ಆದಿಕಾಂಡ 46:2 - ಕನ್ನಡ ಸತ್ಯವೇದವು C.L. Bible (BSI)2 ಆ ರಾತ್ರಿ ದೇವರು ಯಕೋಬನಿಗೆ ದರ್ಶನವಿತ್ತು, “ಯಕೋಬನೇ, ಯಕೋಬನೇ,” ಎಂದು ಕರೆಯಲು, ಅವನು, "ಇಗೋ, ಸಿದ್ಧನಿದ್ದೇನೆ,” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಅಲ್ಲಿ ದೇವರು ರಾತ್ರಿಯ ದರ್ಶನದಲ್ಲಿ ಇಸ್ರಾಯೇಲನಿಗೆ, “ಯಾಕೋಬನೇ, ಯಾಕೋಬನೇ” ಎಂದು ಕರೆಯಲು, ಅವನು, “ಇಗೋ ಇದ್ದೇನೆ” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಅಲ್ಲಿ ದೇವರು ರಾತ್ರಿಯ ಸ್ವಪ್ನದಲ್ಲಿ ಇಸ್ರಾಯೇಲನನ್ನು - ಯಾಕೋಬನೇ, ಯಾಕೋಬನೇ ಎಂದು ಕರೆಯಲು, ಅವನು - ಇದ್ದೇನೆ ಅಂದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ಆ ರಾತ್ರಿ ದೇವರು ಕನಸಿನಲ್ಲಿ ಅವನೊಂದಿಗೆ ಮಾತನಾಡಿದನು. ದೇವರು ಅವನನ್ನು, “ಯಾಕೋಬನೇ, ಯಾಕೋಬನೇ” ಎಂದು ಕರೆದನು. ಅದಕ್ಕೆ ಇಸ್ರೇಲನು, “ಇಗೋ, ಇದ್ದೇನೆ” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ದೇವರು ಇಸ್ರಾಯೇಲನಿಗೆ ರಾತ್ರಿಯ ದರ್ಶನದಲ್ಲಿ ಮಾತನಾಡಿ, “ಯಾಕೋಬನೇ, ಯಾಕೋಬನೇ,” ಎಂದರು. ಅದಕ್ಕವನು, “ಇಗೋ, ಇದ್ದೇನೆ,” ಎಂದನು. ಅಧ್ಯಾಯವನ್ನು ನೋಡಿ |