Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 27:28 - ಕನ್ನಡ ಸತ್ಯವೇದವು C.L. Bible (BSI)

28 ದಯಪಾಲಿಸಲಿ ದೇವ ನಿನಗೆ ಆಗಸದ ಮಂಜನು, ಸಾರವುಳ್ಳ ಹೊಲವನು ಅನುಗ್ರಹಿಸಲಿ ಹೇರಳ ದವಸ ಧಾನ್ಯವನು, ದ್ರಾಕ್ಷಾರಸವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ದೇವರು ನಿನಗೆ ಆಕಾಶದ ಮಂಜನ್ನೂ, ಸಾರವುಳ್ಳ ಭೂಮಿಯನ್ನೂ ಕೊಟ್ಟು ದವಸಧಾನ್ಯಗಳನ್ನೂ, ದ್ರಾಕ್ಷಾರಸವನ್ನೂ ಹೇರಳವಾಗಿ ಅನುಗ್ರಹಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ದೇವರು ನಿನಗೆ ಆಕಾಶದ ಮಂಜನ್ನೂ ಸಾರವುಳ್ಳ ಭೂವಿುಯನ್ನೂ ಕೊಟ್ಟು ದವಸಧಾನ್ಯಗಳನ್ನೂ ದ್ರಾಕ್ಷಾರಸವನ್ನೂ ಹೇರಳವಾಗಿ ಅನುಗ್ರಹಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಯೆಹೋವನು ನಿನಗೆ ಬೇಕಾದಷ್ಟು ಮಳೆಯನ್ನು ಕೊಡಲಿ; ನಿನಗೆ ಸಾರವುಳ್ಳ ಭೂಮಿಯೂ ಮಹಾಸುಗ್ಗಿಗಳೂ ಮತ್ತು ದ್ರಾಕ್ಷಾರಸವೂ ದೊರೆಯಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ದೇವರು ನಿನಗೆ ಆಕಾಶದ ಮಂಜನ್ನೂ ಸಾರವುಳ್ಳ ಭೂಮಿಯನ್ನೂ ಸಮೃದ್ಧಿಯಾದ ಧಾನ್ಯವನ್ನೂ ಹೊಸ ದ್ರಾಕ್ಷಾರಸವನ್ನೂ ಕೊಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 27:28
33 ತಿಳಿವುಗಳ ಹೋಲಿಕೆ  

ವಾಸಿಸಿರಿ ಇಸ್ರಯೇಲರೇ, ನಿರ್ಭಯರಾಗಿ ಯಕೋಬನ ಸಂತತಿಯೇ, ಸುರಕ್ಷಿತವಾಗಿ ಆಗಸದಿಂದ ಮಳೆಸುರಿಯುವ ನಾಡಿನಲ್ಲಿ ಧಾನ್ಯ, ದ್ರಾಕ್ಷಾರಸ ಸಮೃದ್ಧಿಯಾಗಿರುವಲ್ಲಿ!


ಜೋಸೆಫ್ ಕುಲ ಕುರಿತು ಮೋಶೆ ನುಡಿದದ್ದು : “ಇವನ ಪ್ರಾಂತ್ಯ ಆಶೀರ್ವದಿತವಾಗಲಿ ಸರ್ವೇಶ್ವರನಿಂದ ಮೇಲಣ ಆಕಾಶದ ಮಂಜಿನಿಂದ ಕೆಳಗಿನ ಸಾಗರದ ಒರತೆಗಳಿಂದ;


ರಮ್ಯ, ಹೆರ್ಮೋನ್ ಪರ್ವತದ ಮೇಲೆ ಬೀಳುವ ಮಂಜಿನಂತೆ I ಸಿಯೋನ್ ಪರ್ವತದ ಮೇಲೆ ಬೀಳುವ ಇಬ್ಬನಿಯಂತೆ II ಆಶೀರ್ವಾದವು, ಅಮರ ಜೀವವು I ಅಲ್ಲೆ ಇರಬೇಕೆಂದು ಆಜ್ಞಾಪಿಸಿಹನು ಪ್ರಭುವು II


ಮಳೆಯಾಗಲಿ, ಮಂಜಾಗಲಿ ಬೀಳದಿರಲಿ ಆ ಗಿಲ್ಬೋವ ಗುಡ್ಡಗಳ ಮೇಲೆ ಅದರ ಮೇಲಿನ ಹೊಲಗಳು ಬೆಳೆಕೊಡದಿರಲಿ ನೈವೇದ್ಯಕೆ. ಏಕೆನೆ ಅಲ್ಲಿ ಬಿದ್ದಿವೆ ಯುದ್ಧವೀರರ ಕತ್ತಿಗುರಾಣಿ ಅಭಿಷಿಕ್ತನಲ್ಲದವನ ಗುರಾಣಿಯಂತೆ ಆ ಸೌಲನ ಗುರಾಣಿ!


ನನ್ನ ಉಪದೇಶ ಹಸಿಹುಲ್ಲಿನ ಮೇಲೆ ಮೆಲ್ಲನೆ ಸುರಿವ ತುಂತುರುಗಳಂತೆ ನನ್ನ ಬೋಧೆ ಕಾಯಿಪಲ್ಯಗಳ ಮೇಲೆ ಮಂಜಿನಂತೆ ಬೀಳುವ ಹದಮಳೆಯಂತೆ.


ನಿಮ್ಮನ್ನು ಅಚಲವಾಗಿ ಪ್ರೀತಿಸಿ, ಅಭಿವೃದ್ಧಿಗೊಳಿಸುವರು; ನಿಮ್ಮ ಪಿತೃಗಳಿಗೆ ಪ್ರಮಾಣಮಾಡಿಕೊಟ್ಟ ನಾಡಿನಲ್ಲಿ ನಿಮ್ಮ ಸಂತಾನವನ್ನು, ವ್ಯವಸಾಯವನ್ನು, ದವಸಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನು ಹಾಗು ದನಕುರಿಗಳ ಮಂದೆಯನ್ನು ವೃದ್ಧಿಗೊಳಿಸುವರು.


ಜನರು ನೆಮ್ಮದಿಯಿಂದ ಬಿತ್ತನೆ ಮಾಡುವರು. ದ್ರಾಕ್ಷಾಲತೆ ಹಣ್ಣುಬಿಡುವುದು. ಭೂಮಿಯಲ್ಲಿ ಬೆಳೆಯಾಗುವುದು. ಆಕಾಶ ಮಳೆಯನ್ನು ಸುರಿಸುವುದು. ಅಳಿದುಳಿದ ಜನರಿಗೆ ಈ ಸೌಭಾಗ್ಯ ಲಭಿಸುವಂತೆ ಮಾಡುವೆನು.


“ನಿಮಗೆ ಧಾನ್ಯ, ದ್ರಾಕ್ಷಾರಸ, ತೈಲಗಳನ್ನು ಅನುಗ್ರಹಿಸುವೆನು; ನೀವು ಸಂತೃಪ್ತರಾಗುವಿರಿ; ನಿಮ್ಮನ್ನೆಂದಿಗೂ ಅನ್ಯಜನರ ನಿಂದೆಗೆ ಗುರಿಮಾಡೆನು.


ವರ್ಷಿಸಲಿ ಸದ್ಧರ್ಮವನು ಆಕಾಶಮಂಡಲ ಸುರಿಸಲಿ ಮೇಲಿಂದ ಅದನ್ನು ಆ ಗಗನಮಂಡಲ; ಅಂಕುರಿಸಲಿ ಜೀವೋದ್ಧಾರವನು ಭೂಮಂಡಲ ಬೆಳೆಯಲಿ ಅದರೊಡನೆಯೇ ಸದ್ಧರ್ಮದ ಫಲ, ಸರ್ವೇಶ್ವರನಾದ ನಾನೇ ಕರ್ತ ಇದಕ್ಕೆಲ್ಲಾ.”


ಒದಗಿಸುವೆ ಬೇಸಾಯದ ಆಹಾರವನು I ಹೃದಯವನು ಮುದಗೊಳಿಸುವ ದ್ರಾಕ್ಷಾರಸವನು I ಮುಖಕೆ ಮೆರಗನ್ನೀಯುವ ತಿಳಿತೈಲಗಳನು I ದೇಹವನು ಗಟ್ಟಿಮುಟ್ಟಾಗಿಸುವ ರೊಟ್ಟಿಯನು II


ಅವರ ತೃಪ್ತಿ ನಿನ್ನ ಮಂದಿರದ ಸಮೃದ್ಧಿಯಿಂದ I ಅವರ ಪಾನೀಯ ನಿನ್ನ ಸಂಭ್ರಮ ಪ್ರವಾಹದಿಂದ II


ಗಿಲ್ಯಾದಿನ ಪ್ರವಾಸಿಗಳಲ್ಲಿ ತಿಷ್ಬೀಯನಾದ ಎಲೀಯ ಎಂಬವನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಯೇಲ್ ದೇವರಾದ ಸರ್ವೇಶ್ವರನಾಣೆ, ನಾನು ಸೂಚಿಸಿದ ಹೊರತು, ಇಂದಿನಿಂದ ಕೆಲವು ವರ್ಷಗಳವರೆಗೆ ಮಳೆಯಾಗಲಿ, ಮಂಜಾಗಲಿ ಬೀಳುವುದಿಲ್ಲ,” ಎಂದನು.


“ಇಸ್ರಯೇಲರು ನನಗೆ ಸಮರ್ಪಿಸುವ ಪ್ರಥಮ ಫಲಗಳು, ಅಂದರೆ ಎಣ್ಣೆ, ದ್ರಾಕ್ಷಾರಸ, ಧಾನ್ಯ, ಇವುಗಳಲ್ಲಿ ಶ್ರೇಷ್ಠವಾದುದು ನಿನಗೇ ಸಿಗಬೇಕೆಂದು ವಿಧಿಸಿದ್ದೇನೆ.


ವಿಶ್ವಾಸವಿದ್ದುದರಿಂದಲೇ ಇಸಾಕನು ಸಹ ಮುಂದೆ ಸಂಭವಿಸಬೇಕಾದ್ದನ್ನು ಸೂಚಿಸಿ, ಯಕೋಬನನ್ನೂ ಏಸಾವನನ್ನೂ ಆಶೀರ್ವದಿಸಿದನು.


ಆಹಾ! ಎಷ್ಟು ಸುಂದರ, ಎಷ್ಟು ಮನೋಹರ ಆ ನಾಡಿನ ದೃಶ್ಯ! ಪುಷ್ಟಿಗೊಳಿಸುವುವು ಯುವಕಯುವತಿಯರನು ದ್ರಾಕ್ಷೆ, ದವಸಧಾನ್ಯ!


ಸರ್ವೇಶ್ವರಸ್ವಾಮಿಯ ಕೃಪೆಯಿಂದ ಇಬ್ಬನಿಯೂ ತುಂತುರುಮಳೆಯೂ ಮಾನವನ ನೆರವನ್ನು ನಿರೀಕ್ಷಿಸದೆ, ಹುಲ್ಲನ್ನು ಸಮೃದ್ಧಿಗೊಳಿಸುತ್ತವೆ. ಅಂತೆಯೇ ಯಕೋಬನ ಅಳಿದುಳಿದ ವಂಶದವರು ಹಲವಾರು ಜನಾಂಗಗಳ ಮಧ್ಯೆ ನೆಲಸಿ, ಅವರ ಅಭ್ಯುದಯಕ್ಕೆ ಕಾರಣರಾಗುವರು.


ಅನ್ಯಜನಾಂಗಗಳ ಶೂನ್ಯದೇವತೆಗಳಲ್ಲಿ ಮಳೆಸುರಿಸಬಲ್ಲವರುಂಟೆ? ಆಕಾಶವು ತಾನಾಗಿ ಹದಮಳೆಯನ್ನು ಬರಮಾಡಬಲ್ಲುದೆ? ನಮ್ಮ ದೇವರಾದ ಸರ್ವೇಶ್ವರಾ, ವೃಷ್ಟಿದಾತರು ನೀವೇ ನಾವು ನಿರೀಕ್ಷಿಸುತ್ತಿರುವುದು ನಿಮ್ಮನ್ನೇ ಹೌದು, ಇವುಗಳನ್ನೆಲ್ಲ ನಡೆಸುವವರು ನೀವೇ.


ಮರ ಕಡಿಯುವ ನಿನ್ನ ಆಳುಗಳಿಗಾಗಿ ಎರಡು ಸಾವಿರ ಮೆಟ್ರಿಕ್ ಟನ್ ಗೋದಿ, ಎರಡು ಸಾವಿರ ಮೆಟ್ರಿಕ್ ಟನ್ ಜವೆಗೋದಿ, ನಾಲ್ಕು ಲಕ್ಷ ಲೀಟರ್ ದ್ರಾಕ್ಷಾರಸ ಹಾಗೂ ನಾಲ್ಕು ಲಕ್ಷ ಲೀಟರ್ ಎಣ್ಣೆ ಇವುಗಳನ್ನು ಕೊಡುವೆನು,” ಎಂದು ಹೇಳಿಸಿದನು.


ಸೊಲೊಮೋನನಾದರೋ ಪ್ರತಿವರ್ಷ ಅವನ ಮನೆಯವರ ಆಹಾರಕ್ಕಾಗಿ ಎರಡು ಸಾವಿರ ಮೆಟ್ರಿಕ್ ಟನ್ ಗೋದಿಯನ್ನೂ ನಾಲ್ಕು ಸಾವಿರ ಲೀಟರ್ ಅಪ್ಪಟ ಎಣ್ಣೆಯನ್ನೂ ಕೊಡುತ್ತಿದ್ದನು.


ಈಜಿಪ್ಟಿನಿಂದ ಬಂದ ಇಸ್ರಯೇಲರು ಸರ್ವೇಶ್ವರನ ಮಾತನ್ನು ಕೇಳದೆಹೋದುದರಿಂದ ಅವರು, ತಮ್ಮ ಯೋಧರೆಲ್ಲರು ಸಂಹಾರವಾಗುವ ತನಕ ನಾಲ್ವತ್ತು ವರ್ಷ ಅರಣ್ಯದಲ್ಲೇ ಅಲೆಯುತ್ತಿರಬೇಕಾಯಿತು. ಸರ್ವೇಶ್ವರ, ತಾವು ಅವರ ಪೂರ್ವಿಕರಿಗೆ ವಾಗ್ದಾನಮಾಡಿದ್ದ ಹಾಲೂ ಜೇನೂ ಹರಿಯುವ ದೇಶದಲ್ಲಿ ಅವರನ್ನು ಸೇರಿಸುವುದಿಲ್ಲವೆಂದು ಆಣೆಯಿಟ್ಟಿದ್ದರು.


ಆಶೇರನಗಿರುವುದು ಸಮೃದ್ಧಿಯಾಗಿ ಧಾನ್ಯ ದೊರಕುವುದವನಲಿ ರಾಜನಿಗೂ ತಕ್ಕ ಭಕ್ಷ್ಯ.


ನಿಮ್ಮ ತಂದೆಯನ್ನೂ ಕುಟುಂಬದವರನ್ನೂ ನನ್ನ ಬಳಿಗೆ ಕರೆದುಕೊಂಡು ಬರತಕ್ಕದ್ದು. ಈಜಿಪ್ಟ್ ದೇಶದಲ್ಲಿ ನಿಮಗೆ ಅತ್ಯುತ್ತಮವಾದ ಭೂಮಿಯನ್ನು ಕೊಡುವೆನು. ನೀವು ಈ ದೇಶದ ಸುಖಸಂಪತ್ತನ್ನು ಅನುಭವಿಸಬಹುದು.”


ಈಗ ಉತ್ತಮ ತಳಿಯ ಓಲಿವ್ ಮರದಿಂದ ಕೆಲವು ರೆಂಬೆಗಳನ್ನು ಕಡಿದುಹಾಕಿ ಆ ತಾವಿನಲ್ಲಿ ಕಾಡು ಓಲಿವ್ ಮರದ ರೆಂಬೆಯನ್ನು ಕಸಿಮಾಡಲಾಗಿದೆ. ಅನ್ಯಜನಾದ ನೀನು ಆ ಕಾಡುಮರದ ರೆಂಬೆಯಂತಿರುವೆ; ಕಸಿಮಾಡಿರುವುದರಿಂದ ರಸವತ್ತಾದ ಆ ಬೇರಿನಿಂದ ಈಗ ಪೋಷಣೆ ಪಡೆಯುತ್ತಿರುವೆ.


ಭೂಮಿ ಸಾರವತ್ತಾದುದೋ ನಿಸ್ಸಾರವಾದುದೋ ಮರಗಿಡಗಳಿಂದ ಕೂಡಿದೆಯೋ ಬೈಲುಪ್ರದೇಶವಾಗಿದೆಯೋ ನೋಡಿ ತಿಳಿದುಕೊಳ್ಳಿ. ಅದಲ್ಲದೆ, ಆ ನಾಡಿನ ಉತ್ಪನ್ನಗಳಲ್ಲಿ ಕೆಲವನ್ನು ಪ್ರಯಾಸಪಟ್ಟು ತರಬೇಕು.” ಅದು ದ್ರಾಕ್ಷೆಯ ಪ್ರಥಮ ಫಲಕಾಲವಾಗಿತ್ತು.


ಆಗ ಇಸಾಕನು - "ಸಾರವತ್ತಾದ ಭೂಮಿಗೆ ದೂರ ಆಗಸದಿಂದೇಳುವ ಮಂಜಿಗೆ ದೂರ ಇರುವುದು ನೀ ನೆಲೆಸುವ ಬಿಡಾರ.


ಆಗ ಇಸಾಕನು, “ಅವನನ್ನು ನಿನಗೆ ಒಡೆಯನನ್ನಾಗಿ ನೇಮಿಸಿದ್ದೇನೆ; ಸಹೋದರರನ್ನೇ ಅವನಿಗೆ ಕೆಲಸಗಾರರನ್ನಾಗಿ ಕೊಟ್ಟಿದ್ದೇನೆ; ದವಸಧಾನ್ಯಗಳನ್ನೂ ದ್ರಾಕ್ಷಾರಸವನ್ನೂ ಅವನಿಗೆ ಬಿಟ್ಟಿದ್ದೇನೆ. ಹೀಗಿರಲು ಮಗನೇ, ನಾನು ನಿನಗೇನು ತಾನೆ ಮಾಡಲು ಸಾಧ್ಯ?” ಎಂದನು.


ಹೀಗಾಯಿತು ನಿನ್ನ ತ0ದೆಯ‍‍ ದೇವರಿ0ದ ಸಿಗಲಿ ನಿನಗಾತನ ಸಹಾಯ ಹೀಗಾಯಿತು ಸರ್ವವಲ್ಲಭ ದೇವರಿ0ದ. ದೊರಕಲಿ ನಿನಗಾತನ ಆಶೀರ್ವಾದ. ಮೇಲಣ ಆಕಾಶದಿ0ದ, ಕೆಳಗಣ ಸಾಗರ ಸೆಲೆಗಳಿ0ದ ಸ್ತನ್ಯದಿ0ದ, ಗರ್ಭದಿ0ದ, ಆತ ನೀಡುವ ವರದಾನ.


ಆತನ ಜ್ಞಾನದಿಂದಲೆ ಅಡಿಸಾಗರ ಒಡೆಯುತ್ತದೆ ಆಕಾಶಮಂಡಲ ಇಬ್ಬನಿಯನ್ನು ಸುರಿಸುತ್ತದೆ.


ರಾಜನ ರೋಷ ಸಿಂಹದ ಗರ್ಜನೆಯು; ಅವನ ದಯೆ ಹುಲ್ಲಿನ ಮೇಲಣ ಇಬ್ಬನಿಯು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು