ಆದಿಕಾಂಡ 41:49 - ಕನ್ನಡ ಸತ್ಯವೇದವು C.L. Bible (BSI)49 ಹೀಗೆ ಕೂಡಿಸಿದ ದವಸಧಾನ್ಯ ಸಮುದ್ರದ ಮರಳಿನಂತೆ ರಾಶಿರಾಶಿಯಾಗಿತ್ತು. ಲೆಕ್ಕಮಾಡುವುದಕ್ಕೂ ಆಗದೆ ಲೆಕ್ಕ ಇಡುವುದನ್ನೇ ಬಿಟ್ಟುಬಿಡಬೇಕಾಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201949 ಯೋಸೇಫನು ದವಸಧಾನ್ಯವನ್ನು ಸಮುದ್ರ ತೀರದ ಮರಳಿನಂತೆ ರಾಶಿರಾಶಿಯಾಗಿ ಶೇಖರಿಸಿ ಲೆಕ್ಕ ಮಾಡುವುದನ್ನು ಬಿಟ್ಟುಬಿಟ್ಟನು. ಅದನ್ನು ಲೆಕ್ಕ ಮಾಡುವುದಕ್ಕೆ ಆಗದೇ ಹೋಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)49 ಅವನು ದವಸಧಾನ್ಯವನ್ನು ಸಮುದ್ರದ ಉಸಬಿನಷ್ಟು ರಾಶಿರಾಶಿಯಾಗಿ ಕೂಡಿಸಿ ಲೆಕ್ಕಮಾಡುವದನ್ನು ಬಿಟ್ಟು ಬಿಟ್ಟನು; ಅದನ್ನು ಲೆಕ್ಕ ಮಾಡುವದಕ್ಕೆ ಆಗದೆಹೋಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್49 ಯೋಸೇಫನು ಬಹಳ ದವಸಧಾನ್ಯಗಳನ್ನು ಸಂಗ್ರಹಿಸಿದ್ದರಿಂದ ಸಮುದ್ರದ ಮರಳಿನ ರಾಶಿಯೆಂಬಂತೆ ತೋರಿತು; ಲೆಕ್ಕಿಸುವುದಕ್ಕೂ ಅಸಾಧ್ಯವಾಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ49 ಈ ಮೇರೆಗೆ ಯೋಸೇಫನು ದವಸ ಧಾನ್ಯವನ್ನು ಸಮುದ್ರದ ಮರಳಿನಷ್ಟು ರಾಶಿರಾಶಿಯಾಗಿ ಕೂಡಿಸಿ ಲೆಕ್ಕಮಾಡುವುದನ್ನು ಬಿಟ್ಟುಬಿಟ್ಟನು. ಅದನ್ನು ಲೆಕ್ಕಮಾಡುವುದಕ್ಕೆ ಆಗದೆ ಹೋಯಿತು. ಅಧ್ಯಾಯವನ್ನು ನೋಡಿ |