Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 6:5 - ಕನ್ನಡ ಸತ್ಯವೇದವು C.L. Bible (BSI)

5 ವೀಣೆಯನ್ನು ನುಡಿಸುತ್ತಾ ಮನಸ್ಸು ಬಂದಂತೆ ಹಾಡುವವರೇ, ದಾವೀದನಂತೆ ಹೊಸ ವಾದ್ಯಸಂಗೀತಗಳನ್ನು ರಚಿಸುವವರೇ, ನಿಮಗೆ ಧಿಕ್ಕಾರ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ವೀಣೆಯ ಮೇಲೆ ಮನಸ್ಸು ಬಂದಂತೆ ಹಾಡುತ್ತಾರೆ; ದಾವೀದನ ಹಾಗೆ ಗಾನವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ವೀಣೆಯ ಮೇಲೆ ಮನಸ್ಸುಬಂದಂತೆ ಹಾಡುತ್ತಾರೆ; ದಾವೀದನ ಹಾಗೆ ವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತಾರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ನಿಮ್ಮ ತಂತಿವಾದ್ಯಗಳಿಂದ ಹಾಡನ್ನು ಬಾರಿಸುವಿರಿ; ದಾವೀದನಂತೆ ನಿಮ್ಮ ವಾದ್ಯಗಳನ್ನು ಅಭ್ಯಾಸಿಸುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ವೀಣೆಯ ಸ್ವರಕ್ಕೆ ಹಾಡುತ್ತೀರಿ, ದಾವೀದನ ಹಾಗೆ ನಿಮಗೆ ನೀವೇ ಗಾನವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 6:5
12 ತಿಳಿವುಗಳ ಹೋಲಿಕೆ  

ಕಿನ್ನರಿ, ವೀಣೆ, ತಬಲ, ಕೊಳಲು, ಮದ್ಯಪಾನ ಇವೇ ಅವರ ದುಂದೌತಣದ ಸೊಬಗು. ಸ್ವಾಮಿಯ ಕಾರ್ಯಗಳನ್ನು ಅವರು ಲಕ್ಷಿಸರು. ಸ್ವಾಮಿಯ ಕೃತಿಗಳನ್ನವರು ಧ್ಯಾನಿಸರು.


ನಿಮ್ಮ ಭಜನೆ ನಿಂತುಹೋಗಲಿ; ನಿಮ್ಮ ವೀಣಾವಾದ್ಯಗಳು ತೊಲಗಲಿ.


ಆ ದಿನದಲ್ಲಿ ಆಸ್ಥಾನದ ಗೀತೆಗಳು ಶೋಕಗೀತೆಗಳಾಗಿ ಮಾರ್ಪಡುವುವು. ಹೆಣಗಳು ಎಲ್ಲೆಲ್ಲೂ ಬಿದ್ದಿರುವುವು. ಅವುಗಳನ್ನು ಸದ್ದುಗದ್ದಲವಿಲ್ಲದೆ ಬಿಸಾಡಲಾಗುವುದು.” ಇದು ಸರ್ವೇಶ್ವರಸ್ವಾಮಿಯ ನುಡಿ.


“ಎಲೈ ಬಾಬಿಲೋನೇ , ಕಿನ್ನರಿಗಾರರ, ಸಂಗೀತಗಾರರ ಕೊಳಲ ನುಡಿಸುವವರ, ತುತೂರಿಯನೂದುವವರ ಮಧುರ ಗಾನವು ಕೇಳಿಬರದು ನಿನ್ನಲಿ ಮತ್ತೆಂದೂ, ಕುಶಲಕರ್ಮಿಗಳಾರೂ ಕಾಣಸಿಗರು ಇನ್ನೆಂದೂ, ಬೀಸುವ ಕಲ್ಲಿನ ಶಬ್ದವೇ ಇರದು ನಿನ್ನಲ್ಲಿ ಎಂದೆಂದೂ !


ಕ್ರೈಸ್ತರಲ್ಲದವರು ಮಾಡಲು ಇಚ್ಛಿಸುವುದನ್ನೆಲ್ಲಾ ನೀವು ಗತಕಾಲದಲ್ಲಿ ಮಾಡಿದ್ದು ಸಾಕು. ಆಗ ನೀವು ಅಶ್ಲೀಲತೆ, ಕಾಮ, ಕುಡುಕುತನ, ಅಮಲೇರುವಿಕೆ, ದುಂದೌತಣ ಮತ್ತು ಯೋಗ್ಯವಲ್ಲದ ವಿಗ್ರಹಾರಾಧನೆ - ಈ ಮುಂತಾದವುಗಳಿಗೆ ಒಳಗಾಗಿದ್ದಿರಿ.


ಬೆಳ್ಳಿಬಂಗಾರಗಳನ್ನೂ ಅರಸರ ಹಾಗೂ ಸಾಮಂತರ ಕಪ್ಪಕಾಣಿಕೆಗಳನ್ನೂ ಶೇಖರಿಸಿಕೊಂಡೆ. ಗಾಯಕಗಾಯಕಿಯರೂ ಭೋಗವಿಲಾಸಕ್ಕಾಗಿ ಹಲವಾರು ಉಪಪತ್ನಿಯರೂ ನನಗಿದ್ದರು.


ದ್ವಾರಪಾಲಕರನ್ನಾಗಿ ನಾಲ್ಕು ಸಾವಿರ ಹಾಗು ತಾನು ಒದಗಿಸಿದ್ದ ವಾದ್ಯಗಳಿಂದ ಸರ್ವೇಶ್ವರನನ್ನು ಭಜಿಸುವುದಕ್ಕಾಗಿ ನಾಲ್ಕು ಸಾವಿರ ಜನರನ್ನು ದಾವೀದನು ನೇಮಿಸಿದನು.


ಸ್ವರಮಂಡಲ, ಕಿನ್ನರಿ, ತಾಳಗಳೊಂದಿಗೆ ಸಂಭ್ರಮದಿಂದ ವಾದ್ಯಗಳನ್ನು ಬಾರಿಸುವುದಕ್ಕೂ ಹಾಡುವುದಕ್ಕೂ ವಿವಿಧ ಲೇವಿಯರನ್ನು ನೇಮಿಸಬೇಕೆಂದು ದಾವೀದನು ಲೇವಿಯರ ನಾಯಕನಿಗೆ ಆಜ್ಞಾಪಿಸಿದನು.


ನನಗೆ ಏನೂ ಹೇಳದೆ ವಂಚಿಸಿ ಏಕೆ ಓಡಿಬಂದೆ? ನನಗೆ ತಿಳಿಸಿದ್ದರೆ ಸಂಗೀತ ಸಂಭ್ರಮದೊಂದಿಗೆ, ತಾಳಮೇಳ ವಾದ್ಯಗಳೊಂದಿಗೆ ನಿನ್ನನ್ನು ಸಾಗಕಳುಹಿಸುತ್ತಿದ್ದೆ.


ನಾನು ನಿನ್ನ ಸಂಗೀತಗಳ ಧ್ವನಿಯನ್ನು ನಿಲ್ಲಿಸಿಬಿಡುವೆನು; ನಿನ್ನ ಕಿನ್ನರಿಗಳ ನುಡಿ ಇನ್ನು ಕೇಳಿಸದು.


ಆ ಲೇವಿಯರು ದಾವೀದನ ವಾದ್ಯಗಳನ್ನೂ ಯಾಜಕರು ತುತೂರಿಗಳನ್ನೂ ಹಿಡಿದು ನಿಂತಿರಲು ಹಿಜ್ಕೀಯನು ಬಲಿಪೀಠದ ಮೇಲೆ ದಹನಬಲಿಯನ್ನು ಸಮರ್ಪಿಸುವುದಕ್ಕೆ ಆಜ್ಞಾಪಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು