ಆದಿಕಾಂಡ 31:52 - ಕನ್ನಡ ಸತ್ಯವೇದವು C.L. Bible (BSI)52 ಕೇಡು ಮಾಡುವ ಉದ್ದೇಶದಿಂದ ನಾನು ಈ ಕುಪ್ಪೆಯನ್ನು ದಾಟಿ ನಿನ್ನ ಬಳಿಗೆ ಬರಕೂಡದು. ಹಾಗೆಯೇ ನೀನು ಈ ಕುಪ್ಪೆಯನ್ನಾಗಲಿ ಸ್ತಂಭವನ್ನಾಗಲಿ ದಾಟಿ ನನ್ನ ಬಳಿಗೆ ಬರಕೂಡದು, ಇದಕ್ಕೆ ಈ ಕುಪ್ಪೆ ಹಾಗೂ ಈ ಸ್ತಂಭವೇ ಸಾಕ್ಷಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201952 ನಾನು ಕೇಡು ಮಾಡುವುದಕ್ಕೋಸ್ಕರ ಈ ಗುಡ್ಡೆಯನ್ನು, ದಾಟಿ ನಿನ್ನ ಬಳಿಗೆ ಬರುವುದಿಲ್ಲ. ಹಾಗೆಯೇ ನೀನು ಈ ಗುಡ್ಡೆಯನ್ನೂ ಈ ಸ್ತಂಭವನ್ನು ದಾಟಿ ನನ್ನ ಬಳಿಗೆ ಬರಕೂಡದು. ಇದಕ್ಕೆ ಈ ಗುಡ್ಡೆಯೂ ಸ್ತಂಭವೂ ಸಾಕ್ಷಿಯಾಗಿರಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)52 ಕೇಡುಮಾಡುವದಕ್ಕೋಸ್ಕರ ನಾನಂತೂ ಈ ಕುಪ್ಪೆಯನ್ನು ದಾಟಿ ನಿನ್ನ ಬಳಿಗೆ ಬರಕೂಡದು; ಹಾಗೆಯೇ ನೀನು ಈ ಕುಪ್ಪೆಯನ್ನೂ ಈ ಕಂಬವನ್ನೂ ದಾಟಿ ನನ್ನ ಬಳಿಗೆ ಬರಕೂಡದು; ಇದಕ್ಕೆ ಕುಪ್ಪೆಯೂ ಕಂಬವೂ ಈ ಎರಡೇ ಸಾಕ್ಷಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್52 ಈ ಕಲ್ಲುಗಳ ಕುಪ್ಪೆಯೂ ವಿಶೇಷವಾದ ಈ ಕಲ್ಲೂ ನಮ್ಮ ಒಪ್ಪಂದವನ್ನು ನೆನಪುಮಾಡಿಕೊಳ್ಳಲು ನಮ್ಮಿಬ್ಬರಿಗೂ ಸಹಾಯ ಮಾಡುತ್ತವೆ. ನಾನು ನಿನಗೆ ವಿರೋಧವಾಗಿ ಹೋರಾಡುವುದಕ್ಕಾಗಿ ಈ ಕಲ್ಲುಗಳನ್ನು ದಾಟಿ ಬರುವುದಿಲ್ಲ. ನೀನು ನನಗೆ ವಿರೋಧವಾಗಿ ಈ ಕಲ್ಲುಗಳನ್ನು ದಾಟಿ ನನ್ನ ಕಡೆಗೆ ಬರಕೂಡದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ52 ನಾನು ಈ ಕುಪ್ಪೆಯನ್ನು ದಾಟಿ ನಿನ್ನ ಹತ್ತಿರ ಬರುವುದಿಲ್ಲ; ನೀನು ಈ ಕುಪ್ಪೆಯನ್ನು ಮತ್ತು ಸ್ತಂಭವನ್ನು ಕೇಡಿಗಾಗಿ ದಾಟುವುದಿಲ್ಲವೆಂಬುದಕ್ಕೆ ಈ ಕುಪ್ಪೆಯೂ ಈ ಸ್ತಂಭವೂ ಸಾಕ್ಷಿಯಾಗಿವೆ. ಅಧ್ಯಾಯವನ್ನು ನೋಡಿ |
ಆದರೆ ಸರ್ವೇಶ್ವರನ ಸನ್ನಿಧಿಯಲ್ಲಿ ದಹನಬಲಿ, ಸಮರ್ಪಣಬಲಿ, ಶಾಂತಿಸಮಾಧಾನದ ಬಲಿ ಮುಂತಾದುವುಗಳನ್ನು ಅರ್ಪಿಸಿ ಆರಾಧಿಸುವುದಕ್ಕೆ ನಿಮಗೆ ಹಕ್ಕು ಉಂಟೆಂಬುದಕ್ಕೆ ಇದು ಗುರುತಾಗಿರಲಿ. ನಮಗೂ ನಿಮಗೂ ನಮ್ಮ ಸಂತಾನಕ್ಕೂ ನಿಮ್ಮ ಸಂತಾನಕ್ಕೂ ಇದು ಸಾಕ್ಷಿಯಾಗಿರಲಿ.’ ಇದರಿಂದ ಮುಂದೆ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ, ‘ಸರ್ವೇಶ್ವರನಲ್ಲಿ ನಿಮಗೆ ಪಾಲಿಲ್ಲ’ ಎಂದು ಹೇಳುವುದಕ್ಕೆ ಆಸ್ಪದವಿರದು.