Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 39:7 - ಕನ್ನಡ ಸತ್ಯವೇದವು C.L. Bible (BSI)

7 ಜೋಸೆಫನದು ಸೊಗಸಾದ ಮೈಕಟ್ಟು, ಸುಂದರವಾದ ರೂಪು. ಹೀಗಿರಲು ಅವನ ದಣಿಯ ಪತ್ನಿ ಅವನ ಮೇಲೆ ಕಣ್ಣುಹಾಕಿದಳು. "ನನ್ನೊಡನೆ ಹಾಸಿಗೆಗೆ ಬಾ,” ಎಂದು ಕರೆದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಹೀಗಿರುವಲ್ಲಿ ಯೋಸೇಫನ ದಣಿಯ ಹೆಂಡತಿಯು ಅವನನ್ನು ಮೋಹಿಸಿ “ನನ್ನ ಸಂಗಡ ಸಂಗಮಿಸಲು ಬಾ” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಹೀಗಿರುವಲ್ಲಿ ಅವನ ದಣಿಯ ಹೆಂಡತಿಯು ಅವನ ಮೇಲೆ ಕಣ್ಣು ಹಾಕಿ ತನ್ನೊಡನೆ ಸಂಗಮಕ್ಕೆ ಕರೆದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಸ್ವಲ್ಪ ಕಾಲದನಂತರ, ಯೋಸೇಫನ ಒಡೆಯನ ಹೆಂಡತಿಯು ಯೋಸೇಫನ ಮೇಲೆ ಆಸೆಪಟ್ಟಳು. ಒಂದು ದಿನ ಆಕೆ ಅವನಿಗೆ, “ನನ್ನೊಂದಿಗೆ ಮಲಗಿಕೊ” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಸ್ವಲ್ಪ ಸಮಯದ ನಂತರ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣು ಹಾಕಿ, “ನನ್ನ ಸಂಗಡ ಮಲಗು,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 39:7
19 ತಿಳಿವುಗಳ ಹೋಲಿಕೆ  

ಕೂಡಲೇ ಅವನು ಆಕೆಯನ್ನು ಹಿಡಿದು, “ನನ್ನ ತಂಗೀ, ಬಂದು ನನ್ನ ಸಂಗಡ ಮಲಗಿಕೋ,” ಎಂದನು.


ಇವರದು ಬರೀ ಕಾಮುಕ ಕಣ್ಣು; ಇವರು ಎಂದಿಗೂ ಇಂಗದ ಪಾಪಬಯಕೆಯುಳ್ಳವರು; ದುರ್ಬಲರನ್ನು ವಂಚಿಸಿ ವಶಪಡಿಸಿಕೊಳ್ಳುವುದೇ ಇವರ ಹವ್ಯಾಸ; ಲೋಭದಲ್ಲೇ ಪಳಗಿದ ಮನಸ್ಸುಳ್ಳವರು ಹಾಗೂ ಶಾಪಗ್ರಸ್ತ ಸಂತಾನದವರು ಇವರು!


ನಿನ್ನ ಸೂಳೆತನಕ್ಕೂ ಇತರ ವೇಶ್ಯೆಯರ ಸೂಳೆತನಕ್ಕೂ ವ್ಯತ್ಯಾಸವುಂಟು; ನಿನ್ನಲ್ಲಿ ವ್ಯಭಿಚಾರಮಾಡಲಿಕ್ಕೆ ಯಾರೂ ನಿನ್ನ ಹಿಂದೆ ಬಾರರು; ನೀನೇ ಕೊಡುತ್ತೀಯೇ ಹೊರತು ನಿನಗೇನೂ ಸಿಕ್ಕದು; ನಿನ್ನ ದುರಾಚಾರ ಹೇಳತೀರದು!”


ಲೋಕಸಂಬಂಧವಾದ ದೈಹಿಕ ದುರಿಚ್ಛೆ, ಕಣ್ಣಿನ ಕಾಮುಕತೆ, ಐಶ್ವರ್ಯದ ಅಹಂಭಾವ - ಇಂಥವು ಪಿತನಿಂದ ಬಂದುವಲ್ಲ, ಲೋಕದಿಂದಲೇ ಬಂದುವು.


ಆದರೆ ನಾನು ಹೇಳುತ್ತೇನೆ, ಕೇಳಿ; ಪರಸ್ತ್ರೀಯನ್ನು ಕಾಮದೃಷ್ಟಿಯಿಂದ ನೋಡುವ ಪ್ರತಿಯೊಬ್ಬನೂ ತನ್ನ ಹೃದಯದಲ್ಲಿ ಆಕೆಯೊಡನೆ ಆಗಲೇ ವ್ಯಭಿಚಾರ ಮಾಡಿದವನೇ ಆಗುತ್ತಾನೆ.


ನೀನು ಸೂಳೆತನಮಾಡುವ ಪತಿವ್ರತೆ; ಗಂಡನಿಗೆ ಬದಲಾಗಿ ಅನ್ಯರನ್ನು ಸೇರುವ ಜಾರಿಣಿ!


“ಕನ್ಯೆಯನು (ಕಾಮದೃಷ್ಟಿಯಿಂದ) ನೋಡೆನೆಂದು ಮಾಡಿಕೊಂಡಿರುವೆ ನನ್ನ ಕಣ್ಣುಗಳೊಡನೆ ಒಪ್ಪಂದವನು.


ಒಂದೊಂದು ಬೀದಿಯ ಕೊನೆಯಲ್ಲಿ ನೀನು ಜಗಲಿಯನ್ನು ಕಟ್ಟಿಕೊಂಡು, ನಿನ್ನ ಸೌಂದರ್ಯವನ್ನು ನೀಚಕೆಲಸಕ್ಕೆ ಒಪ್ಪಿಸಿ, ಹಾದುಹೋಗುವವರೆಲ್ಲರನ್ನೂ ಸೇರಿ ಸೂಳೆತನವನ್ನು ಅಧಿಕಗೊಳಿಸಿರುವೆ.


ಆದಕಾರಣವೇ ಹದಮಳೆಗೆ ಅಡ್ಡಿಯಾಯಿತು. ವಸಂತಕಾಲದ ಮಳೆ ಬರದೆಹೋಯಿತು. ಇನ್ನೂ ನೀನು ವೇಶ್ಯೆ ಮುಖದವಳು, ಲಜ್ಜೆಗೆಟ್ಟವಳು !


ಅವನನ್ನು ಬಿಗಿಹಿಡಿದು ಮುದ್ದಾಡುತ್ತಾಳೆ. ಲಜ್ಜೆಗೆಟ್ಟ ಮೋರೆಯುಳ್ಳ ಅವಳು ಹೀಗೆನ್ನುತ್ತಾಳೆ:


ನಿನ್ನ ಪುರುಷತ್ವ ಪರಾಧೀನವಾದೀತು, ಎಚ್ಚರಿಕೆ! ನಿನ್ನ ಆಯುಷ್ಯ ಕ್ರೂರಿಗಳ ವಶವಾದೀತು, ಜೋಕೆ!


ವಿವೇಕವು ನಿನ್ನನ್ನು ತಪ್ಪಿಸುವುದು ಜಾರಳಿಂದ, ಸವಿಮಾತಾಡುವ ಆ ಪರಸ್ತ್ರೀಯಳಿಂದ.


ವ್ಯರ್ಥವಾದವುಗಳು ನಾಟದಿರಲಿ ಕಣ್ಗೆ I ಚೇತನ ನೀಡು ನಿನ್ನ ಮಾರ್ಗದಲಿ ನನಗೆ II


ಈ ಮನುಷ್ಯಪುತ್ರಿಯರ ಚೆಲುವನ್ನು ಕಂಡು ದೇವಪುತ್ರರು ತಮಗೆ ಇಷ್ಟಬಂದವರನ್ನೆಲ್ಲ ಮದುವೆಯಾದರು.


ಮಗನೇ, ಪಾಪಿಗಳ ಪ್ರೇರಣೆಗೆ ಒಪ್ಪಿಗೆ ಕೊಡಲೇಬೇಡ.


ವೇಶ್ಯೆಯನ್ನು ಕೊಂಡುಕೊಳ್ಳಬಹುದು ತುಂಡುರೊಟ್ಟಿಗೆ, ವ್ಯಭಿಚಾರಿಣಿಯೇ ಬೇಟೆಮಾಡುವಳು ನಿನ್ನ ಸಿರಿಪ್ರಾಣಕ್ಕೆ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು