Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 34:26 - ಕನ್ನಡ ಸತ್ಯವೇದವು C.L. Bible (BSI)

26 ಹಮೋರ್ ಮತ್ತು ಅವನ ಮಗ ಶೆಕೆಮನನ್ನು ಕೊಂದು ದೀನಳನ್ನು ಅವನ ಮನೆಯಿಂದ ಕರೆದುಕೊಂಡು ಹೊರಟುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಊರಿನವರ ಮೇಲೆ ಬಿದ್ದು ಹಮೋರ ಮತ್ತು ಅವನ ಮಗನಾದ ಶೆಕೆಮ್ ಸಹಿತವಾಗಿ ಪುರುಷರೆಲ್ಲರನ್ನೂ ದಾಕ್ಷಿಣ್ಯವಿಲ್ಲದೆ ಕತ್ತಿಯಿಂದ ಕೊಂದು ಶೆಕೆಮನ ಮನೆಯಿಂದ ದೀನಳನ್ನು ಕರೆದುಕೊಂಡು ಹೊರಟುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಹಮೋರ್ ಮತ್ತು ಅವನ ಮಗನಾದ ಶೆಕೆಮ್ ಸಹಿತವಾಗಿ ಪುರುಷರೆಲ್ಲರನ್ನೂ ದಾಕ್ಷಿಣ್ಯವಿಲ್ಲದೆ ಕೊಂದು ಶೆಕೆಮನ ಮನೆಯಿಂದ ದೀನಳನ್ನು ಕರೆದುಕೊಂಡು ಹೊರಟುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ದೀನಳ ಅಣ್ಣಂದಿರಾದ ಸಿಮೆಯೋನನು ಮತ್ತು ಲೇವಿಯು ಹಮೋರನನ್ನೂ ಅವನ ಮಗನಾದ ಶೆಕೆಮನನ್ನೂ ಕೊಂದುಹಾಕಿ ದೀನಳನ್ನು ಶೆಕಮನ ಮನೆಯಿಂದ ಕರೆದುಕೊಂಡು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಹಮೋರನನ್ನೂ, ಅವನ ಮಗನಾದ ಶೆಕೆಮನನ್ನೂ ಅವರು ಖಡ್ಗದಿಂದ ಕೊಂದುಹಾಕಿ, ದೀನಳನ್ನು ಶೆಕೆಮನ ಮನೆಯಿಂದ ಕರೆದುಕೊಂಡು ಹೊರಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 34:26
6 ತಿಳಿವುಗಳ ಹೋಲಿಕೆ  

ಆ ಅಸ್ಸೀರಿಯಾದವರು ಕತ್ತಿಯಿಂದ ಹತರಾಗುವರು, ಮನುಷ್ಯರ ಕತ್ತಿಯಿಂದಲ್ಲ; ಖಡ್ಗವು ಅವರನ್ನು ಕಬಳಿಸುವುದು, ಅದು ಮಾನವ ಖಡ್ಗವಲ್ಲ. ಅವರು ಕತ್ತಿಗೆ ಹೆದರಿ ಓಡುವರು. ಅವರ ಯುವಕರು ಗುಲಾಮರಾಗುವರು.


ಆಗ ಅಬ್ನೇರನು ಯೋವಾಬನನ್ನು ನೋಡಿ, “ಕತ್ತಿ ಯಾವಾಗಲೂ ತಿನ್ನುತ್ತಲೇ ಇರಬೇಕೇ? ಹಗೆತನವೇ ಇದರ ಅಂತ್ಯಫಲವೆಂದು ನಿನಗೆ ಗೊತ್ತಾಗಲಿಲ್ಲವೇ? ಸಹೋದರರನ್ನು ಹಿಂದಟ್ಟುವುದು ಸಾಕೆಂದು ನಿನ್ನ ಜನರಿಗೆ ಯಾವಾಗ ಆಜ್ಞಾಪಿಸುವೆ?” ಎಂದನು.


ಮತ್ತವಾಗುವುವು ನನ್ನ ಬಾಣಗಳು ರಕ್ತಕುಡಿದು; ನನ್ನ ಕತ್ತಿಯು ತಿನ್ನುವುದು ಸತ್ತವರ, ಖೈದಿಗಳ ರಕ್ತಮಾಂಸವನು; ಚೆಂಡಾಡುವುವು ಶತ್ರುವೀರರ ತಲೆಬುರುಡೆಗಳು.


ಕೆಲವರು ಕತ್ತಿಯ ಬಾಯಿಗೆ ತುತ್ತಾಗುವರು. ಮತ್ತೆ ಕೆಲವರು ಬಂಧಿತರಾಗಿ ದೇಶದೇಶಗಳಿಗೆ ಕೊಂಡೊಯ್ಯಲ್ಪಡುವರು; ಅನ್ಯದೇಶೀಯರು ತಮ್ಮ ಕಾಲಾವಧಿಯ ತನಕ ಜೆರುಸಲೇಮನ್ನು ತುಳಿದುಹಾಕುವರು.


ಮೂರನೆಯ ದಿನ ಆ ಗಂಡಸರೆಲ್ಲರು ಗಾಯದಿಂದ ಇನ್ನು ಬಹಳ ಬಾಧೆಪಡುತ್ತಿದ್ದರು. ಆಗ, ಯಕೋಬನ ಮಕ್ಕಳಲ್ಲಿ ದೀನಳ ಸಹೋದರರಾದ ಸಿಮೆಯೋನ್ ಮತ್ತು ಲೇವಿ ಎಂಬ ಇಬ್ಬರು ಕೈಯಲ್ಲಿ ಕತ್ತಿಹಿಡಿದು ನಿಶ್ಚಿಂತೆ ಇಂದಿದ್ದ ಆ ಊರಿನವರ ಮೇಲೆ ಬಿದ್ದರು. ದಯೆದಾಕ್ಷಿಣ್ಯವಿಲ್ಲದೆ ಗಂಡಸರೆಲ್ಲರನ್ನು ಕೊಂದರು.


ಯಕೋಬನ ಇತರ ಮಕ್ಕಳು ಹತರಾದವರ ಬಳಿಗೆ ಬಂದು, ‘ತಂಗಿಯನ್ನು ಅವಮಾನ ಪಡಿಸಿದವರು ಇವರೇ ಅಲ್ಲವೆ’, ಎಂದುಕೊಂಡು ಆ ಊರನ್ನೇ ಸೂರೆಮಾಡಿಬಿಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು