Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 37:10 - ಕನ್ನಡ ಸತ್ಯವೇದವು C.L. Bible (BSI)

10 ಈ ಕನಸನ್ನು ಅಣ್ಣಂದಿರಿಗೆ ಮಾತ್ರವಲ್ಲ, ತಂದೆಗೂ ತಿಳಿಸಿದ. ತಂದೆ ಅವನಿಗೆ, “ಇದೆಂಥ ಕನಸು, ನೀನು ಕಂಡದ್ದು! ನಾನು, ನಿನ್ನ ತಾಯಿ, ಹಾಗು ಅಣ್ಣತಮ್ಮಂದಿರು ನಿನಗೆ ಅಡ್ಡಬೀಳಲು ಬರುತ್ತೇವೋ” ಎಂದು ಹೇಳಿ ಅವನನ್ನು ಗದರಿಸಿದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಅವನು ಈ ಕನಸನ್ನು ತನ್ನ ತಂದೆಗೂ ಮತ್ತು ಅಣ್ಣಂದಿರಿಗೂ ತಿಳಿಸಿದಾಗ ತಂದೆಯು ಅವನಿಗೆ, “ಇದು ಎಂಥಾ ಕನಸು ನೀನು ಕಂಡದ್ದು? ನಾನೂ ನಿನ್ನ ತಾಯಿಯೂ, ಅಣ್ಣತಮ್ಮಂದಿರೂ ನಿನ್ನ ಮುಂದೆ ಅಡ್ಡ ಬೀಳುವುದಕ್ಕೆ ಬಂದೆವೋ?” ಎಂದು ಹೇಳಿ ಗದರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಅವನು ಈ ಕನಸನ್ನು ತನ್ನ ತಂದೆಗೂ ಅಣ್ಣಂದಿರಿಗೂ ತಿಳಿಸಿದಾಗ ತಂದೆಯು ಅವನಿಗೆ - ಇದು ಎಂಥಾ ಕನಸು ನೀನು ಕಂಡದ್ದು? ನಾನೂ ನಿನ್ನ ತಾಯಿಯೂ ಅಣ್ಣತಮ್ಮಂದಿರೂ ನಿನ್ನ ಮುಂದೆ ಅಡ್ಡಬೀಳುವದಕ್ಕೆ ಬಂದೇವೋ ಎಂದು ಹೇಳಿ ಗದರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಯೋಸೇಫನು ತನ್ನ ತಂದೆಗೂ ಸಹ ಈ ಕನಸಿನ ಬಗ್ಗೆ ತಿಳಿಸಿದನು. ಆದರೆ ಅವನ ತಂದೆ ಅವನನ್ನು ಗದರಿಸಿ, “ಇದೆಂಥಾ ಕನಸು? ನಾನೂ ನಿನ್ನ ತಾಯಿಯೂ ಮತ್ತು ನಿನ್ನ ಸಹೋದರರೂ ನಿನಗೆ ಅಡ್ಡಬೀಳುತ್ತೇವೆಂದು ನಂಬುತ್ತೀಯೋ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಅವನು ತನ್ನ ತಂದೆಗೂ ತನ್ನ ಸಹೋದರರಿಗೂ ತಿಳಿಸಿದಾಗ, ಅವನ ತಂದೆಯು ಅವನನ್ನು ಗದರಿಸಿ, “ನೀನು ಕಂಡ ಈ ಕನಸು ಏನು? ನಾನು, ನಿನ್ನ ತಾಯಿ, ನಿನ್ನ ಸಹೋದರರೂ ನಿಜವಾಗಿ ನಿನ್ನ ಮುಂದೆ ಅಡ್ಡ ಬೀಳುವುದಕ್ಕೆ ಬರಬೇಕೋ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 37:10
8 ತಿಳಿವುಗಳ ಹೋಲಿಕೆ  

ಸೇವೆಗೈಯಲಿ ನಿನಗೆ ಹೊರನಾಡುಗಳು ಅಡ್ಡಬೀಳಲಿ ನಿನಗೆ ಹೊರಜನಾಂಗಗಳು ಒಡೆಯನಾಗು ಸೋದರರಿಗೆ ಅಡ್ಡಬೀಳಲಿ ತಾಯಕುಡಿ ನಿನಗೆ ಶಾಪವಿರಲಿ ನಿನ್ನನ್ನು ಶಪಿಸುವವರಿಗೆ ಆಶೀರ್ವಾದವು ನಿನ್ನನ್ನು ಹರಸುವವರಿಗೆ!”


ನಿನ್ನ ತುಳಿದವರ ಸಂತಾನ ಬರುವುದು ನಿನ್ನ ಬಳಿಗೆ ತಲೆಬಾಗಿ ನಿನ್ನ ಬೇಡವೆಂದವರು ಬೀಳುವರು ಕಾಲಿಗೆ ಸಾಷ್ಟಾಂಗವಾಗಿ. ಹೊಗಳುವರು ‘ನೀನೇ ಸರ್ವೇಶ್ವರನ ನಗರವೆಂದು, ಇಸ್ರಯೇಲಿನ ಪರಮಪಾವನ ಸಿಯೋನ್’ ಎಂದು.


ಈ ಕನಸಿನಲ್ಲಿ ನಾವು ಹೊಲದಲ್ಲಿ ಬೆಳೆಕೊಯ್ದು ಕಂತೆಗಳನ್ನು ಕಟ್ಟುತ್ತಾ ಇದ್ದೆವು. ಆಗ ನನ್ನ ಕಂತೆ ಎದ್ದುನಿಂತಿತು. ನಿಮ್ಮ ಕಂತೆಗಳು ಸುತ್ತಲೂ ಬಂದು ನನ್ನ ಕಂತೆಗೆ ಅಡ್ಡಬಿದ್ದುದನ್ನು ಕಂಡೆ,” ಎಂದು ಹೇಳಿದ.


ಜೋಸೆಫನಿಗೆ ಇನ್ನೊಂದು ಕನಸು ಬಿತ್ತು. ಅದನ್ನೂ ಅವನು ಅಣ್ಣಂದಿರಿಗೆ ತಿಳಿಸಿದ: “ನಾನು ಇನ್ನೊಂದು ಕನಸು ಕಂಡಿದ್ದೇನೆ. ಅದರಲ್ಲಿ ಸೂರ್ಯ, ಚಂದ್ರ, ಹಾಗೂ ನಕ್ಷತ್ರಗಳೂ ನನಗೆ ಅಡ್ಡಬಿದ್ದವು,” ಎಂದು ಹೇಳಿದ.


ಜೋಸೆಫನು ಮನೆಗೆ ಬಂದಾಗ ಅವರು ಅವನಿಗೆ ಕಾಣಿಕೆಯನ್ನು ತಂದುಕೊಟ್ಟು, ಅವನ ಮುಂದೆ ನೆಲದವರೆಗೂ ಬಾಗಿ ನಮಸ್ಕರಿಸಿದರು.


ಅವರು ಮತ್ತೆ ನೆಲದವರೆಗೆ ಬಾಗಿ ನಮಸ್ಕಾರ ಮಾಡಿ, “ನಿಮ್ಮ ಸೇವಕರಾದ ನಮ್ಮ ತಂದೆ ಇಂದಿಗೂ ಕ್ಷೇಮದಿಂದ ಇದ್ದಾರೆ,” ಎಂದರು.


ಯೆಹೂದನು ಮತ್ತು ಅವನ ಅಣ್ಣತಮ್ಮಂದಿರು ಜೋಸೆಫನ ಮನೆಗೆ ಹಿಂದಿರುಗಿದಾಗ ಜೋಸೆಫನು ಇನ್ನೂ ಮನೆಯಲ್ಲೇ ಇದ್ದನು. ಅವರು ಅವನಿಗೆ ಅಡ್ಡಬಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು