ಆದಿಕಾಂಡ 31:1 - ಕನ್ನಡ ಸತ್ಯವೇದವು C.L. Bible (BSI)1 ಲಾಬಾನನ ಮಕ್ಕಳು, “ನಮ್ಮ ತಂದೆಯ ಆಸ್ತಿಪಾಸ್ತಿಯೆಲ್ಲ ಯಕೋಬನ ಪಾಲಾಯಿತು. ನಮ್ಮ ತಂದೆಯ ಆಸ್ತಿಯಿಂದಲೇ ಅವನು ಇಷ್ಟು ಐಶ್ವರ್ಯವನ್ನು ಶೇಖರಿಸಿದ್ದು,” ಎಂದು ಆಡಿಕೊಂಡರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 “ನಮ್ಮ ತಂದೆಯ ಆಸ್ತಿಯೆಲ್ಲಾ ಯಾಕೋಬನ ಪಾಲಾಯಿತು, ನಮ್ಮ ತಂದೆಯ ಆಸ್ತಿಯಿಂದಲೇ ಅವನಿಗೆ ಇಷ್ಟೊಂದು ಐಶ್ವರ್ಯವುಂಟಾಯಿತು” ಎಂಬುದಾಗಿ ಲಾಬಾನನ ಮಕ್ಕಳು ಹೇಳಿಕೊಳ್ಳುವ ಮಾತುಗಳು ಯಾಕೋಬನ ಕಿವಿಗೆ ಬಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ನಮ್ಮ ತಂದೆಯ ಆಸ್ತಿಯೆಲ್ಲಾ ಯಾಕೋಬನ ಪಾಲಾಯಿತು; ನಮ್ಮ ತಂದೆಯ ಆಸ್ತಿಯಿಂದಲೇ ಅವನಿಗೆ ಇಷ್ಟು ಐಶ್ವರ್ಯವುಂಟಾಯಿತು ಎಂಬದಾಗಿ ಲಾಬಾನನ ಮಕ್ಕಳು ಹೇಳಿಕೊಳ್ಳುವ ಮಾತುಗಳು ಯಾಕೋಬನ ಕಿವಿಗೆ ಬಿದ್ದವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಒಂದು ದಿನ ಲಾಬಾನನ ಗಂಡುಮಕ್ಕಳು ಮಾತಾಡುತ್ತಿರುವುದನ್ನು ಯಾಕೋಬನು ಕೇಳಿಸಿಕೊಂಡನು. ಅವರು, “ನಮ್ಮ ತಂದೆ ಹೊಂದಿದ್ದ ಪ್ರತಿಯೊಂದನ್ನೂ ಯಾಕೋಬನು ತೆಗೆದುಕೊಂಡು ಐಶ್ವರ್ಯವಂತನಾಗಿದ್ದಾನೆ; ಅವನು ನಮ್ಮ ತಂದೆಯ ಐಶ್ವರ್ಯವನ್ನೆಲ್ಲ ತೆಗೆದುಕೊಂಡಿದ್ದಾನೆ” ಎಂದು ಹೇಳುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಲಾಬಾನನ ಮಕ್ಕಳು, “ನಮ್ಮ ತಂದೆಗೆ ಇದ್ದವುಗಳನ್ನೆಲ್ಲಾ ಯಾಕೋಬನು ತೆಗೆದುಕೊಂಡು, ನಮ್ಮ ತಂದೆಗಿದ್ದವುಗಳಿಂದ ಈ ಘನತೆಯನ್ನೆಲ್ಲಾ ಪಡೆದಿದ್ದಾನೆ,” ಎಂದು ಹೇಳುವ ಮಾತುಗಳನ್ನು ಯಾಕೋಬನು ಕೇಳಿದನು. ಅಧ್ಯಾಯವನ್ನು ನೋಡಿ |