Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 35:16 - ಕನ್ನಡ ಸತ್ಯವೇದವು C.L. Bible (BSI)

16 ಆ ಬಳಿಕ ಅವರು ಬೇತೇಲನ್ನು ಬಿಟ್ಟು ಹೊರಟರು. ಎಫ್ರಾತೂರಿಗೆ ಸೇರುವುದಕ್ಕೆ ಇನ್ನು ಸ್ವಲ್ಪ ದೂರವಿದ್ದಾಗ ರಾಖೇಲಳಿಗೆ ಹೆರಿಗೆಯ ಕಾಲ ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅವರು ಬೇತೇಲಿನಿಂದ ಪ್ರಯಾಣಮಾಡುತ್ತಿರಲು ಎಫ್ರಾತಿಗೆ ಸೇರುವುದಕ್ಕೆ ಇನ್ನೂ ಸ್ವಲ್ಪ ದೂರವಿದ್ದಾಗ ರಾಹೇಲಳು ಪ್ರಸವ ವೇದನೆಯಿಂದ ನರಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅವರು ಬೇತೇಲಿನಿಂದ ಪ್ರಯಾಣ ಮಾಡುತ್ತಿರಲು ಎಫ್ರಾತೂರಿಗೆ ಸೇರುವದಕ್ಕೆ ಇನ್ನೂ ಸ್ವಲ್ಪ ದೂರವಿದ್ದಾಗ ರಾಹೇಲಳಿಗೆ ಹೆರಿಗೇ ಕಾಲಬಂತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಯಾಕೋಬನು ಮತ್ತು ಅವನ ಜನರು ಬೇತೇಲಿನಿಂದ ಹೊರಟು ಬೆತ್ಲೆಹೇಮೆಂಬ ಎಫ್ರಾತೂರಿಗೆ ಬರುವುದಕ್ಕಿಂತ ಸ್ವಲ್ಪಮುಂಚೆ ರಾಹೇಲಳಿಗೆ ಹೆರಿಗೆ ಕಾಲ ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಬೇತೇಲಿನಿಂದ ಅವರು ಪ್ರಯಾಣಮಾಡಿ, ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ, ರಾಹೇಲಳು ಪ್ರಸವವೇದನೆಯಿಂದ ಕಷ್ಟಪಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 35:16
15 ತಿಳಿವುಗಳ ಹೋಲಿಕೆ  

ಎಫ್ರಾತದ ಬೆತ್ಲೆಹೇಮೇ, ಜುದೇಯದ ಕುಲಗಳಲ್ಲಿ ನೀನು ಅತಿಚಿಕ್ಕವಳಾಗಿದ್ದರೂ ಇಸ್ರಯೇಲನ್ನು ಆಳತಕ್ಕವನು ನಿನ್ನಿಂದಲೇ ಉದಯಿಸುವನು. ಆತನ ಗೋತ್ರದ ಮೂಲ ಪುರಾತನವಾದುದು, ಅನಾದಿಕಾಲದಿಂದ ಬಂದುದು.


ಪ್ರವಾದಿ ಯೆರೆಮೀಯನ ಈ ಪ್ರವಚನ ಅಂದು ಸತ್ಯವಾಯಿತು.


ಏಕೆಂದರೆ ನಿಮ್ಮ ತಾಯಿ ರಾಖೇಲಳು, ನಾನು ಮೆಸಪೊಟೇಮಿಯಾದಿಂದ ಬರುವಾಗ, ಕಾನಾನ್ ನಾಡಿನಲ್ಲಿ ಎಫ್ರಾತನ್ನು ಸೇರುವುದಕ್ಕೆ ಇನ್ನು ಸ್ವಲ್ಪ ದೂರ ಇದ್ದಾಗಲೆ ದಾರಿಯಲ್ಲಿ ಸತ್ತು ನನ್ನನ್ನು ಅಗಲಿಹೋದಳು. ಈಗ ಬೇತ್ಲೆಹೇಮ್ ಎನಿಸಿಕೊಳ್ಳುವ ಎಫ್ರಾತಿಗೆ ಹೋಗುವ ದಾರಿಪಕ್ಕದಲ್ಲಿ ಆಕೆಯನ್ನು ಸಮಾಧಿಮಾಡಿದೆ,” ಎಂದು ಹೇಳಿದನು.


ಮಹಿಳೆ ಸಚ್ಚರಿತಳಾಗಿದ್ದು ವಿಶ್ವಾಸ, ಪ್ರೀತಿ ಮತ್ತು ಪವಿತ್ರತೆಯಲ್ಲಿ ಪ್ರವರ್ಧಿಸಿದರೆ, ತನ್ನ ತಾಯ್ತನದ ಮೂಲಕ ಸಂರಕ್ಷಣೆಯನ್ನು ಪಡೆಯುತ್ತಾಳೆ.


ಜ್ಯೋತಿಷಿಗಳಿಂದ ತಾನು ವಂಚಿತನಾದೆ ಎಂದು ಅರಿತ ಹೆರೋದನು ರೋಷಾವೇಶಗೊಂಡನು. ಬೆತ್ಲೆಹೇಮಿಗೂ ಅದರ ಸುತ್ತಮುತ್ತಲಿಗೂ ಆಳುಗಳನ್ನು ಕಳುಹಿಸಿದನು. ತಾನು ಜ್ಯೋತಿಷಿಗಳಿಂದ ತಿಳಿದುಕೊಂಡಿದ್ದ ಕಾಲದ ಆಧಾರದ ಮೇಲೆ ಅಲ್ಲಿದ್ದ, ಎರಡು ವರ್ಷಗಳಿಗೆ ಮೀರದ, ಎಲ್ಲಾ ಗಂಡುಮಕ್ಕಳನ್ನು ಕೊಂದುಹಾಕಿಸಿದನು.


ಯೇಸುಸ್ವಾಮಿ ಜನಿಸಿದ್ದು ಹೆರೋದರಸನ ಕಾಲದಲ್ಲಿ: ಜುದೇಯ ನಾಡಿನ ಬೆತ್ಲೆಹೇಂ ಎಂಬ ಊರಿನಲ್ಲಿ.ಕೆಲವು ಜ್ಯೋತಿಷಿಗಳು ಪೂರ್ವದಿಕ್ಕಿನಿಂದ ಹೊರಟು ಜೆರುಸಲೇಮಿಗೆ ಬಂದರು.


ಮಂಜೂಷವನು ಕುರಿತು ಕೇಳಿದೆವು ಎಫ್ರಾತಾದಲಿ I ನಮಗದು ಕಾಣಬಂದಿತು ಆ ಯಹಾರ್ ಮೈದಾನದಲಿ II


ಅಜೂಬಳ ಮರಣದ ನಂತರ ಕಾಲೇಬನು ಎಫ್ರಾತಳನ್ನು ಮದುವೆ ಆಗಿ ಹೂರ್ ಎಂಬ ಮಗನನ್ನು ಪಡೆದನು.


ಎಲೀಷನು, “ಸಮಾಧಾನದಿಂದ ಹೋಗು,” ಎಂದು ಉತ್ತರಕೊಟ್ಟನು. ಅವನು ಹೊರಟುಹೋದನು.


ಅವನ ಹೆಸರು ಎಲಿಮೆಲೆಕ್; ಅವನ ಪತ್ನಿಯ ಹೆಸರು ನವೊಮಿ. ಮಹ್ಲೋನ್ ಮತ್ತು ಕಿಲ್ಯೋನ್ ಅವರ ಇಬ್ಬರು ಪುತ್ರರು. ಇವರು ಇಸ್ರಯೇಲ್ ವಂಶದ ಎಫ್ರಾತಕುಲಕ್ಕೆ ಸೇರಿದವರು, ಬೆತ್ಲೆಹೇಮಿನವರು.


ಅನಂತರ ರಾಖೇಲಳು ಸತ್ತುಹೋದಳು, ಆಕೆಯನ್ನು ಬೆತ್ಲೆಹೇಮೆಂಬ ಎಫ್ರಾತಿಗೆ ಹೋಗುವ ದಾರಿಪಕ್ಕದಲ್ಲಿ ಸಮಾಧಿ ಮಾಡಿದರು.


ಬಳಿಕ ಆ ಮಹಿಳೆಗೆ: “ಹೆಚ್ಚಿಸುವೆನು ಪ್ರಸವಕಾಲದ ನಿನ್ನ ವೇದನೆಯನ್ನು ಹೆರುವೆ ನೀನು ಸಂಕಷ್ಟದಿಂದಲೇ ಮಕ್ಕಳನ್ನು. ಆದರೂ ನಿನಗಿರುವುದು ಗಂಡನ ಬಯಕೆ ಒಳಗಾಗುವೆ ನೀನು ಆತನ ಒಡೆತನಕ್ಕೆ."


ಆಗ ಊರಿನ ಹಿರಿಯರು ಮತ್ತು ನೆರೆದಿದ್ದ ಸಭಿಕರು: “ಹೌದು, ನಾವೆಲ್ಲರೂ ಸಾಕ್ಷಿಗಳು. ಇಸ್ರಯೇಲಿನ ಮನೆತನವನ್ನು ವೃದ್ಧಿಗೊಳಿಸಿದ ರಾಹೆಲ್ ಮತ್ತು ಲೆಯಾ ಎಂಬ ಕುಲೀನೆಯರನ್ನು ಸರ್ವೇಶ್ವರ ಆಶೀರ್ವದಿಸಲಿ! ಎಫ್ರಾತ ಕುಲದಲ್ಲಿ ಧನವಂತನಾಗು;


ಆಕೆ ಸಾಯುವ ಸಮಯದಲ್ಲಿ ಬಳಿಯಲ್ಲಿ ನಿಂತಿದ್ದ ಮಹಿಳೆಯರು, “ಭಯಪಡಬೇಡ, ಮಗನನ್ನು ಹೆತ್ತಿದ್ದೀ,” ಎಂದು ಹೇಳಿದರು. ಆಕೆ ಅವರ ಮಾತಿಗೆ ಲಕ್ಷ್ಯಕೊಡಲಿಲ್ಲ. ಪ್ರತ್ಯುತ್ತರವನ್ನೂ ಕೊಡಲಿಲ್ಲ.


ಈ ದಿನ ನೀನು ನನ್ನನ್ನು ಬಿಟ್ಟುಹೋದನಂತರ, ಬೆನ್ಯಾಮೀನ್ಯರ ಮೇರೆಯೊಳಗಿರುವ ರಾಖೇಲಳ ಸಮಾಧಿಯ ಬಳಿಯಲ್ಲಿರುವಂಥ ಚೆಲ್ಚಹಿನಲ್ಲಿ ಇಬ್ಬರು ವ್ಯಕ್ತಿಗಳನ್ನು ಕಾಣುವೆ; ಅವರು, ‘ನೀನು ಹುಡುಕುತ್ತಿರುವ ಕತ್ತೆಗಳು ಸಿಕ್ಕಿದವು; ನಿನ್ನ ತಂದೆ ಕತ್ತೆಗಳ ಚಿಂತೆಬಿಟ್ಟು ನನ್ನ ಮಗನೆಲ್ಲಿ ಹೋದನೋ ಎಂದು ನಿನಗಾಗಿ ಹಂಬಲಿಸುತ್ತಾ ಇರುತ್ತಾರೆ’ ಎಂದು ಹೇಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು