ಆದಿಕಾಂಡ 40:20 - ಕನ್ನಡ ಸತ್ಯವೇದವು C.L. Bible (BSI)20 ಮೂರನೆಯ ದಿನ ಫರೋಹನು ಹುಟ್ಟಿದ ಹಬ್ಬದಿನವಾಗಿತ್ತು. ಅವನು ತನ್ನ ಪರಿವಾರದವರಿಗೆಲ್ಲ ಔತಣವನ್ನು ಏರ್ಪಡಿಸಿದ್ದ. ಮುಖ್ಯ ಪಾನಸೇವಕನನ್ನೂ ಮುಖ್ಯ ಅಡಿಗೆಭಟ್ಟನನ್ನೂ ಬಿಡಿಸಿ ಬರಮಾಡಿದ, ತನ್ನ ಪರಿವಾರದವರ ಮಧ್ಯದಲ್ಲೆ ಅವರ ತಲೆಯನ್ನು ಎತ್ತಿಸಿದ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಮೂರನೆಯ ದಿನದಲ್ಲಿ ಫರೋಹನ ಜನ್ಮ ದಿನವಾದುದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯಪಾನದಾಯಕನನ್ನೂ ಮತ್ತು ಮುಖ್ಯ ಅಡಿಗೆಭಟ್ಟನನ್ನು ಬಿಡಿಸಿ ಸೇವಕರ ಮಧ್ಯದಲ್ಲಿ ನಿಲ್ಲಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಮೂರನೆಯ ದಿನದಲ್ಲಿ ಫರೋಹನ ಜನ್ಮದಿನವಾದ್ದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯ ಪಾನದಾಯಕನನ್ನೂ ಮುಖ್ಯಭಕ್ಷ್ಯಕಾರನನ್ನೂ ಬಿಡಿಸಿ ಸೇವಕರ ಮಧ್ಯದಲ್ಲಿ ನಿಲ್ಲಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ಮೂರನೆಯ ದಿನ ಬಂದಿತು. ಅದು ಫರೋಹನ ಜನ್ಮದಿನವಾಗಿತ್ತು. ಫರೋಹನು ತನ್ನ ಎಲ್ಲಾ ಸೇವಕರಿಗೆ ಔತಣಕೂಟವನ್ನು ಏರ್ಪಡಿಸಿದನು. ಔತಣಕೂಟದಲ್ಲಿ ಫರೋಹನು ಭಕ್ಷ್ಯಗಾರನನ್ನೂ ಮತ್ತು ಪಾನದಾಯಕನನ್ನೂ ಸೆರೆಮನೆಯಿಂದ ಬಿಡುಗಡೆ ಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಮೂರನೆಯ ದಿನದಲ್ಲಿ ಫರೋಹನ ಜನ್ಮದಿನವಾಗಿದ್ದರಿಂದ ಅವನು ತನ್ನ ಸೇವಕರೆಲ್ಲರಿಗೂ ಔತಣವನ್ನು ಮಾಡಿಸಿ, ಮುಖ್ಯ ಪಾನದಾಯಕನನ್ನು ಮತ್ತು ಮುಖ್ಯ ರೊಟ್ಟಿಗಾರನನ್ನು ತನ್ನ ಅಧಿಕಾರಿಗಳ ಮುಂದೆ ನಿಲ್ಲಿಸಿದನು. ಅಧ್ಯಾಯವನ್ನು ನೋಡಿ |