ಆದಿಕಾಂಡ 43:23 - ಕನ್ನಡ ಸತ್ಯವೇದವು C.L. Bible (BSI)23 ಅದಕ್ಕೆ ಆ ಗೃಹನಿರ್ವಾಹಕ, “ಸಮಾಧಾನದಿಂದಿರಿ, ಹೆದರಬೇಡಿ. ನಿಮ್ಮ ತಂದೆಗೂ ನಿಮಗೂ ದೇವರಾದವರು ನಿಮ್ಮ ಚೀಲಗಳಲ್ಲಿಯೇ ನಿಧಿ ನಿಕ್ಷೇಪ ದೊರಕುವಂತೆ ಅನುಗ್ರಹಿಸಿದ್ದಾರೆ; ನೀವು ಕೊಟ್ಟ ಹಣ ನನಗೆ ಮುಟ್ಟಿದೆ,” ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ಕರೆದುಕೊಂಡು ಬಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201923 ಅದಕ್ಕೆ ಅವನು, “ನೀವು ಸಮಾಧಾನವಾಗಿರಿ. ನೀವೇನೂ ಭಯಪಡಬೇಡಿರಿ ನಿಮಗೂ ನಿಮ್ಮ ತಂದೆಗೂ ದೇವರಾಗಿರುವಾತನು ನಿಮ್ಮ ಚೀಲಗಳಲ್ಲಿ ಹಣವನ್ನು ಇಟ್ಟಿರಬೇಕು. ನಿಮ್ಮ ಹಣವು ನನಗೆ ಮುಟ್ಟಿತು” ಎಂದು ಹೇಳಿ, ಅವನು ಸಿಮೆಯೋನನನ್ನು ಅವರ ಬಳಿಗೆ ಕರೆದುಕೊಂಡು ಬಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)23 ಅದಕ್ಕೆ ಅವನು - ಸಮಾಧಾನವಾಗಿರ್ರಿ. ನೀವೇನೂ ಹೆದರಬೇಡಿರಿ; ನಿಮ್ಮ ತಂದೆಗೂ ನಿಮಗೂ ದೇವರಾಗಿರುವಾತನು ನಿಮ್ಮ ಚೀಲಗಳಲ್ಲಿಯೇ ನಿಕ್ಷೇಪ ಸಿಕ್ಕುವಂತೆ ಅನುಗ್ರಹಿಸಿದ್ದಾನೆ; ನಿಮ್ಮ ಹಣವು ನನಗೆ ಮುಟ್ಟಿತು ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ಕರೆದುಕೊಂಡು ಬಂದು ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್23 ಅದಕ್ಕೆ ಸೇವಕನು, “ಭಯಪಡಬೇಡಿ, ಚಿಂತಿಸಬೇಡಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ಹಣವನ್ನು ಉಡುಗೊರೆಯಾಗಿ ನಿಮ್ಮ ಚೀಲಗಳಲ್ಲಿ ಇಟ್ಟಿದ್ದಿರಬೇಕು. ಕಳೆದ ಸಲ ನೀವು ದವಸಧಾನ್ಯಗಳಿಗಾಗಿ ಹಣ ಪಾವತಿ ಮಾಡಿದ್ದು ನನಗೆ ನೆನಪಿದೆ” ಎಂದು ಹೇಳಿದನು. ಬಳಿಕ ಆ ಸೇವಕನು ಸಿಮೆಯೋನನನ್ನು ಸೆರೆಮನೆಯಿಂದ ಕರೆತಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ23 ಅದಕ್ಕವನು, “ನಿಮಗೆ ಸಮಾಧಾನವಿರಲಿ, ಭಯಪಡಬೇಡಿರಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ನಿಮ್ಮ ಚೀಲಗಳಲ್ಲಿ ನಿಮಗೆ ನಿಕ್ಷೇಪವನ್ನು ಕೊಟ್ಟಿದ್ದಾರೆ. ನಿಮ್ಮ ಹಣವು ನನಗೆ ಮುಟ್ಟಿದೆ,” ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ತಂದನು. ಅಧ್ಯಾಯವನ್ನು ನೋಡಿ |
ಅರಸ ಸೌಲನಿಗೆ ವಿರುದ್ಧ ಯುದ್ಧಮಾಡಲು ಫಿಲಿಷ್ಟಿಯರೊಂದಿಗೆ ಹೋಗುತ್ತಿದ್ದಾಗ ಮನಸ್ಸೆ ಗೋತ್ರದ ಕೆಲವು ಜನ ಸೈನಿಕರು ಬಂದು ದಾವೀದನ ಪಕ್ಷದಲ್ಲಿ ಸೇರಿಕೊಂಡರು. ದಾವೀದನು ನಿಜವಾಗಿಯೂ ಫಿಲಿಷ್ಟಿಯರಿಗೆ ಸಹಾಯಮಾಡಲಿಲ್ಲ. ತನ್ನ ಮೊದಲಿನ ಯಜಮಾನ ಸೌಲನಿಗೆ ತಮ್ಮನ್ನು ಹಿಡಿದುಕೊಡಬಹುದೆಂಬ ಭಯ ಫಿಲಿಷ್ಟಿಯ ರಾಜರುಗಳಿಗೆ ಇದ್ದುದರಿಂದ ಅವರು ಅವನನ್ನು ಚಿಕ್ಲಗಿಗೆ ಹಿಂದಕ್ಕೆ ಕಳುಹಿಸಿದರು.