Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 8:13 - ಕನ್ನಡ ಸತ್ಯವೇದವು C.L. Bible (BSI)

13 ಆ ದಿನದಂದು ಗಟ್ಟಿಮುಟ್ಟಾದ ಯುವಕ ಯುವತಿಯರೂ ಬಾಯಾರಿಕೆಯಿಂದ ಮೂರ್ಛೆಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆ ದಿನದಲ್ಲಿ ಸುಂದರವಾದ ಯುವತಿಯರೂ ಮತ್ತು ಯೌವನಸ್ಥರು ಸಹ ಬಾಯಾರಿಕೆಯಿಂದ ಮೂರ್ಛೆ ಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಆ ದಿನದಲ್ಲಿ ಯುವಕರೂ ಸುಂದರಯುವತಿಯರೂ ಬಾಯಾರಿಕೆಯಿಂದ ಮೂರ್ಛೆ ಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆ ಸಮಯದಲ್ಲಿ ಸುಂದರವಾದ ತರುಣತರುಣಿಯರು ದಾಹದಿಂದ ಬಳಲುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 “ಆ ದಿನದಲ್ಲಿ, “ಸೌಂದರ್ಯವತಿಯರಾದ ಕನ್ಯೆಯರು ಮತ್ತು ಯೌವನಸ್ಥರು ಸಹ ದಾಹದಿಂದ ಕುಗ್ಗಿ ಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 8:13
13 ತಿಳಿವುಗಳ ಹೋಲಿಕೆ  

ಇಲ್ಲವಾದರೆ ಅವಳನ್ನು ನಗ್ನವಾಗಿಸಿ (ಹುಟ್ಟಿದಾಗ ಇದ್ದಂತೆ) ಬೆತ್ತಲೆಯಾಗಿ ನಿಲ್ಲಿಸುವೆನು. ಅವಳನ್ನು ಬೆಂಗಾಡನ್ನಾಗಿ ಮಾಡಿ, ಮರುಭೂಮಿಯಂತೆ ಮಾರ್ಪಡಿಸಿ, ನೀರಡಿಕೆಯಿಂದ ಸಾಯುವಂತೆ ಮಾಡುವೆನು.


ವಯಸ್ಕರೂ ವೃದ್ಧರೂ ಬಿದ್ದಿದ್ದಾರೆ ಬೀದಿಗಳಲ್ಲೆ ತರುಣತರುಣಿಯರು ತುತ್ತಾಗಿದ್ದಾರೆ ಖಡ್ಗಗಳಿಗೆ. ನಿನ್ನ ಪ್ರಕೋಪದ ದಿನದಂದು ಹತಮಾಡಿದೆಯಲ್ಲಾ ಅವರನ್ನು ಕನಿಕರಿಸದೆ !


“ಸರ್ವೇಶ್ವರನು ನ್ಯಾಯಸ್ವರೂಪಿ, ನಾನಾದರೊ ಆತನ ಆಜ್ಞೆ ಮೀರಿದ ದ್ರೋಹಿ. ಜನಾಂಗಗಳೇ, ನೀವೆಲ್ಲರು ಕಿವಿಗೊಡಿ, ನನ್ನ ಸಂಕಟ ನೋಡಿ ! ನನ್ನ ಯುವಕ ಯುವತಿಯರು, ಇಗೋ, ಸೆರೆಹೋಗಿರುವರು ನೋಡಿ.


ಆಹಾ! ಎಷ್ಟು ಸುಂದರ, ಎಷ್ಟು ಮನೋಹರ ಆ ನಾಡಿನ ದೃಶ್ಯ! ಪುಷ್ಟಿಗೊಳಿಸುವುವು ಯುವಕಯುವತಿಯರನು ದ್ರಾಕ್ಷೆ, ದವಸಧಾನ್ಯ!


ತಲೆಯ ಮೇಲೆ ಧೂಳನ್ನು ತೂರಿಕೊಂಡು ಗೋಣಿತಟ್ಟನ್ನು ಸೊಂಟಕ್ಕೆ ಸುತ್ತಿಕೊಂಡು ಕುಕ್ಕರಿಸಿಹರು ಸಿಯೋನ್ ನಗರಿಯ ಪ್ರಮುಖರು ತಲೆ ತಗ್ಗಿಸಿಹರು ಜೆರುಸಲೇಮಿನ ಯುವತಿಯರು.


ಯುವತಿಯೇ, ದೀಬೋನ್ ನಗರಿಯೇ, ನಿನ್ನ ಮಹಿಮೆಯ ಪದವಿಯಿಂದ ಕೆಳಕ್ಕಿಳಿದು ಕುಳಿತುಕೊ ಬಾಯಾರಿದವಳಂತೆ. ಮೋವಾಬನ್ನು ಹಾಳುಮಾಡುವವನು ನಿನಗೆ ವಿರುದ್ಧವಾಗಿ ಬಂದಿದ್ದಾನೆ. ನಿನ್ನ ಕೋಟೆಕೊತ್ತಲುಗಳನ್ನು ಅವನು ಕೆಡವಿದ್ದಾನೆ.


ಯುವಕರೂ ದಣಿದು ಬಳಲುವರು ತರುಣರೂ ಸೊರಗಿ ಮುಗ್ಗರಿಸುವರು.


ದೇವಾ, ನೀಯೆನ್ನ ದೇವ, ನಿನಗಾಗಿ ನಾ ಕಾದಿರುವೆ I ನಿರ್ಜಲ ಮರುಭೂಮಿಯಲಿ ನೀರಿಗಾಗಿ ಹಾತೊರೆವಂತೆ I ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ II


ಹೊರಗೆ ಕತ್ತಿ, ಒಳಗೆ ಭಯಭೀತಿ ಇವರಲ್ಲಿರುವುವು. ಯುವಕ ಯುವತಿಯರು, ಮಕ್ಕಳು ಮುದುಕರು ಕತ್ತಿಕಠಾರಿಗಳಿಗೆ ತುತ್ತಾಗುವರು ಇವರೆಲ್ಲರು.


ಎಂದೇ ಅವರ ಯುವಕ ಯುವತಿಯರ ಬಗ್ಗೆ ಸ್ವಾಮಿಗೆ ಸಂತೋಷವಿಲ್ಲ; ಅವರ ಅನಾಥರ ಮತ್ತು ವಿಧವೆಯರ ಬಗ್ಗೆ ಸಹಾನುಭೂತಿಯಿಲ್ಲ. ಪ್ರತಿಯೊಬ್ಬನೂ ಧರ್ಮಭ್ರಷ್ಟನೂ ಅತಿ ದುಷ್ಟನೂ ಆಗಿದ್ದಾನೆ. ಪ್ರತಿಯೊಬ್ಬನ ಬಾಯಿ ನುಡಿಯುವುದು ಕೆಡುಕನ್ನೇ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.


ಅವರ ತಾಯಿ ವೇಶ್ಯೆಯಾಗಿದ್ದಾಳೆ. ಲಜ್ಜೆಗೆಟ್ಟ ಹೆಂಗಸಾಗಿ ವರ್ತಿಸಿದ್ದಾಳೆ. ‘ನನಗೆ ಅನ್ನಪಾನ, ಉಣ್ಣೆ ಉಡಿಗೆ, ಎಣ್ಣೆತೈಲ, ಪಾಯಸಪಾನಕಗಳನ್ನು ಕೊಡುವಂಥ ನಲ್ಲರ ಹಿಂದೆ ಹೋಗುವೆನು’ ಎಂದುಕೊಂಡಿದ್ದಾಳೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು