Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 41:51 - ಕನ್ನಡ ಸತ್ಯವೇದವು C.L. Bible (BSI)

51 ಜೇಷ್ಠಮಗ ಹುಟ್ಟಿದಾಗ ಜೋಸೆಫನು, “ನಾನು ನನ್ನ ಕಷ್ಟದುಃಖವನ್ನೂ ತಂದೆಯ ಮನೆಯವರನ್ನೂ ಮರೆಯುವಂತೆ ದೇವರು ಮಾಡಿದ್ದಾರಲ್ಲಾ!” ಎಂದುಕೊಂಡು ಆ ಮಗುವಿಗೆ, ‘ಮನಸ್ಸೆ’ ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

51 ಚೊಚ್ಚಲು ಮಗನು ಹುಟ್ಟಿದಾಗ ಯೋಸೇಫನು, “ನಾನು ನನ್ನ ಎಲ್ಲಾ ಕಷ್ಟವನ್ನು, ತಂದೆಯ ಮನೆಯವರನ್ನೂ ಮರೆತುಬಿಡುವಂತೆ ದೇವರು ಮಾಡಿದನು” ಎಂದು ಹೇಳಿ ಅವನಿಗೆ “ಮನಸ್ಸೆ” ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

51 ಚೊಚ್ಚಲುಮಗನು ಹುಟ್ಟಿದಾಗ ಯೋಸೇಫನು - ನಾನು ನನ್ನ ಎಲ್ಲಾ ಕಷ್ಟವನ್ನೂ ತಂದೆಯ ಮನೆಯವರನ್ನೂ ಮರೆತುಬಿಡುವಂತೆ ದೇವರು ಮಾಡಿದ್ದಾನಲ್ಲಾ ಎಂದು ಹೇಳಿ ಅವನಿಗೆ ಮನಸ್ಸೆ ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

51 ಮೊದಲನೆಯ ಮಗನು ಹುಟ್ಟಿದಾಗ, “ನನ್ನ ಎಲ್ಲಾ ಕಷ್ಟಗಳನ್ನೂ ನನ್ನ ತಂದೆಯ ಮನೆಯವರನ್ನೂ ಮರೆತುಬಿಡುವಂತೆ ದೇವರು ನನಗೆ ಸಹಾಯ ಮಾಡಿದನು” ಎಂದು ಹೇಳಿ ಯೋಸೇಫನು ಆ ಮಗುವಿಗೆ, “ಮನಸ್ಸೆ” ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

51 ಜೇಷ್ಠಪುತ್ರನಿಗೆ ಯೋಸೇಫನು ಮನಸ್ಸೆ ಎಂದು ಹೆಸರಿಟ್ಟನು. ಏಕೆಂದರೆ ಅವನು, “ದೇವರು ನನ್ನ ಕಷ್ಟವನ್ನು ಮತ್ತು ನನ್ನ ತಂದೆಯ ಮನೆಯನ್ನು ಮರೆತುಬಿಡುವಂತೆ ಮಾಡಿದರು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 41:51
19 ತಿಳಿವುಗಳ ಹೋಲಿಕೆ  

ಆತನ ಕೋಪ ಕ್ಷಣಮಾತ್ರ I ಆತನ ಕೃಪೆ ಜೀವನ ಪರಿಯಂತ II ಇರುಳು ಬರಲು ಇರಬಹುದು ಅಳಲು I ನಲಿವು ಉಲಿವುದು ಹಗಲು ಹರಿಯಲು II


ಅವರು ಕುಡಿದು ಬಡತನ ಮರೆಯಲಿ, ತಮ್ಮ ಯಾತನೆಯನ್ನು ನೆನೆಯದಿರಲಿ.


ಎನ್ನ ಗೋಳಾಟವನು ನೀ ಕುಣಿದಾಟವಾಗಿಸಿದೆ I ಎನ್ನ ಗೋಣಿತಟ್ಟನು ಹರ್ಷಾಭರಣವಾಗಿಸಿದೆ II


ಜೋಸೆಫನದು ಜೇಷ್ಠಸಂತತಿಯು ಗೂಳಿಯ ಗಾಂಭೀರ್ಯವೂ ಅವನ ಕೊಂಬುಗಳು, ಕಾಡುಕೋಣದ ಕೊಂಬುಗಳು ಅವುಗಳಿಂದ ಇರಿದು ಓಡಿಸಬಲ್ಲನು ಜಗದ ಜನಾಂಗಗಳನು! ಇವನಂಥವರು ಎಫ್ರಯಿಮ್ ಕುಲದ ಕೋಟ್ಯಾಂತರ ಜನರು ಇವನಂಥವರು ಮನಸ್ಸೆಕುಲದ ಲಕ್ಷಾಂತರ ಮಂದಿಗಳು.”


ತರುವಾಯ ಏಳು ದುರ್ಭಿಕ್ಷ ವರ್ಷಗಳೂ ಬರುವುವು. ಆಗ ಈಜಿಪ್ಟ್ ದೇಶದ ಅವರು ಮೊದಲಿದ್ದ ಆ ಸುಭಿಕ್ಷವನ್ನು ಮರೆತುಬಿಡುವರು; ಆ ಬರದಿಂದ ದೇಶವು ಹಾಳಾಗಿಹೋಗುವುದು.


ಹಳೆಯ ಕಷ್ಟದುಃಖಗಳು ಇನ್ನು ಕಣ್ಮರೆಯಾಗಿಹೋಗುವುವು: ನಾಡಿನಲ್ಲಿ ಆಶೀರ್ವಾದ ಪಡೆಯುವವನು ಸತ್ಯಸ್ವರೂಪನಾದ ದೇವರ ಹೆಸರಿನಲ್ಲಿ ಆಶೀರ್ವಾದ ಪಡೆಯುವನು. ಶಪಥ ಮಾಡುವವನು ಸತ್ಯಸ್ವರೂಪನಾದ ದೇವರ ಹೆಸರಿನಲ್ಲಿ ಶಪಥಮಾಡುವನು.”


ನಾನು ಸರ್ವದಾ ತಪ್ಪು ಹುಡುಕುವವನಲ್ಲ; ಕಡೆಯ ತನಕ ಕೋಪದಿಂದಿರುವವನಲ್ಲ. ಹಾಗೆ ಮಾಡಿದರೆ ಜೀವಾತ್ಮ ಕುಂದಿಹೋದೀತು. ಆ ಜೀವಿಗಳನ್ನು ಸೃಷ್ಟಿಸಿದವನು ನಾನೇ ಅಲ್ಲವೇ?


ಎಲೌ ಕುವರಿಯೇ, ಕೇಳು, ಎನ್ನ ಮಾತಿಗೆ ಕಿವಿಗೊಡು I ನಿನ್ನ ಜನರನು, ತೌರು ಮನೆಯನು ಮರೆತುಬಿಡು II


“ನಾನು ನಿನ್ನ ಬಳಿಗೆ ಈಜಿಪ್ಟ್ ದೇಶಕ್ಕೆ ಬರುವುದಕ್ಕೆ ಮುಂಚೆ ಇಲ್ಲಿ ಹುಟ್ಟಿದ್ದ ನಿನ್ನಿಬ್ಬರು ಮಕ್ಕಳು ನನ್ನ ಮಕ್ಕಳಾಗಬೇಕು. ರೂಬೇನ್ ಮತ್ತು ಸಿಮೆಯೋನ್ ನನ್ನ ಮಕ್ಕಳಾಗಿರುವಂತೆಯೇ ಎಫ್ರಯಿಮ್ ಮತ್ತು ಮನಸ್ಸೆ ನನ್ನ ಮಕ್ಕಳಾಗಿರಲಿ.


ಬರಗಾಲ ಬರುವುದಕ್ಕೆ ಮುಂಚೆ ಜೋಸೆಫನಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಅವರ ತಾಯಿ ಓನ್ ಪಟ್ಟಣದ ಆಚಾರ್ಯನಾಗಿದ್ದ ಪೋಟೀಫೆರನ ಮಗಳಾದ ಆಸನತ್.


ಎರಡನೆಯ ಮಗನು ಹುಟ್ಟಿದಾಗ, ಯಾವ ದೇಶದಲ್ಲಿ ನನಗೆ ಸಂಕಷ್ಟವಿತ್ತೋ ಆ ದೇಶದಲ್ಲಿ ದೇವರು ನನಗೆ ಸಮೃದ್ಧಿಯನ್ನು ದಯಪಾಲಿಸಿದ್ದಾರೆ!” ಎಂದು ಆ ಮಗನಿಗೆ ‘ಎಫ್ರಾಯೀಮ್’ ಎಂದು ನಾಮಕರಣ ಮಾಡಿದನು.


ಕೆಲವು ಕಾಲವಾದ ಮೇಲೆ, “ತಂದೆ ಬಹಳ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ,” ಎಂಬ ಸುದ್ದಿ ಜೋಸೆಫನಿಗೆ ಬಂದಿತು. ಅವನು ಮನಸ್ಸೆ ಮತ್ತು ಎಫ್ರಯಿಮ್‍ ಎಂಬ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ತನ್ನ ತಂದೆಯ ಬಳಿಗೆ ಬಂದನು.


ಜೋಸೆಫ್ಯರರು ಮನಸ್ಸೆ ಮತ್ತು ಎಫ್ರಯಿಮ್ ಎಂಬ ಎರಡು ಕುಲಗಳಾಗಿ ಎಣಿಸಲ್ಪಟ್ಟಿದ್ದರು. ಲೇವಿಯರಿಗೆ, ತಂಗುವುದಕ್ಕೆ ಕೆಲವು ನಗರಗಳು ಹಾಗು ಅವರ ದನಕುರಿಗಳಿಗೆ ಅಲ್ಲಿನ ಕೆಲವು ಹುಲ್ಲುಗಾವಲುಗಳನ್ನು ಬಿಟ್ಟರೆ ಬೇರೇನೂ ಸಿಕ್ಕಲಿಲ್ಲ.


ಜೋಸೆಫನ ಚೊಚ್ಚಲ ಮಗ ಮನಸ್ಸೆಯ ವಂಶದವರಿಗೆ ದೊರಕಿದ ಸೊತ್ತಿನ ವಿವರ ಇದು: ಮನಸ್ಸೆಯ ಹಿರಿಯ ಮಗನೂ ಗಿಲ್ಯಾದನ ತಂದೆಯೂ ಆದ ಮಾಕೀರನು ಯುದ್ಧವೀರನು. ಆದ್ದರಿಂದ ಅವನಿಗೆ ಗಿಲ್ಯಾದ, ಬಾಷಾನ ಎಂಬ ಪ್ರಾಂತ್ಯಗಳು ಸಿಕ್ಕಿದವು.


ದಿನತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು. “ನಾನು ಇವನನ್ನು ಸರ್ವೇಶ್ವರನಿಂದ ಬೇಡಿ ಪಡೆದೆ,” ಎಂದು ಹೇಳಿ ಆ ಮಗುವಿಗೆ ‘ಸಮುವೇಲ’ ಎಂದು ಹೆಸರಿಟ್ಟಳು.


ಜೋಸೆಫನ ಮಕ್ಕಳು ಮನಸ್ಸೆ ಮತ್ತು ಎಫ್ರಾಯಿಮ್.


ಮರೆತುಬಿಡುವೆ ಆಗ ನಿನ್ನ ಕಷ್ಟದುಃಖವನ್ನು ನಿನ್ನ ನೆನಪಿಗೆ ಅದು ಹರಿದುಹೋದ ನೀರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು