Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 45:18 - ಕನ್ನಡ ಸತ್ಯವೇದವು C.L. Bible (BSI)

18 ನಿಮ್ಮ ತಂದೆಯನ್ನೂ ಕುಟುಂಬದವರನ್ನೂ ನನ್ನ ಬಳಿಗೆ ಕರೆದುಕೊಂಡು ಬರತಕ್ಕದ್ದು. ಈಜಿಪ್ಟ್ ದೇಶದಲ್ಲಿ ನಿಮಗೆ ಅತ್ಯುತ್ತಮವಾದ ಭೂಮಿಯನ್ನು ಕೊಡುವೆನು. ನೀವು ಈ ದೇಶದ ಸುಖಸಂಪತ್ತನ್ನು ಅನುಭವಿಸಬಹುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ನಿಮ್ಮ ತಂದೆಯನ್ನೂ ಮನೆಯವರನ್ನೂ ನನ್ನ ಬಳಿಗೆ ಕರೆದುಕೊಂಡು ಬನ್ನಿರಿ. ನಾನು ನಿಮಗೆ ಐಗುಪ್ತ ದೇಶದಲ್ಲಿ ದೊರಕುವ ಉತ್ತಮ ವಸ್ತುಗಳನ್ನು ನಿಮಗೆ ಕೊಡುವೆನು ಮತ್ತು ನೀವು ಈ ದೇಶದ ಸುಖವನ್ನು ಅನುಭವಿಸುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ನಿಮ್ಮ ತಂದೆಯನ್ನೂ ಮನೆಯವರನ್ನೂ ನನ್ನ ಬಳಿಗೆ ಕರಕೊಂಡು ಬನ್ನಿರಿ; ಐಗುಪ್ತದೇಶದಲ್ಲಿ ದೊರಕುವ ಉತ್ತಮ ವಸ್ತುಗಳನ್ನು ನಿಮಗೆ ಕೊಡುವೆನು, ಮತ್ತು ನೀವು ಈ ದೇಶದ ಸುಖವನ್ನು ಅನುಭವಿಸಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ನಿನ್ನ ತಂದೆಯನ್ನೂ ತಮ್ಮ ಕುಟುಂಬಗಳನ್ನೂ ನನ್ನ ಬಳಿಗೆ ಕರೆದುಕೊಂಡು ಬರಲಿ. ಅವರು ಈಜಿಪ್ಟಿನ ಒಳ್ಳೆಯ ಪ್ರದೇಶದಲ್ಲಿ ವಾಸಿಸಲಿ. ಇಲ್ಲಿರುವ ಉತ್ತಮವಾದ ಆಹಾರವನ್ನು ಅವರು ಊಟಮಾಡಲಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ನಿಮ್ಮ ತಂದೆಯನ್ನೂ, ಕುಟುಂಬದವರನ್ನೂ ಕರೆದುಕೊಂಡು ನನ್ನ ಬಳಿಗೆ ಬನ್ನಿರಿ. ಈಜಿಪ್ಟ್ ದೇಶದ ಸುಖಸಂಪತ್ತನ್ನು ಅನುಭವಿಸಬಹುದು.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 45:18
11 ತಿಳಿವುಗಳ ಹೋಲಿಕೆ  

ಈಜಿಪ್ಟ್ ದೇಶವು ನಿನ್ನ ಮುಂದಿದೆ; ಅದರಲ್ಲಿನ ಉತ್ತಮ ಭಾಗವನ್ನು ನಿನ್ನ ತಂದೆಗೂ ಸಹೋದರರಿಗೂ ವಾಸಸ್ಥಾನವಾಗಿ ನೇಮಿಸು; ಗೋಷೆನ್ ಪ್ರಾಂತ್ಯದಲ್ಲಿ ಬೇಕಾದರೆ ವಾಸಮಾಡಲಿ; ಅವರಲ್ಲಿ ನುರಿತವರು ಯಾರಾದರು ಇದ್ದರೆ ಅವರನ್ನು ನನ್ನ ದನಕರುಗಳ ಮೇಲ್ವಿಚಾರಣೆಗೆ ನೇಮಿಸು,” ಎಂದನು.


ದಯಪಾಲಿಸಲಿ ದೇವ ನಿನಗೆ ಆಗಸದ ಮಂಜನು, ಸಾರವುಳ್ಳ ಹೊಲವನು ಅನುಗ್ರಹಿಸಲಿ ಹೇರಳ ದವಸ ಧಾನ್ಯವನು, ದ್ರಾಕ್ಷಾರಸವನು.


ನಿನ್ನ ಪ್ರಾಂತದೊಳಗೆಲ್ಲಾ ಇರುವುದು ನೆಮ್ಮದಿ I ನೀಡುವನು ನಿನಗೆ ಅತ್ಯುತ್ತಮ ಗೋದಿ II


ನಿಮಗೆ ಕೊಡಲಾಗುವ ಸಕಲ ಪದಾರ್ಥಗಳಲ್ಲಿ ಉತ್ತಮ ಭಾಗವನ್ನೇ, ಅಂದರೆ ದೇವರ ವಸ್ತುವಾಗುವುದಕ್ಕೆ ಯೋಗ್ಯವಾದ ಭಾಗವನ್ನೇ ಸರ್ವೇಶ್ವರನಿಗೆ ಮೀಸಲಾಗಿಟ್ಟು ಸಮರ್ಪಿಸಬೇಕು.


“ಇಸ್ರಯೇಲರು ನನಗೆ ಸಮರ್ಪಿಸುವ ಪ್ರಥಮ ಫಲಗಳು, ಅಂದರೆ ಎಣ್ಣೆ, ದ್ರಾಕ್ಷಾರಸ, ಧಾನ್ಯ, ಇವುಗಳಲ್ಲಿ ಶ್ರೇಷ್ಠವಾದುದು ನಿನಗೇ ಸಿಗಬೇಕೆಂದು ವಿಧಿಸಿದ್ದೇನೆ.


ಫಲವತ್ತಾದ ಕಣಿವೆಗೆ ಶ್ರೇಷ್ಠಶಿರೋಭೂಷಣವಾಗಿದ್ದು, ಈಗ ಬಾಡುತ್ತಿರುವ ಆ ನಗರ, ಹೂ ಕಾಲಕ್ಕೆ ಮುಂಚೆ ಮಾಗಿದ ಅಂಜೂರಕ್ಕೆ ಸಮಾನವಾಗುವುದು. ಆ ಹಣ್ಣನ್ನು ಕಂಡವರು ಕಿತ್ತ ಕೂಡಲೆ ತಿಂದುಬಿಡುವರು.


ಕುಡುಕರಿಂದ ಕೂಡಿದ ಎಫ್ರಯಿಮಿನ ಕಿರೀಟದಂತಿರುವ ನಗರಕ್ಕೆ ಧಿಕ್ಕಾರ ! ಒಮ್ಮೆ ಕುಡಿತಕ್ಕೆ ಸೋತು ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಈಗ ಬಾಡಿಹೋಗುತ್ತಿರುವ ಆ ಹೂವಿಗೆ ಧಿಕ್ಕಾರ !


“ನಿಮಗಾದರೋ ಬಡಿಸುತ್ತಿದ್ದೆ ಅತ್ಯುತ್ತಮ ಗೋದಿಯನು I ಉಣಿಸುತ್ತಿದ್ದೆ ನಾ ನಿಮಗೆ ಬೆಟ್ಟದ ಜೇನುತುಪ್ಪವನು” II


ಆಹಾರಕ್ಕಿತ್ತು, ಆಕಳಿನ ಮೊಸರೋಗರ ಆಡುಕುರಿಗಳ ಕ್ಷೀರ ಬಾಷಾನಿನ ಪುಷ್ಟಪಶು, ಹೋತ, ಕೊಬ್ಬಿದ ಕುರಿಟಗರಿನ ಮಾಂಸ, ಉತ್ತಮವಾದ ಗೋಧೂಮ; ಪಾನಕ್ಕಿತ್ತು ರಕ್ತಗೆಂಪಾದ ದ್ರಾಕ್ಷಾರಸ.


ಫರೋಹನು ಜೋಸೆಫನನ್ನು ಕರೆಸಿ, “ನೀನು ನಿನ್ನ ಸಹೋದರರಿಗೆ ತಿಳಿಸಬೇಕಾದ ನನ್ನ ಆಜ್ಞೆ ಇದು: ‘ನೀವು ನಿಮ್ಮ ವಾಹಕಪಶುಗಳ ಮೇಲೆ ಸಾಮಾನುಗಳನ್ನು ಹೇರಿ ಕಾನಾನ್ ನಾಡಿಗೆ ಹೋಗಿ, ಅಲ್ಲಿಂದ


'ಚಿಕ್ಕಂದಿನಿಂದ ಇಂದಿನವರೆಗೂ ನಿಮ್ಮ ಸೇವಕರಾದ ನಾವು, ನಮ್ಮ ಪೂರ್ವಜರ ಪದ್ಧತಿಯಂತೆ ಮಂದೆ ಮೇಯಿಸುವವರು,’ ಎಂದು ಹೇಳಿರಿ. ಆಗ ಗೋಷೆನ್ ಪ್ರಾಂತ್ಯವನ್ನು ನಿಮ್ಮ ನಿವಾಸಕ್ಕೆ ನೇಮಿಸುವನು - ಏಕೆಂದರೆ ಕುರಿ ಕಾಯುವವರೆಂದರೆ ಈಜಿಪ್ಟಿಯರಿಗೆ ಹಿಡಿಸದು,” ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು