Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 3:5 - ಕನ್ನಡ ಸತ್ಯವೇದವು C.L. Bible (BSI)

5 ಕಾಳಿಲ್ಲದೆ ಪಕ್ಷಿ ಬಲೆಗೆ ಬೀಳುವುದುಂಟೆ? ಏನೂ ಸಿಕ್ಕಿಕೊಳ್ಳದೆ ಬೋನು ಮೇಲಕ್ಕೆ ಏರುವುದುಂಟೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಕಾಳಿಲ್ಲದೆ ಪಕ್ಷಿಯು ನೆಲದಲ್ಲಿನ ಬಲೆಯೊಳಗೆ ಬೀಳುವುದೋ? ಏನೂ ಬಲೆಗೆ ಸಿಕ್ಕಿಕೊಳ್ಳದೇ ಬೋನು ಉರುಲಾಗುವುದೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಕಾಳಿಲ್ಲದೆ ಪಕ್ಷಿಯು ನೆಲದಲ್ಲಿನ ಬಲೆಯೊಳಗೆ ಬೀಳುವದೋ? ಏನೂ ಸಿಕ್ಕಿಕೊಳ್ಳದೆ ಬೋನು ಮೇಲಕ್ಕೆ ಹಾರುವದೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಬಲೆಯಲ್ಲಿ ಆಹಾರ ಹಾಕದಿದ್ದರೆ ಪಕ್ಷಿಯು ಬಲೆಯೊಳಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ. ಏನೂ ಸಿಕ್ಕಿಕೊಳ್ಳದೆ ಬೋನು ಮುಚ್ಚಿಕೊಳ್ಳುವುದೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಬೋನು ಇಲ್ಲದಿದ್ದರೆ ಪಕ್ಷಿಯು ಭೂಮಿಯ ಮೇಲೆ ಉರುಲಿನಲ್ಲಿ ಬೀಳುವುದೇ? ಏನೂ ಸಿಕ್ಕಿಕೊಳ್ಳದಿದ್ದರೆ, ಅದನ್ನು ಭೂಮಿಯಿಂದ ಯಾರಾದರೂ ತೆಗೆಯುವರೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 3:5
6 ತಿಳಿವುಗಳ ಹೋಲಿಕೆ  

ತನ್ನ ನಿಶ್ಚಿತಕಾಲ ಯಾವಾಗ ಬರುವುದೆಂದು ಮಾನವನಿಗೆ ತಿಳಿಯದು. ಮೀನುಗಳು ಮೋಸಬಲೆಗೂ, ಹಕ್ಕಿಗಳು ಉರುಲುಬಲೆಗೂ, ಸಿಕ್ಕಿ ಬೀಳುವಂತೆ ನರಮಾನವರು ತಮ್ಮ ಮೇಲೆ ತಟ್ಟನೆ ಬೀಳುವ ಕಾಲಪಾಶಕ್ಕೆ ಸಿಕ್ಕಿಕೊಳ್ಳುತ್ತಾರೆ.


ಆದಕಾರಣ ಸರ್ವೇಶ್ವರ ಈ ಕೇಡನ್ನು ಸಕಾಲಕ್ಕೆ ನಮ್ಮ ಮೇಲೆ ಬರಮಾಡಿದ್ದಾರೆ. ನಮ್ಮ ದೇವರಾದ ಸರ್ವೇಶ್ವರ ತಾವು ಮಾಡುವ ಸಕಲ ಕಾರ್ಯಗಳಲ್ಲೂ ನ್ಯಾಯಸ್ವರೂಪರು. ನಾವೋ ಅವರ ಮಾತನ್ನು ಕೇಳಲಿಲ್ಲ.


ಅವರನ್ನು ಕೀಳಲು ಕೆಡವಲು, ಅಳಿಸಲು ಹಾಳುಮಾಡಲು, ಈ ಮೊದಲು ಎಚ್ಚರವಹಿಸಿದ ಹಾಗೆಯೆ ಇನ್ನು ಮುಂದೆ ಅವರನ್ನು ಕಟ್ಟಲು ಹಾಗು ನೆಡಲು ಎಚ್ಚರವಹಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.


ಒಡ್ಡಿದರು ಗರ್ವಿಗಳು ಗುಪ್ತವಾಗಿ I ಉರುಲನು, ಪಾಶಗಳನು ನನಗಾಗಿ I ಬಲೆಹಾಸಿದರು ದಾರಿಗೆ ಅಡ್ಡವಾಗಿ II


ಬೇಟೆ ಕಂಡಾಗಲ್ಲದೆ ಸಿಂಹವು ಕಾಡಿನಲ್ಲಿ ಗರ್ಜಿಸುವುದುಂಟೆ? ಏನನ್ನೂ ಹಿಡಿಯದೆ ಯುವಸಿಂಹವು ಗುಹೆಯಲ್ಲೆ ಗುರುಗುಟ್ಟುವುದುಂಟೆ?


ರಣಕಹಳೆ ಮೊಳಗಲು ಜನರು ಬೆದರದೆ ಇರುವುದುಂಟೆ? ಸರ್ವೇಶ್ವರನಿಂದಲ್ಲದೆ ಪಟ್ಟಣಕ್ಕೆ ಕೇಡು ತಟ್ಟುವುದುಂಟೆ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು