Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 8:22 - ಕನ್ನಡ ಸತ್ಯವೇದವು C.L. Bible (BSI)

22 ಬಿತ್ತನೆ - ಕೊಯಿಲು ಚಳಿ - ಬಿಸಿಲು ಗ್ರೀಷ್ಮ - ಹೇಮಂತ ಹಗಲು - ಇರುಳು ಈ ಕ್ರಮಕ್ಕೆ ಇರದು ಅಂತ್ಯ ಜಗವಿರುವವರೆಗು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಭೂಮಿಯು ಇರುವವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ಚಳಿಯೂ, ಮಳೆಯೂ, ಬೇಸಿಗೆ ಕಾಲವೂ, ಹಿಮಕಾಲವೂ, ಹಗಲೂ, ಇರುಳೂ ಇವುಗಳ ಕ್ರಮ ನಿಂತುಹೋಗುವುದಿಲ್ಲ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಭೂವಿುಯು ಇರುವ ತನಕ ಬಿತ್ತನೆಯೂ ಕೊಯಿಲೂ, ಚಳಿಯೂ ಸೆಕೆಯೂ, ಬೇಸಿಗೆಕಾಲವೂ ಹಿಮಕಾಲವೂ, ಹಗಲೂ ಇರುಳೂ ಇವುಗಳ ಕ್ರಮ ತಪ್ಪುವದೇ ಇಲ್ಲ ಅಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಭೂಮಿ ಇರುವವರೆಗೆ ಬಿತ್ತನೆಕಾಲ, ಸುಗ್ಗಿಕಾಲ ಯಾವಾಗಲೂ ಇರುತ್ತವೆ. ಹಿಮಕಾಲ, ಬೇಸಿಗೆಕಾಲ, ಚಳಿಗಾಲ, ಹಗಲು ಮತ್ತು ರಾತ್ರಿ ಯಾವಾಗಲೂ ಇದ್ದೇ ಇರುತ್ತವೆ” ಎಂದು ಅಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 “ಭೂಮಿಯು ಇರುವವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ; ತಂಪೂ ಸೆಕೆಯೂ; ಬೇಸಿಗೆಯೂ ಹಿಮಕಾಲವೂ; ಹಗಲೂ ರಾತ್ರಿಯೂ ನಿಂತುಹೋಗುವುದಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 8:22
9 ತಿಳಿವುಗಳ ಹೋಲಿಕೆ  

ಆದ್ದರಿಂದ ಸಹೋದರರೇ, ಪ್ರಭು ಪುನರಾಗಮಿಸುವವರೆಗೆ ತಾಳ್ಮೆಯಿಂದ ಇರಿ. ರೈತನನ್ನು ಗಮನಿಸಿರಿ: ತನ್ನ ಹೊಲದಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷಿಸುವ ಅವನು ಮುಂಗಾರು ಹಿಂಗಾರು ಮಳೆಗಾಗಿ ತಾಳ್ಮೆಯಿಂದ ಕಾದಿರುತ್ತಾನೆ.


ಮುಂಗಾರು, ಹಿಂಗಾರು ಹೀಗೆ ಸಕಾಲದ ಮಳೆಯನ್ನು ಬರಮಾಡುವವನು ನಾನು. ಸುಗ್ಗಿಯ ಕ್ಲುಪ್ತವಾರಗಳನ್ನು ಪ್ರತ್ಯೇಕಿಸುವವನು ನಾನು. ಆದರೆ ನೀವು ನನ್ನಲ್ಲಿ ಭಯಭಕ್ತಿ ಇಡಲು ಮನದಲ್ಲಿ ನೆನೆಯದೆ ಇದ್ದೀರಿ.


ಸರ್ವೇಶ್ವರನು, ಹಗಲಲ್ಲಿ ಬೆಳಕು ನೀಡಲು ಸೂರ್ಯನನ್ನು ನೇಮಿಸಿದಾತ. ಇರುಳಲ್ಲಿ ಬೆಳಕು ನೀಡಲು ಚಂದ್ರ ನಕ್ಷತ್ರಗಳನ್ನು ಏರ್ಪಡಿಸಿದಾತ. ಅಲೆಗಳು ಭೋರ್ಗರೆವಷ್ಟು ಸಮುದ್ರವನ್ನು ಕೆರಳಿಸುವಾತ ‘ಸೇನಾಧೀಶ್ವರ ಸರ್ವೇಶ್ವರ’ ಎಂಬ ನಾಮಧೇಯದಿಂದ ಪ್ರಸಿದ್ಧನಾತ.


“ಆರು ದಿವಸಗಳು ನೀವು ದುಡಿಯಬಹುದು. ಆದರೆ ಏಳನೆಯ ದಿನ ಯಾವ ದುಡಿಮೆಯನ್ನೂ ಮಾಡಬಾರದು. ಅದು ಉಳುವ ಕಾಲವಾಗಿರಲಿ, ಕೊಯ್ಯುವ ಕಾಲವಾಗಿರಲಿ ಏಳನೆಯ ದಿನ ದುಡಿಯದೆ ಇರಬೇಕು.


ದೇಶಕ್ಕೆ ಬರಗಾಲ ಬಂದು ಈಗಾಗಲೇ ಎರಡು ವರ್ಷಗಳಾದವು. ಇನ್ನೂ ಐದು ವರ್ಷಗಳ ಪರ್ಯಂತರ ಬಿತ್ತುವುದಕ್ಕಾಗಲಿ ಕೊಯ್ಯುವುದಕ್ಕಾಗಲಿ ಅವಕಾಶವಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು