Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 34:20 - ಕನ್ನಡ ಸತ್ಯವೇದವು C.L. Bible (BSI)

20 ಎಂತಲೆ ಹಮೋರನು ಮತ್ತು ಅವನ ಮಗ ಶೆಕೆಮನು ಊರಬಾಗಿಲಿಗೆ ಬಂದರು. ಊರಿನವರನ್ನೆಲ್ಲಾ ಸಂಬೋಧಿಸುತ್ತಾ, ಹೀಗೆಂದರು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆಗ ಹಮೋರನೂ ಅವನ ಮಗನಾದ ಶೆಕೆಮನೂ ಊರ ಬಾಗಿಲಿಗೆ ಬಂದು ಊರಿನವರೆಲ್ಲರ ಸಂಗಡ ಮಾತನಾಡಿ ಅವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಹಮೋರನೂ ಅವನ ಮಗನಾದ ಶೆಕೆಮನೂ ಊರುಬಾಗಿಲಿಗೆ ಹೋಗಿ ಊರಿನವರೆಲ್ಲರ ಸಂಗಡ ಮಾತಾಡಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಹಮೋರನು ಮತ್ತು ಶೆಕೆಮನು ತಮ್ಮ ನಗರದ ಸಭಾಸ್ಥಳಕ್ಕೆ ಹೋದರು. ಅವರು ಪಟ್ಟಣದ ಗಂಡಸರೊಂದಿಗೆ ಮಾತಾಡಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಆಗ ಹಮೋರನೂ, ಅವನ ಮಗ ಶೆಕೆಮನೂ ತಮ್ಮ ಪಟ್ಟಣ ದ್ವಾರದ ಬಳಿಗೆ ಬಂದು, ತಮ್ಮ ಪಟ್ಟಣದ ಜನರ ಸಂಗಡ ಮಾತನಾಡಿ ಅವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 34:20
14 ತಿಳಿವುಗಳ ಹೋಲಿಕೆ  

ಇತ್ತ ಬೋವಜನು ಊರಿನ ಸಭಾಮಂಟಪದ ಬಳಿ ಹೋಗಿ ಅಲ್ಲಿ ಕುಳಿತುಕೊಂಡನು.


“ನೀವು ಮಾಡಬೇಕಾದುದು ಏನೆಂದರೆ: ಪ್ರತಿಯೊಬ್ಬನು ತನ್ನ ನೆರೆಯವನೊಡನೆ ಸತ್ಯವನ್ನೇ ಆಡಲಿ. ನ್ಯಾಯಾಲಯಗಳಲ್ಲಿ ನಿಮ್ಮ ತೀರ್ಪು ನ್ಯಾಯಸಮ್ಮತವಾಗಿರಲಿ, ಶಾಂತಿಯ ಸಾಧನ ಆಗಿರಲಿ.


ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ. ನ್ಯಾಯಮಂಟಪದಲ್ಲಿ ಸತ್ಯಕ್ಕೆ ಜಯವಾಗುವಂತೆ ನೋಡಿಕೊಳ್ಳಿರಿ. ಆಗ ಬಹುಶಃ ಸೇನಾಧೀಶ್ವರ ದೇವರಾದ ಸರ್ವೇಶ್ವರ ಅಳಿದುಳಿದ ಜೋಸೆಫನ ವಂಶಕ್ಕೆ ಕರುಣೆ ತೋರಿಯಾರು.


ಸಜ್ಜನರನ್ನು ಹಿಂಸಿಸಿ, ಲಂಚಕ್ಕೆ ಕೈ ಒಡ್ಡುವವರೇ, ನ್ಯಾಯಮಂಟಪದಲ್ಲಿ ಬಡವರಿಗೆ ನ್ಯಾಯದೊರಕಿಸದಿರುವವರೇ, ನಿಮ್ಮ ಪಾಪಗಳು ಅಪಾರ! ನಿಮ್ಮ ದ್ರೋಹಗಳು ಬಹಳ! ಇದು ನನಗೆ ಗೊತ್ತು.


ಕಂಡ ದೋಷವನ್ನು ಮಂಟಪದಲ್ಲಿ ಖಂಡಿಸುವವನನ್ನು ನೀವು ಹಗೆಮಾಡುತ್ತೀರಿ; ನ್ಯಾಯವಾದಿಗಳ ಮೇಲೆ ದ್ವೇಷ ಸಾಧಿಸುತ್ತೀರಿ.


ಆಕೆಯ ಗಂಡ ನಾಡಿಗರಲ್ಲಿ ಗಣ್ಯ; ನ್ಯಾಯಸ್ಥಾನದಲ್ಲಿ ಸನ್ಮಾನಿತ.


ನಾನು ಊರ ಮುಂದಿನ ಚಾವಡಿಗೆ ಹೋದಾಗ ಚೌಕದ ಪೀಠದಲ್ಲಿ ಕುಳಿತುಕೊಂಡಾಗ,


ಅವನು ಮುಂಜಾನೆಯೇ ಎದ್ದು ಊರುಬಾಗಿಲ ಬಳಿಯಲ್ಲಿ ನಿಂತುಕೊಳ್ಳುತ್ತಿದ್ದನು. ಯಾರಾದರೂ ತಮ್ಮ ವ್ಯಾಜ್ಯ ತೀರಿಸಿಕೊಳ್ಳುವುದಕ್ಕಾಗಿ ಅರಸನ ಬಳಿಗೆ ಹೋಗುವುದನ್ನು ಅಬ್ಷಾಲೋ‍ಮನು ಕಂಡರೆ ಅಂಥವನನ್ನು ತನ್ನ ಬಳಿಗೆ ಕರೆದು, “ನೀನು ಯಾವ ಊರಿನವನು?” ಎಂದು ವಿಚಾರಿಸುತ್ತಿದ್ದನು. ಅವರು, “ನಿನ್ನ ಸೇವಕರಾದ ನಾವು ಇಸ್ರಯೇಲರ ಇಂಥ ಕುಲಕ್ಕೆ ಸೇರಿದವರು,” ಎಂದು ಉತ್ತರಕೊಡುತ್ತಿದ್ದರು.


ಆ ಪುರುಷನನ್ನು ಅಥವಾ ಆ ಸ್ತ್ರೀಯನ್ನು ಹಿಡಿದು, ಊರ ಹೊರಗೆ ತಂದು, ಕಲ್ಲುಬೀರಿ ಕೊಲ್ಲಬೇಕು.


ಸದ್ಯಕ್ಕೆ ಎಫ್ರೋನನೇ ಅಲ್ಲಿ ಆ ಹಿತ್ತಿಯರ ನಡುವೆ ಕುಳಿತಿದ್ದನು. ಅವನೂ ಒಬ್ಬ ಹಿತ್ತಿಯನಾಗಿದ್ದನು. ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಮುಂದೆ ಅವನು ಅಬ್ರಹಾಮನಿಗೆ,


ನಿನ್ನ ಸಂತತಿಯನ್ನು ಹೆಚ್ಚಿಸಿಯೇ ಹೆಚ್ಚಿಸುತ್ತೇನೆ; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದ ಮರಳಿನಂತೆಯೂ ಅಸಂಖ್ಯವಾಗಿ ಮಾಡುತ್ತೇನೆ. ಅವರು ಶತ್ರುಗಳ ಪಟ್ಟಣಗಳನ್ನು ಸ್ವಾಧೀನಪಡಿಸಿಕೊಳ್ಳುವರು.


ಆ ಯುವಕನು ಯಕೋಬನ ಮಗಳಲ್ಲಿ ಅನುರಕ್ತನಾಗಿದ್ದುದರಿಂದ ಅವರು ಹೇಳಿದಂತೆ ಮಾಡಲು ಹಿಂಜರಿಯಲಿಲ್ಲ; ಅಪ್ಪನ ಮನೆಗೆ ಅವನೇ ಮುಖ್ಯಸ್ಥನಾಗಿದ್ದನು.


“ಈ ಜನರು ನಮ್ಮೊಡನೆ ಶಾಂತಿಸಮಾಧಾನದಿಂದಿದ್ದಾರೆ; ಇವರು ನಮ್ಮ ನಾಡಿನಲ್ಲೇ ವಾಸಮಾಡಿಕೊಂಡು ವ್ಯಾಪಾರಮಾಡಲಿ; ಈ ನಾಡು ಅವರಿಗೂ ನಮಗೂ ಸಾಕಾಗುವಷ್ಟು ವಿಸ್ತಾರವಾಗಿದೆ. ನಾವು ಅವರ ಹೆಣ್ಣು ಮಕ್ಕಳನ್ನು ಮದುವೆಮಾಡಿಕೊಳ್ಳೋಣ, ನಮ್ಮ ಹೆಣ್ಣು ಮಕ್ಕಳನ್ನು ಅವರಿಗೆ ಕೊಡೋಣ.


ಭಾಗ್ಯವಂತನು ಅಂಥ ಬಾಣಗಳಿಂದ ಬತ್ತಳಿಕೆ ತುಂಬಿದವನು I ಸೋತುಹೋಗದೆ ನ್ಯಾಯಲಾಯದೊಳೂ ವೈರಿಯೊಡನೆ ವಾದಿಸುವನು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು