Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 36:6 - ಕನ್ನಡ ಸತ್ಯವೇದವು C.L. Bible (BSI)

6 ಏಸಾವನು ತನ್ನ ಹೆಂಡತಿಯರನ್ನೂ ಗಂಡುಹೆಣ್ಣು ಮಕ್ಕಳನ್ನೂ ತನ್ನ ಮನೆಗೆ ಸೇರಿದ ಎಲ್ಲರನ್ನೂ, ತನಗಿದ್ದ ಪಶುಪ್ರಾಣಿಗಳನ್ನೂ ಕಾನಾನ್ ನಾಡಿನಲ್ಲಿ ತಾನು ಸಂಪಾದಿಸಿದ್ದ ಆಸ್ತಿಪಾಸ್ತಿ ಎಲ್ಲವನ್ನೂ ತೆಗೆದುಕೊಂಡು ತನ್ನ ತಮ್ಮ ಯಕೋಬನ ಬಳಿಯಿಂದ ಹೊರನಾಡಿಗೆ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ತರುವಾಯ ಏಸಾವನು ತನ್ನ ಹೆಂಡತಿಯರನ್ನೂ, ಗಂಡುಹೆಣ್ಣು ಮಕ್ಕಳನ್ನೂ, ತನ್ನ ಮನೆಗೆ ಸೇರಿದ ಸೇವಕರೆಲ್ಲರನ್ನೂ, ತನಗಿದ್ದ ಎಲ್ಲಾ ಪಶುಪ್ರಾಣಿಗಳ ಹಿಂಡುಗಳನ್ನೂ ಕಾನಾನ್ ದೇಶದಲ್ಲಿ ಸಂಪಾದಿಸಿದ್ದ ಆಸ್ತಿಯೆಲ್ಲವನ್ನೂ ತೆಗೆದುಕೊಂಡು ತನ್ನ ತಮ್ಮನಾದ ಯಾಕೋಬನ ಬಳಿಯಿಂದ ಬೇರೆ ದೇಶಕ್ಕೆ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಏಸಾವನು ತನ್ನ ಹೆಂಡರನ್ನೂ ಗಂಡು ಹೆಣ್ಣುಮಕ್ಕಳನ್ನೂ ತನ್ನ ಮನೆಗೆ ಸೇರಿದ ಸೇವಕರೆಲ್ಲರನ್ನೂ ತನಗಿದ್ದ ಎಲ್ಲಾ ಪಶುಗಳ ಹಿಂಡುಗಳನ್ನೂ ತಾನು ಕಾನಾನ್ ದೇಶದಲ್ಲಿ ಸಂಪಾದಿಸಿದ್ದ ಆಸ್ತಿಯೆಲ್ಲವನ್ನೂ ತೆಗೆದುಕೊಂಡು ತನ್ನ ತಮ್ಮನಾದ ಯಾಕೋಬನ ಬಳಿಯಿಂದ ಪರದೇಶಕ್ಕೆ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6-8 ಯಾಕೋಬ ಮತ್ತು ಏಸಾವರ ಕುಟುಂಬಗಳು ಬಹಳ ವೃದ್ಧಿಯಾದ ಕಾರಣ ಕಾನಾನ್ ದೇಶವು ಅವರಿಗೆ ಸಾಕಾಗಲಿಲ್ಲ. ಆದ್ದರಿಂದ ಏಸಾವನು ತನ್ನ ತಮ್ಮನಾದ ಯಾಕೋಬನಿಂದ ದೂರ ಹೋದನು. ಏಸಾವನು ತನ್ನ ಹೆಂಡತಿಯರನ್ನೂ ಗಂಡುಹೆಣ್ಣುಮಕ್ಕಳನ್ನೂ ಎಲ್ಲಾ ಸೇವಕರನ್ನೂ ದನಗಳನ್ನೂ ಮತ್ತು ಇತರ ಪಶುಗಳನ್ನೂ ತನಗೆ ಕಾನಾನಿನಲ್ಲಿದ್ದ ಪ್ರತಿಯೊಂದು ಆಸ್ತಿಯನ್ನೂ ತೆಗೆದುಕೊಂಡು ಸೇಯೀರ್ ಬೆಟ್ಟದ ಸೀಮೆಗೆ ಹೋದನು. (ಏಸಾವನಿಗೆ ಎದೋಮ್ ಎಂಬ ಹೆಸರೂ ಇದೆ. ಎದೋಮ್ ಎಂಬುದು ಸೇಯೀರ್ ದೇಶದ ಮತ್ತೊಂದು ಹೆಸರು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ತರುವಾಯ ಏಸಾವನು ತನ್ನ ಹೆಂಡತಿಯರನ್ನೂ ಪುತ್ರಪುತ್ರಿಯರನ್ನೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರನ್ನೂ ತನ್ನ ಹಿಂಡುಗಳನ್ನೂ ತನ್ನ ಎಲ್ಲಾ ಪಶುಗಳನ್ನೂ ಕಾನಾನ್ ದೇಶದಲ್ಲಿ ತಾನು ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನೂ ತೆಗೆದುಕೊಂಡು, ತನ್ನ ಸಹೋದರನಾದ ಯಾಕೋಬನ ಬಳಿಯಿಂದ ಸ್ವಲ್ಪ ದೂರವಿದ್ದ ಮತ್ತೊಂದು ಊರಿಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 36:6
10 ತಿಳಿವುಗಳ ಹೋಲಿಕೆ  

ಬಳಿಕ ಯಕೋಬನು ಎದೋಮ್ಯರ ನಾಡಿನ ‘ಸೇಯೀರ್’ ಎಂಬಲ್ಲಿ ವಾಸವಾಗಿದ್ದ ತನ್ನ ಅಣ್ಣ ಏಸಾವನ ಬಳಿಗೆ ಮುಂದಾಳುಗಳನ್ನು ಕಳಿಸಿದನು.


ಇದಲ್ಲದೆ ಚಕ್ಕೆ, ಲವಂಗ, ರಕ್ತಬೋಳ, ಧೂಪ, ಸುಗಂಧತೈಲ ಮತ್ತು ಸಾಂಬ್ರಾಣಿಗಳನ್ನೂ ಮದ್ಯ, ಎಣ್ಣೆ, ಹದವಾದ ಹಿಟ್ಟು, ಗೋದಿ ಇವುಗಳನ್ನೂ ದನ, ಕುರಿ, ಕುದುರೆ, ರಥ, ಗುಲಾಮ ಮತ್ತು ಜೀತದಾಳು ಇವೆಲ್ಲವನ್ನೂ ಆ ವರ್ತಕರು ಅವಳಿಗೆ ಮಾರುತ್ತಿದ್ದರು.


ದೇವರು ಅಬ್ರಹಾಮನಿಗೆ ಕೊಟ್ಟ ಆಶೀರ್ವಾದವನ್ನು ನಿನಗೂ ನಿನ್ನ ಸಂತತಿಗೂ ಕೊಡಲಿ; ನೀನು ಪ್ರವಾಸಿಯಾಗಿರುವ ಈ ನಾಡನ್ನು, ಅಂದರೆ ಅಬ್ರಹಾಮನಿಗೆ ದೇವರು ವಾಗ್ದಾನಮಾಡಿದ್ದ ಈ ನಾಡನ್ನು, ನೀನು ಸ್ವಂತ ಸೊತ್ತಾಗಿಸಿಕೊಳ್ಳುವಂತಾಗಲಿ!” ಎಂದು ಹರಸಿ ಕಳುಹಿಸಿಬಿಟ್ಟನು.


ಸರ್ವೇಶ್ವರ ಆಕೆಗೆ ಇಂತೆಂದರು: ನಿನ್ನ ಉದರದೊಳಿವೆ ಜನಾಂಗಗಳೆರಡು ಹುಟ್ಟಿನಿಂದ ವೈರಿಗಳಾ ರಾಷ್ಟ್ರಗಳೆರಡು ಬಲಿಷ್ಠವಿರುವುದು ಒಂದು ಮತ್ತೊಂದಕೆ ಜ್ಯೇಷ್ಠನೇ ದಾಸನಾಗುವನು ಕನಿಷ್ಠನಿಗೆ.


ನೀನು ಪ್ರವಾಸವಾಗಿರುವ ಈ ಕಾನಾನ್ ನಾಡೆಲ್ಲವನ್ನು ನಿನಗೂ ನಿನ್ನ ಸಂತಾನಕ್ಕೂ ಶಾಶ್ವತವಾದ ಸೊತ್ತಾಗಿ ಕೊಡುತ್ತೇನೆ. ನಾನು ನಿಮ್ಮ ಕುಲದೇವರಾಗಿರುತ್ತೇನೆ.”


ಆದುದರಿಂದ ಲೋಟನು ಜೋರ್ಡನ್ ನದಿಯ ಸುತ್ತಲಿನ ಪ್ರದೇಶವನ್ನು ಆರಿಸಿಕೊಂಡು ಪೂರ್ವದಿಕ್ಕಿನ ಕಡೆಗೆ ಹೊರಟನು. ಹೀಗೆ ಅವರಿಬ್ಬರೂ ಬೇರೆ ಬೇರೆ ಆದರು.


ಈ ಕಾರಣ ಅವರಿಬ್ಬರ ಜೀವನಕ್ಕೆ ಅಲ್ಲಿ ಸ್ಥಳ ಸಾಲದೆಹೋಯಿತು. ಇಬ್ಬರಿಗೂ ಪಶುಪ್ರಾಣಿಗಳು ಹೇರಳವಾಗಿದ್ದುದರಿಂದ ಒಂದೇ ಸ್ಥಳದಲ್ಲಿ ವಾಸವಾಗಿರಲು ಆಗಲಿಲ್ಲ.


ತನ್ನ ಹೆಂಡತಿ ಸಾರಯಳನ್ನು, ತನ್ನ ತಮ್ಮನ ಮಗನಾದ ಲೋಟನನ್ನು, ತಾನು ಮತ್ತು ಲೋಟನು ಹಾರಾನಿನಲ್ಲಿ ಗಳಿಸಿದ ಆಸ್ತಿಪಾಸ್ತಿಯನ್ನು ಹಾಗು ದಾಸದಾಸಿಯರನ್ನು ತೆಗೆದುಕೊಂಡು ಹೋಗಿ ಕಾನಾನ್ ನಾಡನ್ನು ಸೇರಿದನು.


ಯಾವಾನಿನವರು, ತೂಬಲಿನವರು ಮತ್ತು ಮೆಷೆಕಿನವರು ನಿನ್ನ ಪರವಾಗಿ ವ್ಯಾಪಾರಮಾಡಿ ನರಪ್ರಾಣಿಗಳನ್ನು ಹಾಗು ತಾಮ್ರದ ಪಾತ್ರೆಗಳನ್ನು ನಿನಗೆ ಸರಬರಾಜು ಮಾಡುತ್ತಿದ್ದರು;


ಒಹೊಲೀಬಾಮಳು ಯೊಗೂಷನನ್ನು, ಯಳಾಮನನ್ನು ಹಾಗು ಕೋರಹನನ್ನು ಹೆತ್ತಳು. ಇವರೆಲ್ಲರು ಏಸಾವನು ಕಾನಾನ್ ನಾಡಿನಲ್ಲಿ ಇದ್ದಾಗ ಹುಟ್ಟಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು