Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 25:32 - ಕನ್ನಡ ಸತ್ಯವೇದವು C.L. Bible (BSI)

32 ಏಸಾವನು, ‘ಆಗಲಿ, ಮಾರುತ್ತೇನೆ, ಸಾಯುತ್ತಿರುವ ನನಗೆ ಜ್ಯೇಷ್ಠತನದಿಂದ ಪ್ರಯೋನಜವೇನು? ಎಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಏಸಾವನು, “ಆಗಲಿ” ನನ್ನಂಥ ಸಾಯುವವನಿಗೆ ಚೊಚ್ಚಲತನದಿಂದ ಪ್ರಯೋಜನವೇನು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಆಗಲಿ, ನನ್ನಂಥ ಸಾಯುವವನಿಗೆ ಚೊಚ್ಚಲತನದಿಂದ ಪ್ರಯೋಜನವೇನು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಏಸಾವನು, “ನನಗೆ ಹಸಿವೆಯಿಂದ ಸಾಯುವಂತಾಗಿದೆ. ನಾನು ಸತ್ತುಹೋದರೆ, ನನ್ನ ತಂದೆಯ ಐಶ್ವರ್ಯವೆಲ್ಲ ನನಗೆ ಸಹಾಯ ಮಾಡಲಾರದು. ಆದ್ದರಿಂದ ನಾನು ನನ್ನ ಹಕ್ಕನ್ನು ನಿನಗೆ ಕೊಡುವೆನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಏಸಾವನು, “ಇಗೋ, ನಾನು ಸಾಯುತ್ತಿದ್ದೇನೆ, ಜೇಷ್ಠ ಪುತ್ರನ ಹಕ್ಕಿನಿಂದ ನನಗೇನು ಲಾಭ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 25:32
8 ತಿಳಿವುಗಳ ಹೋಲಿಕೆ  

ದೇವರಿಗೆ ಸೇವೆಮಾಡುವುದು ವ್ಯರ್ಥ. ಅವರು ಹೇಳಿದಂತೆ ನಾವು ನಡೆದುಕೊಳ್ಳುವುದರಿಂದ ಪ್ರಯೋಜನವೇನು? ನಮ್ಮ ಕೃತ್ಯಗಳಿಗಾಗಿ ಸೇನಾಧೀಶ್ವರ ಸರ್ವೇಶ್ವರನ ಮುಂದೆ ದುಃಖಪಡುವುದರಿಂದ ಲಾಭವೇನು?


ದೇವರನು ಪ್ರೀತಿಸಿ ಬಾಳುವುದರಿಂದ ಪ್ರಯೋಜನವಿಲ್ಲವೆಂಬುದು ಇವನ ವಾದ.


ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದ್ದರೂ ಅವರು ಆತನಿಗೆ, ‘ತೊಲಗಿಹೋಗು ನಮ್ಮಿಂದ’ ಎಂದರು.


‘ಈ ಸರ್ವಶಕ್ತ ಎಷ್ಟರವನು : ಆತನ ಸೇವೆ ನಮಗೇಕೆ? ಆತನಿಗೆ ಪ್ರಾರ್ಥನೆಮಾಡಿ ಪ್ರಯೋಜನವೇನು?’ ಎಂದಿದ್ದಾರೆ.


“ವಂಚನೆಯಾಯಿತೆಂಬ ಅನುಮಾನ ಹುಟ್ಟಿದ ಪ್ರತಿಯೊಂದು ವಿಷಯದಲ್ಲೂ, ಅದು ಎತ್ತು, ಕತ್ತೆ, ಕುರಿ ಅಥವಾ ಬಟ್ಟೆ ವಿಷಯವಾದರೂ ಸರಿಯೇ ಕಳೆದುಕೊಂಡ ಬೇರೆ ಯಾವ ವಸ್ತುವಿನ ವಿಷಯವಾದರೂ ಸರಿಯೇ, ಇಬ್ಬರೂ ಅದು ತಮ್ಮದೆಂದು ಹೇಳುವಾಗ ಆ ಇಬ್ಬರ ವ್ಯಾಜ್ಯವು ದೇವರ ಸನ್ನಿಧಿಗೆ ಬರಬೇಕು. ದೇವರು ಯಾರನ್ನು ದ್ರೋಹಿಯೆಂದು ನಿರ್ಣಯಿಸುತ್ತಾರೋ ಅವನು ಆ ಮತ್ತೊಬ್ಬನಿಗೆ ಎರಡರಷ್ಟು ಕೊಡಬೇಕು.


ಅದಕ್ಕೆ ಯಕೋಬ, ‘ನಿನ್ನದಾಗಿರುವ ಜ್ಯೇಷ್ಠಪುತ್ರನ ಹಕ್ಕನ್ನು ನನಗೆ ಮೊದಲು ಮಾರಿಬಿಡು,’ ಎಂದು ಹೇಳಿದ.


ಯಕೋಬನು ‘ಮಾರಿರುವುದಾಗಿ ನನಗೆ ಪ್ರಮಾಣ ಮಾಡು’, ಎಂದಾಗ ಏಸಾವನು ಪ್ರಮಾಣಮಾಡಿ ತನ್ನ ಜ್ಯೇಷ್ಠತನದ ಹಕ್ಕನ್ನು ಮಾರಿಬಿಟ್ಟ.


ಅದಕ್ಕೆ ಏಸಾವನು, “ಯಕೋಬ’ ಎಂಬ ಹೆಸರು ಅವನಿಗೆ ತಕ್ಕುದಾಗಿದೆ; ಎರಡು ಸಾರಿ ಅವನು ನನ್ನನ್ನು ವಂಚಿಸಿದ್ದಾನೆ. ಹಿಂದೆ ನನ್ನ ಜ್ಯೇಷ್ಠತನದ ಹಕ್ಕನ್ನು ಅಪಹರಿಸಿದ; ಈಗ ನನಗೆ ಬರಬೇಕಾಗಿದ್ದ ಆಶೀರ್ವಾದವನ್ನು ಕಿತ್ತುಕೊಂಡಿದ್ದಾನೆ,” ಎಂದು ಹೇಳಿ ತನ್ನ ತಂದೆಯನ್ನು ನೋಡಿ, “ನನಗೆಂದೇ ನಿಮ್ಮಲ್ಲಿ ಯಾವ ಆಶೀರ್ವಾದವೂ ಉಳಿದಿಲ್ಲವೆ?” ಎಂದು ಕೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು