Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 49:4 - ಕನ್ನಡ ಸತ್ಯವೇದವು C.L. Bible (BSI)

4 ಆದರೆ ದಡಮೀರಿದ ಪ್ರವಾಹ ನೀನು ಹತ್ತಿದೆ, ಹೊಲೆಮಾಡಿದೆ, ತಂದೆಯ ಹಾಸಿಗೆಯನು ಪ್ರಮುಖಸ್ಥಾನದಲ್ಲಿರೆ ನನ್ನ ಮಂಚವನ್ನೇರಿದೆ ನೀನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆದರೆ ದಡಮೀರಿದ ಪ್ರವಾಹದಂತಿರುವ ನೀನು ಇನ್ನು ಶ್ರೇಷ್ಠನಾಗುವುದಿಲ್ಲ. ಏಕೆಂದರೆ ನೀನು ನಿನ್ನ ತಂದೆಯ ಹಾಸಿಗೆಯನ್ನು ಹತ್ತಿ, ಅದನ್ನು ಹೊಲೆ ಮಾಡಿದಿಯಲ್ಲಾ. ಇವನು ನನ್ನ ಮಂಚವನ್ನು ಹತ್ತಿದನು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆದರೂ ದಡವನ್ನು ಮೀರಿದ ಪ್ರವಾಹದಂತಿರುವ ನೀನು ಇನ್ನು ಪ್ರಮುಖನ ಸ್ಥಾನದಲ್ಲಿ ಇರುವದಿಲ್ಲ. ನಿನ್ನ ತಂದೆಯ ಹಾಸಿಗೆಯನ್ನು ಹತ್ತಿ ಅದನ್ನು ಹೊಲೆ ಮಾಡಿದಿಯಲ್ಲಾ. ಇವನು ನನ್ನ ಮಂಚವನ್ನು ಹತ್ತಿದನು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆದರೆ ನೀನು ಪ್ರಳಯದ ಭಯಂಕರವಾದ ಅಲೆಗಳಂತಿರುವೆ. ನೀನು ನನ್ನ ಮಕ್ಕಳಿಗಿಂತ ಅತ್ಯಂತ ಪ್ರಮುಖನಾಗಿರುವುದಿಲ್ಲ. ನಿನ್ನ ತಂದೆಗೆ ಸೇರಿದ ಸ್ತ್ರೀಯೊಂದಿಗೆ ನೀನು ಮಲಗಿಕೊಂಡೆ. ನೀನು ನಿನ್ನ ತಂದೆಯ ಹಾಸಿಗೆಗೆ ಗೌರವವನ್ನು ತೋರಿಸಲಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನೀರಿನಂತೆ ಚಂಚಲನಾಗಿದ್ದು, ನೀನು ಶ್ರೇಷ್ಠನಾಗುವುದಿಲ್ಲ. ಏಕೆಂದರೆ ನಿನ್ನ ತಂದೆಯ ಮಂಚವನ್ನೇರಿ ಹೊಲೆಮಾಡಿದೆ, ನನ್ನ ಹಾಸಿಗೆಯನ್ನು ಏರಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 49:4
11 ತಿಳಿವುಗಳ ಹೋಲಿಕೆ  

ಇಸ್ರಯೇಲನು ಆ ನಾಡಿನಲ್ಲಿ ವಾಸವಾಗಿದ್ದಾಗ ರೂಬೇನ್ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳಲ್ಲಿ ಸಂಗಮಿಸಿದನು, ಈ ಸಂಗತಿ ತಿಳಿದುಬಂದಾಗ ಇಸ್ರಯೇಲನಿಗೆ ಕಡುಕೋಪವಾಯಿತು.


ಯಕೋಬನ ಮಕ್ಕಳಲ್ಲಿ ಹಿರಿಯವನಾದ ರೂಬೇನನ ವಂಶಜರು ಇವರು: (ರೂಬೇನ್ ತನ್ನ ತಂದೆಯ ಉಪಪತ್ನಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದರಿಂದ ಚೊಚ್ಚಲು ಮಗನ ಹಕ್ಕುಬಾಧ್ಯತೆಗಳನ್ನು ಕಳೆದುಕೊಂಡನು. ಆ ಹಕ್ಕುಗಳು ಜೋಸೆಫನಿಗೆ ಕೊಡಲ್ಪಟ್ಟವು;


‘ಅವರು, ‘ಮಲತಾಯಿಯನ್ನು ಸಂಗಮಿಸಿ ತಂದೆಗೆ ಅವಮಾನಪಡಿಸಿದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’, ಎನ್ನಬೇಕು.


ರೂಬೇನ್ ಕುಲ ಕುರಿತು ಮೋಶೆ ನುಡಿದದ್ದು: “ರೂಬೇನ್ ಅಳಿಯದೆ ಉಳಿಯಲಿ ಅವನ ಮಕ್ಕಳು ಅಸಂಖ್ಯಾತರಾಗದಿರಲಿ.”


ಅನ್ಯಜನರಲ್ಲಿ ಕೂಡ ಇಲ್ಲದಂಥ ದುರ್ನಡತೆ ನಿಮ್ಮಲ್ಲಿದೆಯೆಂಬುದಾಗಿ ವರದಿ ಬಂದಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನಂತೆ.


‘ನೆರೆಯವನ ಹೆಂಡತಿಯನ್ನು ಅಪೇಕ್ಷಿಸಬೇಡ; ಅವನ ಮನೆ, ಹೊಲ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬಾರದು,.


ಈಜಿಪ್ಟಿಗೆ ಬಂದು ಸೇರಿದ ಯಕೋಬನ ಮತ್ತು ಅವನ ಮಕ್ಕಳಾದ ಇಸ್ರಯೇಲರ ಹೆಸರುಗಳು ಇವು - ಯಕೋಬನ ಜೇಷ್ಠ ಪುತ್ರ ರೂಬೇನನು.


ಆತನು ತನ್ನ ಪತ್ರಗಳಲ್ಲಿ ಈ ವಿಷಯವನ್ನು ಕುರಿತು ಪ್ರಸ್ತಾಪಿಸುವಾಗಲೆಲ್ಲಾ ಹೀಗೆಯೇ ಬೋಧಿಸಿದ್ದಾನೆ. ಅರ್ಥಮಾಡಿಕೊಳ್ಳಲು ಕಠಿಣವಾದ ಕೆಲವು ವಿಷಯಗಳು ಆತನ ಪತ್ರಗಳಲ್ಲಿ ಇವೆ. ಬುದ್ಧಿಹೀನರು ಹಾಗು ಚಂಚಲಚಿತ್ತರು ಪವಿತ್ರಗ್ರಂಥದ ಇತರ ಭಾಗಗಳಿಗೆ ಅಪಾರ್ಥಕಟ್ಟುವಂತೆ ಇವುಗಳಿಗೂ ಕಟ್ಟುತ್ತಾರೆ. ಹೀಗೆ, ತಮ್ಮ ವಿನಾಶವನ್ನು ತಾವೇ ತಂದುಕೊಳ್ಳುತ್ತಾರೆ.


ಇವರದು ಬರೀ ಕಾಮುಕ ಕಣ್ಣು; ಇವರು ಎಂದಿಗೂ ಇಂಗದ ಪಾಪಬಯಕೆಯುಳ್ಳವರು; ದುರ್ಬಲರನ್ನು ವಂಚಿಸಿ ವಶಪಡಿಸಿಕೊಳ್ಳುವುದೇ ಇವರ ಹವ್ಯಾಸ; ಲೋಭದಲ್ಲೇ ಪಳಗಿದ ಮನಸ್ಸುಳ್ಳವರು ಹಾಗೂ ಶಾಪಗ್ರಸ್ತ ಸಂತಾನದವರು ಇವರು!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು