Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 45:23 - ಕನ್ನಡ ಸತ್ಯವೇದವು C.L. Bible (BSI)

23 ತನ್ನ ತಂದೆಗೆ ಈಜಿಪ್ಟ್ ದೇಶದ ಒಳ್ಳೊಳ್ಳೆಯ ವಸ್ತುಗಳನ್ನೂ ಹತ್ತು ಗಂಡು ಕತ್ತೆಗಳ ಮೇಲೆ ಹೇರಿಸಿದನು. ಅವನ ಪ್ರಯಾಣಕ್ಕೆ ಹತ್ತು ಹೆಣ್ಣು ಕತ್ತೆಗಳ ಮೇಲೆ ದವಸಧಾನ್ಯಗಳನ್ನೂ ಇತರ ಆಹಾರಪದಾರ್ಥಗಳನ್ನೂ ಕಳಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ತನ್ನ ತಂದೆಗೋಸ್ಕರ ಐಗುಪ್ತ ದೇಶದ ಒಳ್ಳೆಯ ವಸ್ತುಗಳನ್ನು ಹತ್ತು ಕತ್ತೆಗಳ ಮೇಲೆ ಹೇರಿಸಿ, ಹತ್ತು ಹೆಣ್ಣುಕತ್ತೆಗಳ ಮೇಲೆ ತನ್ನ ತಂದೆಗೆ ಪ್ರಯಾಣಕ್ಕೆ ಬೇಕಾದ ದವಸ ಧಾನ್ಯಗಳನ್ನು, ರೊಟ್ಟಿ ಮತ್ತು ಇತರ ಆಹಾರವನ್ನು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ತನ್ನ ತಂದೆಗೋಸ್ಕರ ಐಗುಪ್ತದೇಶದ ಒಳ್ಳೇ ವಸ್ತುಗಳನ್ನು ಹತ್ತು ಕತ್ತೆಗಳ ಮೇಲೆ ಹೇರಿಸಿ ಹತ್ತು ಹೆಣ್ಣುಕತ್ತೆಗಳ ಮೇಲೆ ತನ್ನ ತಂದೆಯ ಪ್ರಯಾಣಕ್ಕೆ ಬೇಕಾದ ದವಸ ಧಾನ್ಯಗಳನ್ನೂ ಬೇರೆ ತಿನ್ನುವ ಪದಾರ್ಥಗಳನ್ನೂ ಕಟ್ಟಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಯೋಸೇಫನು ತನ್ನ ತಂದೆಗೂ ಉಡುಗೊರೆಗಳನ್ನು ಕಳುಹಿಸಿದನು. ಅವನು ಈಜಿಪ್ಟಿನ ಶ್ರೇಷ್ಠವಾದ ವಸ್ತುಗಳನ್ನು ಹತ್ತು ಕತ್ತೆಗಳ ಮೇಲೆ ಕಳುಹಿಸಿದನು. ತನ್ನ ತಂದೆಯ ಮರುಪ್ರಯಾಣಕ್ಕೆ ಬೇಕಾದ ಕಾಳು, ರೊಟ್ಟಿ ಮತ್ತು ಇತರ ಆಹಾರಪದಾರ್ಥಗಳನ್ನೂ ಹತ್ತು ಹೆಣ್ಣುಕತ್ತೆಗಳ ಮೇಲೆ ಹೊರಿಸಿ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಇದಲ್ಲದೆ ಅವನು ತನ್ನ ತಂದೆಗೆ ಹತ್ತು ಕತ್ತೆಗಳು ಹೊರುವಷ್ಟು ಈಜಿಪ್ಟಿನ ಶ್ರೇಷ್ಠವಾದವುಗಳನ್ನೂ, ಪ್ರಯಾಣಕ್ಕೋಸ್ಕರ ತಂದೆಗೆ ಹತ್ತು ಹೆಣ್ಣು ಕತ್ತೆಗಳು ಹೊರುವಷ್ಟು ಗೋಧಿ, ರೊಟ್ಟಿ, ಆಹಾರಗಳನ್ನೂ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 45:23
5 ತಿಳಿವುಗಳ ಹೋಲಿಕೆ  

“ಈ ಸಮಾಜವನ್ನೆಲ್ಲ ಹಸಿವೆಯಿಂದ ಸಾಯಿಸಬೇಕೆಂದು ಈ ಮರುಭೂಮಿಗೆ ನಮ್ಮನ್ನು ಕರೆದು ತಂದಿದ್ದೀರಿ; ನಾವು ಈಜಿಪ್ಟಿನಲ್ಲಿದ್ದಾಗ ಸರ್ವೇಶ್ವರನ ಕೈಯಿಂದಲೆ ಸತ್ತಿದ್ದರೆ ಎಷ್ಟೊ ಲೇಸಾಗಿತ್ತು. ಆಗ ಮಾಂಸ ಪಾತ್ರೆಗಳ ಪಕ್ಕದಲ್ಲೇ ಕುಳಿತು ಹೊಟ್ಟೇ ತುಂಬ ಊಟಮಾಡುತ್ತಿದ್ದೆವು,” ಎಂದು ಗುಣಗಿದರು.


ಇಷ್ಟಾದ ಮೇಲೆ ಅವರ ತಂದೆ ಯಕೋಬನು, “ನೀವು ಹೋಗಲೇಬೇಕಾದರೆ, ಒಂದು ಕೆಲಸಮಾಡಿ; ಈ ನಾಡಿನಲ್ಲಿ ದೊರಕುವ ಶ್ರೇಷ್ಠವಾದ ವಸ್ತುಗಳಲ್ಲಿ ಕೆಲವನ್ನು ನಿಮ್ಮ ಚೀಲದಲ್ಲಿ ಹಾಕಿಕೊಂಡು ಹೋಗಿ, ಆ ಮನುಷ್ಯನಿಗೆ ಕಾಣಿಕೆಯಾಗಿ ಕೊಡಿ.


ತರುವಾಯ ಆ ಸೇವಕ ತನ್ನ ಒಡೆಯನ ಒಂಟೆಗಳಲ್ಲಿ ಹತ್ತನ್ನು ಸಿದ್ಧಮಾಡಿಕೊಂಡು, ಅವನ ಆಸ್ತಿಯಿಂದ ಶ್ರೇಷ್ಠವಾದ ಒಡವೆಗಳನ್ನು ತೆಗೆದುಕೊಂಡು ಹೊರಟನು. ಎರಡು ನದಿಗಳ ಮಧ್ಯೆ ಇರುವ ಉತ್ತರ ಮೆಸಪೊಟೇಮಿಯಾ ನಾಡಿಗೆ ಬಂದನು. ಅಲ್ಲಿಂದ ನಾಹೋರನು ವಾಸಿಸಿದ್ದ ಊರನ್ನು ಮುಟ್ಟಿದನು.


ಅದೂ ಅಲ್ಲದೆ, ಪ್ರತಿಯೊಬ್ಬನಿಗೂ ಶ್ರೇಷ್ಠವಾದ ಹೊಸ ಬಟ್ಟೆಗಳನ್ನು ಕೊಟ್ಟನು. ಬೆನ್ಯಾಮೀನನಿಗಾದರೋ ಮುನ್ನೂರು ಬೆಳ್ಳಿನಾಣ್ಯಗಳನ್ನು ಹಾಗು ಐದು ಶ್ರೇಷ್ಠವಾದ ಹೊಸಬಟ್ಟೆಗಳನ್ನು ಕೊಟ್ಟನು.


ತನ್ನ ಅಣ್ಣತಮ್ಮಂದಿರಿಗೆ, “ದಾರಿಯಲ್ಲಿ ಜಗಳವಾಡಬೇಡಿ” ಎಂದು ಬುದ್ಧಿ ಹೇಳಿ, ಅವರನ್ನು ಬೀಳ್ಕೊಟ್ಟನು. ಅವರು ಹೊರಟುಹೋದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು