Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 41:42 - ಕನ್ನಡ ಸತ್ಯವೇದವು C.L. Bible (BSI)

42 ತನ್ನ ಬೆರಳಿನಿಂದ ಮುದ್ರಿಕೆಯನ್ನು ತೆಗೆದು ಜೋಸೆಫನ ಬೆರಳಿಗೆ ಇಟ್ಟನು. ಅವನಿಗೆ ಮೌಲ್ಯವಾದ ವಸ್ತ್ರಗಳನ್ನು ಹೊದಿಸಿದನು. ಕೊರಳಿಗೆ ಚಿನ್ನದ ಸರವನ್ನು ಹಾಕಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

42 ಫರೋಹನು ತನ್ನ ಕೈಯಿಂದ ಉಂಗುರವನ್ನು ತೆಗೆದು ಯೋಸೇಫನ ಬೆರಳಿಗೆ ತೊಡಿಸಿ ಅವನಿಗೆ ನಾರುಮಡಿಯನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಸರವನ್ನು ಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

42 ತನ್ನ ಕೈಯಿಂದ ಮುದ್ರಿಕೆಯನ್ನು ತೆಗೆದು ಯೋಸೇಫನ ಕೈಗೆ ಇಟ್ಟು ಅವನಿಗೆ ನಾರುಮಡಿಯನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಸರಪಣಿಯನ್ನು ಹಾಕಿಸಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

42 ರಾಜಮುದ್ರೆಯನ್ನು ಹೊಂದಿದ್ದ ತನ್ನ ಉಂಗುರವನ್ನು ಕೊಟ್ಟನು; ಧರಿಸಿಕೊಳ್ಳಲು ಒಳ್ಳೆಯ ನಾರುಬಟ್ಟೆಯ ನಿಲುವಂಗಿಯನ್ನು ಕೊಟ್ಟನು; ಕೊರಳಿಗೆ ಚಿನ್ನದ ಸರವನ್ನು ಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

42 ಫರೋಹನು ತನ್ನ ಕೈಯೊಳಗಿನ ಉಂಗುರವನ್ನು ತೆಗೆದು ಯೋಸೇಫನ ಕೈಯಲ್ಲಿಟ್ಟು, ನಾರುಮಡಿಯ ವಸ್ತ್ರವನ್ನು ತೊಡಿಸಿ, ಚಿನ್ನದ ಸರಪಣಿಯನ್ನು ಅವನ ಕೊರಳಿಗೆ ಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 41:42
27 ತಿಳಿವುಗಳ ಹೋಲಿಕೆ  

ತಕ್ಷಣವೇ ಬೇಲ್ಶಚ್ಚರನ ಆಜ್ಞೆಯ ಮೇರೆಗೆ ದಾನಿಯೇಲನಿಗೆ ಕೆನ್ನೀಲಿ ರಾಜವಸ್ತ್ರವನ್ನು ಹೊದಿಸಿದರು. ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿದರು. ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ದಾನಿಯೇಲನು ಒಬ್ಬನಾದನು ಎಂದು ಪ್ರಕಟಿಸಿದರು.


ಕೂಡಲೆ ರಾಜನು ಗಟ್ಟಿಯಾಗಿ ಕೂಗಿ ಮಂತ್ರವಾದಿ, ಪಂಡಿತ ಹಾಗು ಶಾಕುನಿಕರನ್ನು ಕರೆಯಿಸಿದನು. ಬಾಬಿಲೋನಿನ ಆ ವಿದ್ವಾಂಸರಿಗೆ, “ಯಾವನು ಈ ಬರಹವನ್ನು ಓದಿ ಇದರ ಅರ್ಥವನ್ನು ನನಗೆ ತಿಳಿಸುತ್ತಾನೋ ಅವನಿಗೆ ಕೆನ್ನೀಲಿ ರಾಜವಸ್ತ್ರವನ್ನು ತೊಡಿಸಿ, ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ಅವನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು,” ಎಂದು ಹೇಳಿದನು.


ಇದನ್ನು ಕೇಳಿದ ಅರಸನು ತನ್ನ ಕೈಬೆರಳಿನಲ್ಲಿದ್ದ ಮುದ್ರೆ ಉಂಗುರವನ್ನು ತೆಗೆದು ಆಗಾಗನ ವಂಶಸ್ಥನೂ ಹೆಮ್ಮೆದಾತನ ಮಗನೂ ಯೆಹೂದ್ಯರ ಕಡುವೈರಿಯೂ ಆದ ಹಾಮಾನನಿಗೆ ಕೊಟ್ಟು,


ನೀನು ಗೂಡಾರ್ಥಗಳನ್ನು ವಿವರಿಸಬಲ್ಲವನೂ ಗುಂಜುಗಂಟುಗಳನ್ನು ಬಿಚ್ಚಬಲ್ಲವನೂ ಎಂಬ ಸಮಾಚಾರ ನನಗೆ ಮುಟ್ಟಿದೆ. ಈ ಬರಹವನ್ನು ಓದಿ, ಇದರ ಅಭಿಪ್ರಾಯವನ್ನು ನನಗೆ ತಿಳಿಸಿದೆಯಾದರೆ ನಿನಗೆ ಕೆನ್ನೀಲಿ ರಾಜವಸ್ತ್ರವನ್ನು ಹೊದಿಸಿ, ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ನಿನ್ನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು,” ಎಂದು ಹೇಳಿದನು.


ಆಗ ಅರಸನು ಮೊರ್ದೆಕೈಯನ್ನು ಗೌರವದಿಂದ ಸ್ವಾಗತಿಸಿ ಹಾಮಾನನಿಂದ ತೆಗೆಸಿದ ಮುದ್ರೆ ಉಂಗುರವನ್ನು ಅವನಿಗೆ ತೊಡಿಸಿದನು. ಎಸ್ತೇರಳು ಹಾಮಾನನ ಮನೆಯ ಆಡಳಿತವನ್ನು ಮೊರ್ದೆಕೈಯನಿಗೆ ವಹಿಸಿದಳು.


ಮೊರ್ದೆಕೈಯಾದರೋ ನೀಲ ಶುಭ್ರವರ್ಣಗಳುಳ್ಳ ರಾಜವಸ್ತ್ರಗಳನ್ನು ಧರಿಸಿ, ಬಂಗಾರದ ದೊಡ್ಡ ಪಟ್ಟಿಯನ್ನು ಹಣೆಗೆ ಕಟ್ಟಿಕೊಂಡು, ರಕ್ತವರ್ಣದ ನಾರಿನ ಶಾಲನ್ನು ಹೊದ್ದು ರಾಜಸನ್ನಿಧಿಯಿಂದ ಹೊರಟನು. ಶೂಷನ್ ನಗರದಲ್ಲಿ ಹರ್ಷೋದ್ಗಾರ ಮೊಳಗಿತು.


ಅರಸನ ಹೆಸರಿನಲ್ಲಿ ಬರೆಯಲಾದ ಈ ಪತ್ರಗಳಿಗೆ ಮೊರ್ದೆಕೈ ರಾಜಮುದ್ರೆಯನ್ನು ಒತ್ತಿ, ಅರಮನೆಯ ಅಶ್ವಾಲಯಗಳಲ್ಲಿ ಹುಟ್ಟಿ ಬೆಳೆದ ಸವಾರಿ ಕುದುರೆಗಳನ್ನೇರಿ ಹೊರಟ ಅಂಚೆಯವರ ಮುಖಾಂತರ ಕಳುಹಿಸಿದನು.


ನಿನ್ನ ಹಾಯಿ ನಿನಗೆ ಧ್ವಜವಾಗಲೆಂದೆ ಮಾಡಿಹರು ಈಜಿಪ್ಟಿನ ಕಸೂತಿಯ ನಾರುಮಡಿಯಿಂದ. ನಿನ್ನ ಮೇಲ್ಕಟ್ಟು ಚಿತ್ರಿತವಾಗಿದೆ ಎಲೀಷ ಕರಾವಳಿಯ ಊದಾ ಕಡುಗೆಂಪುಗಳಿಂದ.


ಎಷ್ಟು ಅಂದವಾಗಿವೆ ನಿನ್ನ ಕೆನ್ನೆಗಳು ಕಿವಿಯೋಲೆಗಳಿಂದ! ನಿನ್ನ ಕೊರಳು ಕಂಠಹಾರಗಳಿಂದ!


ದುಪ್ಪಟಿಗಳನ್ನು ನೇಯ್ದು ಮಾರಾಟ ಮಾಡುತ್ತಾಳೆ; ನಡುಕಟ್ಟುಗಳನ್ನು ಮಾಡಿ ವರ್ತಕರಿಗೆ ವಿಕ್ರಯಿಸುತ್ತಾಳೆ.


ತನಗೆ ಬೇಕಾದ ರತ್ನಗಂಬಳಿಯನ್ನು ತಾನೆ ನೇಯ್ದಿದ್ದಾಳೆ; ಆಕೆಯ ಉಡುಪೋ ನಾರುಮಡಿ, ರಕ್ತಾಂಬರ.


ಅರಸನ ಹೆಸರಿನಲ್ಲಿ ಬರೆಯಲಾದ ಹಾಗು ರಾಜಮುದ್ರೆಯನ್ನು ಹೊಂದಿರುವ ಲೇಖನವನ್ನು ಯಾರೂ ರದ್ದುಮಾಡಲಾಗದು. ಆದ್ದರಿಂದ ಯೆಹೂದ್ಯರ ವಿಷಯದಲ್ಲಿ ನಿಮಗೆ ಸರಿತೋರಿದಂತೆ ಅರಸನ ಹೆಸರಿನಲ್ಲಿ ನೀವೂ ಪತ್ರ ಬರೆಯಿಸಿ, ಅದಕ್ಕೆ ರಾಜಮುದ್ರೆಯನ್ನು ಹಾಕಿರಿ,” ಎಂದು ಹೇಳಿದನು.


ಮೊದಲನೇ ತಿಂಗಳ ಹದಿಮೂರನೆಯ ದಿನ ರಾಜಲೇಖಕರನ್ನು ಕರೆಸಲಾಯಿತು. ಇವರು ಹಾಮಾನನ ಆಜ್ಞಾನುಸಾರ ಉಪರಾಜರಿಗೂ ಆಯಾ ಸಂಸ್ಥಾನಾಧಿಕಾರಿಗಳಿಗೂ ಆಯಾ ಜನಾಂಗಗಳ ಅಧಿಪತಿಗಳಿಗೂ ಪತ್ರಗಳನ್ನು ಅವರವರ ಸ್ವದೇಶಿ ಲಿಪಿಗಳಲ್ಲೂ ಭಾಷೆಗಳಲ್ಲೂ ಬರೆದರು. ಅರಸ ಅಹಷ್ವೇರೋಷನ ಹೆಸರಿನಲ್ಲೇ ಲಿಖಿತವಾದ ಈ ಪತ್ರಗಳು ಅಧಿಕೃತ ರಾಜಮುದ್ರೆಯನ್ನು ಹೊಂದಿದ್ದವು.


ತಂದೆಯಾದರೋ ಆಳುಗಳನ್ನು ಕರೆದು, 'ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ;


ಅವು ನಿನ್ನ ತಲೆಗೆ ಸುಂದರ ಕಿರೀಟ, ನಿನ್ನ ಕೊರಳಿಗೆ ಕಂಠಾಭರಣ.


ಯೆಹೂದ್ಯನಾದ ಮೊರ್ದೆಕೈಯಾದರೋ ಅರಸ ಅಹಷ್ವೇರೋಷನಿಗೆ ದ್ವಿತೀಯಸ್ಥಾನದವನೂ ಯೆಹೂದ್ಯರಲ್ಲಿ ಸನ್ಮಾನಿತನೂ ತನ್ನ ಬಂಧುಬಳಗದವರಲ್ಲಿ ಪ್ರೀತಿಪಾತ್ರನೂ ಸ್ವಜನರ ಹಿತಚಿಂತಕನೂ ಸ್ವಕುಲದವರೆಲ್ಲರಿಗೆ ಶಾಂತಿದೂತನೂ ಆಗಿದ್ದನು.


“ಏನು ಒತ್ತೆಯಿಡಬೇಕು?” ಎಂದು ಅವನು ಕೇಳಲು ಆಕೆ, “ನಿನ್ನ ಮುದ್ರೆ ಉಂಗುರ, ಅದರ ದಾರ ಮತ್ತು ನಿನ್ನ ಕೈಕೋಲು, ಈ ಮೂರನ್ನೂ ಇಡು,” ಎಂದಳು. ಅವನು ಅವುಗಳನ್ನು ಕೊಟ್ಟು ಆಕೆಯನ್ನು ಸಂಭೋಗಿಸಿದನು. ಆಕೆ ಅವನಿಗೆ ಗರ್ಭವತಿ ಆದಳು.


ತನಗಿದ್ದ ಎರಡನೆಯ ರಥದಲ್ಲಿ ಕುಳ್ಳಿರಿಸಿ ಅವನ ಮುಂದೆ, “ಈತನಿಗೆ ಅಡ್ಡಬೀಳಿ,” ಎಂದು ಪ್ರಕಟನೆ ಮಾಡಿಸಿದನು. ಹೀಗೆ ಅವನನ್ನು ಈಜಿಪ್ಟ್ ದೇಶಕ್ಕೆ ಮುಖ್ಯಮಂತ್ರಿಯನ್ನಾಗಿ ನೇಮಿಸಿದನು.


ಇದಲ್ಲದೆ ತನ್ನ ಮೈಮೇಲಿದ್ದ ನಿಲುವಂಗಿಯನ್ನು, ಯುದ್ಧವಸ್ತ್ರಗಳನ್ನು ಹಾಗು ಕತ್ತಿ, ಬಿಲ್ಲು, ನಡುಕಟ್ಟುಗಳನ್ನು ತೆಗೆದು ದಾವೀದನಿಗೆ ಕೊಟ್ಟನು.


ಈ ಕಾರಣ ಗರ್ವವೇ ಅವರಿಗೆ ಕಂಠಮಾಲೆ I ಹಿಂಸಾಚಾರವೇ ಅವರಿಗೆ ಬಟ್ಟೆಬರೆ II


ನನ್ನ ಪ್ರಿಯಳೇ, ನನ್ನ ವಧುವೇ, ನನ್ನ ಹೃದಯವನ್ನು ನೀನು ಅಪಹರಿಸಿರುವೆ ಒಂದೇ ಕಿರುನೋಟದಿಂದ, ನನ್ನ ಹೃದಯವನ್ನು ವಶಪಡಿಸಿಕೊಂಡಿರುವೆ ನಿನ್ನ ಕಂಠಹಾರದ ಒಂದೇ ರತ್ನದಿಂದ.


ಯೆಹೋಯಾಕೀಮನನು ಸೆರೆಯ ಬಟ್ಟೆಗಳನ್ನು ತೆಗೆದುಹಾಕಿ, ಜೀವದಿಂದ ಇರುವವರೆಗೂ ಅರಸನ ಪಂಕ್ತಿಯಲ್ಲೇ ಊಟಮಾಡುತ್ತಿದ್ದನು.


ನವಿರು ಜಾಲರಿ, ನಾರುಮಡಿ, ಮುಡಿ ಮುಕುಟ, ಮೇಲ್ವಸ್ತ್ರ ಈ ಸೊಗಸು ಭೂಷಣಗಳನ್ನೆಲ್ಲಾ ತೆಗೆದುಹಾಕುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು