Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 34:19 - ಕನ್ನಡ ಸತ್ಯವೇದವು C.L. Bible (BSI)

19 ಆ ಯುವಕನು ಯಕೋಬನ ಮಗಳಲ್ಲಿ ಅನುರಕ್ತನಾಗಿದ್ದುದರಿಂದ ಅವರು ಹೇಳಿದಂತೆ ಮಾಡಲು ಹಿಂಜರಿಯಲಿಲ್ಲ; ಅಪ್ಪನ ಮನೆಗೆ ಅವನೇ ಮುಖ್ಯಸ್ಥನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿಕೊಂಡಿದ್ದರಿಂದ ಅವರು ಹೇಳಿದಂತೆ ಮಾಡುವುದಕ್ಕೆ ತಡಮಾಡಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಆ ಯೌವನಸ್ಥನು ಯಾಕೋಬನ ಮಗಳಲ್ಲಿ ಅನುರಕ್ತನಾಗಿದ್ದದರಿಂದ ಅವರು ಹೇಳಿದಂತೆ ಮಾಡುವದಕ್ಕೆ ತಡೆಮಾಡಲಿಲ್ಲ. ಅವನೇ ತನ್ನ ತಂದೆಯ ಮನೆಯವರೆಲ್ಲರಲ್ಲಿ ಘನವಂತನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ದೀನಳ ಅಣ್ಣಂದಿರು ಹೇಳಿದ್ದನ್ನು ಮಾಡಲು ಶೆಕೆಮನು ಸಂತೋಷದಿಂದ ಒಪ್ಪಿಕೊಂಡನು. ಶೆಕೆಮನಿಗೆ ಅವರ ಕುಟುಂಬದಲ್ಲಿ ತುಂಬ ಗೌರವವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿದ್ದರಿಂದ, ಆ ಕಾರ್ಯವನ್ನು ಮಾಡುವುದಕ್ಕೆ ಹಿಂಜರಿಯಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 34:19
15 ತಿಳಿವುಗಳ ಹೋಲಿಕೆ  

ಯಾಬೇಚ್ ಎಂಬವನು ಒಬ್ಬನಿದ್ದನು. ಅವನು ತನ್ನ ಕುಟುಂಬದಲ್ಲಿ ಬಹಳ ಗೌರವಾನ್ವಿತ ವ್ಯಕ್ತಿ. ಅವನು ಹುಟ್ಟುವಾಗ ಪ್ರಸವವೇದನೆ ಅಧಿಕವಾಗಿದ್ದರಿಂದ ಅವನ ತಾಯಿ, ಯಾಬೇಚ ಎಂಬ ಹೆಸರನ್ನು ಅವನಿಗೆ ಕೊಟ್ಟಳು.


ಅವರಲ್ಲಿ ಅನೇಕರು ವಿಶ್ವಾಸಿಗಳಾದರು. ಅನೇಕ ಗ್ರೀಕ್ ಕುಲೀನ ಸ್ತ್ರೀಯರೂ ಪುರುಷರೂ ವಿಶ್ವಾಸಿಗಳಾದರು.


ಯೆಹೂದ್ಯರಾದರೋ ದೇವಭಕ್ತೆಯರಾದ ಕುಲೀನ ಸ್ತ್ರೀಯರನ್ನೂ ಪಟ್ಟಣದ ಪ್ರಮುಖ ಜನರನ್ನೂ ಪ್ರಚೋದಿಸಿದರು: ಪೌಲ ಮತ್ತು ಬಾರ್ನಬರನ್ನು ಹಿಂಸಿಸುವಂತೆ ಹುರಿದುಂಬಿಸಿ, ಅವರನ್ನು ಆ ಪ್ರದೇಶದಿಂದ ಹೊರಗಟ್ಟಿದರು.


“ಎನ್ನ ಮನದನ್ನೆ” ಎನಿಸಿಕೊಳ್ಳುವೆ ನೀನು “ಸುವಿವಾಹಿತೆ” ಎನಿಸಿಕೊಳ್ಳುವುದು ನಿನ್ನ ನಾಡು. ನಿನ್ನಲ್ಲಿದೆ ಉಲ್ಲಾಸ ಸರ್ವೇಶ್ವರನಿಗೆ ವಿವಾಹವಾಗುವುದಿದೆ ನಿನ್ನ ನಾಡಿಗೆ.


ಈ ಕಾರಣ, ನನ್ನ ಜನರು ಬುದ್ಧಿಹೀನರಂತೆ ಸೆರೆಹೋಗುವುದು ನಿಶ್ಚಯ. ಅವರ ಮುಖಂಡರು ಹಸಿವಿನಿಂದ ಸಾಯುವರು. ಅವರಲ್ಲಿ ಜನಸಾಮಾನ್ಯರು ಬಾಯಾರಿ ಸೊರಗಿಹೋಗುವರು.


ನಿನ್ನ ವೃಕ್ಷದಲಿ, ನಿನ್ನ ಹಸ್ತಗಳಲಿ ಧರಿಸಿಕೊ ನನ್ನನ್ನು ಪ್ರೇಮ ಮುದ್ರೆಯಾಗಿ. ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ ! ಮತ್ಸರ ಪಾತಾಳದಷ್ಟು ಕ್ರೂರಿ ಅದರ ಜ್ವಾಲೆ ಬೆಂಕಿಯ ಉರಿ ಧಗಧಗಿಸುವ ಕೋಪಾಗ್ನಿ.


ಸಿರಿಯಾದ ರಾಜನಿಗೆ ನಾಮಾನ್ ಎಂಬೊಬ್ಬ ಸೇನಾಪತಿಯಿದ್ದನು. ಸರ್ವೇಶ್ವರಸ್ವಾಮಿ ಇವನ ಮುಂಖಾತರ ಸಿರಿಯಾದವರಿಗೆ ಜಯವನ್ನು ಅನುಗ್ರಹಿಸಿದ್ದರು. ಆದ್ದರಿಂದ ರಾಜನು ಇವನನ್ನು ಮಹಾಪುರುಷನೆಂದೂ ಸನ್ಮಾನ್ಯನೆಂದೂ ಗೌರವಿಸುತ್ತಿದ್ದನು. ಆದರೆ ಪರಾಕ್ರಮಶಾಲಿಯಾದ ಇವನು ಭೀಕರ ಚರ್ಮರೋಗದಿಂದ ನರಳುತ್ತಿದ್ದನು.


ಅಹೀಮೆಲೆಕನು, “ನಿಮ್ಮ ಎಲ್ಲಾ ಸೇವಕರಲ್ಲಿ, ಅರಸನ ಅಳಿಯನಾಗಿರುವ ದಾವೀದನಂತೆ ನಂಬಿಗಸ್ತನಾದವನು ಯಾರಿದ್ದಾನೆ? ದಾವೀದನು ನಿಮ್ಮ ಆಲೋಚಕರಲ್ಲೊಬ್ಬನೂ ತಮ್ಮ ಮನೆಯವರಲ್ಲಿ ಗೌರವಾನ್ವಿತನೂ ಆಗಿದ್ದಾನಲ್ಲವೇ?


ಬಾಲಾಕನು ಅವರಿಗಿಂತಲೂ ಹೆಚ್ಚು ಗಣ್ಯವಂತ ಮುಂದಾಳುಗಳನ್ನು ಹೆಚ್ಚು ಸಂಖ್ಯೆಯಲ್ಲಿ ಕಳಿಸಿದನು.


ಅದಲ್ಲದೆ, ಸಣಕಲಾಗಿದ್ದ ಆ ಬಡಹಸುಗಳು ಮೊದಲೇ ಕಾಣಿಸಿದ ಆ ಏಳು ಕೊಬ್ಬಿನ ಹಸುಗಳನ್ನು ತಿಂದುಬಿಟ್ಟವು.


ಅಂತೆಯೇ ಯಕೋಬನು ರಾಖೇಲಳಿಗಾಗಿ ಏಳು ‌ವರ್ಷ‌ಕಾಲ ಸೇವೆಮಾಡಿದನು. ಆಕೆಯ ಮೇಲೆ ಅವನಿಗೆ ಬಹಳ ಪ್ರೀತಿಯಿದ್ದುದರಿಂದ ಅದು ಅವನಿಗೆ ಕೇವಲ ಕೆಲವೇ ದಿನಗಳಂತೆ ಕಾಣಿಸಿತು.


ಅವರು ಹೇಳಿದ್ದು ಹಮೋರನಿಗೂ ಅವನ ಮಗ ಶೆಕೆಮನಿಗೂ ಉಚಿತವೆಂದೇ ತೋಚಿತು.


ಎಂತಲೆ ಹಮೋರನು ಮತ್ತು ಅವನ ಮಗ ಶೆಕೆಮನು ಊರಬಾಗಿಲಿಗೆ ಬಂದರು. ಊರಿನವರನ್ನೆಲ್ಲಾ ಸಂಬೋಧಿಸುತ್ತಾ, ಹೀಗೆಂದರು:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು