Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 5:9 - ಕನ್ನಡ ಸತ್ಯವೇದವು C.L. Bible (BSI)

9 ಬಲಾಢ್ಯರನ್ನು ತಟ್ಟನೆ ಬಡಿದು ಕೋಟೆಗಳ ಕೆಡವುವಾತನು ಆತನೇ, ಸರ್ವೇಶ್ವರಸ್ವಾಮಿ ಎಂಬುದೇ ಆತನ ನಾಮಧೇಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಬಲಿಷ್ಠರಿಗೆ ಧ್ವಂಸವನ್ನು ತಟ್ಟನೇ ತಂದೊಡ್ಡಿ, ಕೋಟೆಗೆ ನಾಶನವನ್ನು ತರುವವನು ಆತನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಬಲಿಷ್ಟರಿಗೆ ಧ್ವಂಸವನ್ನು ತಟ್ಟನೆ ಒಡ್ಡಿ ಕೋಟೆಗೆ ನಾಶನವನ್ನು ತರುವವನು ಆತನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಕಣ್ಣು ಮಿಟುಕಿಸುವುದರಲ್ಲಿ ಅವರು ಕೋಟೆಯನ್ನು ನಾಶಪಡಿಸುತ್ತಾರೆ ಮತ್ತು ಕೋಟೆಯ ನಗರವನ್ನು ವಿನಾಶಪಡಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 5:9
7 ತಿಳಿವುಗಳ ಹೋಲಿಕೆ  

ಅಗ್ನಿಜ್ವಾಲೆಯನ್ನು ಆರಿಸಿದರು; ಖಡ್ಗದ ಬಾಯಿಂದ ತಪ್ಪಿಸಿಕೊಂಡರು; ಬಲಹೀನರಾಗಿದ್ದರೂ ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಶತ್ರುಗಳ ಸೈನ್ಯವನ್ನು ಸದೆಬಡಿದರು.


ನಿಮ್ಮ ಪಟ್ಟಣಗಳನ್ನು ಹಾಳುಮಾಡುವೆನು; ನಿಮ್ಮ ಕೋಟೆಕೊತ್ತಲಗಳನ್ನು ಕೆಡವಿಬಿಡುವೆನು.


ದಾಳಿಮಾಡುವ ಆ ಬಾಬಿಲೋನಿಯರನ್ನು ನೀವು ಪೂರ್ತಿಯಾಗಿ ಸೋಲಿಸಿದರೂ, ಅವರಲ್ಲಿ ಗಾಯಗೊಂಡವರು ಮಾತ್ರ ನಿಮ್ಮಲ್ಲಿ ಉಳಿದರೂ, ಆ ಗಾಯಗೊಂಡವರೇ ತಮ್ಮ ತಮ್ಮ ಗುಡಾರಗಳಿಂದ ಎದ್ದುಬಂದು ಈ ನಗರವನ್ನು ಬೆಂಕಿಯಿಂದ ಸುಟ್ಟುಬಿಡುವರು.


ಯೆಹೋವಾಹಾಜನ ಮಗ ಯೋವಾಷನು, ತನ್ನ ತಂದೆಯ ಕಾಲದಲ್ಲಿ ಹಜಾಯೇಲನು ಯುದ್ಧಮಾಡಿ ಕಿತ್ತುಕೊಂಡಿದ್ದ ಪಟ್ಟಣಗಳನ್ನು, ಬೆನ್ಹದದನಿಂದ ತಿರುಗಿ ತೆಗೆದುಕೊಂಡನು. ಅವನನ್ನು ಮೂರು ಸಾರಿ ಸೋಲಿಸಿ, ಇಸ್ರಯೇಲರ ಎಲ್ಲಾ ಪಟ್ಟಣಗಳನ್ನು ಹಿಂದಕ್ಕೆ ಪಡೆದನು.


“ಪೂರ್ವದಿಕ್ಕಿಗಿರುವ ಕಿಟಕಿಯನ್ನು ತೆರೆ,” ಎಂದನು. ಅವನು ತೆರೆದನು. ಅನಂತರ, “ಬಾಣವನ್ನೆಸೆ,” ಎಂದು ಆಜ್ಞಾಪಿಸಿದನು. ಅವನು ಎಸೆಯಲು, “ಇದು ಜಯಪ್ರದವಾದ ಸರ್ವೇಶ್ವರನ ಬಾಣ; ಸಿರಿಯಾದವರನ್ನು ಜಯಿಸುವ ಬಾಣ. ಆ ಸಿರಿಯಾದವರನ್ನು ನೀನು ಅಫೇಕದಲ್ಲಿ ಸೋಲಿಸಿ ಸಂಹರಿಸಿಬಿಡುವೆ,” ಎಂದು ಹೇಳಿದನು.


ಅರೀಯೇಲೇ, ಗುಂಪುಗುಂಪಾಗಿ ಕೂಡಿಬರುವ ನಿನ್ನ ಶತ್ರುಗಳು ಧೂಳಿಪುಡಿಯಂತೆ ತೂರಿಹೋಗುವರು. ತಂಡೋಪತಂಡವಾಗಿ ಬಂದಿರುವ ಭಯಂಕರ ಸೈನಿಕರು ಹೊಟ್ಟಿನಂತೆ ಹಾರಿಹೋಗುವರು. ತಟ್ಟನೆ ಕ್ಷಣಮಾತ್ರದಲ್ಲಿ ಕಣ್ಮರೆಯಾಗುವರು.


ನಿಮ್ಮಲ್ಲಿ ದೌಡೋಡುವವನು ಕೂಡ ತಲೆತಪ್ಪಿಸಿಕೊಳ್ಳಲಾರನು. ಬಲಿಷ್ಠನೂ ಬಲಹೀನನಾಗುವನು. ಪರಾಕ್ರಮಿಯೂ ಪ್ರಾಣ ಉಳಿಸಿಕೊಳ್ಳಲಾರನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು