Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆಮೋಸ 3:10 - ಕನ್ನಡ ಸತ್ಯವೇದವು C.L. Bible (BSI)

10 “ಹಿಂಸಾಚಾರದಿಂದ ಹಾಗು ಸುಲಿಗೆಯಿಂದ ಗಳಿಸಿದ್ದನ್ನು ಜನರು ತಮ್ಮ ಮಳಿಗೆಗಳಲ್ಲಿ ತುಂಬಿಸಿಕೊಂಡಿದ್ದಾರೆ. ಅಂಥ ಜನರಿಗೆ ನ್ಯಾಯನೀತಿ ತಿಳಿಯದು,” ಎಂದು ಸರ್ವೇಶ್ವರ ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನ್ಯಾಯನೀತಿಗಳನ್ನು ಮಾಡುವುದಕ್ಕೆ ಅವರಿಗೆ ತಿಳಿದಿಲ್ಲ” ಇದು ಯೆಹೋವನ ನುಡಿ. ತಮ್ಮ ಉಪ್ಪರಿಗೆಗಳಲ್ಲಿ ಬಾಧೆಯನ್ನೂ, ನಾಶನವನ್ನೂ ಕೂಡಿಸಿಟ್ಟುಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ತಮ್ಮ ಉಪ್ಪರಿಗೆಗಳಲ್ಲಿ ಬಾಧೆಕೊಳ್ಳೆಗಳಿಂದ ಸಂಪಾದಿಸಿದ್ದನ್ನು ಕೂಡಿಸಿಟ್ಟುಕೊಂಡಿರುವವರು ನ್ಯಾಯವಾಗಿ ನಡೆಯಲು ಅರಿಯರು; ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 “ತಮ್ಮ ಕೋಟೆಗಳಲ್ಲಿ ಬಲಾತ್ಕಾರವನ್ನೂ ಕೊಳ್ಳೆಯನ್ನೂ ನಿಕ್ಷೇಪವಾಗಿ ಕೂಡಿಸಿಕೊಂಡಿರುವವರಿಗೆ, ನ್ಯಾಯ ನೀತಿಯನ್ನು ಮಾಡುವುದಕ್ಕೆ ತಿಳಿಯುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆಮೋಸ 3:10
23 ತಿಳಿವುಗಳ ಹೋಲಿಕೆ  

ಹೊಸ್ತಿಲನ್ನು ದಾಟಿ ಮೋಸ, ವಂಚನೆ, ಹಿಂಸಾಚಾರಗಳಿಂದ ದೋಚಿದವುಗಳನ್ನು ತಂದು ತಮ್ಮ ದೇವರ ಮಂದಿರವನ್ನು ತುಂಬಿಸುವ ಎಲ್ಲರನ್ನೂ ಆ ದಿನದಂದು ನಾನು ದಂಡಿಸುವೆನು.


ಸರ್ವೇಶ್ವರ ಹೀಗೆನ್ನುತ್ತಾರೆ: ನನ್ನ ಜನರು ಮೂರ್ಖರು, ನನ್ನನ್ನು ತಿಳಿಯರು. ಪೆದ್ದ ಮಕ್ಕಳು, ಬುದ್ಧಿಯಿಲ್ಲದವರು ಕೇಡುಮಾಡುವುದರಲ್ಲಿ ಪ್ರವೀಣರು ಒಳಿತನ್ನು ಮಾಡಲು ಅರಿಯರು


ದುರ್ಜನರೆನ್ನ ಜನರನು ಅನ್ನದಂತೆ ನುಂಗುವುದೇಕೆ? I ಪ್ರಭುವನು ನೆನೆಯದಾ ದುಷ್ಕರ್ಮಿಗಳಿಗೆ ಅರಿವಿಲ್ಲವೇಕೆ? I


ಆದರೆ, ಅವರು ಒಂದು ವಿಷಯವನ್ನು ಉದ್ದೇಶಪೂರ್ವಕವಾಗಿ ಮರೆತುಬಿಡುತ್ತಾರೆ. ಅದೇನೆಂದರೆ, ಪ್ರಾರಂಭದಲ್ಲಿದ್ದ ಭೂಮ್ಯಾಕಾಶಗಳು ದೇವರ ವಾಕ್ಯದಿಂದಲೇ ಉಂಟಾದವು. ಜಲದಿಂದ, ಜಲದ ಮೂಲಕ ಭೂಮಿ ಉಂಟಾಯಿತು.


ಕಲ್ಲುಬಂಡೆಗಳ ಮೇಲೆ ಕುದುರೆಗಳು ಓಡಾಡುವುದುಂಟೋ? ಎತ್ತು ಹೋರಿಗಳಿಂದ ಕಡಲನ್ನು ಉಳುವುದುಂಟೋ? ನೀವೋ, ವಿಷವನ್ನಾಗಿಸಿದ್ದೀರಿ ನ್ಯಾಯನೀತಿಯನ್ನು, ಕಹಿಯಾಗಿಸಿದ್ದೀರಿ ಧರ್ಮದ ಸತ್ಫಲವನ್ನು.


ನ್ಯಾಯವನ್ನು ಕಹಿಯಾಗಿಸುವವರೇ, ಧರ್ಮವನ್ನು ಕಸವಾಗಿಸುವವರೇ, ನಿಮಗೆ ಧಿಕ್ಕಾರ!


ಹೀಗಿರಲು ನಾನು, “ಈ ಜನರು ಬಡವರು, ಮೂಢರು, ಸರ್ವೇಶ್ವರನ ಮಾರ್ಗವನ್ನೂ ದೇವರ ನ್ಯಾಯವಿಧಿಗಳನ್ನೂ ತಿಳಿಯದವರು.


ಆಗ ದೇವರು ನನಗೆ, “ನರಪುತ್ರನೇ, ನೋಡಿದೆಯಾ? ಯೆಹೂದವಂಶದವರು ತಾವು ಇಲ್ಲಿ ನಡೆಸುವ ಅಸಹ್ಯಕಾರ್ಯಗಳು ಅಲ್ಪವೆಂದು ಭಾವಿಸಿದ್ದಾರೋ? ನಾಡನ್ನು ಹಿಂಸಾಕೃತ್ಯಗಳಿಂದ ತುಂಬಿಸಿದ್ದಲ್ಲದೆ ನನ್ನನ್ನು ಕೆಣಕಬೇಕೆಂದೇ ಮತ್ತೆ ಯತ್ನಿಸುತ್ತಿದ್ದಾರೆ; ನೋಡು, ಪತ್ರೆಯನ್ನು ಮೂಗಿಗೆ ಒತ್ತಿಕೊಳ್ಳುತ್ತಾರೆ.


ಮುಟ್ಟಿನ ಹೆಂಗಸನ್ನು ಕೂಡದೆ, ಯಾರನ್ನೂ ಹಿಂಸಿಸದೆ, ಸಾಲಮಾಡಿದವನ ಒತ್ತೆಯನ್ನು ಬಿಗಿಹಿಡಿಯದೆ, ಯಾರ ಸೊತ್ತನ್ನೂ ಅಪಹರಿಸದೆ, ಹಸಿದವನಿಗೆ ಅನ್ನವಿಕ್ಕಿ, ಬೆತ್ತಲೆ ಇರುವವನಿಗೆ ಹೊದಿಕೆಯನ್ನು ಹೊದಿಸಿ;


ಜನಸಾಮಾನ್ಯರೂ ಹಿಂಸಿಸಿ ಸೂರೆಮಾಡಿದ್ದಾರೆ, ದೀನದರಿದ್ರರನ್ನು ಬಾಧಿಸಿದ್ದಾರೆ, ವಿದೇಶಿಗಳನ್ನು ಅನ್ಯಾಯವಾಗಿ ನಸುಕಿಬಿಟ್ಟಿದ್ದಾರೆ.


ಆ ದುರ್ದಿನದಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಮುಖಂಡರೇ, ಮತ್ತಷ್ಟು ಶೀಘ್ರವಾಗಿ ಹಿಂಸಾಕ್ರಮಣವನ್ನು ಬರಮಾಡಿಕೊಳ್ಳುತ್ತೀರಿ.


ಸೇನಾಧೀಶ್ವರ ದೇವರಾದ ಸರ್ವೇಶ್ವರಸ್ವಾಮಿ ಪ್ರಮಾಣಮಾಡಿ ಹೇಳಿದ್ದೇನೆಂದರೆ: “ಯಕೋಬ ವಂಶದವರ ಉದ್ಧಟತನವನ್ನು ದ್ವೇಷಿಸುತ್ತೇನೆ. ಅವರ ಮೋಜಿನ ಮಹಲುಗಳನ್ನು ತೃಣೀಕರಿಸುತ್ತೇನೆ. ಅವರ ರಾಜಧಾನಿಯನ್ನೂ ಅದರಲ್ಲಿರುವುದೆಲ್ಲವನ್ನೂ ಶತ್ರುವಶಕ್ಕೆ ಒಪ್ಪಿಸುತ್ತೇನೆ.”


“ನಗರದ ಸಭಿಕರೇ, ಕೇಳಿ! ಅಕ್ರಮವಾಗಿ ಗಳಿಸಿದ ಆಸ್ತಿ ದುರುಳರ ಮನೆಯಲ್ಲಿರುವುದು ನನಗೆ ಗೊತ್ತಿಲ್ಲವೆ? ಅವರ ಮೋಸದ ಅಳತೆಗಳನ್ನು ನಾನು ಒಪ್ಪುವುದು ಸಾಧ್ಯವೆ?


ಏನನ್ನೂ ಬಿಡದೆ ಕಬಳಿಸಿದ ಅವನ ಸಂತಾನಕ್ಕೆ ಉಳಿಗಾಲವಿಲ್ಲ.


ಅಮೂಲ್ಯವಾದ ಸೊತ್ತನ್ನೆಲ್ಲಾ ಕಂಡುಹಿಡಿಯೋಣ; ಕೊಳ್ಳೆಹೊಡೆದು ಮನೆ ತುಂಬಿಸಿಕೊಳ್ಳೋಣ, ಬಾ;


ಸದ್ಗುಣಸ್ತ್ರೀ ಕಾಪಾಡಿಕೊಳ್ಳುತ್ತಾಳೆ ಸನ್ಮಾನವನ್ನು; ಬಲವಂತವ್ಯಕ್ತಿ ಕಾಪಾಡಿಕೊಳ್ಳುತ್ತಾನೆ ಆಸ್ತಿಪಾಸ್ತಿಯನ್ನು.


ಕೆಟ್ಟವರು ನ್ಯಾಯ ನೀತಿಯನ್ನು ಗ್ರಹಿಸರು; ಸರ್ವೇಶ್ವರನ ಭಕ್ತರು ಅದನ್ನು ಪೂರ್ತಿಯಾಗಿ ಗ್ರಹಿಸುವರು.


ಇದಾದ ಮೇಲೆ ಈ ಜಗದಲ್ಲಿ ಎಲ್ಲಾ ತರದ ಚಿತ್ರಹಿಂಸೆಗಳನ್ನು ಕುರಿತು ಯೋಚಿಸಿದೆ. ಅಯ್ಯೋ, ಹಿಂಸೆಗೆ ಈಡಾದವರ ಕಣ್ಣೀರನ್ನು ಕುರಿತು ಏನೆಂದು ಹೇಳಲಿ? ಅವರನ್ನು ಸಂತೈಸುವವರು ಯಾರೂ ಇಲ್ಲ. ಹಿಂಸಾಚಾರಿಗಳು ಶಕ್ತಿಸಾಮರ್ಥ್ಯ ಉಳ್ಳವರು. ಸಂತೈಸುವವರಾದರೋ ಒಬ್ಬರೂ ಇರಲಿಲ್ಲ.


“ನಾನು ನನ್ನ ಜನರ ದುರವಸ್ಥೆಯನ್ನು ನೀಗಿಸಿ ಇಸ್ರಯೇಲನ್ನು ಸ್ವಸ್ಥಗೊಳಿಸಬೇಕೆಂದಿರುವಾಗ ಎಫ್ರಯಿಮಿನ ಅಕ್ರಮ ಮತ್ತು ಸಮಾರ್ಯದ ದುಷ್ಟತನ ಬಯಲಿಗೆ ಬರುತ್ತವೆ. ಅವರು ಒಬ್ಬರಿಗೊಬ್ಬರು ಮೋಸಮಾಡುತ್ತಾರೆ. ಕಳ್ಳರಂತೆ ನುಗ್ಗಿ ಕನ್ನಹಾಕುತ್ತಾರೆ. ದರೋಡೆಗಾರರಂತೆ ದಾರಿಯಲ್ಲೇ ಸುಲಿಗೆಮಾಡುತ್ತಾರೆ.


ಸಮಾರ್ಯದ ಗುಡ್ಡಗಳ ಮೇಲೆ ಮೇದು, ಬಾಷಾನಿನ ಕೊಬ್ಬಿನ ಕಾಮಧೇನುಗಳಂತಿರುವ ಮಹಿಳೆಯರೇ, ಕೇಳಿ: ಬಡವರನ್ನು ಹಿಂಸಿಸಿ, ದಿಕ್ಕಿಲ್ಲದವರನ್ನು ಶೋಷಿಸಿ, ನಿಮ್ಮ ಪತಿರಾಯರಿಗೆ, “ಮದ್ಯ ತರಿಸಿರಿ, ಕುಡಿಯೋಣ” ಎಂದು ಹೇಳುವವರೇ, ಇದನ್ನು ಕೇಳಿ:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು