Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 8:4 - ಕನ್ನಡ ಸತ್ಯವೇದವು C.L. Bible (BSI)

4 ದಿಕ್ಕಿಲ್ಲದವರನ್ನು ತುಳಿದುಬಿಡುವವರೇ, ನಾಡಿನ ಬಡವರನ್ನು ನಿರ್ಮೂಲ ಮಾಡುವವರೇ, ಕೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 “ಎಷ್ಟು ಹೊತ್ತಿಗೆ ಅಮಾವಾಸ್ಯೆಯು ತೀರುವುದು? ಧಾನ್ಯವನ್ನು ಮಾರಬೇಕಲ್ಲಾ; ಸಬ್ಬತ್ತು ಇನ್ನೆಷ್ಟು ಹೊತ್ತು ಇರುವುದು? ಗೋದಿಯನ್ನು ಅಂಗಡಿಯಲ್ಲಿ ಇಡಬೇಕಲ್ಲಾ; ಕೊಳಗವನ್ನು ಕಿರಿದುಮಾಡೋಣ; ಬಡವರನ್ನು ನುಂಗುವವರೇ, ತೊಲವನ್ನು ಹೆಚ್ಚಿಸೋಣ; ಸುಳ್ಳು ತಕ್ಕಡಿಯಿಂದ ಮೋಸಮಾಡೋಣ; ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ ಇದನ್ನು ಕೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಎಷ್ಟು ಹೊತ್ತಿಗೆ ಅಮಾವಾಸ್ಯೆಯು ತೀರುವದು? ಧಾನ್ಯವನ್ನು ಮಾರಬೇಕಲ್ಲಾ; ಸಬ್ಬತ್ತು ಇನ್ನೆಷ್ಟು ಹೊತ್ತು ಇರುವದು? ಗೋದಿಯನ್ನು ಅಂಗಡಿಯಿಡಬೇಕಲ್ಲಾ; ಕೊಳಗವನ್ನು ಕಿರಿದುಮಾಡೋಣ, ತೊಲವನ್ನು ಹೆಚ್ಚಿಸೋಣ, ಸುಳ್ಳುತಕ್ಕಡಿಯಿಂದ ಮೋಸಮಾಡೋಣ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನನ್ನ ಮಾತುಗಳನ್ನು ಕೇಳಿರಿ! ಜನರೇ, ನೀವು ಬಡವರ ಮೇಲೆ ನಡೆದಾಡುತ್ತೀರಿ. ಈ ದೇಶದ ಬಡಜನರನ್ನು ನಾಶಮಾಡುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಬಡವರನ್ನು ನುಂಗುವವರೇ, ನಾಡಿನ ಬಡವರನ್ನು ಮುಗಿಸಿಬಿಡಬೇಕೆಂದಿರುವವರೇ, ಇದನ್ನು ಕೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 8:4
24 ತಿಳಿವುಗಳ ಹೋಲಿಕೆ  

ಬಡಬಗ್ಗರನ್ನು ತುಳಿಯುತ್ತೀರಿ; ಅವರ ದವಸಧಾನ್ಯಗಳನ್ನು ಕಸಿದುಕೊಳ್ಳುತ್ತೀರಿ. ಆದ್ದರಿಂದ ನೀವು ಕಟ್ಟಿರುವ ಕೆತ್ತನೆಯ ಕಲ್ಲುಮನೆಗಳಲ್ಲಿ ವಾಸಮಾಡಲಾರಿರಿ. ನೀವು ನೆಟ್ಟಿರುವ ಫಲಭರಿತ ದ್ರಾಕ್ಷಾಬಳ್ಳಿಗಳಿಂದ ರಸವನ್ನು ಕುಡಿಯಲಾರಿರಿ.


ಖಡ್ಗದಂಥ ಹಲ್ಲುಗಳು, ಕತ್ತಿಯಂಥ ಕೋರೆಗಳೂ ಉಳ್ಳವರಿದ್ದಾರೆ. ನಾಡಿನ ಬಡವರನ್ನು ಇವರು ತಿಂದುಬಿಡುವರು; ಜನರಲ್ಲಿ ದಿಕ್ಕಿಲ್ಲದವರನ್ನು ಇವರು ನುಂಗಿಬಿಡುವರು.


ದುರ್ಜನರೆನ್ನ ಜನರನು ಅನ್ನದಂತೆ ನುಂಗುವುದೇಕೆ? I ಪ್ರಭುವನು ನೆನೆಯದಾ ದುಷ್ಕರ್ಮಿಗಳಿಗೆ ಅರಿವಿಲ್ಲವೇಕೆ? I


ಪ್ರಭು ನೀ ದೀನದಲಿತರ ವಕೀಲನೆಂದು ನಾ ಬಲ್ಲೆ I ಬಡವರಿಗೆ ನ್ಯಾಯ ದೊರಕಿಸುವವ ನೀ ಅಲ್ಲವೆ? II


ಬಡವರ ಬವಣೆ ತಿಳಿಯಿತೆನಗೆ; ದಲಿತರ ನರಳಾಟ ಕೇಳಿಸಿತೆನಗೆ I ಎದ್ದು ಬರುವೆ, ಹಗೆಗಳಿಂದವರನು ಉದ್ಧರಿಸುವೆ” ಇದು ಪ್ರಭುವಿನ ಹೇಳಿಕೆ II


ನಿಮ್ಮನ್ನು ವಿರೋಧಿಸಿದ ಸಜ್ಜನನನ್ನು ಖಂಡಿಸಿ ಕೊಲೆಮಾಡಿಸಿದ್ದೀರಿ.


“ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ಸ್ವರ್ಗಸಾಮ್ರಾಜ್ಯದ ದ್ವಾರಗಳನ್ನು ಮಾನವರಿಗೆ ಮುಚ್ಚಿದ್ದೀರಿ. ನೀವೂ ಪ್ರವೇಶಿಸುವುದಿಲ್ಲ, ಒಳಕ್ಕೆ ಪ್ರವೇಶಿಸಲು ಯತ್ನಿಸುವವರನ್ನೂ ಬಿಡುವುದಿಲ್ಲ.


ಕಣ್ಣಿದ್ದರೂ ಕಾಣದ, ಕಿವಿಯಿದ್ದರೂ ಕೇಳದ, ಬುದ್ಧಿಯಿಲ್ಲದ ಜನರೇ, ಸರ್ವೇಶ್ವರನ ಈ ಮಾತನ್ನು ಕೇಳಿರಿ;


ಅದಕ್ಕೆ ಮೀಕಾಯೆಹುವು, “ಅದಿರಲಿ, ಸರ್ವೇಶ್ವರನ ವಾಕ್ಯವನ್ನು ಕೇಳು; ಸರ್ವೇಶ್ವರ ತಮ್ಮ ಸಿಂಹಾಸನದ ಮೇಲೆ ಕುಳಿತುಕೊಂಡದ್ದನ್ನೂ ಪರಲೋಕಸೈನ್ಯಗಳು ಅವರ ಎಡಬಲಗಡೆಗಳಲ್ಲಿ ನಿಂತದ್ದನ್ನೂ ಕಂಡೆ.


“ಆದ್ದರಿಂದ ಆ ಸರ್ವೇಶ್ವರಸ್ವಾಮಿಯ ವಾಕ್ಯವನ್ನು ಗಮನಿಸು: ‘ಇಸ್ರಯೇಲಿಗೆ ವಿರುದ್ಧ ಪ್ರವಾದನೆ ಮಾಡಬೇಡ; ಇಸಾಕನ ಮನೆತನದ ವಿರುದ್ಧ ಮಾತೆತ್ತಬೇಡ; ಎಂದು ನೀನು ಹೇಳುತ್ತೀಯಲ್ಲವೆ?


ಆಗ ಪ್ರವಾದಿ ಯೆರೆಮೀಯನು ಪ್ರವಾದಿ ಹನನ್ಯನಿಗೆ, “ಹನನ್ಯನೇ ಕೇಳು, ಸರ್ವೇಶ್ವರ ನಿನ್ನನ್ನು ಕಳಿಸಲಿಲ್ಲ. ಆದರೂ ಈ ಜನರು ಸುಳ್ಳನ್ನು ನಂಬುವಂತೆ ಮಾಡುತ್ತಿರುವೆ.


ಆದಕಾರಣ, ಜೆರುಸಲೇಮಿನ ಜನರನ್ನಾಳುವ ಧರ್ಮನಿಂದಕರೇ, ಸರ್ವೇಶ್ವರ ಸ್ವಾಮಿಯ ಮಾತನ್ನು ಕೇಳಿರಿ.


ಸೊದೋಮಿನ ಅಧಿಪತಿಗಳಂತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ.


ಕರುಣೆತೋರು ದೇವಾ, ಜನರೆನ್ನ ಬೆನ್ನಟ್ಟಿ ಬರುತಿಹರು I ದಿನವೆಲ್ಲ ಕದನ ಮಾಡಿ ಶತ್ರುಗಳೆನ್ನ ಬಾಧಿಸುತಿಹರು II


ದಿಕ್ಕಿಲ್ಲದವರನು ದಾರಿತಪ್ಪಿಸುತ್ತಾರೆ ನಾಡಿನ ಬಡವರನು ಅಡಗಿಸಿಬಿಡುತ್ತಾರೆ.


ನಿಮ್ಮ ತಕ್ಕಡಿಯೂ ಧಾನ್ಯದ ಅಳತೆಯೂ ರಸದ್ರವ್ಯದ ಅಳತೆಯೂ ನ್ಯಾಯವಾಗಿಯೇ ಇರಬೇಕು.


ಸಜ್ಜನರನ್ನು ಹಿಂಸಿಸಿ, ಲಂಚಕ್ಕೆ ಕೈ ಒಡ್ಡುವವರೇ, ನ್ಯಾಯಮಂಟಪದಲ್ಲಿ ಬಡವರಿಗೆ ನ್ಯಾಯದೊರಕಿಸದಿರುವವರೇ, ನಿಮ್ಮ ಪಾಪಗಳು ಅಪಾರ! ನಿಮ್ಮ ದ್ರೋಹಗಳು ಬಹಳ! ಇದು ನನಗೆ ಗೊತ್ತು.


ಇತರರ ಹೊಲಗದ್ದೆಗಳನ್ನು ದುರಾಸೆಯಿಂದ ಆಕ್ರಮಿಸಿಕೊಳ್ಳುತ್ತಾರೆ. ಅಂತೆಯೇ ಮನೆಗಳನ್ನು ಅಪಹರಿಸುತ್ತಾರೆ. ಈ ರೀತಿಯಲ್ಲಿ ಮನೆಯನ್ನೂ ಮಾಲೀಕನನ್ನೂ ಸ್ವತ್ತನ್ನೂ ಹಕ್ಕುದಾರನನ್ನೂ ತುಳಿದುಬಿಡುತ್ತಾರೆ.


ತುಂಬಿದೆ ಶಾಪಕೋಪ, ಕುತಂತ್ರ ಅವನ ಬಾಯಲಿ I ಅವಿತಿದೆ ಪಾಪ, ಅತಿವಿನಾಶ ನಾಲಗೆಯಡಿಯಲಿ II


“ನಿನ್ನವರು ರಕ್ತ ಸುರಿಸುವುದಕ್ಕೆ ಲಂಚಪಡೆದಿದ್ದಾರೆ; ನಿನ್ನವರು ಸಾಲಕ್ಕೆ ಬಡ್ಡಿ ತೆಗೆದುಕೊಂಡು, ಲಾಭಕ್ಕೆ ಹಣಕೊಟ್ಟು ತಮ್ಮ ನೆರೆಯವರನ್ನು ಬಾಧಿಸಿ, ಸುಲಿಗೆಮಾಡಿ, ನನ್ನನ್ನು ಮರೆತೇಬಿಟ್ಟಿದ್ದಾರೆ; ಇದು ಸರ್ವೇಶ್ವರನಾದ ದೇವರ ನುಡಿ.


ನನ್ನ ಪ್ರಜೆಯ ಮೈ ಚರ್ಮವನ್ನು ಸುಲಿಯುವುದಲ್ಲದೆ ಅವರ ಎಲುಬುಗಳನ್ನು ಮುರಿದುಹಾಕುತ್ತೀರಿ. ಹಂಡೆಯಲ್ಲಿನ ತುಂಡುಗಳಂತೆ, ಆವಿಗೆಯಲ್ಲಿನ ಮಾಂಸದ ಚೂರುಗಳಂತೆ ನನ್ನ ಪ್ರಜೆಯನ್ನು ಚೂರುಚೂರಾಗಿ ಕತ್ತರಿಸಿಹಾಕಿದ್ದೀರಿ.


“ಏನದು?” ಎಂದು ನಾನು ವಿಚಾರಿಸಲು, ಅವನು, “ನಿನಗೆ ಕಾಣಿಸುತ್ತಿರುವ ಆ ವಸ್ತು ಒಂದು ಕೊಳಗದ ಪಾತ್ರೆ,” ಎಂದನು. ಅಲ್ಲದೆ, “ಅದು ಇಡೀ ನಾಡಿನ ಅಧರ್ಮದ ಪ್ರತೀಕ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು