Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 33:9 - ಕನ್ನಡ ಸತ್ಯವೇದವು C.L. Bible (BSI)

9 ಏಸಾವನು, “ತಮ್ಮಾ, ನನಗೆ ಬೇಕಾದಷ್ಟು ಆಸ್ತಿಯುಂಟು; ನಿನ್ನದು ನಿನಗೇ ಇರಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಏಸಾವನು ಅದಕ್ಕೆ, “ತಮ್ಮನೇ, ನನಗೆ ಬೇಕಾದಷ್ಟು ಆಸ್ತಿಯುಂಟು, ನಿನ್ನದು ನಿನಗೇ ಇರಲಿ” ಎನ್ನಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಏಸಾವನು - ತಮ್ಮನೇ, ನನಗೆ ಬೇಕಾದಷ್ಟು ಆಸ್ತಿಯುಂಟು; ನಿನ್ನದು ನಿನಗೇ ಇರಲಿ ಅನ್ನಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆದರೆ ಏಸಾವನು, “ತಮ್ಮನೇ, ನೀನು ನನಗೆ ಉಡುಗೊರೆಗಳನ್ನು ಕೊಡಬೇಕಾಗಿಲ್ಲ, ನನಗೆ ಬೇಕಾದಷ್ಟಿದೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅದಕ್ಕೆ ಏಸಾವನು, “ನನ್ನ ಸಹೋದರನೇ, ನನಗೆ ಸಾಕಷ್ಟು ಇದೆ. ನಿನಗೆ ಇದ್ದದ್ದು ನೀನೇ ಇಟ್ಟುಕೋ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 33:9
13 ತಿಳಿವುಗಳ ಹೋಲಿಕೆ  

ಆಗ ಇಸಾಕನು - "ಸಾರವತ್ತಾದ ಭೂಮಿಗೆ ದೂರ ಆಗಸದಿಂದೇಳುವ ಮಂಜಿಗೆ ದೂರ ಇರುವುದು ನೀ ನೆಲೆಸುವ ಬಿಡಾರ.


ಸಹೋದರನೇ, ನಿನ್ನ ಪ್ರೀತಿಯನ್ನು ನೆನೆದು ನಾನು ಆನಂದವನ್ನೂ ಆದರಣೆಯನ್ನೂ ಪಡೆಯುತ್ತಿದ್ದೇನೆ. ದೇವಜನರೆಲ್ಲರ ಹೃದಯಗಳನ್ನು ನೀನು ಉಲ್ಲಾಸಪಡಿಸುತ್ತಿರುವೆ.


ಈಗ ಅವನು ನಿನ್ನ ಬಳಿಗೆ ಬರುತ್ತಿರುವುದು ಕೇವಲ ಗುಲಾಮನಂತೆ ಅಲ್ಲ. ಅದಕ್ಕಿಂತಲೂ ಬಹಳ ಮೇಲಾದವನಂತೆ, ಕ್ರಿಸ್ತಯೇಸುವಿನಲ್ಲಿ ಪ್ರಿಯ ಸಹೋದರನಂತೆ, ಅವನೆಂದರೆ ನನಗೆಷ್ಟೋ ಪ್ರೀತಿ. ಹಾಗಾದರೆ ನಿನ್ನ ಸೇವಕನೂ ನಮ್ಮ ಪ್ರಭುವಿನಲ್ಲಿ ನಿನ್ನ ಪ್ರಿಯ ಸಹೋದರನೂ ಆಗಿರುವ ಅವನ ಬಗ್ಗೆ ನಿನಗೆ ಮತ್ತಷ್ಟು ಪ್ರೀತಿ ಇರಬೇಕಲ್ಲವೇ?


ಇದನ್ನು ಕೇಳಿದ ಅವರು ದೇವರನ್ನು ಕೊಂಡಾಡಿದರು. ಅನಂತರ ಅವರು ಪೌಲನಿಗೆ ಹೀಗೆಂದರು: "ಸಹೋದರಾ, ನಿನಗೆ ತಿಳಿದಿರುವಂತೆ ಯೆಹೂದ್ಯರಲ್ಲಿ ಭಕ್ತವಿಶ್ವಾಸಿಗಳಾಗಿರುವವರು ಸಾವಿರಾರು ಮಂದಿ ಇದ್ದಾರೆ; ಅವರೆಲ್ಲರೂ ಯೆಹೂದ್ಯ ಧರ್ಮಶಾಸ್ತ್ರದಲ್ಲಿ ಬಹಳ ಶ್ರದ್ಧೆ ಉಳ್ಳವರು.


ಅಂತೆಯೇ ಅನನೀಯನು ಹೊರಟು ಆ ಮನೆಗೆ ಹೋದನು. ಸೌಲನ ಮೇಲೆ ಹಸ್ತನಿಕ್ಷೇಪಮಾಡಿ, “ಸಹೋದರ ಸೌಲನೇ, ಪ್ರಭು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ. ನೀನು ಬರುವಾಗ ದಾರಿಯಲ್ಲಿ ಕಾಣಿಸಿಕೊಂಡ ಯೇಸುಸ್ವಾಮಿಯೇ, ನೀನು ದೃಷ್ಟಿಯನ್ನು ಮರಳಿ ಪಡೆಯುವಂತೆಯೂ ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ಕಳುಹಿಸಿದ್ದಾರೆ,” ಎಂದನು.


“ನಾನು ಸುಖಾನುಭವವನ್ನು ತೊರೆದು ಯಾರಿಗೋಸ್ಕರ ಒಂದೇ ಸಮನೆ ದುಡಿಯುತ್ತಾ ಇದ್ದೇನೆ?” ಎಂದುಕೊಂಡ. ಇದೂ ಕೂಡ ವ್ಯರ್ಥ, ಕೇವಲ ಪ್ರಯಾಸವೇ ಸರಿ.


ಒಬ್ಬನ ನಡತೆಯನ್ನುಸರ್ವೇಶ್ವರ ಮೆಚ್ಚಿದರೆ, ಅವನ ಶತ್ರುಗಳನ್ನು ಆತ ಮಿತ್ರರನ್ನಾಗಿಸುತ್ತಾನೆ.


(ಇಸ್ರಯೇಲರು ಹೋಗಿ ಸರ್ವೇಶ್ವರನ ಮುಂದೆ ದುಃಖಿಸುತ್ತಾ, “ನಾವು ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಮಾಡಬೇಕೆ?” ಎಂದು ಕೇಳಲು ಅವರು, “ಹೋಗಿ ಯುದ್ಧಮಾಡಿ,” ಎಂದರು.


ತಂದೆಯಿಂದ ಯಕೋಬನು ಪಡೆದುಕೊಂಡ ಆಶೀರ್ವಾದದ ನಿಮಿತ್ತ ಏಸಾವನು ಯಕೋಬನ ಮೇಲೆ ಹಗೆಗೊಂಡನು. “ತಂದೆಯ ಮರಣಕ್ಕಾಗಿ ದುಃಖಿಸುವ ಕಾಲ ಸಮೀಪಿಸಿತು. ಆ ಬಳಿಕ ನನ್ನ ತಮ್ಮ ಯಕೋಬನನ್ನು ಕೊಂದುಹಾಕುತ್ತೇನೆ,” ಎಂದು ತನ್ನೊಳಗೇ ನೆನಸಿಕೊಂಡನು.


“ನಿನ್ನ ತಮ್ಮನೆಲ್ಲಿ?" ಎಂದು ಸರ್ವೇಶ್ವರ ಕೇಳಿದಾಗ “ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ” ಎಂದು ಕಾಯಿನನು ಉತ್ತರ ಕೊಟ್ಟನು.


ಜಿಗಣೆಗೆ “ಕೊಡು, ಕೊಡು” ಎಂಬ ಇಬ್ಬರು ಹೆಣ್ಣು ಮಕ್ಕಳುಂಟು; ಎಂದೂ ತೃಪ್ತಿಪಡೆಯದವು ಮೂರುಂಟು; ಹೌದು, ‘ಸಾಕು’ ಎನ್ನದವುಗಳು ನಾಲ್ಕುಂಟು:


ಬಾಳ ನಡೆಸುವೆ ಕತ್ತಿಕಠಾರಿಯಿಂದಲೇ ಕೂಲಿಯಾಳಾಗುವೆ ಸೋದರನಿಗೆ ಮುರಿಯುವೆ ಅವ ಹೊರಿಸಿದ ನೊಗವ ಸ್ವಾತಂತ್ರ್ಯಕ್ಕಾಗಿ ನೀ ಬಂಡಾಯ ಹೂಡಿದಾಗ,”


ಅದಕ್ಕೆ ಯಕೋಬನು, “ಇಲ್ಲ, ಹಾಗೆನ್ನಬಾರದು. ನಿಮಗೆ ನನ್ನ ಮೇಲೆ ದಯೆಯಿರುವುದು ನಿಜವಾಗಿದ್ದಲ್ಲಿ ನಾನು ಸಮರ್ಪಿಸುವ ಕಾಣಿಕೆಯನ್ನು ಅಂಗೀಕರಿಸಲೇಬೇಕು. ನಿಮ್ಮನ್ನು ನೋಡಿದ್ದು ದೇವರನ್ನು ನೋಡಿದ ಹಾಗಾಯಿತು. ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದ್ದೇ ಸಾಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು