Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 39:21 - ಕನ್ನಡ ಸತ್ಯವೇದವು C.L. Bible (BSI)

21 ಆದರೂ ಸರ್ವೇಶ್ವರ, ಜೋಸೆಫನ ಸಂಗಡ ಇದ್ದರು. ಅವನಿಗೆ ಅಪಾರ ಪ್ರೀತಿ ತೋರಿಸಿ, ಅವನಿಗೆ ಸೆರೆಯಜಮಾನನ ದಯೆ ದೊರಕುವಂತೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆದರೆ ಯೆಹೋವನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕರುಣೆಯನ್ನಿಟ್ಟು ಸೆರೆಮನೆಯ ಯಜಮಾನನಿಂದ ದಯೆ ದೊರಕುವಂತೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆದರೂ ಯೆಹೋವನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕೃಪೆಯನ್ನಿಟ್ಟು ಅವನಿಗೆ ಸೆರೆಯಜಮಾನನ ಬಳಿಯಲ್ಲಿ ದಯೆದೊರಕುವಂತೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಆದರೆ ಯೆಹೋವನು ಯೋಸೇಫನ ಸಂಗಡವಿದ್ದು ಕರುಣೆತೋರಿದನು. ಸ್ವಲ್ಪಕಾಲವಾದ ಮೇಲೆ ಸೆರೆಮನೆಯ ಮುಖ್ಯಾಧಿಕಾರಿಯು ಯೋಸೇಫನನ್ನು ಪ್ರೀತಿಸತೊಡಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಆದರೆ ಯೆಹೋವ ದೇವರು ಯೋಸೇಫನ ಸಂಗಡ ಇದ್ದು, ಅವನ ಮೇಲೆ ಕರುಣೆಯಿಟ್ಟು, ಸೆರೆಮನೆಯ ಯಜಮಾನನು ಅವನ ಮೇಲೆ ದಯೆ ತೋರಿಸುವಂತೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 39:21
23 ತಿಳಿವುಗಳ ಹೋಲಿಕೆ  

“ನನ್ನ ಜನರಿಗೆ ಈಜಿಪ್ಟಿನವರು ಅನುಕಂಪ ತೋರಿಸುವಂತೆ ಮಾಡುವೆನು. ಆದ್ದರಿಂದ ನೀವು ಅಲ್ಲಿಂದ ಹೊರಡುವಾಗ ಬರಿಗೈಯಲ್ಲಿ ಹೋಗಬೇಕಾಗುವುದಿಲ್ಲ.


ಹೆದರಬೇಡ, ನಾನಿದ್ದೇನೆ ನಿನ್ನೊಂದಿಗೆ ಭಯಭ್ರಾಂತನಾಗಬೇಡ, ನಾನೇ ದೇವರು ನಿನಗೆ. ಶಕ್ತಿ ನೀಡುವೆ, ಸಹಾಯಮಾಡುವೆ ನಿನಗೆ ನನ್ನ ವಿಜಯಹಸ್ತದ ಆಧಾರ ಇದೆ ನಿನಗೆ.


ಕೆಟ್ಟದ್ದನ್ನು ಮಾಡಿ ಶಿಕ್ಷೆಯನ್ನು ಅನುಭವಿಸುವುದಕ್ಕಿಂತ ದೇವರ ಚಿತ್ತವಾದರೆ, ಒಳ್ಳೆಯದನ್ನು ಮಾಡಿ ಶಿಕ್ಷೆಯನ್ನು ಅನುಭವಿಸುವುದೇ ಲೇಸು.


ಕಂಚುಕಿಯರ ನಾಯಕನು ದಾನಿಯೇಲನ ಮೇಲೆ ಕನಿಕರ ಮತ್ತು ದಯೆತೋರುವಂತೆ ದೇವರು ಅನುಗ್ರಹಿಸಿದ್ದರು.


ಇಸ್ರಯೇಲರ ಮೇಲೆ ಈಜಿಪ್ಟಿನವರಿಗೆ ದಯೆ ಹುಟ್ಟುವಂತೆ ಮಾಡಿದ್ದರು ಸರ್ವೇಶ್ವರ. ಆದ್ದರಿಂದ ಅವರು ಕೇಳಿಕೊಂಡದ್ದನ್ನು ಈಜಿಪ್ಟಿನವರು ಕೊಟ್ಟುಬಿಟ್ಟರು. ಹೀಗೆ ಇಸ್ರಯೇಲರು ಈಜಿಪ್ಟಿನವರ ಸೊತ್ತನ್ನು ಸುಲಿಗೆ ಮಾಡಿಕೊಂಡರು.


ನಾನೇ ಇರುವೆ ನಿನ್ನ ಸಂಗಡ ನೀ ಜಲರಾಶಿಯನ್ನು ದಾಟುವಾಗ ಮುಳುಗಿಸದು ನದಿ ನೀ ಅದನ್ನು ಹಾದುಹೋಗುವಾಗ ಸುಡದು ಬೆಂಕಿ, ದಹಿಸದು ಜ್ವಾಲೆ, ಅದರ ಮಧ್ಯೆ ನೀ ನಡೆಯುವಾಗ.


ಕ್ರಮೇಣ ಕೈಗೂಡಿತು ಜೋಸೆಫನು ನುಡಿದದ್ದು I ಪ್ರಭುವಿನ ವಾಣಿ ಕಂಡುಬಂದಿತು ಸತ್ಯವೆಂದು II


ಈಜಿಪ್ಟಿನವರಿಗೆ ಇಸ್ರಯೇಲರ ಮೇಲೆ ಕನಿಕರ ಉಂಟಾಗುವಂತೆ ಮಾಡಿದರು ಸರ್ವೇಶ್ವರ. ಇದಲ್ಲದೆ ಈಜಿಪ್ಟ್ ದೇಶದ ಫರೋಹನ ಪರಿವಾರದವರು ಮೋಶೆಯನ್ನು ಮಹಾಪುರುಷನೆಂದು ಭಾವಿಸಿದರು.


ಸರ್ವೇಶ್ವರ ಸ್ವಾಮಿ ಜೋಸೆಫನ ಸಂಗಡ ಇದ್ದ ಕಾರಣ, ಅವನು ಏಳಿಗೆಯಾಗಿ ತನ್ನ ಈಜಿಪ್ಟಿನ ದಣಿಯ ಮನೆಯಲ್ಲಿ ಒಬ್ಬ ಸೇವಕನಾದ.


ಆ ದಿನಗಳಲ್ಲಿ ಅಬೀಮೆಲೆಕನು ತನ್ನ ಸೇನಾಪತಿಯಾದ ಫೀಕೋಲನ ಸಮೇತ ಅಬ್ರಹಾಮನ ಬಳಿಗೆ ಬಂದು, “ನೀನು ಮಾಡುವ ಕೆಲಸಕಾರ್ಯಗಳಲ್ಲೆಲ್ಲಾ ದೇವರು ನಿನ್ನ ಸಂಗಡ ಇದ್ದಾರೆ.


ಒಬ್ಬನ ನಡತೆಯನ್ನುಸರ್ವೇಶ್ವರ ಮೆಚ್ಚಿದರೆ, ಅವನ ಶತ್ರುಗಳನ್ನು ಆತ ಮಿತ್ರರನ್ನಾಗಿಸುತ್ತಾನೆ.


ಅವರನ್ನು ಅಂಗರಕ್ಷಕರ ದಳಪತಿಯ ವಠಾರದಲ್ಲಿದ್ದ ಸೆರೆಯಲ್ಲಿ ಹಾಕಿಸಿದ್ದನು.


ನಮ್ಮನ್ನು ಪ್ರೀತಿಸಿದ ಯೇಸುಕ್ರಿಸ್ತರ ಮುಖಾಂತರ ಇವೆಲ್ಲವುಗಳಲ್ಲಿಯೂ ನಾವು ಪೂರ್ಣ ಜಯಶಾಲಿಗಳಾಗುತ್ತೇವೆ.


ನನ್ನ ದೇವರು ತಮ್ಮ ದೂತನನ್ನು ಕಳಿಸಿ, ಸಿಂಹಗಳ ಬಾಯನ್ನು ಬಂಧಿಸಿದರು. ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ. ಏಕೆಂದರೆ ಆ ದೇವರ ದೃಷ್ಟಿಯಲ್ಲಿ ನಾನು ನಿರ್ಮಲನು. ರಾಜರಾದ ತಮಗೂ ನಾನು ಯಾವ ದ್ರೋಹವನ್ನೂ ಮಾಡಲಿಲ್ಲ,” ಎಂದು ಹೇಳಿದನು.


ಪದಾಧಿಕಾರಿಗಳಿಗೆ ಶಿಕ್ಷಕನನ್ನಾಗಿಸಿದ I ಮಂತ್ರಿಗಳಿಗೆಲ್ಲ ಉಪದೇಶಕನನ್ನಾಗಿಸಿದ II


ಜೋಸೆಫನ ಸಂಗಡ ಸರ್ವೇಶ್ವರ ಇದ್ದು ಅವನು ಮಾಡುವ ಕೆಲಸವನ್ನೆಲ್ಲ ಫಲಕಾರಿಯಾಗಿ ಮಾಡುತ್ತಾರೆಂಬುದು ಅವನ ದಣಿಗೆ ತಿಳಿಯಿತು.


ಜೋಸೆಫ್ ಅವನ ಕೃಪೆಗೆ ಪಾತ್ರನಾದ. ದಣಿ ಅವನನ್ನು ತನ್ನ ಆಪ್ತಸೇವಕನನ್ನಾಗಿ ನೇಮಿಸಿಕೊಂಡ. ಅದು ಮಾತ್ರವಲ್ಲ, ತನ್ನ ಮನೆಯಲ್ಲೇ ಮೇಲ್ವಿಚಾರಕನನ್ನಾಗಿ ಮಾಡಿ, ತನ್ನ ಆಸ್ತಿಪಾಸ್ತಿಯನ್ನೆಲ್ಲ ಅವನ ವಶಕ್ಕೆ ಒಪ್ಪಿಸಿದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು