Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 49:9 - ಕನ್ನಡ ಸತ್ಯವೇದವು C.L. Bible (BSI)

9 ನನ್ನ ಪುತ್ರ ಯೆಹೂದ, ನೀ ಪ್ರಾಯದ ಸಿಂಹದಂತೆ ಬೇಟೆಹಿಡಿದು ಬೆಟ್ಟ ಏರಿದ ಕಂಠೀರವನಂತೆ ಕಾಲು ಮಡಿಚಿ ಹೊಂಚು ಕೂತ ಕೇಸರಿಯಂತೆ ಈ ಸಿಂಹಿಣಿಯನ್ನು ಕೆಣಕುವ ಕೆಚ್ಚು ಯಾರಿಗಿದೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಯೆಹೂದನು ಪ್ರಾಯದ ಸಿಂಹದಂತಿದ್ದಾನೆ. ನನ್ನ ಪುತ್ರನೇ, ನೀನು ಮೃಗವನ್ನು ಹಿಡಿದು ಕೊಂದು ಬೆಟ್ಟವನ್ನು ಸೇರಿದ ಸಿಂಹದೋಪಾದಿಯಲ್ಲಿದ್ದೀ. ಅವನು ಸಿಂಹದಂತೆ ಕಾಲು ಮುದುರಿ ಹೊಂಚುಹಾಕಿಕೊಂಡಿದ್ದಾನೆ. ಮೃಗ ರಾಜನಿಗೆ ಸಮನಾದ ಇವನನ್ನು ಕೆಣಕುವುದು ಯಾರಿಂದಾದೀತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಯೆಹೂದನು ಪ್ರಾಯದ ಸಿಂಹದಂತಿದ್ದಾನೆ; ನನ್ನ ಪುತ್ರನೇ, ನೀನು ಮೃಗವನ್ನು ಹಿಡಿದು ಕೊಂದು ಬೆಟ್ಟವನ್ನು ಸೇರಿದ ಸಿಂಹದೋಪಾದಿಯಲಿದ್ದೀ. ಅವನು ಸಿಂಹದಂತೆ ಕಾಲುಮುದುರಿ ಹೊಂಚುಹಾಕಿಕೊಂಡಿದ್ದಾನೆ; ಮೃಗೇಂದ್ರನಿಗೆ ಸಮಾನನಾದ ಇವನನ್ನು ಕೆಣಕುವದು ಯಾರಿಂದಾದೀತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯೆಹೂದನು ಪ್ರಾಣಿಯನ್ನು ಕೊಂದ ಪ್ರಾಯದ ಸಿಂಹದಂತಿದ್ದಾನೆ. ಮಗನೇ, ನೀನು ಸಿಂಹದಂತೆ ಬೇಟೆಗಾಗಿ ಹೊಂಚುಹಾಕಿ ನಿಂತಿರುವೆ. ಯೆಹೂದನು ಸಿಂಹದಂತಿರುವನು. ಅವನು ಮಲಗಿ ವಿಶ್ರಮಿಸಿಕೊಳ್ಳುವನು; ಅವನನ್ನು ಕೆಣಕಲು ಯಾರಿಗೂ ಧೈರ್ಯವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಯೆಹೂದನು ಸಿಂಹದ ಮರಿಯಾಗಿದ್ದಾನೆ. ನನ್ನ ಮಗನೇ, ಬೇಟೆಹಿಡಿದು ಮೇಲಕ್ಕೆ ಬಂದೆ. ಅವನು ಸಿಂಹದಂತೆಯೂ ಪ್ರಾಯದ ಸಿಂಹದ ಹಾಗೆಯೂ ಮುದುರಿಕೊಂಡು ಮಲಗಿದ್ದಾನೆ. ಅವನನ್ನು ಕೆಣಕುವವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 49:9
11 ತಿಳಿವುಗಳ ಹೋಲಿಕೆ  

ಕಾಲು ಮಡಚಿ ಹೊಂಚುಕೂತ ಸಿಂಹದಂತಿದೆ ಆ ಜನಾಂಗ; ಕೆಣಕಲು ಯಾರಿಂದಾದೀತು, ಅದು ಮೃಗೇಂದ್ರನಿಗೆ ಸಮಾನ!


ಆಗ ಸಭಾಪ್ರಮುಖರಲ್ಲಿ ಒಬ್ಬರು ನನಗೆ, “ದುಃಖಿಸಬೇಡ, ಇಗೋ, ಯೂದಕುಲದ ಸಿಂಹವೂ ದಾವೀದನ ವಂಶಜರೂ ಆದ ಒಬ್ಬರು ಜಯಗಳಿಸಿದ್ದಾರೆ. ಅವರು ಆ ಏಳು ಮುದ್ರೆಗಳನ್ನು ಒಡೆದು ಈ ಸುರುಳಿಯನ್ನು ಬಿಚ್ಚಬಲ್ಲರು", ಎಂದು ಹೇಳಿದರು.


ಈ ಜನಾಂಗ ಯುವಸಿಂಹದಂತೆ ನಿಂತಿಹುದು ಮೃಗೇಂದ್ರನಂತೆ ಮೃಗ ಕೊಂದು, ರಕ್ತ ಕುಡಿದು, ಮಾಂಸ ತಿಂದು, ತೃಪ್ತಿಹೊಂದದ ಹೊರತು ಆ ಸಿಂಹ ವಿರಮಿಸದು.”


ಸಿಂಹವು ತಿರುಗಾಡುತ್ತಾ ಕಾಡುಮೃಗಗಳನ್ನು ಕಬಳಿಸುತ್ತದೆ. ಪ್ರಾಯದ ಸಿಂಹವು ಓಡಾಡುತ್ತಾ ಸುರಕ್ಷಣೆಯಿಲ್ಲದ ಕುರಿಮಂದೆಗಳನ್ನು ಸೀಳಿಹಾಕುತ್ತದೆ. ಅಂತೆಯೇ ಯಕೋಬನ ಅಳಿದುಳಿದ ಜನರು ದೇಶವಿದೇಶಗಳ ಹಲವಾರು ರಾಷ್ಟ್ರಗಳ ನಡುವೆ ನಾಶಕರವಾಗಿರುವರು.


ಎಫ್ರಯಿಮಿಗೆ ನಾನು ಸಿಂಹ; ಯೆಹೂದ್ಯಕುಲಕ್ಕೆ ಪ್ರಾಯದ ಸಿಂಹ; ಅದನ್ನು ಸೀಳಿಬಿಡುವೆನು; ಎಳೆದುಕೊಂಡು ಹೋಗುವೆನು; ಯಾರೂ ಅದನ್ನು ನನ್ನಿಂದ ಬಿಡಿಸಿಕೊಳ್ಳಲಾರರು.


ತನ್ನ ನಂಬಿಕೆ ನಿರೀಕ್ಷೆ ಹಾಳಾಯಿತೆಂದುಕೊಂಡಾ ಸಿಂಹಿಣಿ, ಪ್ರಾಯಕ್ಕೆ ತಂದಳು ತನ್ನ ಮರಿಗಳಲ್ಲಿ ಇನ್ನೊಂದನ್ನು ಸಾಕಿ.


ಅಂತ್ಯ ಬರುವುದು ಅನಂತರವೇ. ಆಗ ಯೇಸು ಎಲ್ಲಾ ಆಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು.


ಅವರು ತಮ್ಮ ದೇವರ ಬಳಿಗೆ ಹಿಂದಿರುಗದಂತೆ ಅವರ ದುಷ್ಕೃತ್ಯಗಳು ಅವರಿಗೆ ಅಡ್ಡಿಯಾಗಿವೆ. ವ್ಯಭಿಚಾರ ಅವರಲ್ಲಿ ನೆಲೆಗೊಂಡಿದೆ. ಅವರು ಸರ್ವೇಶ್ವರನನ್ನು ಅರಿಯರು.


ಗಾದ್ ಕುಲ ಕುರಿತು ಮೋಶೆ ನುಡಿದದ್ದು: “ಗಾದ್ಯರ ಪ್ರಾಂತ್ಯವನು ವಿಸ್ತರಿಸಿದ ಸರ್ವೇಶ್ವರನಿಗೆ ಸ್ತೋತ್ರವು! ಸಿಂಹದಂತೆ ಹೊಂಚುಹಾಕಿ ಮುರಿವನು ಗಾದನು ಶತ್ರುಗಳ ಭುಜವನು, ಶಿರವನು.


ಆರು ಮೆಟ್ಟಲುಗಳ ಎರಡು ಕಡೆಗಳಲ್ಲೂ ಒಟ್ಟು ಹನ್ನೆರಡು ಸಿಂಹಗಳು ನಿಂತಿದ್ದವು; ಇಂಥ ಸಿಂಹಾಸನವು ಬೇರೆ ಯಾವ ರಾಜ್ಯದಲ್ಲಿಯೂ ಇರಲಿಲ್ಲ.


ಅದಕ್ಕೆ ಹೊಂದಿಕೆಯಾಗಿ ಆರು ಮೆಟ್ಟಿಲುಗಳೂ ಬಂಗಾರದ ಪಾದಪೀಠವೂ ಇದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು