11 ಸಂಜೆ ವೇಳೆಗೆ ಆ ಪಾರಿವಾಳ ಅವನ ಬಳಿಗೆ ಮರಳಿತು; ಆಗ ಇಗೋ! ಅದರ ಬಾಯಲ್ಲಿ ಎಣ್ಣೇಮರದ ಹೊಸ ಚಿಗುರಿತ್ತು. ಇದನ್ನು ನೋಡಿ ನೋಹನು ಭೂಮಿಯ ಮೇಲಿಂದ ನೀರು ಇಳಿದುಹೋಗಿದೆಯೆಂದು ತಿಳಿದುಕೊಂಡನು.
11 ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ಹಿಂತಿರುಗಿ ಬರಲು, ಆಹಾ, ಅದರ ಬಾಯಲ್ಲಿ ಎಣ್ಣೆ ಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂಮಿಯ ಮೇಲಿಂದ ಇಳಿದು ಹೋಯಿತೆಂದು ತಿಳಿದುಕೊಂಡನು.
11 ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ತಿರಿಗಿ ಬರಲು, ಆಹಾ, ಅದರ ಬಾಯಲ್ಲಿ ಎಣ್ಣೇಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂವಿುಯ ಮೇಲಿಂದ ಹರಿದು ಇಳಿದು ಹೋಯಿತು ಎಂದು ತಿಳುಕೊಂಡನು.
11 ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ತಿರುಗಿ ಬರಲು, ಅದರ ಬಾಯಿಯಲ್ಲಿ ಓಲಿವ್ ಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂಮಿಯ ಮೇಲಿಂದ ಇಳಿದಿದೆಯೆಂದು ತಿಳಿದುಕೊಂಡನು.
ಈ ನಿಯಮದ ಪ್ರಕಾರ ಆ ಪರ್ಣಕುಟೀರ ನಿರ್ಮಾಣಕ್ಕಾಗಿ ಜನರು ಗುಡ್ಡಕ್ಕೆ ಹೋಗಿ, ಒಲೀವ, ಕಾಡು ಓಲೀವ್, ಸುಗಂಧ, ಖರ್ಜೂರ ಮುಂತಾದ ಮರಗಳ ದಟ್ಟವಾದ ಎಲೆಗಳುಳ್ಳ ಕೊಂಬೆಗಳನ್ನು ತರಬೇಕಾಗಿತ್ತು. ‘ಇದಕ್ಕಾಗಿ ಅವರ ಎಲ್ಲ ಪಟ್ಟಣಗಳಲ್ಲಿಯು ಹಾಗು ಜೆರುಸಲೇಮಿನಲ್ಲಿಯು ಡಂಗುರದಿಂದ ಪ್ರಕಟಿಸಬೇಕು’ ಎಂಬುದಾಗಿ ಬರೆದಿರುವ ಶಾಸನವೊಂದು ಮೋಶೆಗೆ ಸರ್ವೇಶ್ವರನಿಂದ ದೊರಕಿದ ಧರ್ಮಶಾಸ್ತ್ರದಲ್ಲಿ ಸಿಕ್ಕಿತು.