Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 39:23 - ಕನ್ನಡ ಸತ್ಯವೇದವು C.L. Bible (BSI)

23 ಸರ್ವೇಶ್ವರ ಜೋಸೆಫನೊಂದಿಗೆ ಇದ್ದರು. ಅವನು ಕೈಗೊಂಡ ಕೆಲಸವೆಲ್ಲ ಜಯವಾಗುವಂತೆ ಮಾಡುತ್ತಿದ್ದರು. ಈ ಕಾರಣ ಸೆರೆಮನೆಯ ಯಜಮಾನ ಅಲ್ಲಿಯ ಎಲ್ಲ ವಿಷಯದಲ್ಲೂ ನಿಶ್ಚಿಂತನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಯೆಹೋವನು ಅವನ ಸಂಗಡ ಇದ್ದು ಅವನು ನಡಿಸಿದ್ದೆಲ್ಲವನ್ನು ಸಫಲಗೊಳಿಸಿದ್ದರಿಂದ ಅವನ ವಶಕ್ಕೆ ಒಪ್ಪಿಸಿದ್ದ ಯಾವ ವಿಷಯದ ಕುರಿತಾಗಿಯೂ ಸೆರೆಮನೆಯ ಯಜಮಾನನು ಯೋಚಿಸದೆ ನಿಶ್ಚಿಂತನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಯೆಹೋವನು ಅವನ ಸಂಗಡ ಇದ್ದು ಅವನು ನಡಿಸಿದ್ದೆಲ್ಲವನ್ನು ಕೈಗೂಡಿಸಿದ್ದರಿಂದ ಅವನ ವಶದಲ್ಲಿದ್ದ ಯಾವದೊಂದರ ವಿಷಯದಲ್ಲಿಯೂ ಸೆರೆಮನೆಯ ಯಜಮಾನನು ಏನೂ ಚಿಂತಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಯೆಹೋವನು ಯೋಸೇಫನ ಸಂಗಡವಿದ್ದು ಅವನ ಎಲ್ಲಾ ಕೆಲಸಕಾರ್ಯಗಳನ್ನು ಯಶಸ್ವಿಗೊಳಿಸುತ್ತಿದ್ದದ್ದರಿಂದ ಮುಖ್ಯಾಧಿಕಾರಿಯು ಎಲ್ಲಾ ವಿಷಯಗಳನ್ನು ಯೋಸೇಫನಿಗೆ ವಹಿಸಿ ನಿಶ್ಚಿಂತೆಯಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಯೆಹೋವ ದೇವರು ಅವನ ಸಂಗಡ ಇದ್ದುದರಿಂದಲೂ ಅವನು ಮಾಡುವುದನ್ನು ಯೆಹೋವ ದೇವರು ಅಭಿವೃದ್ಧಿಮಾಡಿದ್ದರಿಂದಲೂ ಸೆರೆಯ ಯಜಮಾನನು ಅವನ ಕೈಗೆ ಒಪ್ಪಿಸಿದ ಯಾವುದಕ್ಕೂ ಚಿಂತೆ ಮಾಡದೆ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 39:23
10 ತಿಳಿವುಗಳ ಹೋಲಿಕೆ  

ನಾನೇ ಇರುವೆ ನಿನ್ನ ಸಂಗಡ ನೀ ಜಲರಾಶಿಯನ್ನು ದಾಟುವಾಗ ಮುಳುಗಿಸದು ನದಿ ನೀ ಅದನ್ನು ಹಾದುಹೋಗುವಾಗ ಸುಡದು ಬೆಂಕಿ, ದಹಿಸದು ಜ್ವಾಲೆ, ಅದರ ಮಧ್ಯೆ ನೀ ನಡೆಯುವಾಗ.


ನದಿಯ ಬದಿಯಲೇ ಬೆಳೆದಿಹ ಮರದಂತೆ I ಸಕಾಲಕೆ ಫಲವೀವ ವೃಕ್ಷದಂತೆ I ಎಲೆಬಾಡದೆ ಪಸಿರಿರುವ ತರುವಂತೆ I ಸಿಗುವುದು ಅವನ ಕಾರ್ಯಗಳಿಗೆ ಸಫಲತೆ II


ನನ್ನ ದೇವರು ತಮ್ಮ ದೂತನನ್ನು ಕಳಿಸಿ, ಸಿಂಹಗಳ ಬಾಯನ್ನು ಬಂಧಿಸಿದರು. ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ. ಏಕೆಂದರೆ ಆ ದೇವರ ದೃಷ್ಟಿಯಲ್ಲಿ ನಾನು ನಿರ್ಮಲನು. ರಾಜರಾದ ತಮಗೂ ನಾನು ಯಾವ ದ್ರೋಹವನ್ನೂ ಮಾಡಲಿಲ್ಲ,” ಎಂದು ಹೇಳಿದನು.


ನಿನ್ನ ಗೋತ್ರದವರೂ ಸಂತಾನದವರೂ ನನ್ನ ಸನ್ನಿಧಿಯಲ್ಲಿ ಸೇವೆಮಾಡಬಹುದು ಎಂದು ಆಜ್ಞಾಪಿಸಿದ ಇಸ್ರಯೇಲರ ದೇವರಾದ ಸರ್ವೇಶ್ವರನೆಂಬ ನಾನು ಈಗ ತಿಳಿಸುವುದನ್ನು ಕೇಳು: ಇನ್ನು ಇದೆಲ್ಲ ನನ್ನಿಂದ ದೂರ ತೊಲಗಲಿ; ನನ್ನನ್ನು ಸನ್ಮಾನಿಸುವವನನ್ನು ನಾನು ಸನ್ಮಾನಿಸುವೆನು; ನನ್ನನ್ನು ಉಪೇಕ್ಷಿಸುವವನನ್ನು ನಾನು ತಿರಸ್ಕರಿಸುವೆನು.


ಜೋಸೆಫನು ಒಪ್ಪಲಿಲ್ಲ. “ನನ್ನ ಒಡೆಯ ತನ್ನ ಆಸ್ತಿಪಾಸ್ತಿಯನ್ನೆಲ್ಲ ನನ್ನ ವಶಕ್ಕೆ ಒಪ್ಪಿಸಿದ್ದಾರೆ; ನಾನಿರುವುದರಿಂದ ಮನೆಯ ಎಲ್ಲ ವಿಷಯಗಳಲ್ಲಿ ನಿಶ್ಚಿಂತರಾಗಿದ್ದಾರೆ.


ಅವನನ್ನು ಬಂಧಿಸಿದ. ರಾಜಖೈದಿಗಳನ್ನು ಕಟ್ಟಿಹಾಕಿಸುತ್ತಿದ್ದ ಸೆರೆಮನೆಯಲ್ಲಿ ಅವನನ್ನು ಹಾಕಿಸಿದ. ಜೋಸೆಫನು ಸೆರೆಯಲ್ಲಿ ಇರಬೇಕಾಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು