Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 4:3 - ಕನ್ನಡ ಸತ್ಯವೇದವು C.L. Bible (BSI)

3 “ನೀವು ಎಲ್ಲರು ಇದ್ದಕ್ಕಿದ್ದಂತೆ ಒಬ್ಬರ ಹಿಂದೆ ಒಬ್ಬರು ಗೋಡೆಯ ಬಿರುಕುಗಳ ಮೂಲಕ ಹೆರ್ಮೋನ್ ಕಡೆಗೆ ತಳ್ಳಲ್ಪಡುವಿರಿ,” ಇದು ಸರ್ವೇಶ್ವರಸ್ವಾಮಿಯ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಗೋಡೆಯಲ್ಲಿಯ ಬಿರುಕುಗಳ ಮೂಲಕ, ಪ್ರತಿಯೊಬ್ಬ ಸ್ತ್ರೀಯೂ ನೇರವಾಗಿ ತನ್ನ ಮುಂದೆಯೇ ಹೊರಟು ಹೋಗುವಳು, ಹರ್ಮೋನಿನ ದಿಕ್ಕಿನ ಕಡೆಗೆ ತಳ್ಳಲ್ಪಡುವಿರಿ” ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನೀವೆಲ್ಲರು ಇದ್ದ ಮುಖವಾಗಿಯೇ ಕೋಟೆಯೊಡೆದ ಸ್ಥಳಗಳಿಂದ ಹೊರಟು ಹರ್ಮೋನಿಗೆ ಹಾಕಿಸಿಕೊಳ್ಳುವಿರಿ; ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನಿಮ್ಮ ಪಟ್ಟಣಗಳು ನಾಶವಾಗುವವು. ಗೋಡೆಯಲ್ಲಿರುವ ಬಿರುಕುಗಳ ಮೂಲಕ ಹೆಂಗಸರು ತಪ್ಪಿಸಿಕೊಂಡು ಹೋಗಿ ಹೆಣಗಳ ರಾಶಿಯ ಮೇಲೆ ಬೀಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಗೋಡೆಯಲ್ಲಿಯ ಬಿರುಕುಗಳ ಮೂಲಕ ನೀವು ಹೊರಟು ಹೋಗುವಿರಿ. ನಿಮ್ಮನ್ನು ಹರ್ಮೋನಿನ ಕಡೆಗೆ ಎಸೆಯಲಾಗುತ್ತದೆ,” ಎಂದು ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 4:3
12 ತಿಳಿವುಗಳ ಹೋಲಿಕೆ  

ಅವರು ನೋಡುತ್ತಿರುವಾಗ, ನೀನು ಗೋಡೆಯನ್ನು ತೋಡಿ, ಕಂಡಿಯ ಮೂಲಕ ನಿನ್ನ ಸಾಮಗ್ರಿಗಳನ್ನು ಸಾಗಿಸಿಕೊಂಡು ಹೋಗು.


ಅವರಲ್ಲಿನ ರಾಜನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟುಹೋಗುವನು: ಅವನು ಗೋಡೆಯನ್ನು ತೋಡಿ, ಕಂಡಿಯ ಮೂಲಕ ಸಾಮಗ್ರಿಗಳನ್ನು ಆಚೆಗೆ ಸಾಗಿಸುವನು; ಅವನು ಮೋರೆಯನ್ನು ಮುಚ್ಚಿಕೊಳ್ಳುವನು, ಭೂಮಿಯು ಅವನ ಕಣ್ಣಿಗೆ ಕಾಣಿಸದು.


ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯರು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?


ಸ್ವಾಮಿಯ ಆ ರೌದ್ರದಿನದಂದು, ಅವರ ಬೆಳ್ಳಿಯಾಗಲೀ ಬಂಗಾರವಾಗಲೀ ಅವರನ್ನು ರಕ್ಷಿಸಲಾರದು. ಸ್ವಾಮಿಯ ರೋಷಾಗ್ನಿ ಧರೆಯನ್ನೆಲ್ಲಾ ದಹಿಸಿಬಿಡುವುದು; ಹೌದು, ಭೂನಿವಾಸಿಗಳೆಲ್ಲರನ್ನೂ ತಟ್ಟನೆ ಕೊನೆಗಾಣಿಸುವುದು.


ನೀವು ಪಾಪಕಳಂಕಿತವಾದ ನಿಮ್ಮ ಕೈಯಿಂದ ನಿರ್ಮಿಸಿರುವ ಬೆಳ್ಳಿಬಂಗಾರದ ವಿಗ್ರಹಗಳನ್ನು ಎತ್ತಿ ಬಿಸಾಡುವ ದಿನ ಬರಲಿದೆ.


ಆ ದಿನ ಬಂದಾಗ ಮಾನವರು ತಮ್ಮ ಪೂಜೆಗೋಸ್ಕರ ಮಾಡಿಸಿಕೊಂಡ ಬೆಳ್ಳಿಯ ಬೊಂಬೆಗಳನ್ನೂ ಬಂಗಾರದ ವಿಗ್ರಹಗಳನ್ನೂ ಇಲಿ ಹೆಗ್ಗಣಗಳ ಬಿಲಗಳಲ್ಲಿ ಬಿಸಾಡುವರು.


ಒಳಗಿದ್ದ ಅರಸನೂ ಅವನ ಎಲ್ಲ ಸೈನಿಕರೂ ಅದೇ ರಾತ್ರಿ, ಅರಸನ ತೋಟದ ಬಳಿಯಿದ್ದ ಬಾಗಿಲಿನ ಮೂಲಕ, ನಗರದಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯೆಯಿತ್ತು. ಅರಸನು ಅರಾಬಾ ಎಂಬ ಕಣಿವೆ ಪ್ರದೇಶದ ಮಾರ್ಗವಾಗಿ ಓಡಿಹೋದನು.


ಅವರು ಜೋರ್ಡನ್ ನದಿಯವರೆಗೂ ಹೋಗಿ, ದಾರಿಯಲ್ಲೆಲ್ಲಾ ತಮ್ಮ ಬಟ್ಟೆಬರೆಗಳನ್ನೂ ಸಾಮಾನು ಸರಂಜಾಮುಗಳನ್ನೂ ಬಿಸಾಡಿರುವುದನ್ನು ಕಂಡು, ಹಿಂದಿರುಗಿ ಬಂದು ಅರಸನಿಗೆ ತಿಳಿಸಿದರು.


ಗಿಲ್ಯಾದರು ಉಳಿದರು ಜೋರ್ಡನಿನ ಆಚೆಯಲ್ಲೇ ದಾನ್ ಕುಲದವರು ಉಳಿಯರೇಕೆ, ಹಡಗುಗಳಲ್ಲೇ? ಅಶೇರ್ ಕುಲದವರೋ ಅಂಟುಕೊಂಡರು ತಮ್ಮ ರೇವುಗಳಿಗೇ ನೆಮ್ಮದಿಯಾಗಿ ಕೂತುಬಿಟ್ಟರು ಸಮುದ್ರತೀರದಲ್ಲೆ.


ಒಳಗಿದ್ದ ಎಲ್ಲ ಸೈನಿಕರು ಅದೇ ರಾತ್ರಿ ಅರಸನ ತೋಟದ ಬಳಿಯಿದ್ದ ಬಾಗಿಲಿನ ಮೂಲಕ ನಗರದಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯೆಯಿತ್ತು. ಅವರು ಅರಾಬಾ ಎಂಬ ಕಣಿವೆ ಪ್ರದೇಶದ ಮಾರ್ಗವಾಗಿ ಪಲಾಯನ ಮಾಡಿದರು.


ಆದುದರಿಂದ ಗಡೀಪಾರಾಗುವವರಲ್ಲಿ ನೀವೇ ಮೊದಲಿಗರಾಗುವಿರಿ. ಆಗ ನಿಮ್ಮ ಸುಖಾಸನಗಳು ಮತ್ತು ಆಮೋದ ಪ್ರಮೋದಗಳು ಗತಿಸಿಹೋಗುವುವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು