Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 5:11 - ಕನ್ನಡ ಸತ್ಯವೇದವು C.L. Bible (BSI)

11 ಬಡಬಗ್ಗರನ್ನು ತುಳಿಯುತ್ತೀರಿ; ಅವರ ದವಸಧಾನ್ಯಗಳನ್ನು ಕಸಿದುಕೊಳ್ಳುತ್ತೀರಿ. ಆದ್ದರಿಂದ ನೀವು ಕಟ್ಟಿರುವ ಕೆತ್ತನೆಯ ಕಲ್ಲುಮನೆಗಳಲ್ಲಿ ವಾಸಮಾಡಲಾರಿರಿ. ನೀವು ನೆಟ್ಟಿರುವ ಫಲಭರಿತ ದ್ರಾಕ್ಷಾಬಳ್ಳಿಗಳಿಂದ ರಸವನ್ನು ಕುಡಿಯಲಾರಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನೀವು ಬಡವರನ್ನು ತುಳಿದು, ಅವರಿಂದ ಗೋದಿಯನ್ನು ಬಿಟ್ಟಿ ತೆಗೆದುಕೊಂಡ ಕಾರಣ ಕೆತ್ತಿದ ಕಲ್ಲಿನಿಂದ ನೀವು ಕಟ್ಟಿಕೊಂಡ ಮನೆಗಳಲ್ಲಿ, ವಾಸಿಸದೆ ಇರುವಿರಿ. ಒಳ್ಳೆಯ ದ್ರಾಕ್ಷಿಯ ತೋಟಗಳನ್ನು ಮಾಡಿಕೊಂಡು, ಅದರ ದ್ರಾಕ್ಷಾರಸವನ್ನು ಕುಡಿಯುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ನೀವು ಬಡವರನ್ನು ತುಳಿದು ಅವರಿಂದ ಗೋದಿಯನ್ನು ಬಿಟ್ಟಿ ತೆಗೆದುಕೊಂಡ ಕಾರಣ ಕೆತ್ತಿದ ಕಲ್ಲಿನಿಂದ ನೀವು ಕಟ್ಟಿಕೊಂಡ ಮನೆಗಳಲ್ಲಿ ವಾಸಿಸದೆ ಇರುವಿರಿ, ಮಾಡಿಕೊಂಡ ಒಳ್ಳೊಳ್ಳೆಯ ತೋಟಗಳ ದ್ರಾಕ್ಷಾರಸವನ್ನು ಕುಡಿಯರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನೀವು ಅನ್ಯಾಯವಾಗಿ ಜನರಿಂದ ಸುಂಕ ವಸೂಲಿ ಮಾಡುವಿರಿ. ಗೋದಿಯ ಮೂಟೆಗಳನ್ನು ಅವರಿಂದ ಸುಲುಕೊಳ್ಳುತ್ತೀರಿ. ಕಲ್ಲುಗಳನ್ನು ಕೊರೆದು ನಿಮಗಾಗಿ ಅಂದವಾದ ಮನೆಗಳನ್ನು ಕಟ್ಟಿಸಿಕೊಳ್ಳುವಿರಿ. ಆದರೆ ಆ ಮನೆಗಳಲ್ಲಿ ನೀವು ವಾಸಿಸುವುದಿಲ್ಲ. ಸುಂದರವಾದ ದ್ರಾಕ್ಷಿತೋಟಗಳನ್ನು ನೆಡುವಿರಿ. ಆದರೆ ಅದರ ದ್ರಾಕ್ಷಾರಸವನ್ನು ನೀವು ಕುಡಿಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಆದಕಾರಣ ನೀವು ಬಡವನನ್ನು ತುಳಿದು ಅವರ ಧಾನ್ಯಕ್ಕೆ ತೆರಿಗೆ ವಿಧಿಸುತ್ತೀರಿ. ಆದ್ದರಿಂದ ನೀವು ಕೆತ್ತಿದ ಕಲ್ಲಿನ ಮನೆಗಳನ್ನು ಕಟ್ಟಿದ್ದೀರಿ. ಆದರೆ ನೀವು ಅವುಗಳಲ್ಲಿ ವಾಸ ಮಾಡದೇ ಇರುವಿರಿ. ರಮ್ಯವಾದ ದ್ರಾಕ್ಷಿತೋಟಗಳನ್ನು ನೆಟ್ಟಿರಲ್ಲಾ, ಆದರೆ ಅವುಗಳ ದ್ರಾಕ್ಷಾರಸವನ್ನು ಕುಡಿಯಲಾರಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 5:11
30 ತಿಳಿವುಗಳ ಹೋಲಿಕೆ  

ಅವರ ಆಸ್ತಿಪಾಸ್ತಿಯೆಲ್ಲಾ ಸೂರೆಯಾಗುವುದು, ಅವರ ಮನೆಮಠಗಳು ಹಾಳಾಗುವುವು; ಮನೆಗಳನ್ನು ಕಟ್ಟಿಕೊಂಡರೂ ಅವುಗಳಲ್ಲಿ ವಾಸಮಾಡರು; ದ್ರಾಕ್ಷಾತೋಟಗಳನ್ನು ಬೆಳೆಸಿಕೊಂಡರೂ ಅವುಗಳಿಂದ ದ್ರಾಕ್ಷಾರಸವನ್ನು ಕುಡಿಯರು.”


ನೀವು ಬೀಜವನ್ನು ಬಿತ್ತಿದರೂ ಬೆಳೆಯನ್ನು ಕೊಯ್ಯಲಾರಿರಿ. ಕಾಳನ್ನು ಗಾಣಕ್ಕೆ ಸುರಿದರೂ ಎಣ್ಣೆಯನ್ನು ತೆಗೆಯಲಾರಿರಿ. ದ್ರಾಕ್ಷಿಯನ್ನು ಆಲೆಮನೆಗೆ ಹಾಕಿದರೂ ದ್ರಾಕ್ಷಾರಸವನ್ನು ಕುಡಿಯಲಾರಿರಿ.


“ನೀವು ಮದುವೆಮಾಡಿಕೊಂಡ ಮಹಿಳೆಯನ್ನು ಮತ್ತೊಬ್ಬನು ಮಾನಭಂಗಪಡಿಸುವನು; ನೀವು ಕಟ್ಟಿಕೊಂಡ ಮನೆಯಲ್ಲಿ ಮತ್ತೊಬ್ಬನು ವಾಸಮಾಡುವನು; ನೀವು ಮಾಡಿದ ದ್ರಾಕ್ಷಿತೋಟದ ಬೆಳೆ ನಿಮಗೆ ದೊರಕದು.


ಹೀಗಿದ್ದರೂ ನೀವು ಬಡವನನ್ನು ಅವಮಾನಕ್ಕೆ ಈಡುಮಾಡಿದಿರಿ. ನಿಮ್ಮನ್ನು ತುಳಿದು ಹಿಂಸಿಸುವವರು ಮತ್ತು ನಿಮ್ಮನ್ನು ನ್ಯಾಯಾಲಯಕ್ಕೆ ಎಳೆಯುವವರು ಸಿರಿವಂತರೇ ಅಲ್ಲವೇ?


ನೀವು ಬಿತ್ತಿದ ಬೀಜ ಬಹಳ, ಪಡೆದ ಫಲ ವಿರಳ; ತಿನ್ನುತ್ತೀರಿ, ಆದರೆ ತೃಪ್ತಿಯಿಲ್ಲ; ಕುಡಿಯುತ್ತೀರಿ, ಆದರೆ ದಾಹ ನೀಗುವುದಿಲ್ಲ. ಹೊದೆಯುತ್ತೀರಿ, ಆದರೆ ಚಳಿ ಹೋಗುವುದಿಲ್ಲ. ದುಡಿಮೆಗಾರನ ದುಡ್ಡಿನ ಚೀಲ ತೂತಿನ ಚೀಲ.”


ಇತರರ ಹೊಲಗದ್ದೆಗಳನ್ನು ದುರಾಸೆಯಿಂದ ಆಕ್ರಮಿಸಿಕೊಳ್ಳುತ್ತಾರೆ. ಅಂತೆಯೇ ಮನೆಗಳನ್ನು ಅಪಹರಿಸುತ್ತಾರೆ. ಈ ರೀತಿಯಲ್ಲಿ ಮನೆಯನ್ನೂ ಮಾಲೀಕನನ್ನೂ ಸ್ವತ್ತನ್ನೂ ಹಕ್ಕುದಾರನನ್ನೂ ತುಳಿದುಬಿಡುತ್ತಾರೆ.


ಚಳಿಗಾಲ, ಬೇಸಿಗೆಕಾಲಗಳ ವಿಹಾರಗೃಹಗಳನ್ನು ವಿನಾಶಮಾಡುವೆನು. ದಂತನಿರ್ಮಿತ ಮಂದಿರಗಳು ಧ್ವಂಸವಾಗುವುವು. ಮಹಾಸೌಧಗಳು ನೆಲಸಮವಾಗುವುವು. ಸರ್ವೇಶ್ವರಸ್ವಾಮಿಯ ನುಡಿಯಿದು.”


ತೊಲಗಿದೆ ಹೊಲಗಳಿಂದ ಹರ್ಷಾನಂದ, ಇಲ್ಲವಾಗಿದೆ ತೋಟಗಳಲಿ ಜಯಕಾರದ ನಾದ, ದ್ರಾಕ್ಷಾರಸವನು ತೆಗೆವವರಿಲ್ಲ ಅರಮನೆಗಳಿಂದ, ಎಂತಲೆ ನಿಂತುಹೋಗಿಹುದಲ್ಲಿ ಸುಗ್ಗಿಯ ಗೀತ.


ಅವನ ಸೈನಿಕರು ನಿನ್ನ ಆಸ್ತಿಯನ್ನು ಸುಲಿದುಕೊಂಡು, ನಿನ್ನ ಸರಕುಗಳನ್ನು ಕೊಳ್ಳೆಹೊಡೆದು, ನಿನ್ನ ಗೋಡೆಗಳನ್ನು ಉರುಳಿಸಿ, ನಿನ್ನ ವಿನೋದಭವನಗಳನ್ನು ಕೆಡವಿ, ನಿನ್ನ ಕಲ್ಲುಮರಮಣ್ಣುಗಳನ್ನು ಸಮುದ್ರದ ಪಾಲುಮಾಡುವರು.


ಸರ್ವೇಶ್ವರ ಇಂತೆನ್ನುತ್ತಾರೆ: “ಇಸ್ರಯೇಲಿನ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಬೆಳ್ಳಿಬಂಗಾರಕ್ಕಾಗಿ ಸಜ್ಜನರನ್ನು ಮಾರಿಬಿಡುತ್ತಾರೆ. ಒಂದು ಜೊತೆ ಜೋಡುಗಳ ಸಾಲವನ್ನು ಸಹ ತೀರಿಸಲಾಗದ ಬಡಬಗ್ಗರನ್ನೂ ವಿಕ್ರಯಿಸುತ್ತಾರೆ.


ಅಷ್ಡೋದಿನ ಅರಮನೆಗಳಲ್ಲೂ ಈಜಿಪ್ಟಿನ ಸೌಧಗಳಲ್ಲೂ ಹೀಗೆಂದು ಪ್ರಕಟಿಸಿರಿ; “ಸಮಾರ್ಯದ ಬೆಟ್ಟಗುಡ್ಡಗಳಿಗೆ ಕೂಡಿಬನ್ನಿ. ಪಟ್ಟಣದಲ್ಲಿ ಎಷ್ಟೊಂದು ಗಲಭೆಗೊಂದಲ, ಎಷ್ಟೊಂದು ಹಿಂಸಾಚಾರ ನಡೆಯುತ್ತಿದೆ, ನೋಡಿ.


ಸಮಾರ್ಯದ ಗುಡ್ಡಗಳ ಮೇಲೆ ಮೇದು, ಬಾಷಾನಿನ ಕೊಬ್ಬಿನ ಕಾಮಧೇನುಗಳಂತಿರುವ ಮಹಿಳೆಯರೇ, ಕೇಳಿ: ಬಡವರನ್ನು ಹಿಂಸಿಸಿ, ದಿಕ್ಕಿಲ್ಲದವರನ್ನು ಶೋಷಿಸಿ, ನಿಮ್ಮ ಪತಿರಾಯರಿಗೆ, “ಮದ್ಯ ತರಿಸಿರಿ, ಕುಡಿಯೋಣ” ಎಂದು ಹೇಳುವವರೇ, ಇದನ್ನು ಕೇಳಿ:


ಇಗೋ, ಸರ್ವೇಶ್ವರ ಆಜ್ಞಾಪಿಸಲು, ಕುಸಿದುಬೀಳುವುವು ಮಹಾಸೌಧಗಳು, ನುಚ್ಚುನೂರಾಗುವುವು ಚಿಕ್ಕಚಿಕ್ಕ ಮನೆಗಳು.


ಕಲ್ಲುಬಂಡೆಗಳ ಮೇಲೆ ಕುದುರೆಗಳು ಓಡಾಡುವುದುಂಟೋ? ಎತ್ತು ಹೋರಿಗಳಿಂದ ಕಡಲನ್ನು ಉಳುವುದುಂಟೋ? ನೀವೋ, ವಿಷವನ್ನಾಗಿಸಿದ್ದೀರಿ ನ್ಯಾಯನೀತಿಯನ್ನು, ಕಹಿಯಾಗಿಸಿದ್ದೀರಿ ಧರ್ಮದ ಸತ್ಫಲವನ್ನು.


ದಿಕ್ಕಿಲ್ಲದವರನ್ನು ತುಳಿದುಬಿಡುವವರೇ, ನಾಡಿನ ಬಡವರನ್ನು ನಿರ್ಮೂಲ ಮಾಡುವವರೇ, ಕೇಳಿ,


ಆದಕಾರಣ, “ನಾನು ಸಮಾರ್ಯವನ್ನು ಧೂಳಿನ ರಾಶಿಯನ್ನಾಗಿಯೂ ದ್ರಾಕ್ಷಾತೋಟಕ್ಕೆ ಒಳ್ಳೆಯ ಬಯಲನ್ನಾಗಿಯೂ ಮಾಡುವೆನು. ಕಲ್ಲುಹೆಂಟೆಗಳನ್ನು ಕಣಿವೆಗೆ ಸುರಿದುಬಿಡುವೆನು. ಅದರ ತಳಪಾಯವೇ ತೆರೆದು ಕಾಣುವಂತೆ ಮಾಡುವೆನು.


ಏಸಾವನ ವಂಶದವರಾದ ಎದೋಮ್ಯರು, “ನಮ್ಮ ನಾಡು ಹಾಳಾಯಿತು; ಆದರೆ ಹಾಳುಬಿದ್ದದ್ದನ್ನು ಮರಳಿ ಕಟ್ಟುವೆವು,” ಎನ್ನಬಹುದು. ಅದಕ್ಕೆ ಸೇನಾಧೀಶ್ವರ ಸರ್ವೇಶ್ವರ ಕೊಡುವ ಉತ್ತರ ಇದು: “ಅವರು ಕಟ್ಟಲಿ; ನಾನು ಅವುಗಳನ್ನು ಕೆಡವಿಹಾಕುವೆ. ‘ಅವರು ಕೇಡಿಗರು. ಸರ್ವೇಶ್ವರಸ್ವಾಮಿಯ ಕೋಪಕ್ಕೆ ಗುರಿಯಾದವರು’ ಎಂದು ಜನರೇ ಆಡಿಕೊಳ್ಳುವರು.”


ನೀವು ಈ ದಂಡನೆಗಳಿಗೆ ಗುರಿಯಾಗುವಿರಿ. ನಿಮಗೆ ಕ್ಷಯ ರೋಗ, ಚಳಿಜ್ವರ ಮುಂತಾದ ಭೀಕರ ವ್ಯಾಧಿಗಳು ಬರುವಂತೆ ಮಾಡುವೆನು. ಇವುಗಳ ನಿಮಿತ್ತ ನೀವು ಕಂಗೆಡುವಿರಿ, ಮನಗುಂದಿ ಹೋಗುವಿರಿ. ನಿಮ್ಮ ಬಿತ್ತನೆಯ ಫಲ ನಿಮಗೆ ಸಿಗದೆ ಹೋಗುವುದು. ಅದು ಶತ್ರುಗಳ ಪಾಲಾಗುವುದು.


ಏಕೆಂದರೆ ಬಡವರನು ತುಳಿದು ತೊರೆದುಬಿಟ್ಟ ತಾನು ಕಟ್ಟದ ಮನೆಯನು ಕಿತ್ತುಕೊಂಡುಬಿಟ್ಟ.


ಟಗರು ಹೋತಗಳೇ, ನೀವು ಕುರಿಮೇಕೆಗಳನ್ನು ಪಕ್ಕದಿಂದಲೂ ಹೆಗಲಿನಿಂದಲೂ ನೂಕುತ್ತಾ ದುರ್ಬಲವಾದವುಗಳನ್ನು ಕೊಂಬುಗಳಿಂದ ಹಾಯುತ್ತಾ ನನ್ನ ಹಿಂಡನ್ನು ಚದರಿಸಿಬಿಟ್ಟಿರಿ;


ಸುಗ್ಗಿಯ ಕಣವೂ ದ್ರಾಕ್ಷಾರಸದ ತೊಟ್ಟಿಯೂ ನಿನ್ನ ಜನರಿಗೆ ಜೀವನಾಧಾರವಾಗವು. ಹೊಸದ್ರಾಕ್ಷಾರಸದ ನಿರೀಕ್ಷೆ ಅವರನ್ನು ನಿರಾಶೆಗೊಳಿಸುವುದು.


ದಿಕ್ಕಿಲ್ಲದವರ ತಲೆಗಳನ್ನು ಬೀದಿಯ ಧೂಳಿನಂತೆ ತುಳಿದುಬಿಡುತ್ತಾರೆ. ದೀನದಲಿತರಿಗೆ ನ್ಯಾಯ ದೊರಕದಂತೆ ಮಾಡುತ್ತಾರೆ. ತಂದೆಯೂ ಮಗನೂ ಒಬ್ಬ ಮಹಿಳೆಯನ್ನು ಇಟ್ಟುಕೊಂಡು ನನ್ನ ಪವಿತ್ರನಾಮಕ್ಕೆ ಅಪಕೀರ್ತಿ ತರುತ್ತಾರೆ.


ಸನಾತನ ಸೌಭಾಗ್ಯಕ್ಕೆ ಮರಳಿಸುವೆನು ನನ್ನ ಜನರಾದ ಇಸ್ರಯೇಲರನು. ವಾಸಮಾಡುವರವರು ಪಾಳುಬಿದ್ದ ಪಟ್ಟಣಗಳನು ಮತ್ತೆ ಕಟ್ಟಿಕೊಂಡು. ಕುಡಿಯುವರು ಸಮೃದ್ಧಿಯಾಗಿ ದ್ರಾಕ್ಷಾತೋಟಗಳನ್ನು ಮಾಡಿಕೊಂಡು. ತಿನ್ನುವರು ಯಥೇಚ್ಛವಾಗಿ ಫಲವೃಕ್ಷಗಳನು ಬೆಳೆಸಿಕೊಂಡು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು