನಾನು ಅವರನ್ನು ದಂಡಿಸುತ್ತೇನೆ. ನಾನು ಮುಯ್ಯಿಗೆ ಮುಯ್ಯಿ ತೀರಿಸುತ್ತೇನೆ.” ಎಂದು ದೇವರು ಹೇಳಿದ್ದು ನಮಗೆ ತಿಳಿದೇ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಏಕೆಂದರೆ, “ಮುಯ್ಯಿ ತೀರಿಸುವುದು ನನಗೆ ಸಂಬಂಧಪಟ್ಟದ್ದು, ನಾನೇ ಪ್ರತಿಫಲವನ್ನು ಕೊಡುವೆನು,” ಎಂದು ಹೇಳಿದ ಕರ್ತದೇವರನ್ನು ನಾವು ಬಲ್ಲೆವು. ಇದಲ್ಲದೆ, “ಕರ್ತದೇವರು ತಮ್ಮ ಜನರಿಗೆ ನ್ಯಾಯತೀರಿಸುವರು,” ಎಂದೂ ಹೇಳಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

30 ಮಿಯಾ ಶೆಡ್ ಕಾಡುನ್ ಘೆತಾ, ಮಿಯಾಚ್ ಅನಿ ಪರ್ತುನ್ ಘಟ್ಟ್ ಕರಲ್ಲ್ಯಾ ಅಪ್ನಾಕ್ ಪವಿತ್ರ್ ಕರಲೆ ರಗಾತ್ ಚೊಕ್ಕ್ ನ್ಹಯ್ ಮನುನ್ ಯೆವ್ಜುನ್ ದೆವಾಚಿ ಕುರ್ಪಾ ಹೊವ್ನ್ ಹೊತ್ತ್ಯಾ ಆತ್ಮ್ಯಾಕ್ ಕನ್ನಾ ಘಡ್ತಾ ಮನುನ್ ಸಾಂಗಲೆ ಹಾಯ್, ಕೊನ್ ಮಟ್ಲಾ ಮನ್ತಲೆ ಆಮ್ಕಾ ಗೊತ್ತ್ ಹಾಯ್, ಅನಿ ಧನಿ ಅಪ್ನಾಚ್ಯಾ ಲೊಕಾಕ್ನಿ ನ್ಯಾಯ್ ನಿರ್‍ನಯ್ ಕರ್‍ತಾ, ಅಸೆಬಿ ಮನ್ತಲೊ ಕೊನ್ ಮನುನ್ ಅಮ್ಕಾ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 10:30
18 ತಿಳಿವುಗಳ ಹೋಲಿಕೆ  

ಪ್ರಿಯರೇ, ಮುಯ್ಯಿಗೆ ಮುಯ್ಯಿ ತೀರಿಸಬೇಡಿ. ಅದನ್ನು ದೇವರಿಗೇ ಬಿಟ್ಟುಬಿಡಿ. ಏಕೆಂದರೆ, “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ಎಲ್ಲರಿಗೂ ತಕ್ಕ ಪ್ರತಿಫಲವನ್ನು ಕೊಡುವವನು ನಾನೇ,” ಎಂಬ ಪ್ರಭುವಿನ ವಾಕ್ಯ ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.


ಸರ್ವೇಶ್ವರ ಸ್ವಗೌರವವನು ಕಾಪಾಡಿಕೊಳ್ಳುವ ದೇವರು ಮುಯ್ಯಿತೀರಿಸುವ, ಹೌದು, ಕಡುಕೋಪದಿಂದ ಮುಯ್ಯಿತೀರಿಸುವ ದೇವರು. ಸರ್ವೇಶ್ವರ ಮುಯ್ಯಿತೀರಿಸುತ್ತಾರೆ ತನ್ನ ವಿರೋಧಿಗಳಿಗೆ ದೀರ್ಘರೋಷವಿಡುತ್ತಾರೆ, ತಮ್ಮ ಶತ್ರುಗಳ ಮೇಲೆ.


ಭೂಮ್ಯಾಕಾಶಗಳನು ಕರೆಯುತಿಹನು I ಪ್ರಜೆಗೆ ವಿಧಿಪಾ ತೀರ್ಪನು ನೋಡಲೆಂದು II


ನಾವು ಎಲ್ಲರೂ ನ್ಯಾಯವಿಚಾರಣೆಗಾಗಿ ಕ್ರಿಸ್ತಯೇಸುವಿನ ಮುಂದೆ ನಿಲ್ಲಲೇಬೇಕು. ಪ್ರತಿಯೊಬ್ಬನೂ ತನ್ನ ದೈಹಿಕ ಜೀವನದಲ್ಲಿ ಮಾಡಿದ ಪಾಪ ಪುಣ್ಯಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ಪಡೆಯಲೇಬೇಕು.


ದೊರಕಿಸುವನು ಪ್ರಭು ನ್ಯಾಯವನು ತನ್ನ ಪ್ರಜೆಗೆ I ತೋರುವನು ಅನುಕಂಪವನು ತನ್ನ ಭಕ್ತಾದಿಗಳಿಗೆ II


ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ ಬರುವನು ಖರೆಯಾಗಿ I ಜಗಕು, ಜನತೆಗು ತೀರ್ಪಿಡುವನು ನೀತಿನಿಯಮಾನುಸಾರವಾಗಿ II


ಆತನು ನಿನ್ನ ಹಿತಕ್ಕಾಗಿ ದೇವರಿಂದ ನೇಮಕಗೊಂಡ ದಾಸನಾಗಿದ್ದಾನೆ. ಆದರೆ ನೀನು ಕೆಟ್ಟದ್ದನ್ನು ಮಾಡಿದೆ ಆದರೆ ಭಯಪಡಲೇಬೇಕು. ಏಕೆಂದರೆ, ಆತನ ಕೈಯಲ್ಲಿರುವ ಅಧಿಕಾರದಂಡವು ವ್ಯರ್ಥವಾದುದೇನೂ ಅಲ್ಲ. ದೇವರ ದಾಸನಾಗಿರುವ ಆತನು ಕೆಟ್ಟದ್ದನ್ನು ಮಾಡುವವರಿಗೆ ದೇವರದಂಡನೆಯನ್ನು ವಿಧಿಸುತ್ತಾನೆ.


ಸರ್ವೇಶ್ವರ ಸ್ವಾಮಿಯ ಅನುಗ್ರಹದ ವರುಷವನು, ನಮ್ಮ ದೇವರು ಮುಯ್ಯಿತೀರಿಸುವಾ ದಿನವನು ಘೋಷಿಸಲೆಂದೆ.


ಏಕೆನೆ ಬರುವನಾತ ಇಹಲೋಕಕೆ ನ್ಯಾಯತೀರಿಸಲು I ಜಗಕು, ಜನತೆಗು, ನ್ಯಾಯನೀತಿಗನುಸಾರ ತೀರ್ಪುಕೊಡಲು II


ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಇಸ್ರಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪು ನೀಡುವೆನು; ಅಧರ್ಮವು ನಿಮ್ಮನ್ನು ನಾಶಮಾಡದಂತೆ ಪಾಪಕ್ಕೆ ವಿಮುಖರಾಗಿರಿ; ನಿಮ್ಮ ಅಪರಾಧಗಳನ್ನೆಲ್ಲಾ ತೊರೆದುಬಿಡಿ.


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ನನ್ನ ಹಿಂಡೇ, ಇಗೋ, ನಾನು ನಿಮ್ಮಲ್ಲಿನ ಕುರಿಮೇಕೆಗಳಿಗೂ ಟಗರುಹೋತಗಳಿಗೂ ಮಧ್ಯವರ್ತಿಯಾಗಿ ನ್ಯಾಯ ತೀರಿಸುವೆನು.


ಏಕೆಂದರೆ, ನನ್ನ ಜನರನು ಉದ್ಧರಿಸುವ ವರುಷವು ಬಂದಿತ್ತು ಮುಯ್ಯಿತೀರಿಸುವ ದಿನವು ನನ್ನ ಮನದಲ್ಲಿ ನಿಶ್ಚಿತವಾಗಿತ್ತು.


ಅವರು ನ್ಯಾಯನೀತಿಯನ್ನು ವಜ್ರಕವಚವನ್ನಾಗಿ ತೊಟ್ಟುಕೊಳ್ಳುವರು. ರಕ್ಷಣೆ ಎಂಬ ಶಿರಸ್ತ್ರಾಣವನ್ನು ಧರಿಸಕೊಳ್ಳುವರು. ಪ್ರತೀಕಾರವೆಂಬ ಉಡುಪನ್ನು ಉಟ್ಟುಕೊಳ್ಳುವರು. ಆಗ್ರಹ ಎಂಬ ನಿಲುವಂಗಿಯನ್ನು ಹಾಕಿಕೊಳ್ಳುವರು.


ಹೇ ಪ್ರಭು, ಮುಯ್ಯಿತೀರಿಸುವ ದೇವಾ I ಮುಯ್ಯಿತೀರಿಸಲು ಎದ್ದುಬಾರಯ್ಯಾ II


ನಿನ್ನ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡು ಮಾಡಬೇಡ, ಅವರಿಗೆ ವಿರುದ್ಧ ಮತ್ಸರ ಇಟ್ಟುಕೊಳ್ಳಬೇಡ; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು. ನಾನು ಸರ್ವೇಶ್ವರ.


ಒಡೆಯಾ, ತಾವು ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ಸರ್ವೇಶ್ವರ ತಮ್ಮನ್ನು ಕಾಪಾಡಿದ್ದಾರೆ. ಸರ್ವೇಶ್ವರನಾಣೆ, ನಿಮ್ಮ ಜೀವದಾಣೆ, ನಿಮ್ಮ ವಿರೋಧಿಗಳೂ ನಿಮಗೆ ಕೇಡು ಬಗೆಯುವವರೂ ನಾಬಾಲನ ಗತಿಯನ್ನು ಹೊಂದಲಿ!


ಇದಲ್ಲದೆ ದಾವೀದನು, “ಸರ್ವೇಶ್ವರನಾಣೆ, ಅವನು ಸರ್ವೇಶ್ವರನಿಂದಲೇ ಸಾಯುವನು; ಇಲ್ಲವೆ ಕಾಲತುಂಬಿ ಮರಣಹೊಂದುವನು; ಅಥವಾ ಯುದ್ಧದಲ್ಲಿ ಮಡಿಯುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು