Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 47:14 - ಕನ್ನಡ ಸತ್ಯವೇದವು C.L. Bible (BSI)

14 ಜೋಸೆಫನು ಈಜಿಪ್ಟ್ ದೇಶದವರಿಗೂ ಕಾನಾನ್ ನಾಡಿಗರಿಗೂ ದವಸಧಾನ್ಯ ಮಾರಿ ಬಂದ ಹಣದಿಂದ ಫರೋಹನ ಬೊಕ್ಕಸವನ್ನು ತುಂಬಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಯೋಸೇಫನು ಜನರಿಗೆ ಧಾನ್ಯವನ್ನು ಮಾರುತ್ತಾ ಐಗುಪ್ತ ದೇಶದಲ್ಲಿಯೂ, ಕಾನಾನ್‌ ದೇಶದಲ್ಲಿಯೂ ಇದ್ದ ಎಲ್ಲಾ ಹಣವನ್ನು ಕೂಡಿಸಿಕೊಂಡು ಫರೋಹನ ಬೊಕ್ಕಸದೊಳಗೆ ತುಂಬಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಯೋಸೇಫನು ಜನರಿಗೆ ಧಾನ್ಯವನ್ನು ಮಾರುತ್ತಾ ಐಗುಪ್ತದೇಶದಲ್ಲಿಯೂ ಕಾನಾನ್‍ದೇಶದಲ್ಲಿಯೂ ಇದ್ದ ಎಲ್ಲಾ ಹಣವನ್ನೂ ಸೆಳಕೊಂಡು ಫರೋಹನ ಬೊಕ್ಕಸದೊಳಗೆ ತುಂಬಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಈಜಿಪ್ಟ್ ಮತ್ತು ಕಾನಾನ್ ದೇಶಗಳ ಜನರು ಧಾನ್ಯಗಳನ್ನು ಕೊಂಡುಕೊಂಡರು. ಯೋಸೇಫನು ಹಣವನ್ನು ಉಳಿಸಿ ಫರೋಹನ ಭಂಡಾರಕ್ಕೆ ಸೇರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಆಗ ಯೋಸೇಫನು ಈಜಿಪ್ಟ್ ದೇಶದಲ್ಲಿಯೂ, ಕಾನಾನ್ ದೇಶದಲ್ಲಿಯೂ ಜನರು ಕೊಂಡುಕೊಂಡ ಧಾನ್ಯಕ್ಕೆ ಬದಲಾಗಿ ಕೊಟ್ಟ ಹಣವನ್ನೆಲ್ಲಾ ಕೂಡಿಸಿ, ಅದನ್ನು ಫರೋಹನ ಮನೆಗೆ ತಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 47:14
8 ತಿಳಿವುಗಳ ಹೋಲಿಕೆ  

ಬರವು ದೇಶದಲ್ಲೆಲ್ಲ ಹರಡಿಕೊಂಡಾಗ ಜೋಸೆಫನು ಕಣಜಗಳನ್ನೆಲ್ಲ ತೆಗೆಸಿ, ಈಜಿಪ್ಟರಿಗೆ ಧಾನ್ಯವನ್ನು ಮಾರಿಸಿದನು. ಈಜಿಪ್ಟ್ ದೇಶದಲ್ಲಿ ಬರವು ಬಹು ಘೋರವಾಗಿತ್ತು.


ದೇವರ ವಿವಿಧ ವರಗಳ ವಿಷಯದಲ್ಲಿ ಉತ್ತಮ ನಿರ್ವಾಹಕನಂತೆ ಪ್ರತಿಯೊಬ್ಬನೂ ದೇವರು ತನಗೆ ಕೊಟ್ಟಿರುವ ವಿಶೇಷ ವರದಾನಗಳನ್ನು ಇತರರ ಒಳಿತಿಗಾಗಿ ಬಳಸಲಿ.


ನಿರ್ವಾಹಕರು ಪ್ರಾಮಾಣಿಕರಾಗಿರಬೇಕಾದುದು ಅತ್ಯವಶ್ಯ.


ಈಜಿಪ್ಟಿನ ಹಾಗೂ ಕಾನಾನಿನ ಹಣವೆಲ್ಲ ಮುಗಿದುಹೋದಾಗ ಈಜಿಪ್ಟಿನವರು ಜೋಸೆಫನ ಬಳಿಗೆ ಬಂದು, “ನಾವೇಕೆ ನಿಮ್ಮ ಕಣ್ಮುಂದೆ ಸಾಯಬೇಕು? ನಮಗೆ ಆಹಾರ ಕೊಡಿ, ನಮ್ಮ ಹಣ ಮುಗಿದುಹೋಯಿತು,” ಎಂದರು.


ಅಂತೆಯೇ ಲೋಕದಲ್ಲೆಲ್ಲಾ ಬರವು ಭಯಂಕರವಾಗಿತ್ತು. ಎಲ್ಲ ದೇಶದವರು ಜೋಸೆಫನಿಂದ ಧಾನ್ಯ ಕೊಂಡುಕೊಳ್ಳಲು ಈಜಿಪ್ಟಿಗೆ ಬರುತ್ತಿದ್ದರು.


ಧಾನ್ಯವನ್ನು ಕೊಡದೆ ತುಂಬಿಟ್ಟುಕೊಳ್ಳುವವನ ಮೇಲೆ ಜನರ ಶಾಪ; ಧಾನ್ಯವನ್ನು ಮಾರುವವನ ತಲೆಯ ಮೇಲೆ ಆಶೀರ್ವಾದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು