Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 35:24 - ಕನ್ನಡ ಸತ್ಯವೇದವು C.L. Bible (BSI)

24 ಜೋಸೆಫ್, ಬೆನ್ಯಾಮೀನ್ - ಇವರಿಬ್ಬರು ರಾಖೇಲಳಲ್ಲಿ ಹುಟ್ಟಿದವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ರಾಹೇಲಳಲ್ಲಿ ಹುಟ್ಟಿದವರು: ಯೋಸೇಫನು ಮತ್ತು ಬೆನ್ಯಾಮೀನನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಯೋಸೇಫ, ಬೆನ್ಯಾಮೀನ್ ಇವರಿಬ್ಬರು ರಾಹೇಲಳಲ್ಲಿ ಹುಟ್ಟಿದವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ರಾಹೇಲಳ ಗಂಡುಮಕ್ಕಳು: ಯೋಸೇಫ ಮತ್ತು ಬೆನ್ಯಾಮೀನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ರಾಹೇಲಳ ಪುತ್ರರು: ಯೋಸೇಫ್ ಮತ್ತು ಬೆನ್ಯಾಮೀನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 35:24
10 ತಿಳಿವುಗಳ ಹೋಲಿಕೆ  

ಆದರೆ ಜೋಸೆಫನ ಒಡಹುಟ್ಟಿದ ತಮ್ಮನಾದ ಬೆನ್ಯಾಮೀನನನ್ನು ಯಕೋಬನು ಅವರ ಸಂಗಡ ಕಳಿಸಲಿಲ್ಲ. ಏಕೆಂದರೆ, ಅವನಿಗೆ ಏನಾದರೂ ಆಪತ್ತು ಒದಗೀತೆಂಬ ಹೆದರಿಕೆ ಅವನದು.


ಜೋಸೆಫನು ತನ್ನ ಮುಂದೆ ಬಡಿಸಿದ್ದ ಪದಾರ್ಥಗಳಲ್ಲಿ ಅವರಿಗೆ ಭಾಗಗಳನ್ನು ಕಳಿಸಿದನು. ಬೆನ್ಯಾಮೀನನಿಗೆ ಬಂದ ಭಾಗವಾದರೋ ಮಿಕ್ಕವರ ಭಾಗಗಳಿಗಿಂತ ಐದರಷ್ಟು ಹೆಚ್ಚಾಗಿತ್ತು. ಅವರು ಯಥೇಚ್ಛವಾಗಿ ಪಾನಮಾಡಿ ಜೋಸೆಫನ ಸಂಗಡ ಸಂಭ್ರಮದಿಂದಿದ್ದರು.


ಅನಂತರ ಕಣ್ಣೆತ್ತಿ, ತನ್ನ ಒಡಹುಟ್ಟಿದ ತಮ್ಮನಾದ ಬೆನ್ಯಾಮೀನನನ್ನು ನೋಡಿದನು. “ನೀವು ಹೇಳಿದ ನಿಮ್ಮ ಕಿರಿಯ ತಮ್ಮ ಇವನೇನೋ?” ಎಂದು ಕೇಳಿ ಅವನಿಗೆ, “ಮಗು, ದೇವರ ಪ್ರೀತಿ ನಿನ್ನ ಮೇಲಿರಲಿ!” ಎಂದು ಹೇಳಿದನು.


ಜೋಸೆಫನ ವಂಶದವರಿಗೆ ದೊರಕಿದ ಆಸ್ತಿಪಾಸ್ತಿಯ ಎಲ್ಲೆಯು ಜೆರಿಕೋವಿನ ಬಳಿಯಲ್ಲಿ ಜೋರ್ಡನ್ ತೀರದಿಂದ ತೊಡಗಿ ಜೆರಿಕೋವಿನ ಪೂರ್ವದಲ್ಲಿದ್ದ ನದಿ, ಜೆರಿಕೋವಿಗೂ ಬೇತೇಲಿಗೂ ನಡುವೆ ಇರುವ ಮಲೆನಾಡಿನ ಮರುಭೂಮಿ ಹಾಗೂ ಬೇತೇಲ್ ಇವುಗಳ ಮೇಲೆ ಲೂಜಿಗೆ ಹೋಗುತ್ತದೆ.


ಚೀಟು ಮೊದಲು ಬೆನ್ಯಾಮೀನ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಸೊತ್ತು ಯೆಹೂದಾ ಮತ್ತು ಜೋಸೆಫ್ ವಂಶಸ್ಥರ ಪ್ರಾಂತ್ಯಗಳಿಗೆ ಮಧ್ಯೆಯಿದೆ.


ಬಂದರು ಅಮಾಲೇಕ್ಯರ ಪ್ರದೇಶದೊಳು ನೆಲೆಗೊಂಡ ಎಫ್ರಯೀಮ್ಯರು, ಅವರೊಂದಿಗೆ ಬಂದರು ಬೆನ್ಯಾಮೀನ್ಯರು, ಮಾಕೀರನ ಗೋತ್ರದ ಪ್ರಧಾನರು, ಜೆಬುಲೂನ್ ಕುಲದೊಳು ದಂಡಧಾರಿಗಳಾದ ಸೇನಾನಾಯಕರು.


ಆಗ ಊರಿನ ಹಿರಿಯರು ಮತ್ತು ನೆರೆದಿದ್ದ ಸಭಿಕರು: “ಹೌದು, ನಾವೆಲ್ಲರೂ ಸಾಕ್ಷಿಗಳು. ಇಸ್ರಯೇಲಿನ ಮನೆತನವನ್ನು ವೃದ್ಧಿಗೊಳಿಸಿದ ರಾಹೆಲ್ ಮತ್ತು ಲೆಯಾ ಎಂಬ ಕುಲೀನೆಯರನ್ನು ಸರ್ವೇಶ್ವರ ಆಶೀರ್ವದಿಸಲಿ! ಎಫ್ರಾತ ಕುಲದಲ್ಲಿ ಧನವಂತನಾಗು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು