Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 46:27 - ಕನ್ನಡ ಸತ್ಯವೇದವು C.L. Bible (BSI)

27 ಅವರಲ್ಲದೆ ಈಜಿಪ್ಟ್ ದೇಶದಲ್ಲಿ ಜೋಸೆಫನಿಗೆ ಹುಟ್ಟಿದವರು ಇಬ್ಬರು. ಈಜಿಪ್ಟ್ ದೇಶಕ್ಕೆ ಹೋದ ಯಕೋಬನ ಕುಟುಂಬದವರೆಲ್ಲರು ಒಟ್ಟಾಗಿ ಎಪ್ಪತ್ತು ಮಂದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಅವರಲ್ಲದೆ ಐಗುಪ್ತ ದೇಶದಲ್ಲಿ ಯೋಸೇಫನಿಗೆ ಹುಟ್ಟಿದವರು ಇಬ್ಬರು. ಐಗುಪ್ತ ದೇಶಕ್ಕೆ ಹೋದ ಯಾಕೋಬನ ಕುಟುಂಬದವರೆಲ್ಲರು ಒಟ್ಟು ಎಪ್ಪತ್ತು ಮಂದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಅವರಲ್ಲದೆ ಐಗುಪ್ತದೇಶದಲ್ಲಿ ಯೋಸೇಫನಿಗೆ ಹುಟ್ಟಿದವರು ಇಬ್ಬರು. ಐಗುಪ್ತದೇಶಕ್ಕೆ ಹೋದ ಯಾಕೋಬನ ಕುಟುಂಬದವರೆಲ್ಲರು ಒಟ್ಟಾಗಿ ಎಪ್ಪತ್ತು ಮಂದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಅಲ್ಲಿ ಯೋಸೇಫನ ಇಬ್ಬರು ಗಂಡುಮಕ್ಕಳು ಸಹ ಇದ್ದರು. ಅವರು ಈಜಿಪ್ಟಿನಲ್ಲಿ ಹುಟ್ಟಿದವರು. ಆದ್ದರಿಂದ ಈಜಿಪ್ಟಿಗೆ ಬಂದ ಯಾಕೋಬನ ಕುಟುಂಬದವರು ಒಟ್ಟು ಎಪ್ಪತ್ತು ಮಂದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಅವರಲ್ಲದೆ ಈಜಿಪ್ಟಿನಲ್ಲಿ ಯೋಸೇಫನಿಗೆ ಇಬ್ಬರು ಪುತ್ರರು ಹುಟ್ಟಿದರು. ಯಾಕೋಬನ ಮನೆಯವರಾಗಿ ಈಜಿಪ್ಟಿಗೆ ಹೋದ ಜನರೆಲ್ಲಾ ಸೇರಿ ಒಟ್ಟು ಎಪ್ಪತ್ತು ಮಂದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 46:27
7 ತಿಳಿವುಗಳ ಹೋಲಿಕೆ  

ಅನಂತರ ತನ್ನ ತಂದೆ ಯಕೋಬನೂ ಅವನ ಬಂಧುಬಳಗದವರೂ ಈಜಿಪ್ಟಿಗೆ ಬರುವಂತೆ ಜೋಸೆಫನು ಹೇಳಿಕಳುಹಿಸಿದನು.


ನಿಮ್ಮ ಪಿತೃಗಳು, ಎಪ್ಪತ್ತುಮಂದಿ ಮಾತ್ರ. ಈಜಿಪ್ಟ್ ದೇಶಕ್ಕೆ ಹೋದರು; ಈಗಲಾದರೋ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಕಾಶದ ನಕ್ಷತ್ರಗಳಷ್ಟು ಅಸಂಖ್ಯರಾಗುವಂತೆ ಮಾಡಿದ್ದಾರೆ.


ಯಕೋಬನ ಸಂತತಿಯವರೆಲ್ಲರು ಎಪ್ಪತ್ತು ಮಂದಿ. ಜೋಸೆಫನು ಈಗಾಗಲೇ ಈಜಿಪ್ಟಿನಲ್ಲಿ ಇದ್ದನು.


ಸರ್ವೇಶ್ವರ ಸ್ವಾಮಿ ಮೋಶೆಗೆ, “ನೀನು, ಆರೋನ, ನಾದಾಬ್ ಹಾಗೂ ಅಬೀಹೂ ಮತ್ತು ಇಸ್ರಯೇಲರ ಹಿರಿಯರಲ್ಲಿ ಎಪ್ಪತ್ತು ಮಂದಿ ಈ ಬೆಟ್ಟವನ್ನು ಹತ್ತಿ ಸರ್ವೇಶ್ವರನಾದ ನನ್ನ ಬಳಿಗೆ ಬಂದು ದೂರದಲ್ಲೆ ನಿಂತು ಅಡ್ಡಬೀಳಬೇಕು.


ಆಗ ಯಕೋಬನು, ಸಿಮೆಯೋನ್ ಮತ್ತು ಲೇವಿಯರಿಗೆ, “ನೀವು ನನ್ನ ಹೆಸರನ್ನು ಈ ನಾಡಿನ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ಅಸಹ್ಯಮಾಡಿಬಿಟ್ಟರಿ; ನನ್ನನ್ನು ಅಪಾಯಕ್ಕೆ ಗುರಿಮಾಡಿದ್ದೀರಿ. ನನಗಿರುವ ಜನರು ಕೆಲವರೇ. ಈ ನಾಡಿನವರೆಲ್ಲರು ಒಟ್ಟಿಗೆ ಬಂದು ನನ್ನ ಮೇಲೆ ಬಿದ್ದರೆ ನಾನು ಮಾತ್ರವಲ್ಲ, ನನ್ನ ಮನೆಯವರೆಲ್ಲರೂ ನಿರ್ಮೂಲವಾಗುತ್ತೇವೆ ಅಲ್ಲವೇ?” ಎಂದನು.


ಆಗ ನೀವು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ, ಅರಾಮ್ಯನಾದ ನಮ್ಮ ಮೂಲಪಿತೃವು ಗತಿಯಿಲ್ಲದವನಾಗಿ ಸ್ವಲ್ಪ ಮಂದಿಯೊಡನೆ ಈಜಿಪ್ಟ್ ದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು. ಅಲ್ಲಿ ಅವನ ಸಂತಾನದವರು ಹೆಚ್ಚಿ ಮಹಾಬಲಿಷ್ಠ ಜನಾಂಗವಾದರು.


ಯಕೋಬನೊಡನೆ ಹಾಗು ತಮ್ಮ ತಮ್ಮ ಕುಟುಂಬಗಳೊಡನೆ ಈಜಿಪ್ಟ್ ದೇಶಕ್ಕೆ ಬಂದ ಇಸ್ರಯೇಲನ ಮಕ್ಕಳ ಹೆಸರುಗಳು ಇವು:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು